Shukla Yoga 2024: ಇಂದು ಶುಕ್ಲ ಯೋಗ- ಈ ರಾಶಿಯವರಿಗೆ ಶನಿ ಕೃಪೆಯಿಂದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ

ಶುಕ್ಲ ಯೋಗ ಶನಿವಾರ ಅಂದರೆ ಇಂದು (ಅಕ್ಟೋಬರ್ 26) ರೂಪಗೊಳ್ಳುತ್ತದೆ. ಈ ಯೋಗದೊಂದಿಗೆ ಅನಾಫ ಯೋಗ ಕೂಡ ರಚನೆಯಾಗಲಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ರೂಪಗೊಳ್ಳುವ ಈ ಯೋಗಗಳು ದ್ವಾದಶಿ ರಾಶಿಗಳ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಹಾಗಾದರೆ ಈ ದಿನ ರೂಪಗೊಳ್ಳುವ ಮಂಗಳಕರ ಯೋಗಗಳ ಲಾಭವನ್ನು ಯಾವ ರಾಶಿಯವರು ಪಡೆಯಲಿದ್ದಾರೆ ಎಂದು ತಿಳಿಯೋಣ.

Shukla Yoga On October 26 these 5 zodiac signs get relief from all problems with grace of Shani

ಮಿಥುನ ರಾಶಿ

ಶುಕ್ಲ ಯೋಗ ಮಿಥುನ ರಾಶಿಯವರಿಗೆ ಅತ್ಯುತ್ತಮ ಫಲ ನೀಡಲಿದೆ. ನಿಮ್ಮ ವ್ಯವಹಾರಗಳು ಉತ್ತುಂಗಕ್ಕೆ ಏರಲಿದೆ. ಲಾಭದ ಮಾರ್ಗಗಳು ತೆರೆದುಕೊಳ್ಳಲಿವೆ. ವಿದೇಶಕ್ಕೆ ಪ್ರಯಾಣ ಬೆಳೆಸುವ ಆಸೆ ಈಡೇರಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಬಲಗೊಳ್ಳಲಿದೆ.

Shukla Yoga On October 26 these 5 zodiac signs get relief from all problems with grace of Shani

ಕರ್ಕಾಟಕ ರಾಶಿ

ಕಟಕ ರಾಶಿಯವರಿಗೆ ಶುಕ್ಲ ಯೋಗ ಮಂಗಳಕರವಾಗಿದೆ. ಕಟಕ ರಾಶಿಯವರ ಸಮಸ್ಯೆಗಳು ಇಂದು ಅಂತ್ಯವಾಗಲಿವೆ. ಶನಿದೇವನ ಆಶೀರ್ವಾದಿಂದ ಉದ್ಯೋಗ ಹಾಗೂ ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ನೀವು ಪಡೆಯುವಿರಿ. ನ್ಯಾಯಾಲಯದ ವಿಷಯಗಳಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕ ಜೀವನ ಹಿಂದೆಂದೂ ಕೇಳಿ ಕಂಡರಿಯಷ್ಟು ಬದಲಾಗುತ್ತದೆ. ನಿಮ್ಮ ಸಾಮಾಜಿಕ ಸ್ಥಾನ ಉತ್ತುಂಗಕ್ಕೇರಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

Shukla Yoga On October 26 these 5 zodiac signs get relief from all problems with grace of Shani

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶುಕ್ಲ ಯೋಗ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಅಕ್ಟೋಬರ್ 26ರಂದು ಸಿಂಹ ರಾಶಿಯಲ್ಲಿ ಚಂದ್ರನು ಸಾಗುವುದರಿಂದ ಕುಟುಂಬ, ಹಣ, ವೃತ್ತಿ ಜೀವನದ ಸಮಸ್ಯೆಗಳು ಕೊನೆಗೊಳ್ಳಲಿವೆ. ಅಂಗಡಿ, ವ್ಯಾಪಾರ ಸುಧಾರಣೆಯಾಗಲಿದೆ. ದೀಪಾವಳಿ ಹಬ್ಬದ ತಯಾರಿಯಲ್ಲಿರುವ ನಿಮಗೆ ಲಕ್ಷ್ಮೀ ದೇವಿಯ ಆಶೀರ್ವಾದವೂ ಸಿಗಲಿದೆ. ವಾಹನ, ಮನೆ ಹಾಗೂ ಇನ್ನಿತರ ಹೊಸ ವಸ್ತುಗಳು ಖರೀದಿ ಮಾಡಲು ಇದು ಉತ್ತಮ ಸಮಯವಾಗಿದೆ. ಸಂಗಾತಿ ನಿಮ್ಮ ನಡುವೆ ತಿಳುವಳಿಕೆ ಹೆಚ್ಚಾಗುತ್ತದೆ.

Shukla Yoga On October 26 these 5 zodiac signs get relief from all problems with grace of Shani

ವೃಶ್ಚಿಕ ರಾಶಿ

ಶುಕ್ಲ ಯೋಗ ವೃಶ್ಚಿಕ ರಾಶಿಯವರ ಸಂಕಷ್ಟಗಳನ್ನು ದೂರ ಮಾಡುತ್ತದೆ. ಜೀವನದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸುಖ, ಶಾಂತಿ ನೆಲೆಸಲಿದೆ. ಉದ್ಯೋಗಿಗಳಿಗೆ ದೀಪಾವಳಿಗೆ ಬಹುದೊಡ್ಡ ಉಡುಗೊರೆ ಸಿಗಲಿದೆ. ಹೊಸ ವಸ್ತುಗಳ ಖರೀದಿಯ ಬಗ್ಗೆ ನೀವು ಯೋಚನೆ ಮಾಡಬಹುದು. ಲಾಭದಾಯ ಹುದ್ದೆಗಳನ್ನು ಆರಂಭಿಸಲು ಇದು ಸೂಕ್ತ ಸಮಯ. ವೃತ್ತಿ ಜೀವನದಲ್ಲಿ ನಿಮ್ಮ ಖ್ಯಾತಿ ಹಾಗೂ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಲಿದೆ.

Shukla Yoga On October 26 these 5 zodiac signs get relief from all problems with grace of Shani

ಕುಂಭ ರಾಶಿ

ಕುಂಭ ರಾಶಿಯವರ ಸಂಕಷ್ಟಗಳು ದೂರವಾಗಲಿದೆ. ಶುಕ್ಲ ಯೋಗದ ಮಂಗಳಕರ ಪ್ರಯೋಜನವನ್ನು ಕುಂಭ ರಾಶಿಯವರು ಪಡೆಯುತ್ತಾರೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಐಷಾರಾಮಿ ಜೀವನವನ್ನು ನೀವು ಮಾಡುವಿರಿ. ಖರ್ಚು ಕಡಿಮೆಯಾಗಿ ಉಳಿತಾಯ ಹೆಚ್ಚಾಗಲಿದೆ. ಅನಾರೋಗ್ಯ ನಿಮ್ಮ ಹತ್ತಿರ ಸುಳಿಯುವುದಿಲ್ಲ. ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಅವಿವಾಹಿತರಿಗೆ ಕನಸಿನ ಸಂಗಾತಿ ಪ್ರತ್ಯಕ್ಷಳಾಗಬಹುದು. ಉದ್ಯೋಗ ಸ್ಥಳದಲ್ಲಿ ಬಂಪರ್ ಗಿಫ್ಟ್‌ ಸಿಗಲಿದೆ. ಇದರಿಂದಾಗಿ ಹಬ್ಬದ ಕಳೆ ಮತ್ತಷ್ಟು ಹೆಚ್ಛಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+