Vipreet Rajayoga: ಸೂರ್ಯ-ಬುಧರಿಂದ ಸೃಷ್ಟಿಯಾದ ವಿಪರೀತ ರಾಜಯೋಗ: ಈ 4 ರಾಶಿಗಳ ವ್ಯಾಪಾರದಲ್ಲಿ ಸಾಕಷ್ಟು ಅಭಿವೃದ್ಧಿ!
Vipreet Rajyoga: ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ. ಅಂತಹ ಬದಲಾವಣೆಯ ಸಮಯದಲ್ಲಿ ಗ್ರಹಗಳ ಸಂಯೋಗವು ಕೆಲವೊಮ್ಮೆ ಸಂಭವಿಸುತ್ತದೆ. ಈ ಗ್ರಹಗಳ ಸಂಯೋಜನೆಯು ಶುಭ ಅಥವಾ ಅಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಆ ಯೋಗಗಳು ಎಲ್ಲಾ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತವೆ.
ಸದ್ಯ ನವಗ್ರಹಗಳ ನಾಯಕನಾಗಿರುವ ಸೂರ್ಯನು ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜೂನ್ 24 ರಂದು ಬುಧ ಒಂದು ವರ್ಷದ ನಂತರ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇದರಿಂದ ವಿಪರೀತ ರಾಜಯೋಗ ರೂಪುಗೊಂಡಿದೆ. ಈ ರಾಜಯೋಗದ ಪ್ರಭಾವ ಎಲ್ಲಾ 12 ರಾಶಿಗಳಲ್ಲಿ ಕಂಡುಬಂದರೂ 4 ರಾಶಿಯವರಿಗೆ ಸಂಪತ್ತು ಹೆಚ್ಚಾಗುತ್ತದೆ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ. ಹಾಗಾದರೆ ಆ 4 ರಾಶಿಯವರು ಯಾರೆಂದು ತಿಳಿಯೋಣ.

ಮೇಷ ರಾಶಿ
ವಿಪರೀತ ರಾಜಯೋಗ ಮೇಷ ರಾಶಿಯವರಿಗೆ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ವಿಶೇಷವಾಗಿ ಈ ಯೋಗದಿಂದ ವಿದೇಶದಲ್ಲಿರುವ ಮೇಷ ರಾಶಿಯವರು ಕೆಲವು ಪ್ರಯೋಜನಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮಗಿಷ್ಟವಾದ ಕೆಲಸವನ್ನು ಪಡೆಯಲು ಹೆಚ್ಚು ಶ್ರಮವಹಿಸಬೇಕಿಲ್ಲ. ವ್ಯವಹಾರದಲ್ಲಿ ಸಿಕ್ಕಿಬಿದ್ದ ಹಣ ಲಭ್ಯ ತಂದುಕೊಡಲಿದೆ. ಉದ್ಯಮಿಗಳು ಸಾಲ ಪಡೆದರೂ ವ್ಯಾಪಾರ ವೃದ್ಧಿಯಾಗುತ್ತದೆ. ವ್ಯಾಪಾರಿಗಳ ಆರ್ಥಿಕ ಜೀವನ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಲಾಭ ದೊರೆಯಲಿದೆ.

ಕರ್ಕಾಟಕ ರಾಶಿ
ವಿಪರೀತ ರಾಜಯೋಗ ಕರ್ಕ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ನೀವು ಇಲ್ಲಿಯವರೆಗೆ ಅನಗತ್ಯ ವೆಚ್ಚಗಳನ್ನು ಮಾಡಿದ್ದರೆ, ಅದೆಲ್ಲವೂ ಸರಿಹೋಗಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಹೊಸ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಜಂಟಿ ಉದ್ಯಮ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳಿಗೆ ಈ ಸಮಯ ಅದ್ಬುತವಾಗಿರಲಿದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಯಶಸ್ಸು ಸಾಧಿಸುವರು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ವಿಪರೀತ ರಾಜಯೋಗ ಶುಭವಾಗಲಿದೆ. ಆದರೆ ಕೇತು ವೃಶ್ಚಿಕ ರಾಶಿಯವರ ಮೇಲೆ ಪ್ರಭಾವ ಬೀರಬಹುದು. ಇದರಿಂದ ತೀವ್ರ ದೈಹಿಕ ನೋವು ಉಂಟಾಗಬಹುದು. ಆದರೆ ಹಣದ ಹರಿವು ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಹೊಸ ಆದಾಯದ ಮೂಲಗಳನ್ನು ಪಡೆಯಬಹುದು. ಮುಖ್ಯವಾಗಿ ಹಳೆಯ ಹೂಡಿಕೆಗಳು ಉತ್ತಮ ಆದಾಯವನ್ನು ಪಡೆಯುತ್ತವೆ. ಒಟ್ಟಾರೆಯಾಗಿ ವೃತ್ತಿಪರ ಜೀವನದಲ್ಲಿ ಉತ್ತಮ ಪ್ರಗತಿ ಮತ್ತು ಲಾಭ ಇರುತ್ತದೆ.

ಮಕರ ರಾಶಿ
ಮಕರ ರಾಶಿಯವರಿಗೆ ವಿಪರೀತ ರಾಜಯೋಗ ಅದ್ಭುತವಾಗಿರುತ್ತದೆ. ಯಾವುದೇ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದರೆ, ತೀರ್ಪುಗಳು ನಿಮ್ಮ ಪರವಾಗಿ ಬರುತ್ತವೆ. ಈ ಅವಧಿಯಲ್ಲಿ ಧೈರ್ಯ ಇನ್ನೂ ಹೆಚ್ಚಾಗಿರುತ್ತದೆ. ನೀವು ಯಾವುದೇ ಸಾಲವನ್ನು ತೆಗೆದುಕೊಂಡಿದ್ದರೆ, ಈ ಅವಧಿಯಲ್ಲಿ ನೀವು ಅದನ್ನು ಮರುಪಾವತಿಸುತ್ತೀರಿ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ನಿಮ್ಮ ಶತ್ರುಗಳನ್ನು ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications