Surya Ketu Yuti 2026: ಸೂರ್ಯ ಕೇತುವಿನ ಸಂಯೋಗ ಈ ರಾಶಿಯವರಿಗೆ ಬರಲಿದೆ ಆಪತ್ತು: ಈ ನಿರ್ಧಾರಗಳ ಬಗ್ಗೆ ಎಚ್ಚರಿಕೆ ಅಗತ್ಯ
Surya Ketu Yuti 2026: ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನು ಆತ್ಮವಿಶ್ವಾಸ ಮ್ತು ಗೌರವದ ಅಂಶ. ಆದರೆ, ಕೇತುವು ಒಂಟಿತನ, ಗೊಂದಲ ಮತ್ತು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಛಾಯಾ ಗ್ರಹವಾಗಿದೆ. ಇದೀಗ ಸೂರ್ಯನು ತನ್ನದೇ ಅಧಿಪತ್ಯದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಕೇತುವಿನ ಅಧಿಪತ್ಯದ ಮಾಘ ನಕ್ಷತ್ರದ ಮೂಲಕವೂ ಸಂಚಾರ ನಡೆಸುತ್ತಿದ್ದಾನೆ.
ಛಾಯಾ ಗ್ರಹವಾದ ಕೇತು ಈಗಾಗಲೇ ಸಿಂಹ ರಾಶಿಯಲ್ಲಿ ಇದ್ದಾನೆ. ಪರಿಣಾಮವಾಗಿ, ಸೂರ್ಯನು ಸಿಂಗ ರಾಶಿಯಲ್ಲಿ ಮತ್ತು ಮಘಾ ನಕ್ಷತ್ರದಲ್ಲಿ ಕೇತುವಿನೊಂದಿಗೆ ಸಂಯೋಗ ಹೊಂದುತ್ತಾನೆ. ಇದರಿಂದ ಸೂರ್ಯ-ಕೇತು ಸಂಯೋಗ ಉಂಟಾಗುತ್ತಿದೆ. ಈ ಪರಿಸ್ಥಿತಿಯು ಅನೇಕ ರಾಶಿಯವರ ಆತ್ಮವಿಶ್ವಾಸ, ಆರೋಗ್ಯ, ವೃತ್ತಿ ಮತ್ತು ಆರ್ಥಿಕ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು.

ಸೂರ್ಯ-ಕೇತು ಪ್ರಭಾವದಿಂದಾಗಿ ಯಾವ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು
ಮಿಥುನ ರಾಶಿ (Gemini)
ನಿಮ್ಮ ರಾಶಿಯವರ ಮೂರನೇ ಮನೆಯಲ್ಲಿ ಈ ಸಂಯೋಗ ಉಂಟಾಗುತ್ತಿದೆ. ಪರಿಸ್ಥಿತಿ ಇದೆ. ಚೆನ್ನಾಗಿ ನಡೆಯುತ್ತಿದ್ದ ಕೆಲಸಗಳು ಇದ್ದಕ್ಕಿದ್ದತೆ ನಿಂತು ಬಿಡುವುದು. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಫಲ ಮಾತ್ರ ಸಿಗದೇ ಹೋಗಬಹುದು, ಅಥವಾ ವಿಳಂಬವಾಗಬಹುದು. ಒಡಹುಟ್ಟಿದವರೊಂದಿಗೆ ಜಗಳಗಳಾಗುವುದು. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ಉಂಟಾಗುವುದು. ಕೆಲಸಗಳಲ್ಲಿ ಗಮನ ಕೇಂದ್ರೀಕರಿಸುವುದು ಕಷ್ಟವಾಗಬಹುದು.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರಿಗೆ, ಈ ಸಂಯೋಗವು ಎರಡನೇ ಮನೆಯಲ್ಲಿ ಸಂಭವಿಸುತ್ತಿದೆ. ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು.ಕಠಿಣ ಮಾತುಗಳು ಸಂಬಂಧಗಳನ್ನು ಹಾಳು ಮಾಡಬಹುದು. ಯಾರಿಗೂ ಹಣವನ್ನು ಸಾಲವಾಗಿ ನೀಡದಿರುವುದೇ ಜಾಣತನ. ಮಾತನಾಡುವಾಗ ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಬಳಸಿ.
ಸಿಂಹ ರಾಶಿ (Leo)
ಸೂರ್ಯನು ನಿಮ್ಮ ರಾಶಿಗೇ ಪ್ರವೇಶಿಸಿದ್ದಾನೆ. ಸೂರ್ಯ ಕೇತು ಸಂಯೋಗ ನಿಮ್ಮದೇ ರಾಶಿಯಲ್ಲಿ ನಡೆಯುತ್ತಿದೆ. ಸಣ್ಣ ಸಣ್ಣ ವಿಷಯಗಳಿಗೂ ಕೋಪ ಬರಬಹುದು. ಮನಸ್ಸಿಗೆ ಕಿರಿಕಿರಿ ಉಂಟಾಗುವುದು. ಪ್ರಮುಖ ಹಣಕಾಸು ಅಥವಾ ವೃತ್ತಿ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ತಂದೆ ಮತ್ತು ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧ ಹದಗೆಡಲು ಬಿಡಬೇಡಿ.
ವೃಶ್ಚಿಕ ರಾಶಿ (Scorpio)
ಸೂರ್ಯ ಮತ್ತು ಕೇತು ವೃಶ್ಚಿಕ ರಾಶಿಯವರ ಹತ್ತನೇ ಮನೆಯ ಮೇಲೆ ಪರಿಣಾಮವನ್ನು ಬೀರುತ್ತಾರೆ. ಕೆಲಸ ಅಥವಾ ವ್ಯವಹಾರದಲ್ಲಿ, ಮೇಲಧಿಕಾರಿಗಳೊಂದಿಗೆ ಸಮನ್ವಯವು ಹದಗೆಡಬಹುದು. ಅನಗತ್ಯ ಕೆಲಸದ ಒತ್ತಡ ಹೆಚ್ಚಾಗಬಹುದು. ಕೆಲಸಗಳನ್ನು ಬದಲಾಯಿಸಲು ಅಥವಾ ಹೊಸ ಕೆಲಸಕ್ಕೆ ಕೈ ಹಾಕುವ ಬಗ್ಗೆ ಯೋಚಿಸಬೇಡಿ. ವಾಹನ ಚಲಾಯಿಸುವಾಗ ವಿಶೇಷ ಎಚ್ಚರಿಕೆ ವಹಿಸಿ.
ಕುಂಭ ರಾಶಿ (Aquarius)
ಈ ಸಂಚಾರವು ನಿಮ್ಮ ಏಳನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದ ಉಂಟಾಗಬಹುದು. ತಪ್ಪು ತಿಳುವಳಿಕೆಗಳು ಭಿನ್ನಾಭಿಪ್ರಾಯ, ಮನಸ್ತಾಪ ಉಂಟಾಗಬಹುದು. ವ್ಯಾಪಾರ ಪಾಲುದಾರಿಕೆಯಲ್ಲಿ ಎಚ್ಚ್ರರಿಕೆಯಿಂದ ಇರಿ. ಯಾವುದೇ ದಾಖಲೆಗಳನ್ನು ಓದದೆ ಸಹಿ ಮಾಡಬೇಡಿ. ತಾಳ್ಮೆ ಮತ್ತು ಮಾತುಕತೆ ಮೂಲಕವೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಏನು ಮಾಡಬೇಕು ?
ಸೂರ್ಯ ದೇವರನ್ನು ಪೂಜಿಸಿ
ಪ್ರತಿದಿನ ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸೂರ್ಯ ದೇವರಿಗೆ ಅರ್ಪಿಸಿ. ನೀರು ಅರ್ಪಿಸುವಾಗ ಓಂ ಸೂರ್ಯಾಯ ನಮಃ ಎನುವ ಮಂತ್ರವನ್ನು ಜಪಿಸಿ.
ಮಂಗಳವಾರ ಮತ್ತು ಶನಿವಾರ ಹನುಮಂತನನ್ನು ಪೂಜಿಸಿ ಮತ್ತು ಹನುಮಾನ್ ಚಾಲೀಸಾ ಪಠಿಸಿ. ಇದು ಕೇತುವಿನ ನಕಾರಾತ್ಮಕ ಪರಿಣಾಮಗಳನ್ನು ಶಾಂತಗೊಳಿಸುತ್ತದೆ.
ಭಾನುವಾರದಂದು ಬೆಲ್ಲ, ತಾಮ್ರ ಅಥವಾ ಕೆಂಪು ಬಟ್ಟೆಗಳನ್ನು ದಾನ ಮಾಡಿ. ಅಗತ್ಯವಿರುವವರಿಗೆ ಆಹಾರ ಕೊಟ್ಟರೆ ಶುಭಫಲ ಸಿಗುವುದು.


Click it and Unblock the Notifications
