ತುಲಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಹೊಸ ವರ್ಷಾಚರಣೆ ಮುಗಿಸಿಕೊಂಡಿರುವ ತುಲಾ ರಾಶಿಯವರು ಸಾಡೇಸಾತಿಯ ಏಟಿನೊಂದಿಗೆ ಈಗಾಗಲೇ ಜೀವನದ ಆಳ ಅಗಲ ತಿಳಿದುಕೊಂಡಿದ್ದಾರೆ. ಈ ವರ್ಷ ಖರ್ಚೇ ಹೆಚ್ಚಿರುವುದರಿಂದ ದುಡಿಮೆಯ ಸಮಯವನ್ನು ಹೆಚ್ಚಿಸಿಕೊಳ್ಳಬೇಕಿವರು.
ತುಲಾ ರಾಶಿಯ ಚಿತ್ತಾ ನಕ್ಷತ್ರದ ಕೊನೆಯ ಎರಡು ಚರಣದವರು ಮೊದಲ ನಾಲ್ಕು ತಿಂಗಳು ಸೂಪರ್ ಆಗಿಯೇ ಜೀವನ ಅನುಭವಿಸಿದರೆ ನಂತರ ಇಳಿಮುಖವಾಗಿ ಕ್ರಮೇಣ ಕಡೆಯ ನಾಲ್ಕು ತಿಂಗಳು ಶೂನ್ಯಕ್ಕೆ ಬಂದು ನಿಲ್ಲುತ್ತದೆ ಜೀವನ. ಆದರೂ ಹೆಚ್ಚಿನ ಸುಖವೂ ಕಂಡು ಬರುವುದರಿಂದ ಕಷ್ಟಗಳೇನೂ ದೊಡ್ಡದೆನಿಸುವುದಿಲ್ಲ ಇವರಿಗೆ.
ಸ್ವಾತಿ ನಕ್ಷತ್ರದವರು ಮಾತ್ರ ಪುಟಿದೇಳಲು ಪ್ರಯತ್ನ ಪಡುತ್ತಿದ್ದರೂ ಯಾವುದೇ ಫಲ ಬರದೇ ಬೇಸರಗೊಂಡಿರುವುದು ಕಣ್ಣಿಗೆ ಕಾಣುತ್ತದೆ. ಆದರೂ ಸ್ವಲ್ಪ ಮಟ್ಟಿಗೆ ಸಮಾಧಾನವನ್ನು ಹೆಚ್ಚಿಸಿಕೊಂಡರೆ ವರ್ಷದಲ್ಲಿ ಅರ್ಧ ದಿನಗಳಷ್ಟನ್ನಾದರೂ ಸಂತಸದಿಂದ ಕಳೆಯಬಹುದು. ಏಕೆಂದರೆ ಬೇಸರವಾಗಿಯೇ ಯುಗಾದಿ ವರ್ಷಾಚರಣೆಯನ್ನು ಆರಂಭಿಸಿರುವ ಸ್ವಾತಿ ನಕ್ಷತ್ರದವರು ಕ್ರಮೇಣ ಜೀವನದಲ್ಲಿ ಇಳಿಮುಖವನ್ನು ಕಾಣುವಂತಾಗುತ್ತದೆ. ಆದರೆ ಕೊನೆಯ ನಾಲ್ಕು ತಿಂಗಳು ಮಾತ್ರ ಮತ್ತೆ ಹಳಿಗೆ ಬರುತ್ತದೆ ಜೀವನ. [ಯಶಸ್ಸಿನ ಕುದುರೆಯ ಮೇಲೆ ಸ್ವಾತಿ ನಕ್ಷತ್ರದವರು]

ವಿಶಾಖಾ ನಕ್ಷತ್ರದ ಮೊದಲ ಮೂರು ಚರಣದವರು ಯುಗಾದಿಯಿಂದ ಸೂಪರ್ ಆಗಿ ಜೀವನವನ್ನಾರಂಭಿಸಿದ್ದಾರೆ. ಆದರೆ ಕಾಲಕ್ರಮೇಣ ಸ್ವಲ್ಪ ತೊಂದರೆಗಳು ಕಾಣಿಸುವುದರಿಂದ ಈಗಿನಿಂದಲೇ ಜಾಗ್ರತೆ ಅವಶ್ಯ. ಏಕೆಂದರೆ ಮೊದಲ ನಾಲ್ಕು ತಿಂಗಳು ಚೆನ್ನಾಗಿಯೇ ಇದ್ದರೆ ನಂತರದ ಎಂಟು ತಿಂಗಳು ಸ್ವಲ್ಪ ಕಷ್ಟಕಾರಕವಾಗಿವೆ. [ನಕ್ಷತ್ರ ಸರಣಿ : ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು]
ಇನ್ನು, ಆಗಸ್ಟ್ ವರೆಗೂ ಗುರುಬಲ ಇರುವುದರಿಂದ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಮುಂದಾಗಬಹುದು. ಕೈಗೂಡುತ್ತವೆ ಅಂದುಕೊಂಡದ್ದು ಈ ಸಮಯದೊಳಗೆ ಆಗಬಹುದು. ಜನವರಿ ತಿಂಗಳಲ್ಲಿ ಶನಿದೇವನು ಧನು ರಾಶಿಗೆ ಪ್ರವೇಶ ಮಾಡುವುದರಿಂದ ಒಮ್ಮಿಂದೊಮ್ಮೆಲೆ ಲಾಭ ಸ್ಥಾನಕ್ಕೆ ಬಂದ ಶನಿದೇವನು ಸಿಕ್ಕಾಪಟ್ಟೆ ಸಮೃದ್ಧಫಲವನ್ನು ನೀಡುತ್ತಾನೆ. ಆದರೆ ಆಗಸ್ಟ್ ನಿಂದ ಗುರುಬಲ ಹೊರಟು ಹೋಗುವುದರಿಂದ ಸ್ವಲ್ಪ ಜಾಗ್ರತೆ ವಹಿಸಿಕೊಳ್ಳಬೇಕು ಕೌಟುಂಬಿಕ ವಿಷಯದಲ್ಲಿ. ಒಟ್ಟಿನಲ್ಲಿ ಈ ವರ್ಷ ಫಿಫ್ಟಿಫಿಫ್ಟಿ ಫಲಗಳಿವೆ ತುಲಾ ರಾಶಿಯವರಿಗೆ. [ಗುರುಬಲ : ತುಲಾ ರಾಶಿಗೆ ಸೂಪರ್, ಆಲ್ ದಿ ಬೆಸ್ಟ್!]
(ತುಲಾ ರಾಶಿಯಿಂದ ಉಳಿದ ರಾಶಿಗಳ ದುರ್ಮುಖ ನಾಮ ಸಂವತ್ಸರದ ಫಲಾಫಲ ತಡವಾಗಿ ಪ್ರಕಟವಾಗುತ್ತಿರುವುದಕ್ಕೆ ವಿಷಾದಿಸುತ್ತೇವೆ.)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications