ಶನಿ ಚಂದ್ರನಿಂದ ರೂಪುಗೊಂಡ ವಿಷ ಯೋಗ: ಇಂದಿನಿಂದ ಮುಂದಿನ 2 ದಿನಗಳ ಕಾಲ ಈ ರಾಶಿಯವರು ಎಚ್ಚರ..!

ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಪ್ರಯಾಣಿಸಿದಾಗ ಶುಭ ಅಥವಾ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಆ ರೀತಿಯಲ್ಲಿ ಚಂದ್ರನು ಧರ್ಮಾಧಿಪತಿ ಶನಿಯೊಂದಿಗೆ ಕೂಡಿ ಸಂಚರಿಸಿದಾಗ ಉಂಟಾಗುವ ಯೋಗವೇ ವಿಷ ಯೋಗ. ಈ ವಿಷ ಯೋಗವನ್ನು ಅಶುಭ ಯೋಗವೆಂದು ಪರಿಗಣಿಸಲಾಗಿದೆ. ಈ ಯೋಗವು 09 ಜೂನ್ 2023 ರಂದು ರೂಪುಗೊಂಡಿದೆ. ಜೂನ್ 09, 2023 ರ ಬೆಳಿಗ್ಗೆ ಚಂದ್ರನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.

ಶನಿಯು ಈಗಾಗಲೇ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜೂನ್ 09 ರಂದು ಕುಂಭ ರಾಶಿಯಲ್ಲಿ ಶನಿ ಮತ್ತು ಚಂದ್ರರ ಸಂಯೋಜನೆಯಿಂದ ವಿಷ ಯೋಗ ಉಂಟಾಗುತ್ತದೆ. ಚಂದ್ರನು ಕುಂಭ ರಾಶಿಯಲ್ಲಿದ್ದಾಗ ಈ ಯೋಗವು ಎರಡೂವರೆ ದಿನಗಳವರೆಗೆ ಇರುತ್ತದೆ.

ಇದರಿಂದಾಗಿ ಈ ಎರಡೂವರೆ ದಿನಗಳಲ್ಲಿ ಕೆಲವು ರಾಶಿಯವರಿಗೆ ಗಂಭೀರ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಮತ್ತು ಅನೇಕ ನಷ್ಟಗಳು ಕೂಡ ಸಂಭವಿಸುವ ಸಾಧ್ಯತೆ ಇದೆ. ಕುಂಭ ರಾಶಿಯಲ್ಲಿ ರೂಪುಗೊಂಡ ವಿಷ ಯೋಗದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂಬುದನ್ನು ಈಗ ನೋಡೋಣ.

Vish Yoga will be formed by Shani Moon

ಕನ್ಯಾ ರಾಶಿ: ಕನ್ಯಾರಾಶಿಯ 6ನೇ ಮನೆಯಲ್ಲಿ ಶನಿ ಮತ್ತು ಚಂದ್ರ ಸಂಯೋಗದಿಂದ ವಿಷ ಯೋಗ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಕನ್ಯಾರಾಶಿಯವರು ತಮ್ಮ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದೈಹಿಕ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ವಿವಾಹಿತರು ತಮ್ಮ ಮಗುವಿನ ಭವಿಷ್ಯದ ಬಗ್ಗೆ ಸ್ವಲ್ಪ ಹೆಚ್ಚು ಚಿಂತಿಸಬಹುದು. ಈ ಸಮಯದಲ್ಲಿ ಶತ್ರುಗಳು ನಿಮ್ಮನ್ನು ಕೆಳಗಿಳಿಸಲು ಸಂಚು ಮಾಡುತ್ತಾರೆ. ಆ ಸಂಚಿನಲ್ಲಿ ಸಿಲುಕಿ ಹೊರಬರಲಾಗದೆ ನರಳಬೇಕಾಗಬಹುದು. ವಿಷ ಯೋಗದ ಸಂದರ್ಭದಲ್ಲಿ ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅತ್ಯಾವಶ್ಯಕವಾಗಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ 4 ನೇ ಮನೆಯಲ್ಲಿ ಶನಿ ಮತ್ತು ಚಂದ್ರನ ಸಂಯೋಜನೆಯಿಂದ ವಿಷ ಯೋಗ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ವೃಶ್ಚಿಕ ರಾಶಿವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬ ಸದಸ್ಯರ ನಡುವೆ ಆಸ್ತಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದರೆ ಈ ಸಮಸ್ಯೆಯನ್ನು ಮನೆಯಲ್ಲಿಯೇ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ನಷ್ಟ ನಿಮಗೇ ಆಗುತ್ತದೆ. ಸಾಲ ತೆಗೆದುಕೊಳ್ಳುವುದು ಮತ್ತು ನೀಡುವುದನ್ನು ಈ ಸಂದರ್ಭದಲ್ಲಿ ತಪ್ಪಿಸಿ. ಯಾವುದೇ ಹೂಡಿಕೆಯನ್ನೂ ತಪ್ಪಿಸುವುದು ಒಳ್ಳೆಯದು.

ಕುಂಭ ರಾಶಿ: ಕುಂಭ ರಾಶಿಯ ಮೊದಲ ಮನೆಯಲ್ಲಿ ಶನಿ ಮತ್ತು ಚಂದ್ರ ಸಂಯೋಗದಿಂದ ವಿಷ ಯೋಗ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಕುಂಭ ರಾಶಿಯವರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ನೌಕರರು ಕಚೇರಿಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಮತ್ತು ಈ ಸಮಯದಲ್ಲಿ ನೀವು ತಾಳ್ಮೆಯಿಂದ ವರ್ತಿಸುವುದು ಉತ್ತಮ. ಇಲ್ಲದಿದ್ದರೆ, ಅದು ನಿಮಗೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಇದು ವಿಶೇಷವಾಗಿ ಕೌಟುಂಬಿಕ ಜೀವನ ಮತ್ತು ವೃತ್ತಿಪರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+