ಕನ್ಯಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಸಾಡೇಸಾತಿಯ ಹೊಡೆತದಿಂದ ಪಾರಾಗಿ ಬಂದು ಜೀವನದನುಭವ ಪಡೆದುಕೊಂಡಿರುವ ಕನ್ಯಾ ರಾಶಿಯವರಿಗೆ ಈ ವರ್ಷದ ಯುಗಾದಿಯು ಸ್ವಲ್ಪ ನೆಮ್ಮದಿ ನೀಡಲಿದೆ. ಇಷ್ಟು ದಿನ ಪಟ್ಟಿರುವ ಕಷ್ಟದ ಹತ್ತುಪಟ್ಟು ಸುಖವನ್ನು ಅನುಭವಿಸುವ ಸಮಯ ಬಂದಿದೆ ಎನ್ನಬಹುದು. ಏಕೆಂದರೆ ಶನಿಯು ಕೊಟ್ಟು ನೋಡಿದ್ದ, ಕಸಿದುಕೊಂಡು ನೋಡಿದ್ದ, ಈಗ ಕಸಿದುಕೊಂಡಿದ್ದರ ದುಪ್ಪಟ್ಟಲ್ಲ ಹತ್ತತ್ತು ಪಟ್ಟು ನೀಡುತ್ತಾನೆ.
ಆದರೆ ಹೆಚ್ಚಿನ ಶ್ರಮದಿಂದ ಕೆಲಸ ಮಾಡಿಕೊಂಡು ಈ ಶುಭಸಮಯವನ್ನು ಆಸ್ತಿಪಾಸ್ತಿ ಗಳಿಸಿಕೊಳ್ಳಲು ಪ್ರಯತ್ನಿಸಬೇಕು ಕನ್ಯಾ ರಾಶಿಯವರು. ಆದರೆ ನ್ಯಾಯಯುತವಾದ ದುಡಿಮೆ ಇರಲಿ. ಅನ್ಯಾಯದೊಂದು ರೂಪಾಯಿಯನ್ನೂ ಮುಟ್ಟಲೇಬೇಡಿ. ಅದಕ್ಕೇನೂ ಆಗತ್ತೇ ಎಂದುಕೊಳ್ಳಬೇಡಿ. ಯಾಕೆಂದರೆ ಹೋಗುವಾಗ ಅನ್ಯಾಯದ ದುಡ್ಡಿನೊಂದಿಗೆ ನ್ಯಾಯವಾಗಿ ದುಡಿದಿದ್ದು ಕೂಡ ಹೋಗಿ ಬೀದಿಗೆ ಬೀಳಬೇಕಾಗುತ್ತದೆ ಎಚ್ಚರವಿರಲಿ.
ಉತ್ತರಾಫಾಲ್ಗುಣಿಯ ಕೊನೆಯ ಮೂರು ಚರಣದವರಿಗೆ ಮೊದಲ 8 ತಿಂಗಳು ಸಮಾಧಾನಕರ ಜೀವನವಿದ್ದರೆ ಕೊನೆಯ ನಾಲ್ಕು ತಿಂಗಳು ಶುಭವಾಗಿರುತ್ತದೆ. ಸುಖದ ಸುಪ್ಪತ್ತಿಗೆಯ ಜೀವನದನುಭವ ಈ ಸಮಯದಲ್ಲಾಗುತ್ತದೆ. ಚಿಂತಿಸದೇ ಕಳೆದುಕೊಂಡದ್ದನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು ಈ ಸಮಯದಲ್ಲಿ. [ಸರ್ಕಾರಿ ಉದ್ಯೋಗ ಭಾಗ್ಯ ಉತ್ತರಫಾಲ್ಗುಣಿ ನಕ್ಷತ್ರಕ್ಕೆ!]

ಆದರೆ, ದೇಹಾರೋಗ್ಯದ ಬಗ್ಗೆ ಮುತುವರ್ಜಿ ವಹಿಸಿಕೊಳ್ಳಬೇಕು. ಸದೃಢವಾಗಿರುವ ದೇಹದಿಂದ ಮನಸ್ಸು ಕೂಡ ಪ್ರಫುಲ್ಲವಾಗಿರುವುದರಿಂದ ದುಷ್ಟ ಜನರು ಜೀವನದಲ್ಲಿ ತೊಂದರೆ ಮಾಡಲು ಬಂದರೂ ಏನೂ ಫಲ ಕೊಡಲ್ಲ ಅವರಿಗೆ. ನಿಮಗೆ ನಷ್ಟನೂ ಆಗಲ್ಲ. [ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು]
ಹಸ್ತಾ ನಕ್ಷತ್ರದವರಿಗೆ ಮೊದಲ ನಾಲ್ಕು ತಿಂಗಳು ಸಹಜವಾದ ಜೀವನಶೈಲಿ ಮುಂದುವರೆದರೆ ನಂತರದ ನಾಲ್ಕು ತಿಂಗಳ ಅಷ್ಟಕ್ಕಷ್ಟೇ ಎನ್ನುವಂತಾಗುತ್ತದೆ. ಕೊನೆಯ ನಾಲ್ಕು ತಿಂಗಳು ಸ್ವಲ್ಪ ಸಮಾಧಾನವಿರುತ್ತದೆ. ಆದರೆ ಉಳಿದಂತೆ ಏನೂ ತೊಂದರೆಗಳಿರಲ್ಲ. [ನಕ್ಷತ್ರ ಸರಣಿ : 'ಅಭಯಹಸ್ತ' ನೀಡುವ ಹಸ್ತಾ ನಕ್ಷತ್ರದವರು]
ಇನ್ನು ಚಿತ್ತಾ ನಕ್ಷತ್ರದವರಿಗೆ ಮೊದಲ ನಾಲ್ಕು ತಿಂಗಳು ಲಾಟರಿ ಹೊಡೆದಂತೆ ಇರುತ್ತದೆ ಜೀವನ ಖುಷಿ ಖುಷಿಯಾಗಿ ಇರಬಹುದು. ಆ ನಂತರದ ನಾಲ್ಕು ತಿಂಗಳು ಜೀವನದಲ್ಲಿ ಸ್ವಲ್ಪ ಇಳಿಮುಖವೆನಿಸಲಾರಂಭಿಸುತ್ತದೆ. ಕೊನೆಯ ನಾಲ್ಕು ತಿಂಗಳಂತೂ ತೊಂದರೆಗಳು ಬಂದ ದಾರಿಯೇ ಗೊತ್ತಾಗುವುದಿಲ್ಲ. ಆದರೆ ಯಾವುದಕ್ಕೂ ಬೆದರದೇ ಜಗ್ಗದೇ ಜೀವನ ಮುಂದುವರಿಸಿಕೊಂಡು ಹೋದಲ್ಲಿ ತೊಂದರೆಯೇನಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಈಗಿನಿಂದಲೇ ಮುಂದಿನ ದಿನಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡರೆ ಒಳ್ಳೆಯದು.
ಸ್ವಲ್ಪ ಗುರುಬಲದ ಕೊರತೆ ಅನುಭವಿಸುತ್ತಿದ್ದರೂ ಕೂಡ ಶನಿಬಲವಿರುವುದರಿಂದ ಈ ರಾಶಿಯವರು ಚಿಂತಿಸುವ ಅಗತ್ಯವಿಲ್ಲ. ಆದರೆ ಕೌಟುಂಬಿಕ ವಿಷಯದಲ್ಲಿ ಮಾತ್ರ ಸ್ವಲ್ಪ ಕಿರಿಕ್ ಎನಿಸುವುದು ಆವಾಗಾವಾಗ. ಒಟ್ಟಾರೆ ಶೇ. 40ರಷ್ಟು ಶುಭಫಲ ಇರುತ್ತದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications