Kendra Trikona Rajyoga 2024: ಶನಿಯಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗ- ಈ 3 ರಾಶಿಯವರ ವ್ಯವಹಾರದಲ್ಲಿ ಫಟಾಫಟ್ ಲಾಭ
ಸೌರವ್ಯೂಹದಲ್ಲಿ ಗ್ರಹಗಳು ಸಂಚಾರದ ವೇಳೆ ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳು ಹೀಗೆ ರಾಶಿಯನ್ನು ಬದಲಾಯಿಸಿದಾಗ ಕೆಲ ಬಾರಿ ಒಂದೇ ರಾಶಿಯಲ್ಲಿ ಹಲವು ಗ್ರಹಗಳು ಸಂಚಾರ ಮಾಡುತ್ತವೆ. ಇದು ಶುಭ ಅಶುಭ ಯೋಗಗಳನ್ನು ಉಂಟು ಮಾಡುತ್ತದೆ. ಅಂತಹ ಯೋಗಗಳ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿ ನವಗ್ರಹಗಳು ನಿಯಮಿತ ಮಧ್ಯಂತರದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಕೆಲ ಬಾರಿ ಅವು ಹಿಮ್ಮುಖವಾಗಿ ಪ್ರಯಾಣಿಸಬಹುದು. ಶನಿಯು ಪ್ರಸ್ತುತ ತನ್ನ ಮೂಲತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಅದು ಜೂನ್ ನಲ್ಲಿ ಹಿಮ್ಮುಖ ಪ್ರಯಾಣ ಮಾಡುತ್ತದೆ. ಇದರಿಂದಾಗಿ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತದೆ.
ಈ ರಾಜಯೋಗದ ಪ್ರಭಾವ ಎಲ್ಲ ರಾಶಿಯವರಲ್ಲೂ ಕಂಡು ಬಂದರೂ ಕೆಲ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಪರಿಣಾಮವಾಗಿ ಸಂಪತ್ತು ಹೆಚ್ಚಾಗುತ್ತದೆ ಮತ್ತು ವ್ಯಾಪಾರದಲ್ಲಿ ಯಶಸ್ಸು ಕೂಡಿರುತ್ತದೆ. ಹಾಗಾದರೆ ಈಗ ಶನಿಯಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗದಿಂದ ಅದೃಷ್ಟಶಾಲಿಯಾಗಲಿರುವ ರಾಶಿಯವರು ಯಾರೆಂದು ನೋಡೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ತರುತ್ತದೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ನೀವು ಸಾಧಿಸುವಿರಿ. ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಹೊಸ ಆದಾಯದ ಮೂಲಗಳು ಹೊರಹೊಮ್ಮುವ ಸಾಧ್ಯತೆಯಿದೆ.
ಬಹಳ ದಿನಗಳಿಂದ ನಿರುದ್ಯೋಗಿಗಳಾಗಿದ್ದ, ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಉತ್ತಮ ಉದ್ಯೋಗ ದೊರೆಯಲಿದೆ. ನೌಕರರು ಬಯಸಿದ ವರ್ಗಾವಣೆಯನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ದೊರೆಯಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶನಿಯಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗ ಹಿತಕರವಾಗಿರುತ್ತದೆ. ಮುಖ್ಯವಾಗಿ ಅದೃಷ್ಟದ ಬೆಂಬಲ ಸಿಗಲಿದೆ. ಇದರಿಂದ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗುತ್ತದೆ. ಕೆಲಸ ಮತ್ತು ವ್ಯವಹಾರಕ್ಕಾಗಿ ನೀವು ಸಾಕಷ್ಟು ಪ್ರಯಾಣಿಸಬೇಕಾಗಬಹುದು.
ಈ ಪ್ರವಾಸಗಳು ಆರ್ಥಿಕ ಲಾಭವನ್ನು ನೀಡುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅಂಕಗಳನ್ನು ಪಡೆದು ಜಯಗಳಿಸುತ್ತಾರೆ. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಶನಿಯಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗ ಅದ್ಭುತವಾಗಿರುತ್ತದೆ. ಈ ಯೋಗ ಕುಂಭ ರಾಶಿಯ ಮೊದಲ ಮನೆಯಲ್ಲಿ ರೂಪುಗೊಳ್ಳುವುದರಿಂದ ಆತ್ಮವಿಶ್ವಾಸ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಪ್ರಗತಿ ಸಿಗಲಿದೆ.
ದೈನಂದಿನ ಆದಾಯದಲ್ಲಿ ಹೆಚ್ಚಳ ಕಂಡುಬರಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಅದೃಷ್ಟದ ಕೃಪೆಯೊಂದಿಗೆ ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ವಿಯಾಗುತ್ತೀರಿ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications