Shukra Star Transit: ಇನ್ನೆರಡು ದಿನಗಳಲ್ಲಿ ಈ ರಾಶಿಯವರಿಗೆ ರಾಜಯೋಗ : ಭರ್ಜರಿ ಧನ ಲಾಭ, ಆಸ್ತಿ ಗಳಿಕೆಗೆ ಅವಕಾಶ
Shukra Star Transit: ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ತಮ್ಮ ರಾಶಿ, ನಕ್ಷತ್ರವನ್ನು ಬದಕಿಸುತ್ತಲೇ ಇರುವುದು. ಶುಕ್ರ ಕೂಡಾ ಆಗಾಗ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಿಸುತ್ತಿರುತ್ತಾನೆ. ಇದೀಗ ಮತ್ತೆ ಶುಕ್ರ ತನ್ನ ನಕ್ಷತ್ರವನ್ನು ಬದಲಿಸುತ್ತಿದ್ದಾನೆ. ಸೆಪ್ಟೆಂಬರ್ 11, 2026 ರ ಅಮಾವಾಸ್ಯೆಯ ದಿನದಂದು , ಶುಕ್ರನು ಸ್ವಾತಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ ಅಕ್ಟೋಬರ್ 24 ರವರೆಗೆ ಸ್ವಾತಿ ನಕ್ಷತ್ರದಲ್ಲಿಯೇ ಇರಲಿದ್ದಾನೆ. ನಂತರ, ಶುಕ್ರ ಚಿತ್ರ ನಕ್ಷತ್ರಕ್ಕೆ ಕಾಲಿಡುತ್ತಾನೆ. ಈ ನಕ್ಷತ್ರದಲ್ಲಿ ಶುಕ್ರನ ಆಗಮನವು ಕೆಲವು ರಾಶಿಯವರಿಗೆ ವರದಾನವಾಗಲಿದೆ. ಈ ರಾಶಿಯವರ ಜೀವನದಲ್ಲಿನ ಅನೇಕ ಅಡೆತಡೆಗಳು ದೂರವಾಗುವುದು. ಇಲ್ಲಿವರೆಗೆ ಎದುರಾಗಿದ್ದ ಕಷ್ಟಗಳಿಗೂ ತೆರೆ ಬೀಳುವುದು.ಹಣಕಾಸಿನ ಸ್ಥಿತಿ ದೊಡ್ಡ ಮಟ್ಟದಲ್ಲಿ ಸುಧಾರಣೆಯಾಗುವುದು. ಶುಕ್ರನ ಈ ನಕ್ಷತ್ರ ಸಂಚಾರದಿಂದ ಯಾವ ರಾಶಿಯವರಿಗೆ ಪ್ರಯೋಜನವಾಗಲಿದೆ.
ವೃಷಭ ರಾಶಿ (Taurus)
ವೃಷಭ ರಾಶಿಯಲ್ಲಿ ಜನಿಸಿದವರಿಗೆ ಶುಕ್ರನ ಸಂಚಾರವು ಹೆಚ್ಚು ಪ್ರಯೋಜನಕಾರಿಯಾಗಿರುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಪ್ರತಿಫಲ ಸಿಗುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದು. ಮನಸ್ಸಿನ ಆಸೆಗಳು ಈಡೇರುವುದು. ಕಚೇರಿಯಾಗಿರಲಿ ಮನೆಯಾಗಿರಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಮ್ಮ ಮಾತಿನಗೂ ಮನ್ನಣೆ ಇರುವುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆ ನಿವಾರಣೆಯಾಗುವುದು. ಇಲ್ಲಿವರೆಗೆ ಕೆಲಸ ಕಾರ್ಯಗಳಿಗೆ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುವುದು.

ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಕೂಡಾ ಶುಕ್ರನ ಸಂಚಾರ ಶುಭವಾಗಿರುವುದು. ಹಠಾತ್ ಆರ್ಥಿಕ ಲಾಭವಾಗುವುದು. ಈ ಸಂದರ್ಭದಲ್ಲಿ ಮಾಡುವ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವ ಸಾಧ್ಯತೆಯಿದೆ. ಅವಿವಾಹಿತರ ಮದುವೆ ಮಾತುಕತೆ ನಡೆಯುವುದು. ಮದುವೆ ಪ್ರಸ್ತಾಪಗಳು ಬರುವುದು. ಹೊಸ ಕೆಲಸಕ್ಕೆ ಸೇರಬೇಕು ಅಂದುಕೊಂಡಿರುವವರ ಆಸೆ ಈಡೇರುವುದು. ಬಾಕಿ ಕೆಲಸ ಪೂರ್ಣವಾಘುವ ಸಾಧ್ಯತೆ ಇದೆ. ಮನೆ ಅಥವಾ ವಾಹನವನ್ನು ಖರೀದಿಸಬಹುದು. ಹೊಸ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು. ಹೊಸ ವ್ಯವಹಾರ ಆರಂಭಿಸುವುದಕ್ಕೂ ಸಮಯ ಸೂಕ್ತವಾಗಿದೆ.
ತುಲಾ ರಾಶಿ (Libra)
ಸೆಪ್ಟೆಂಬರ್ 11 ರಿಂದ ತುಲಾ ರಾಶಿಯವರ ಅದೃಷ್ಟ ಬೆಳಗುವುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಹಳೆಯ ಹೂಡಿಕೆಯಿಂದ ಉತ್ತಮ ಲಾಭವಾಗುವುದು. ಸಾಲದಿಂದ ಮುಕ್ತರಾಗುವ ಸಾಧ್ಯತೆಗಳೂ ಇವೆ. ಕಲೆ, ಮಾಧ್ಯಮ, ಫ್ಯಾಷನ್, ವಿನ್ಯಾಸ ಮತ್ತು ಗ್ಲಾಮರ್ ಉದ್ಯಮಗಳಲ್ಲಿ ತೊಡಗಿರುವವರಿಗೆ ಹೆಚ್ಚಿನ ಲಾಭವಾಗುವುದು. ಉದ್ಯಮಿಗಳಿಗೆ ಹೊಸ ಆರ್ಡರ್ ಸಿಗುವುದು. ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಬಲಗೊಳ್ಳುವುದು. ಹೊಸ ಕೆಲಸ ಅಥವಾ ವ್ಯವಹಾರ ಆರಂಭಿಸಲು ಸಮಯ ಸೂಕ್ತವಾಗಿರುವುದು. ಹೊಸ ಮನೆ, ಆಸ್ತಿ ಅಥವಾ ವಾಹನಗಳನ್ನು ಖರೀದಿಸುವ ಯೋಗವಿದೆ. ಅರ್ಧಕ್ಕೆ ನಿಲ್ಲಿಸುವ ವ್ಯವಹಾರ ಕೂಡಾ ಮತ್ತೆ ಆರಂಭವಾಗುವುದು.
ಕುಂಭ ರಾಶಿ (Aquarius)
ಕುಂಭ ರಾಶಿಯವರ ಬಾಕಿ ಕೆಲಸಗಳು ಪೂರ್ಣಗೊಳ್ಳುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ನಿಮ್ಮ ಕೀರ್ತಿ ಹೆಚ್ಚಾಗವುದು. ಬಹಳ ದಿನಗಳಿಂದ ಬಾಕಿ ಇರುವ ಕೆಲಸ ಪೂರ್ಣವಾಗುವುದು. ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಪರವಾಗಿ ಇರುವುದು. ವ್ಯಾಪಾರಕ್ಕಾಗಿ ದೂರದ ಊರುಗಳಿಗೆ ಪ್ರವಾಸ ಮಾಡಬೇಕಾಗಿ ಬರಬಹುದು.
ಈ ಪ್ರಯಾಣ ಲಾಭದಾಯಕವಾಗಿರುವುದು. ವಿದೇಶದಲ್ಲಿ ಉದ್ಯೋಗ ಮಾಡಬೇಕು ಎನ್ನುವವರ ಕನಸು ನನಸಾಗುವುದು. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುವುದು. ಬಡ್ತಿ ಜೊತೆಗೆ ಸಂಬಳ ಹೆಚ್ಚಳವೂ ಸಾಧ್ಯವಾಗುವುದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು.


Click it and Unblock the Notifications
