ವಾಸ್ತುಪ್ರಕಾರ ಕಚೇರಿಗಳಿಗೆ ಸರಳ ಸಲಹೆಗಳು
ಕಟ್ಟಡ ನಿರ್ಮಾಣ ಪದ್ಧತಿಗಳಲ್ಲಿ ಪ್ರಮುಖವಾದ ವಿಧಾನಗಳಲ್ಲಿ ಒಂದೆನಿಸಿರುವ ವಾಸ್ತ್ರುಶಾಸ್ತ್ರದ ಜ್ಞಾನದಿಂದ ಮಾನಸಿಕ ಶಾಂತಿ, ದೈಹಿಕ ಆರೋಗ್ಯ, ಆರ್ಥಿಕ, ಸಾಮಾಜಿಕ, ವ್ಯಾವಹಾರಿಕ ಪ್ರಗತಿ ಸಾಧ್ಯ ಎಂದು ನಂಬಲಾಗಿದೆ. ಈ ಶಾಸ್ತ್ರದ ನಿಯಮದ ಪ್ರಕಾರ ಕಟ್ಟಿದ ಮನೆ, ಗ್ರಾಮ, ನಗರ, ಅಂಗಡಿ, ಕಚೇರಿ, ಕಾರ್ಖಾನೆಗಳಿಂದ ಸಮೃದ್ಧಿಯನ್ನು ಪಡೆಯಬಹುದು.
ಮೊದಮೊದಲಿಗೆ ದೇಗುಲಗಳು, ಬೃಹತ್ ಕಟ್ಟಡಗಳು, ಮನೆಗಳ ವಿನ್ಯಾಸ, ನಿರ್ಮಾಣಕ್ಕೆ ಸೀಮಿತವಾಗಿದ್ದ ವಾಸ್ತು ನಂತರದ ದಿನಗಳಲ್ಲಿ ವಾಣಿಜ್ಯೋದ್ದೇಶಿತ ಕಟ್ಟಡಗಳು, ಕಚೇರಿಗಳನ್ನು ಪ್ರವೇಶಿಸಿತು. ಉದ್ಯೋಗಿಗಳ ಆರ್ಥಿಕ ಹಾಗೂ ಕಾರ್ಯ ಕ್ಷಮತೆ ಹೆಚ್ಚಿಸಲು ವಾಸ್ತು ಸಲಹೆ ಬಳಸಬಹುದಾಗಿದೆ.
ಹಗಲು ರಾತ್ರಿ ಸತತ ದುಡಿಯುವ ನಂತರವೂ ಉದ್ಯೋಗದಲ್ಲಿ ಪ್ರಗತಿ ಕಾಣದೆ ಬೇಸರಗೊಂಡಿರುವವರು, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೂ ಏಳಿಗೆ ಕಾಣದ ಸಂಸ್ಥೆಯ ಮಾಲೀಕರು, ಈಗಷ್ಟೇ ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿರುವವರಿಗೆ ಇಲ್ಲಿನ ವಾಸ್ತು ಸಲಹೆಗಳು ಉಪಯುಕ್ತವಾಗಿವೆ.

ಅಯುತಾಕಾರವಾಗಿ ಕಚೇರಿ ಜಾಗವಿರಬೇಕು
ಕಚೇರಿಯ ನಿವೇಶನ ಅಥವಾ ಕಟ್ಟಡದ ವಾಸ್ತು ಸಿಗದಿದ್ದ ಪಕ್ಷದಲ್ಲಿ ನಿಮ್ಮ ಕಚೇರಿಯ ಒಳಾಂಗಣ ಸ್ಥಳವನ್ನು ಆಯುತಾಕಾರವಾಗಿ ಮಾರ್ಪಾಟು ಮಾಡಿಕೊಳ್ಳಿ. ಸಾಫ್ಟ್ ವೇರ್ ಕಂಪನಿಗಳಿಗೆ ಪ್ರಮುಖವಾದ ಸೂಚನೆಯೆಂದರೆ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟ್ಯಾಪ್ ನ ಪೀಠ ಚೌಕಾಕಾರವಾಗಿರಲಿ. ಇದು ಸಾಧ್ಯವಿಲ್ಲದಿದ್ದರೆ, ಟೇಬಲ್ ಮೇಲೆ ಚೌಕಾಕಾರದ ಬಟ್ಟೆಯನ್ನು ಹಾಕಿ ಅದರ ಮೇಲೆ ಲ್ಯಾಪ್ ಟಾಪ್ ಇರಿಸಿ ಕಾರ್ಯ ನಿರ್ವಹಿಸಿ.

ಯಾವ ದಿಕ್ಕಿಗೆ ಮುಖ ಮಾಡಿ ಕೂರಬೇಕು?
ಕಚೇರಿಯಲ್ಲಿ ಮೇಜಿನ ಬಲಭಾಗದಲ್ಲಿ ಗಣಕಯಂತ್ರವನ್ನು ಸ್ಥಾಪಿಸಿ. ನೈಋತ್ಯ ಮೂಲೆಯಲ್ಲಿ ನಿಮ್ಮ ಆಸನವಿರಲಿ, ಉತ್ತರ ದಿಕ್ಕಿಗೆ ಮುಖ ಮಾಡಿ ಕಾರ್ಯ ಮಾಡುವಂತಿರಲಿ. ಇದೆಲ್ಲವೂ ಕಚೇರಿಯ ಮುಖ್ಯಸ್ಥರು, ತಂಡದ ಮುಖ್ಯಸ್ಥರಿಗೆ ಅನ್ವಯವಾಗಲಿದೆ. ಸಂಸ್ಥೆಯ ಎಲ್ಲರೂ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಲಬೇಕಾಗಿಲ್ಲ. ಕಚೇರಿಗಳಲ್ಲಿ ಸ್ವಾಗತಕಾರಿಣಿ ಸ್ಥಳ ಈಶಾನ್ಯ ದಿಕ್ಕಿನಲ್ಲಿರಲಿ.

ಸ್ವಚ್ಛತೆಗೆ ಆದ್ಯತೆ ನೀಡಿ
ಹಳೆ ರದ್ದಿ ಕಾಗದ, ಸ್ಟಿಕ್ ನೋಟುಗಳು, ಅಪೂರ್ಣವಾದ ಬರಹ, ಪೆನ್, ಪೆನ್ಸಿಲ್ ಮುಂತಾದವು ನಿಮ್ಮ ಟೇಬಲ್ ಮೇಲೆ ಉಳಿದಂತೆ ನೋಡಿಕೊಳ್ಳಿ. ಆದಷ್ಟು ಪ್ರತಿನಿತ್ಯ ಟೇಬಲ್ ಹಾಗೂ ಲ್ಯಾಪ್ ಟಾಪ್ ಸ್ವಚ್ಛಗೊಳಿಸಿ. ಲ್ಯಾಪ್ ಟ್ಯಾಪ್, ಕಂಪ್ಯೂಟರ್ ಪರದೆ ಮಸುಕಾಗಿ ಇರಬಾರದು. ಇದು ಬೇರೆ ಕಚೇರಿಗಳಿಗೂ ಅನ್ವಯವಾಗುತ್ತದೆ. ನಿತ್ಯ ಬಳಸುವ ಯಂತ್ರೋಪಕರಣ, ಸಾಧನಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ.

ಯಾವ ಚಿತ್ರಗಳನ್ನು ಹೊಂದಿರಬೇಕು?
ಕಚೇರಿಯಲ್ಲಿ ನಿಮ್ಮ ಆಸನದ ಹಿಂಬದಿಯಲ್ಲಿ ಬೆಟ್ಟ-ಗುಡ್ಡಗಳ ಚಿತ್ರಪಟವಿರಲಿ. ಜಲಪಾತದ ಚಿತ್ರ ಬೇಡವೇ ಬೇಡ. ಅದರಲ್ಲೂ ನಿಮ್ಮದು ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ಸಂಸ್ಥೆಯಾದರೆ ಕಚೇರಿ ಮುಖ್ಯಸ್ಥನ ಆಸನದ ಹಿಂಬದಿ ಇಂಥ ಚಿತ್ರವಿರಬಾರದು. ಟೇಬಲ್ ಮೇಲೆ ಆಮೆಯ ಚಿತ್ರ, ನಿಮ್ಮ ಮನೆ ದೇವರ ಚಿತ್ರ ಇರಿಸಿಕೊಳ್ಳಬಹುದು.

ಜಲಚರಗಳನ್ನು ಇರಿಸಿಕೊಳ್ಳಬಹುದು
ಕಚೇರಿ ಮುಖ್ಯಸ್ಥರು ತಮ್ಮ ಟೇಬಲ್ ಮೇಲೆ ಅಕ್ವೇರಿಯಂ ಹೊಂದಬಹುದಾಗಿದೆ. ಇದು ಪ್ರಗತಿಯ ಸಂಕೇತವಾಗಿದೆ. ಮೀನುಗಳ ಪೈಕಿ ಗೋಲ್ಡನ್ ಫಿಶ್ ಓಕೆ ಆದರೆ, ಫೈಟರ್ ಗಳು ಬೇಡ. ಮುಖ್ಯಸ್ಥರಲ್ಲದಿದ್ದರೆ, ಕಚೇರಿಯಲಿ ಅನುಮತ್ ಪಡೆದು ನಂತರ ನಿಮ್ಮ ಟೇಬಲ್ ಮೇಲೆ ಆಕ್ವೇರಿಯಂ ಇಟ್ಟುಕೊಳ್ಳಿ.

ಕೋಪ ತಾಪ ತಗ್ಗಿಸಲು ಪರಿಹಾರ
ಅಕ್ವೇರಿಯಂ ಜತೆಗೆ ಒಂದು ಟೇಬಲ್ ಕ್ಯಾಲೆಂಡರ್ ಇದ್ದರೆ ಇನ್ನೂ ಒಳ್ಳೆಯದು. ನಿಮ್ಮ ಕೋಪ ತಾಪ ತಗ್ಗಿಸುತ್ತದೆ. ನಿಮ್ಮ ಕಾರ್ಯ ಪ್ರವೃತ್ತಿ ಹೆಚ್ಚಳಕ್ಕೆ ಹಾಗೂ ಇತರೆ ಉದ್ಯೋಗಿಗಳು, ಗ್ರಾಹಕರ ಜತೆ ವ್ಯವಹಾರಕ್ಕೂ ಇದು ಸಹಕಾರಿಯಾಗಿದೆ. ಕ್ಯಾಲೆಂಡರ್ ಆದಷ್ಟು ಸರಳವಾಗಿರಲಿ.

ನೋಟಿಸ್ ಬೋರ್ಡ್
ಕಚೇರಿಯ ಮುಂಭಾಗದ ನೋಟಿಸ್ ಬೋರ್ಡ್ ಇರಲಿ, ನಿಮ್ಮ ಡೆಸ್ಕ್ ಬಳಿಯ ನೋಟಿಸ್ ಬೋರ್ಡ್ ಇರಲಿ ಸದಾ ಸ್ವಚ್ಛವಾಗಿರಲಿ, ಮುಖ್ಯವಾದ ನೋಟ್, ಸ್ಫೂರ್ತಿದಾಯಕ ಹೇಳಿಕೆಗಳಿರಲಿ, ಯಾವುದೇ ಕಾರಣಕ್ಕೂ ಋಣಾತ್ಮಕ ಅಂಶಗಳನ್ನು ಬೋರ್ಡ್ ಮೇಲೆ ಬರೆಯಬೇಡಿ.

ಕಚೇರಿಯಲ್ಲಿ ಯಾವುದು ನಿಷಿದ್ಧ
ಮುಂಬಾಗಿಲಿಗೆ ಬೆನ್ನು ಮಾಡಿ ಕಚೇರಿ ಮುಖ್ಯಸ್ಥರು ಕುಳಿತುಕೊಳ್ಳಬಾರದು.
ಕಚೇರಿಯಲ್ಲಿ ಬಾಗಿಲಿಗೆ ಎದುರಾಗಿ ನಿಮ್ಮ ಆಸನವನ್ನು ಹಾಕಿಕೊಳ್ಳಿ.
ಕಚೇರಿಯಲ್ಲಿ ಕಾರ್ಯ ನಿರ್ವಹಿಸುವಾಗ ಆರಾಮದಾಯಕವಾಗಿ ಕುಳಿತುಕೊಳ್ಳಿ, ಕಾಲು ಮೇಲೆ ಕಾಲು ಹಾಕಿಕೊಳ್ಳುವುದು ನಿಮ್ಮ ಪ್ರಗತಿಗೆ ಮುಳುವಾಗಬಹುದು.
ಕಚೇರಿಯಲ್ಲಿ ಗಾಳಿ ಬೆಳಕು ಸರಾಗವಾಗಿ ಬರುವಂತಿರಲಿ, ಬೆಳಕಿಗೆ ಅಡ್ಡವಾಗಿ ಕುಳಿತುಕೊಳ್ಳಬೇಡಿ.
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications