ಬ್ರೇಕಪ್ ಆದ್ರೂ ಮನಸ್ಸಿಂದ ಹೋಗಲ್ಲ! ಈ 5 ರಾಶಿಯವರು ಹಳೆಯ ಪ್ರೀತಿಯನ್ನು ಮರೆಯಲು ಕಷ್ಟಪಡ್ತಾರೆ!
ಒಂದು ಪ್ರೀತಿ ಅಥವಾ ಪ್ರೇಮಸಾಂಗತ್ಯ ಅನೇಕ ಕಾರಣಗಳಿಂದ ಮುರಿದು ಬೀಳಬಹುದು. ಆದ್ರೆ ಅದು ಹೃದಯದಲ್ಲಿ ಆಳವಾದ ಗಾಯವನ್ನು ಮಾಡಿಯೇ ಹೋಗುತ್ತದೆ. ಅದರ ನೆನಪುಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಕೆಲವರು ಬ್ರೇಕಪ್ ಆದ ಕೆಲವೇ ದಿನಗಳಲ್ಲಿ ತಮ್ಮ ಜೀವನದಲ್ಲಿ ಮುಂದೆ ಸಾಗಬಹುದು. ಆದರೆ ಇನ್ನು ಕೆಲವರು ವರ್ಷಗಳು ಕಳೆದರೂ ಹಳೆಯ ಪ್ರೀತಿಯ ಕೆಲವು ಕ್ಷಣಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಭಾವನಾತ್ಮಕವಾಗಿ ಹೆಚ್ಚು ಆಳವಾಗಿ ಸಂಬಂಧ ಬೆಳೆಸಿಕೊಳ್ಳುವ ಕೆಲವು ರಾಶಿಯವರು ಹಳೆಯ ಪ್ರೀತಿಯಿಂದ ಹೊರಬರಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಂಥ ರಾಶಿಗಳು ಯಾವುವು?
ಕರ್ಕಾಟಕ
ನೆನಪುಗಳೇ ಇವರ ದೌರ್ಬಲ್ಯ. ಕರ್ಕಾಟಕ ರಾಶಿಯವರು ಭಾವನೆಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಒಬ್ಬರನ್ನು ಮನಸ್ಸಿಗೆ ಹತ್ತಿರ ಮಾಡಿಕೊಂಡ ನಂತರ ಆ ಸಂಬಂಧದ ನೆನಪುಗಳನ್ನು ಸುಲಭವಾಗಿ ಬದಿಗಿಡುವುದು ಇವರಿಗೆ ಕಷ್ಟವಾಗಬಹುದು. ಬ್ರೇಕಪ್ ಆದ ಮೇಲೂ ಹಳೆಯ ಫೋಟೋ, ಮೆಸೇಜ್ ಅಥವಾ ಒಟ್ಟಿಗೆ ಕಳೆದ ಸ್ಥಳವೊಂದು ಹಳೆಯ ನೆನಪುಗಳನ್ನು ಮತ್ತೆ ತಂದುಬಿಡಬಹುದು. ಇವರು ಕೆಲವೊಮ್ಮೆ ಹಳೆಯ ಪ್ರೀತಿಯನ್ನು ಮರೆಯಲು ಕುಡಿತ ಮೊದಲಾದ ದುಶ್ಚಟಗಳ ದಾಸರಾಗಬಹುದು. ಸಂಗೀತ ಮೊದಲಾದ ಹವ್ಯಾಸಗಳ ಮೊರೆ ಕೂಡ ಹೋಗಬಹುದು.

ವೃಶ್ಚಿಕ
ಪ್ರೀತಿ ಅಂದ್ರೆ ಇವರಿಗೆ ಆಳವಾದ ಬಂಧನ. ವೃಶ್ಚಿಕ ರಾಶಿಯವರು ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಎಂದು ಪರಿಗಣಿಸಲಾಗುತ್ತದೆ. ಇವರಿಗೆ ಪ್ರೀತಿ ಅಂದ್ರೆ ಕೇವಲ ಜೊತೆಯಾಗಿರುವುದಲ್ಲ. ಅದು ನಂಬಿಕೆ ಮತ್ತು ಭಾವನಾತ್ಮಕ ಬಂಧನ. ಹೀಗಾಗಿ ಸಂಬಂಧ ಮುಗಿದರೂ, ಅದು ಯಾಕೆ ಮುಗಿಯಿತು ಎಂಬ ಪ್ರಶ್ನೆ ಬಹಳ ಕಾಲ ಕಾಡಬಹುದು. ಭಾವನೆಯೇ ಇವರ ಚಟ ಹಾಗೂ ಅಮಲು. ಆದ್ದರಿಂದ ಇವರಿಗೆ ಇನ್ನೊಂದು ಅಮಲಿನ ಅಗತ್ಯವಿಲ್ಲ.
ಮೀನ
ಮೀನ ರಾಶಿಯವರನ್ನು ಜ್ಯೋತಿಷ್ಯದಲ್ಲಿ ಸೂಕ್ಷ್ಮ ಮನಸ್ಸಿನವರು ಮತ್ತು ಭಾವನಾತ್ಮಕ ಸ್ವಭಾವದವರು ಎಂದು ಹೇಳಲಾಗುತ್ತದೆ. ಹಳೆಯ ಸಂಬಂಧದ ಒಳ್ಳೆಯ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಸಾಧ್ಯತೆ ಇವರಲ್ಲಿ ಹೆಚ್ಚು ಎಂದು ನಂಬಲಾಗುತ್ತದೆ. ಕೆಲವೊಮ್ಮೆ ನಿಜ ಜೀವನಕ್ಕಿಂತ ನೆನಪುಗಳಲ್ಲಿರುವ ಪ್ರೀತಿಯೇ ಇನ್ನಷ್ಟು ಸುಂದರವಾಗಿ ಕಾಣಬಹುದು! ಕಲ್ಪನೆಯಲ್ಲೇ ಹಳೆಯ ಪ್ರೀತಿ ಮರುಕಳಿಸಿಕೊಳ್ಳುವವರು. ಆದರೆ ಇವರು ತನ್ನನ್ನು ಬಿಟ್ಟು ಹೋದ ವ್ಯಕ್ತಿಯ ಬಗ್ಗೆ ಕ್ರೂರರಾಗಲಾರರು. ಅಂಥ ಕ್ರೂರತನವನ್ನು ಕನಸಿನಲ್ಲಿಯೂ ಯೋಚಿಸಲಾರರು.
ವೃಷಭ
ವೃಷಭ ರಾಶಿಯವರು ಸ್ಥಿರತೆ ಮತ್ತು ನಂಬಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ಒಮ್ಮೆ ಮನಸ್ಸು ಕೊಟ್ಟರೆ ಸುಲಭವಾಗಿ ಹಿಂದೆ ಸರಿಯುವುದಿಲ್ಲ. ಒಂದು ಸಂಬಂಧದಲ್ಲಿ ಭದ್ರತೆ ಮತ್ತು ಭವಿಷ್ಯವನ್ನು ಕಂಡಿದ್ದರೆ, ಅದು ಮುಗಿದ ನಂತರ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು. ಇವರಿಗೆ ಅನ್ಯ ವ್ಯಕ್ತಿಯೇ ಕೈ ಕೊಡಬೇಕಲ್ಲದೆ, ಇವರು ಇತರರಿಗೆ ಕೈ ಕೊಡುವುದು ಕಡಿಮೆ. ಆದರೆ ಮೋಸಕ್ಕೆ ತುತ್ತಾದರೆ ತೀವ್ರವಾಗಿ ಚಡಪಡಿಸುತ್ತಾರೆ. ಅದರಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ.
ಸಿಂಹ
ಸಿಂಹ ರಾಶಿಯವರು ಆತ್ಮವಿಶ್ವಾಸಿಗಳಾಗಿ ಕಾಣಬಹುದು. ಆದರೆ ಪ್ರೀತಿಯಲ್ಲಿ ನಿಜವಾಗಿಯೂ ಮನಸ್ಸು ಕೊಟ್ಟಿದ್ದರೆ, ಸಂಬಂಧದ ನೆನಪುಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವುದು ಸುಲಭವಲ್ಲ ಎಂದು ಜ್ಯೋತಿಷ್ಯ ಹೇಳುತ್ತದೆ. "ನಾನು ಮರೆತಿದ್ದೇನೆ" ಎಂದರೂ ನೆನಪು ಉಳಿದೇ ಇರಬಹುದು. ವಿಶೇಷವಾಗಿ ತಮ್ಮನ್ನು ನಿಜವಾಗಿ ಅರ್ಥಮಾಡಿಕೊಂಡ ವ್ಯಕ್ತಿಯನ್ನು ಮರೆಯುವುದು ಕಷ್ಟವಾಗಬಹುದು. ಕೆಲವೊಮ್ಮೆ ಈ ಪ್ರೀತಿಯಲ್ಲಿ ಮೋಸವು ಅವರಲ್ಲಿ ಸಿಟ್ಟು, ಕ್ರೋಧವಾಗಿಯೂ ಮಾರ್ಪಾಡು ಆಗಬಹುದು. ಆಗ ಇವರನ್ನು ಎದುರಿಸುವುದು ಕಷ್ಟ.
ಇತರ ರಾಶಿಗಳು
ಮೇಷ, ಮಿಥುನ, ಕನ್ಯಾ, ತುಲಾ, ಧನು, ಮಕರ ಮತ್ತು ಕುಂಭ ರಾಶಿಯವರೂ ಹಳೆಯ ಪ್ರೀತಿಯನ್ನು ನೆನಪಿಸಿಕೊಳ್ಳಬಹುದು. ಆದರೆ ಅವರು ಅದನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರಬಹುದು. ಕೆಲವರು ಹೊಸ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ, ಕೆಲವರು ಸ್ನೇಹಿತರೊಂದಿಗೆ ಸಮಯ ಕಳೆಯುತ್ತಾರೆ, ಇನ್ನು ಕೆಲವರು ತಮ್ಮ ಭಾವನೆಗಳನ್ನು ಒಳಗೇ ಇಟ್ಟುಕೊಳ್ಳುತ್ತಾರೆ. ಹಳೆಯ ಪ್ರೀತಿಯನ್ನು ಮರೆಯಲು ಎಷ್ಟು ಸಮಯ ಬೇಕು ಎಂಬುದು ವ್ಯಕ್ತಿಯ ಅನುಭವ, ಸಂಬಂಧದ ಆಳ ಮತ್ತು ಬ್ರೇಕಪ್ನ ಕಾರಣದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.


Click it and Unblock the Notifications
