Sukraditya Raja Yoga: 18 ತಿಂಗಳ ನಂತರ ಮೇಷ ರಾಶಿಯಲ್ಲಿ ಸುಕ್ರಾದಿತ್ಯ ರಾಜಯೋಗ: ಈ 3 ರಾಶಿಯವರಿಗೆ ಯುಗಾದಿ ಶುಭ ಫಲ
ಗ್ರಹಗಳು ಸಂಚಾರದ ವೇಳೆ ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಕೆಲ ಗ್ರಹಗಳು ನಿಧಾನವಾಗಿ ಇನ್ನೂ ಕೆಲವು ವೇಗವಾಗಿ ಸಂಚಾರ ಮಾಡುತ್ತವೆ. ಒಂದು ರಾಶಿಯಲ್ಲಿ ಹಲವು ಗ್ರಹಗಳು ಸಂಚಾರ ಮಾಡಿದಾಗ ಶುಭ ಅಥವಾ ಅಶುಭ ಯೋಗಗಳು ರೂಪಗೊಳ್ಳುತ್ತವೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಈ ಯೋಗಗಳ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಅಂದಹಾಗೆ ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾದ ಸೂರ್ಯ ಗ್ರಹ ಏಪ್ರಿಲ್ 13ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಅದರ ನಂತರ ಏಪ್ರಿಲ್ 24 ರಂದು ರಾಕ್ಷಸರ ಅಧಿಪತಿ ಎಂದು ಪರಿಗಣಿಸಲ್ಪಟ್ಟ ಶುಕ್ರ ಗ್ರಹ ಸಹ ಮೇಷ ರಾಶಿಗೆ ಚಲಿಸುತ್ತದೆ. ಹೀಗೆ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರರ ಸಂಯೋಗದಿಂದ ಸುಕ್ರಾದಿತ್ಯ ರಾಜಯೋಗ ಉಂಟಾಗುವುದು.
ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಕೆಲವು ರಾಶಿಯವರಿಗೆ ಈ ಯೋಗದಿಂದ ಶುಭ ಭಾಗ್ಯ ಪ್ರಾಪ್ತಿಯಾಗುತ್ತದೆ. ಹಾಗಾದರೆ ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮೇಷ ರಾಶಿ
ಸುಕ್ರಾದಿತ್ಯ ರಾಜಯೋಗ ಮೇಷ ರಾಶಿಯವರಿಗೆ ಶುಭವಾಗಲಿದೆ. ಮೇಷ ರಾಶಿಯ ಮೊದಲ ಮನೆಯಲ್ಲಿ ಸುಕ್ರಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಇದರಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.
ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವಿವಾಹಿತರು ಸಂತೋಷದ ವೈವಾಹಿಕ ಜೀವನವನ್ನು ಹೊಂದಿರುತ್ತಾರೆ. ಈ ಯೋಗದ ಅವಧಿಯಲ್ಲಿ ಮುಖ್ಯವಾಗಿ ದೀರ್ಘಾವಧಿಯ ಆಸೆಗಳು ಈಡೇರುವ ಸಾಧ್ಯತೆಯಿದೆ.

ಸಿಂಹ ರಾಶಿ
ಸುಕ್ರಾದಿತ್ಯ ರಾಜಯೋಗ ಸಿಂಹ ರಾಶೀಯವರಿಗೆ ಮಂಗಳಕರವಾಗಿದೆ. ಸಿಂಹ ರಾಶಿಯ 9ನೇ ಮನೆಯಲ್ಲಿ ಸುಕ್ರಾದಿತ್ಯ ರಾಜಯೋಗ ರಚನೆಯಾಗಲಿದೆ. ಈ ಕಾರಣದಿಂದಾಗಿ ಈ ರಾಶಿಗಳ ಅದೃಷ್ಟ ಅನುಕೂಲಕರವಾಗಿರುತ್ತದೆ.
ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಯಶಸ್ಸು ಸಾಧಿಸುತ್ತಾರೆ.

ತುಲಾ ರಾಶಿ
ಸುಕ್ರಾದಿತ್ಯ ರಾಜಯೋಗ ತುಲಾ ರಾಶಿಯವರಿಗೆ ಅದೃಷ್ಟ ತರಲಿದೆ. ತುಲಾ ರಾಶಿಯ 7ನೇ ಮನೆಯಲ್ಲಿ ಸುಕ್ರಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಹೀಗೆ ಈ ರಾಶಿಗಳ ದಾಂಪತ್ಯ ಜೀವನ ಅದ್ಭುತವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುವಿರಿ.
ಈ ಯೋಗದ ಅವಧಿಯಲ್ಲಿ ಪ್ರಗತಿಯ ಬಾಗಿಲುಗಳು ತೆರೆದುಕೊಳ್ಳುತ್ತವೆ. ಅವಿವಾಹಿತರಿಗೆ ಉತ್ತಮ ಜೀವನ ಸಂಗಾತಿ ದೊರೆಯಲಿದ್ದಾರೆ. ಜಂಟಿ ಉದ್ಯಮದಲ್ಲಿ ಉತ್ತಮ ಲಾಭ ಸಿಗಲಿದೆ. ಸಿಕ್ಕಿಬಿದ್ದ ಹಣ ಕೈಗೆ ಬರಲಿದೆ. ನಿಮ್ಮ ಯೋಜನೆಗಳು ಈಡೇರುತ್ತವೆ. ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications