Saturn Transit 2025: ಕುಂಭ ರಾಶಿಯಿಂದ ಮೀನಕ್ಕೆ ಶನಿ ಸಂಚಾರ- ಈ ರಾಶಿಗಳ ಜೀವನ ಸುಂದರ
ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಜಾತಕದಲ್ಲಿ ಸಂಚಾರ ಮಾಡುವ ಗ್ರಹದ ಸ್ಥಾನ ಉತ್ತಮವಾಗಿದ್ದರೆ ಅದು ಉತ್ತಮ ಫಲವನ್ನು ನೀಡುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಾನ ದುರ್ಬಲವಾಗಿದ್ದರೆ ಅಂತಹ ವ್ಯಕ್ತಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಾನೆ.
ಅಂದಹಾಗೆ ಶನಿ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುವ ದೇವರು ಎಂದು ಕರೆಯಲಾಗುತ್ತದೆ. ಈ ಶನಿ ಗ್ರಹ 29 ಮಾರ್ಚ್ 2025 ರವರೆಗೆ ಕುಂಭರಾಶಿಯಲ್ಲಿ ಸಾಗಲಿದೆ. ನಂತರ ಇದು ಮೀನ ರಾಶಿಗೆ ಸಾಗಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರಲಿದೆ. ಕೆಲ ರಾಶಿಯವರಿಗೆ ಶುಭ ಫಲ ದೊರೆಯಲಿದೆ. ಹಾಗಾದರೆ ಮಂಗಳಕರ ಫಲಿತಾಂಶ ಪಡೆಯುವ ರಾಶಿಗಳು ಯಾವುವು ಎಂದು ತಿಳಿಯೋಣ.

ಮಿಥುನ ರಾಶಿ
ಮುಂಬರುವ ವರ್ಷ ಶನಿ ಕುಂಭರಾಶಿಯಿಂದ ಮೀನ ರಾಶಿಗೆ ಸಾಗುವುದರಿಂದ ಮಿಥುನ ರಾಶಿಯವರಿಗೆ ಸಾಕಷ್ಟು ಲಾಭ ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸಂಬಳದಲ್ಲಿ ಹೆಚ್ಚಳವಾಗಬಹುದು. ಲಾಭದ ಮಾರ್ಗಗಳು ತೆರೆದುಕೊಳ್ಳಬಹುದು. ಮನೆಯಲ್ಲಿ ಶುಭ ಕಾರ್ಯಗಳು ನೆಡೆಯಲಿವೆ. ಈ ಹಿಂದೆ ಪೂರ್ಣಗೊಳ್ಳದೇ ಇದ್ದ ಕಾರ್ಯಗಳು ಈ ಸಮಯದಲ್ಲಿ ನೀವಂದುಕೊಂಡಂತೆ ಪೂರ್ಣಗೊಳ್ಳಲಿದೆ.

ತುಲಾ ರಾಶಿ
ಶನಿ ಮುಂದಿನ ವರ್ಷ ರಾಶಿಯನ್ನು ಬದಲಾಯಿಸಲಿದೆ. ಇದರಿಂದಾಗಿ ತುಲಾ ರಾಶಿಯವರ ಮೇಲೆ ಅದರ ಪರಿಣಾಮ ಮಂಗಳಕರವಾಗಿರುತ್ತದೆ. ಹೊಸ ವಾಹನ ಮತ್ತು ಆಸ್ತಿ ಖರೀದಿಸಲು ಅವಕಾಶವಿರುತ್ತದೆ. ಹೊಸದಾಗಿ ಮದುವೆಯಾದವರಿಗೆ ಸಂತಾನ ಲಾಭ ಸಿಗಲಿದೆ. ತುಲಾ ರಾಶಿಯವರು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಪಡೆಯಲಿದ್ದಾರೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರೋಗ್ಯ ಸುಧಾರಿಸಲಿದೆ.

ಮಕರ ರಾಶಿ
ಶನಿಯು 2025ರಲ್ಲಿ ಶನಿ ಸಂಕ್ರಮಣದ ಸಮಯದಲ್ಲಿ ಮಕರ ರಾಶಿಯ 3ನೇ ಮನೆಗೆ ಹೋಗುತ್ತಾನೆ. ಇದರಿಂದ ವ್ಯಾಪಾರಸ್ಥರ ವೃತ್ತಿ ಜೀವನ ಉತ್ತಮವಾಗಿರುತ್ತದೆ. ನೀವು ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳು 2025ರಿಂದ ಪ್ರಗತಿಯನ್ನು ಕಾಣುತ್ತಾರೆ. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಈ ರಾಶಿಯವರಿಗೆ ಧೈರ್ಯ ಹೆಚ್ಚುತ್ತದೆ. ನೀವು ನಿಮ್ಮ ಶತ್ರುಗಳನ್ನು ಜಯಿಸುವಿರಿ. ಮಾತಿನ ಮೂಲಕ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಸಾಧಿಸುವಿರಿ. ನಿಮ್ಮ ಮಾತು ಇತರರನ್ನು ಮೆಚ್ಚಿಸುತ್ತದೆ.
(ಗಮನಿಸಬೇಕಾದ ಮಾಹಿತಿ: ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಮೇಲೆ ನೀಡಲಾದ ಮಾಹಿತಿಯು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications