Shani Direct 2024: ನವೆಂಬರ್‌ನಲ್ಲಿ ಶನಿ ನೇರ ಸಂಚಾರ- ಈ ರಾಶಿಗೆ ಅದೃಷ್ಟದ ಹೊಳೆ
ನವಗ್ರಹಗಳಲ್ಲಿ ಶನಿಯನ್ನು ಅತ್ಯಂತ ಕೆಟ್ಟ ಫಲಿತಾಂಶಗಳನ್ನು ನೀಡುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಶನಿ ದೇವನ ಕೆಟ್ಟ ದೃಷ್ಟಿಗೆ ಒಳಗಾಗದೇ ಇರಲು ಜನ ತುಂಬಾ ಜಾಗರೂಕರಾಗಿರುತ್ತಾರೆ. ದೀಪಾವಳಿ ನಂತರ ಕುಂಭ ರಾಶಿಯಲ್ಲಿ ಶನಿ ನೇರ ಸಂಚಾರ ಮಾಡಲಿದೆ. ಇದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಬೀಳಲಿದೆ.
ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಸುಮಾರು ಎರಡೂವರೆ ವರ್ಷಗಳು ಬೇಕಾಗುತ್ತದೆ. ಹೀಗೆ ಶನಿಯು ರಾಶಿಯಲ್ಲಿ ದೀರ್ಘಕಾಲ ನೆಲೆಸುವುದರಿಂದ ಜನಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಶನಿ ಗ್ರಹ ಹಿಮ್ಮುಖವಾಗಿ ಸಂಚಾರ ಮಾಡುತ್ತದೆ. ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ನೆಲೆಸಿದೆ.
ಕಳೆದ ವರ್ಷ ಜೂನ್ 2024ರಲ್ಲಿ ಹಿಮ್ಮುಖವಾಗಿ ಸಂಚಾರ ಮಾಡಲು ಆರಂಭಿಸಿತು. ದೀಪಾವಳಿಯ ನಂತರ ಅಂದರೆ ನವೆಂಬರ್ 15 ರಂದು ಸಂಜೆ 5:09 ಕ್ಕೆ ನೇರವಾಗಿ ಸಾಗುತ್ತದೆ. ಈ ಸಮಯದಲ್ಲಿ ಕೆಲವು ರಾಶಿಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ. ಹಾಗಾದರೆ ಶನಿಯ ನೇರ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ...

ಮಿಥುನ ರಾಶಿ
ದೀಪಾವಳಿಯ ನಂತರ ಶನಿಯು ನೇರವಾಗಿ ಸಾಗಿದಾಗ ಮಿಥುನ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ಶನಿಯ ವಿಶೇಷ ಆಶೀರ್ವಾದ ದೊರೆಯುತ್ತದೆ. ನಿಮ್ಮ ಕಾರ್ಯಗಳು ಅಂದುಕೊಂಡಂತೆ ಪೂರ್ಣಗೊಳ್ಳುತ್ತವೆ.
ಉದ್ಯೋಗಿಗಳು ಕಚೇರಿಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಬಹುದು. ಆರ್ಥಿಕ ಜೀವನ ಬದಲಾಗಲಿದೆ. ನಿಮ್ಮ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮ್ಮ ಕೆಲಸದಿಂದ ಕುಟುಂಬದಲ್ಲಿ ಗೌರವವನ್ನು ಕಾಣುವಿರಿ.

ಸಿಂಹ ರಾಶಿ
ದೀಪಾವಳಿಯ ನಂತರ ಶನಿಯ ನೇರ ಸಂಚಾರದಿಂದಾಗಿ ಈ ರಾಶಿಯ ಜನರು ಅತ್ಯುತ್ತಮ ಆರ್ಥಿಕ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ನೀವು ಹಣವನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.
ನಿಮ್ಮ ಕುಟುಂಬ ಸದಸ್ಯರಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಕೆಲವು ಹೊಸ ಕಾಮಗಾರಿಗಳೂ ಆರಂಭವಾಗಲಿವೆ. ಹೊಸ ಮನೆ ಅಥವಾ ವಾಹನವನ್ನು ಖರೀದಿ ಮಾಡುವಿರಿ.

ಕನ್ಯಾ ರಾಶಿ
ಈ ರಾಶಿಯ ಜನರು ಶನಿ ದೇವರ ನೇರ ಸಂಚಾರದಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಶನಿ ದೇವರ ವಿಶೇಷ ಆಶೀರ್ವಾದ ಪಡೆಯುವಿರಿ. ವ್ಯಾಪಾರಿಗಳಿಗೆ ಧನಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಆದಾಯ ದ್ವಿಗುಣಗೊಳ್ಳಲಿದೆ. ಈ ಸಮಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ.
ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ. ಉದ್ಯೋಗಿಗಳಿಗೆ ಉದ್ಯೋಗ ಲಾಭಗಳು ಮತ್ತು ಬಡ್ತಿಯ ಅವಕಾಶಗಳು ಸಿಗುತ್ತವೆ. ಯಾವುದೇ ಕೆಲಸವನ್ನು ಯಶಸ್ವಿಯಾಗಲು ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ
ಈ ರಾಶಿಯ ಜನರು ಶನಿಯ ನೇರ ಸಂಚಾರದಿಂದ ಅಧಿಕ ಲಾಭವನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ದೈಹಿಕ ಸೌಕರ್ಯಗಳು ಹೆಚ್ಚಾಗುತ್ತವೆ. ಉದ್ಯೋಗಗಳಿಗೆ ಯದ್ಯೋಗ ಅವಕಾಶ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನೀವು ಮಾಡುವ ಪ್ರತಿಯೊಂದು ಕಾರ್ಯಗಳಲ್ಲೂ ಅಡೆತಡೆಗಳು ನಿವಾರಣೆಯಾಗುತ್ತವೆ.

ಮಕರ ರಾಶಿ
ಶನಿಯ ಸ್ವಂತ ರಾಶಿಯಾದ ಮಕರ ರಾಶಿಯು ದೀಪಾವಳಿಯ ನಂತರ ಶುಭ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಸಿಗಲಿದೆ. ಕೆಲವು ತಿಂಗಳುಗಳಿಂದ ಇದ್ದ ಹಣದ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಶತ್ರುಗಳನ್ನು ನೀವು ಗೆಲ್ಲುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications