Aditya Yoga 2025: ಮೇಷದಲ್ಲಿ ಸೂರ್ಯ ಸಂಚಾರದಿಂದ ಆದಿತ್ಯ ಯೋಗ 2025: ಈ ರಾಶಿಯವರ ಉದ್ಯೋಗದಲ್ಲಿ ಸಕ್ಸಸ್ ಗ್ಯಾರಂಟಿ

ಪಂಜಾಬ್ ಮತ್ತು ಉತ್ತರ ಭಾರತದಲ್ಲಿ ವಸಂತ ಸುಗ್ಗಿಯ ಆಚರಣೆಯಾಗಿ ಬೈಸಾಖಿ ಅಥವಾ ವೈಶಾಖಿ (Vaisakhi) ಹಬ್ಬವನ್ನು ಆಚರಿಸಲಾಗುತ್ತದೆ. ಸಂತೋಷ, ಸಮೃದ್ಧಿಯ ಈ ಹಬ್ಬ ಇದೇ ಏಪ್ರಿಲ್ 13ರಂದು ಬರುತ್ತದೆ. ಈ ದಿನದಂದು ಸೂರ್ಯ ಗ್ರಹ ಮೇಷ ರಾಶಿಯಲ್ಲಿ ಸಾಗಲಿದೆ. ಇದರಿಂದ ಆದಿತ್ಯ ಯೋಗ ರೂಪಗೊಳ್ಳಲಿದೆ. ಇದು ಕೆಲ ರಾಶಿಗಳ ಅದೃಷ್ಟವನ್ನು ಬೆಳಗಲಿದೆ.

ಆದಿತ್ಯ ಯೋಗ ಅತ್ಯಂತ ಶುಭ ಯೋಗಗಳಲ್ಲಿ ಒಂದಾಗಿದೆ. ಹೀಗಾಗಿ ಕೆಲ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಹಲವು ಪಟ್ಟು ಲಾಭವನ್ನು ಪಡೆಯಲಿದ್ದಾರೆ. ಹಾಗಾದರೆ ಈ ಬಾರಿ ಸೂರ್ಯನ ಸಂಚಾರದಿಂದ ಲಾಭ ಪಡೆಯುವ 5 ಅದೃಷ್ಟದ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.

Sun transit in aries creat aditya yoga 2025 success guaranteed in career for this zodiac sign

ಮೇಷ ರಾಶಿ

ಮೇಷ ರಾಶಿಯಲ್ಲಿ ಸೂರ್ಯ ಸಂಚಾರ ಮಾಡುವುದರಿಂದ ಇದು ತುಂಬಾ ಶುಭವಾಗಿದೆ. ದೀರ್ಘಕಾಲದಿಂದ ಮಾಡಿದ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಈ ಸಮಯದಲ್ಲಿ ಹಣಕಾಸಿನ ಲಾಭದ ಸಾಧ್ಯತೆಗಳಿವೆ. ಸಾಲಕೊಟ್ಟ ಹಣವನ್ನು ನೀವು ಮರಳ ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮವನ್ನು ಕೆಲಸದ ಸ್ಥಳದಲ್ಲಿ ಗುರುತಿಸಲಾಗುತ್ತದೆ. ನಿಮಗೆ ಬಡ್ತಿ ಸಿಗುವ ಅವಕಾಶಗಳು ಇವೆ. ಕುಟುಂಬದಲ್ಲಿಯೂ ಸಂತೋಷದ ವಾತಾವರಣವಿರುತ್ತದೆ ಮತ್ತು ಹಳೆಯ ವಿವಾದಗಳನ್ನು ಬಗೆಹರಿಯುತ್ತೆ. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸಮಯ ಅದಕ್ಕೆ ತುಂಬಾ ಒಳ್ಳೆಯದಾಗಿದೆ.

Sun transit in aries creat aditya yoga 2025 success guaranteed in career for this zodiac sign

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಆದಿತ್ಯ ಯೋಗ ಪ್ರಗತಿಯ ಹೊಸ ಹಾದಿಗಳನ್ನು ತೆರೆಯುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ಹೊಸ ಒಪ್ಪಂದಗಳು ಉದ್ಯಮಿಗಳಿಗೆ ಪ್ರಯೋಜನಕಾರಿಯಾಗುತ್ತವೆ. ಹೂಡಿಕೆಯಿಂದ ಲಾಭ ಪಡೆಯುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಕೇಳಿ ಬರುವ ಸಾಧ್ಯತೆಯಿದೆ. ಇದರಿಂದಾಗಿ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ನೀವು ಯಾವುದೇ ಹೊಸ ಯೋಜನೆಯ ಬಗ್ಗೆ ಯೋಚಿಸುತ್ತಿದ್ದರೆ, ಅದನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

Sun transit in aries creat aditya yoga 2025 success guaranteed in career for this zodiac sign

ಸಿಂಹ ರಾಶಿ

ಆದಿತ್ಯ ಯೋಗದಿಂದಾಗಿ ಸಿಂಹ ರಾಶಿಯವರ ಅದೃಷ್ಟ ಇದ್ದಕ್ಕಿದ್ದಂತೆ ಹೊಳೆಯಬಹುದು. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿಗಳು ಹೆಚ್ಚಾಗಲಿದೆ. ಅದು ಭವಿಷ್ಯದಲ್ಲಿ ನಿಮ್ಮ ಪ್ರಗತಿಗೆ ದಾರಿ ತೆರೆಯುತ್ತದೆ. ಪ್ರೇಮ ಜೀವನದಲ್ಲಿ ಸುಧಾರಣೆ ಕಂಡುಬರುವುದು. ಸಂಬಂಧಗಳಲ್ಲಿ ಹೊಸತನ ಕಂಡುಬರುತ್ತದೆ. ಹಣಕಾಸಿನ ವಿಷಯಗಳಲ್ಲಿ ಲಾಭ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಈ ಸಮಯ ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತಾರೆ.

Sun transit in aries creat aditya yoga 2025 success guaranteed in career for this zodiac sign

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಆದಿತ್ಯ ಯೋಗ ಸಂತೋಷ ಮತ್ತು ಸಮೃದ್ಧಿಯನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ತೊಂದರೆ ನಿವಾರಣೆಯಾಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೆಲವು ಹಳೆಯ ಹೂಡಿಕೆಯಿಂದಲೂ ಉತ್ತಮ ಲಾಭ ಪಡೆಯುವ ಸಾಧ್ಯತೆಯಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹಾಗೂ ನಂಬಿಕೆ ಹೆಚ್ಚಾಗುತ್ತದೆ ಮತ್ತು ಸಂಬಂಧಗಳು ಸಿಹಿಯಾಗುತ್ತವೆ. ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ನಿಮಗೆ ಹೊಸ ಜವಾಬ್ದಾರಿಗಳು ಸಿಗಲಿವೆ. ಈ ದಿನ ಮಾಡುವ ಯಾವುದೇ ಹೊಸ ಕೆಲಸ ಯಶಸ್ವಿಯಾಗುವ ಸಾಧ್ಯತೆ ಇದೆ.

Sun transit in aries creat aditya yoga 2025 success guaranteed in career for this zodiac sign

ಮಕರ ರಾಶಿ

ಆದಿತ್ಯ ಯೋಗ ಮಕರ ರಾಶಿಯವರಿಗೆ ಒಳ್ಳೆಯ ಸುದ್ದಿ ತರಲಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಈ ದಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಈ ದಿನ ವ್ಯಾಪಾರ ವರ್ಗಕ್ಕೂ ಪ್ರಯೋಜನಕಾರಿಯಾಗಲಿದೆ. ಹೊಸ ಜನರೊಂದಿಗೆ ನೀವು ಸಂಪರ್ಕ ಸಾಧಿಸುವಿರಿ. ಮನೆಯಲ್ಲಿ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+