ವಾಸ್ತು ಮಾತ್ರ ಸಾಲದು! ನಿಮ್ಮ ಜಾತಕವೇ ಯಶಸ್ಸನ್ನು ನಿರ್ಧರಿಸುತ್ತದೆ
ಇಂದಿನ ಕಾಲದಲ್ಲಿ ಅನೇಕರು ಮನೆ ಕಟ್ಟುವಾಗ ವಾಸ್ತು ಶಾಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಕೆಲವರ ಮನೆಗಳಲ್ಲಿ ವಾಸ್ತುಶಾಸ್ತ್ರ ಎಲ್ಲವೂ ಸರಿಯಾಗಿ ಇದ್ದರು, ನಿರೀಕ್ಷಿಸಿದಂತೆ ಯಶಸ್ಸು ಸಿಗದೇ ಇರುವುದನ್ನು ನಾವು ನೋಡಬಹುದು. ಇದಕ್ಕೆ ಕಾರಣವೇನು? ಇದಕ್ಕೆ ತಜ್ಙರು ಹೇಳುವ ಪ್ರಕಾರ ಕೇವಲ ವಸ್ತು ಒಂದೆ ಕಾರಣವಲ್ಲಾ ಜಾತಕ ಮತ್ತು ಗ್ರಹಗತಿಗಳು ಪ್ರಮುಖ ಕಾರಣವಾಗಬಹುದು.
ಮನೆ ಕೇವಲ ಕಟ್ಟಡವಲ್ಲ ಜೀವನ ಬದಲಿಸುವ ಒಂದು ಶಕ್ತಿ
ಮನೆ ಕೇವಲ ಸಿಮೆಂಟ್, ಇಟ್ಟಿಗೆ, ಮರಳು, ಮತ್ತು ಕಬ್ಬಿಣದಿಂದ ಕಟ್ಟುವುದಲ್ಲ ಅದು ವ್ಯಕ್ತಿಯ ಜೀವನದ ದಿಕ್ಕನ್ನು ಬದಲಾಯಿಸುವ ಒಂದು ಶಕ್ತಿಯ ಕೇಂದ್ರವಾಗಿದೆ. ಯುಗಗಳೆ ಬದಲಾದರು ವಾಸ್ತು ಶಾಸ್ತ್ರದ ಮಹತ್ವ ಮಾತ್ರ ಕಡಿಮೆಯಾಗಿಲ್ಲ. ಆದರೆ ಇದರಿಂದ ಎಲ್ಲರಿಗೂ ಒಂದೆ ರೀತಿಯಲ್ಲಿ ವಾಸ್ತು ಫಲವು ಸಿಗುವುದಿಲ್ಲ ಎಂಬುದೇ ಮುಖ್ಯ ವಿಚಾರವಾಗಿದೆ.

ದಿಕ್ಕುಗಳ ಪ್ರಭಾವ ಎಲ್ಲರಿಗು ಒಂದೆ ಫಲಕಾರಿ ಆಗುವುದಿಲ್ಲ
ವಾಸ್ತು ಶಾಸ್ತ್ರದ ಪ್ರಕಾ ಉತ್ತರ ಮತ್ತಯ ಪೂರ್ವ ದಿಕ್ಕುಗಳನ್ನು ಉತ್ತಮವೆಂದು ಹೇಳುತ್ತಾರೆ, ಆದರೆ ಈ ದಿಕ್ಕುಗಳು ಎಲ್ಲವೂ ಎಲ್ಲರಿಗೂ ಸಮಾನ ಪಲಿತಾಂಶವನ್ನು ನಿಡುವುದಿಲ್ಲ. ಜಾತಕದಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸ್ಥಿತಿ ಈ ದಿಕ್ಕುಗಳ ಪಲಿತಾಂಶವನ್ನು ನಿರ್ಧರಿಸುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ದಕ್ಷಿಣ ದಿಕ್ಕಿಗೆ ಮಂಗಳ ಗ್ರಹದ ಬಲ
ಸಾಮಾನ್ಯವಾಗಿ ದಕ್ಷಿಣ ದಿಕ್ಕನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಭಯವಿರುತ್ತದೆ, ಆದರೆ ದಕ್ಷಿಣ ದಿಕ್ಕು ಕೆಲವರಿಗೆ ಒಳ್ಳೆಯದಾಗುತ್ತದೆ ಆದರೆ ಇದೆಕ್ಕೆ ಜಾತಕದಲ್ಲಿ ಮಂಗಳ ಗ್ರಹ ಬಲವಾಗಿದ್ದರೆ ದಕ್ಷಣ ದಿಕ್ಕು ಉತ್ತಮ ಎಂದು ಹೇಳಲಾಗುತ್ತದೆ ಹಾಗೂ ಅಧಿಕಾರ ಮತ್ತು ಪ್ರತಿಷ್ಟೆಯನ್ನು ಹೆಚ್ಚಿಸುತ್ತದೆ, ಈ ದಿಕ್ಕು ರಾಜಮರ್ಯಾದೆ ನೀಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಪಶ್ಚಿಮ ದಿಕ್ಕು ಮತ್ತು ಶನಿಯ ಪ್ರಭಾವ
ಪಶ್ಚಿಮ ದಿಕ್ಕಿನಲ್ಲಿ ಮನೆ ಕಟ್ಟಿದ ಕೆಲವರು ಶ್ರೀಮಂತರಾಗುತ್ತಾರೆ ಇನ್ನು ಕೆಲವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಜಾತಕದಲ್ಲಿನ ಶನಿಯ ಪ್ರಭಾವದಿಂದ ನಿರ್ಧಾರವಾಗುತ್ತದೆ. ಹೀಗಾಗಿ ದಿಕ್ಕು ಮಾತ್ರವಲ್ಲ ಗ್ರಹಗತಿಗಳು ಕೂಡ ಮುಖ್ಯ ಪಾತ್ರವಹಿಸುತ್ತವೆ.
ವಾಸ್ತು ಮತ್ತು ಜಾತಕದ ಹೊಂದಾಣಿಕೆ
ಮನೆಯ ವಾಸ್ತು ಎಷ್ಟೇ ಉತ್ತಮವಾಗಿದ್ದರೂ ಅದು ಮಾಲೀಕರ ಜಾತಕ ಮತ್ತು ಜೀವನಕ್ಕೆ ಹೊಂದಾಣಿಕೆಯಾಗಬೇಕು. ಜಾತಕವು ಬಲವಾಗಿದ್ದರೆ ಸಣ್ಣಪುಟ್ಟ ವಾಸ್ತು ದೋಷಗಳು ಪರಿಣಾಮ ಬೀರುವುದಿಲ್ಲ. ಆದರೆ ಜಾತಕ ದುರ್ಬಲವಾಗಿದ್ದರೆ ವಾಸ್ತು ಹೊಂದಾಣಿಕೆಯಾಗದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾತ್ತದೆ ಎಂದು ತಜ್ಞರ ಹೇಳುತ್ತಾರೆ.
ಮನೆಯ ಮುಂಭಾಗದ ರಸ್ತೆ
ವಾಸ್ತುದಲ್ಲಿ ಮನೆಯ ಮುಂಭಾಗದ ರಸ್ತೆ ಬಗ್ಗೆ ಹಲವರು ಭಯಪಡುತ್ತಾರೆ. ಆದರೆ ತಜ್ಞರ ಪ್ರಕಾರ ಎಲ್ಲ ಮನೆಯ ರಸ್ತೆ ಲೋಪದೋಷ ಕೆಟ್ಟ ಪರಿಣಾಮ ಬೀರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಜಾತಕದ ಅನುಕೂಲದಿಂದ ಅವು ಉತ್ತಮ ಫಲವೂ ನೀಡಬಹುದು.
ಈಶಾನ್ಯ ದಿಕ್ಕಿನ ಬಗ್ಗೆ ಭ್ರಮೆ
ಬಹಳವರು ಈಶಾನ್ಯ ದಿಕ್ಕನ್ನು ದೇವರ ದಿಕ್ಕು ಎಂದು ಭಾವಿಸುತ್ತಾರೆ. ಆದರೆ ತತ್ವಶಾಸ್ತ್ರದ ಪ್ರಕಾರ ಪರಮೇಶ್ವರ ಸರ್ವವ್ಯಾಪಿಯಾಗಿದ್ದು ಒಂದು ದಿಕ್ಕಿಗೆ ಮಾತ್ರ ಸೀಮಿತನಲ್ಲ. ಈಶಾನ್ಯ ದಿಕ್ಕು ಶಕ್ತಿಯುತ ಸ್ಥಳವಾಗಿದ್ದು ಅದನ್ನು ಸರಿಯಾಗಿ ಬಳಸುವುದು ಅತಿ ಮುಖ್ಯ.
ವಾಸ್ತು ಪ್ರಕಾರ ಮನೆ ಕಟ್ಟಿದರೆ ಮಾತ್ರ ಸಾಕಾಗುವುದಿಲ್ಲ, ಜಾತಕದ ಗ್ರಹಗತಿಗಳು ಮತ್ತು ದಿಕ್ಕುಗಳ ಹೊಂದಾಣಿಕೆ ಇದ್ದಾಗ ಮಾತ್ರ ಸಂಪೂರ್ಣ ಫಲ ಸಿಗುತ್ತದೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮನೆ ನಿರ್ಮಿಸಿದರೆ ಅದು ಕೇವಲ ವಾಸಸ್ಥಳವಲ್ಲ ನಿಮ್ಮ ಅದೃಷ್ಟವನ್ನು ಬದಲಾಯಿಸುವ ಸ್ಥಳವಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
-
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications