ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shani Asta 2023: 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿ… ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿ ದಹನವಾಗಲಿದೆ. ಇದರಿಂದ ಯಾವ ರಾಶಿಯವರಿಗೆ ಶುಭವಾಗಲಿದೆ? ಯಾರಿಗೆ ಅಶುಭವಾಗಲಿದೆ ಎನ್ನುವ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವಿದೆ.

|
Google Oneindia Kannada News

ವೈದಿಕ ಜ್ಯೋತಿಷ್ಯದಲ್ಲಿ ಶನಿಯು ತುಂಬಾ ಮಹತ್ವವನ್ನು ಪಡೆದಿದೆ. ಜ್ಯೋತಿಷ್ಯದಲ್ಲಿ ಶನಿಯು ಆಧ್ಯಾತ್ಮಿಕತೆ, ಕರ್ತವ್ಯವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ ಗ್ರಹ ಕಾರ್ಯಗಳನ್ನು ನೀಡುತ್ತದೆ. 30 ಜನವರಿ 2023 ರಂದು 12:02 AM ಕ್ಕೆ ಕುಂಭದಲ್ಲಿ ಶನಿಯ ದಹನ ನಡೆಯುತ್ತದೆ. ಇದು ರಾಶಿಚಕ್ರದಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇದು ಎರಡೂವರೆ ವರ್ಷಗಳ ಕಾಲ ಒಂದೇ ಚಿಹ್ನೆಯಲ್ಲಿ ಇರುತ್ತದೆ.

ಶನಿಯು ಪ್ರಾಯೋಗಿಕತೆ, ತರ್ಕ, ಶಿಸ್ತು, ಕಾನೂನು ಮತ್ತು ಸುವ್ಯವಸ್ಥೆ, ತಾಳ್ಮೆ, ವಿಳಂಬ, ಕಠಿಣ ಪರಿಶ್ರಮ ಮತ್ತು ನಿರ್ಣಯವನ್ನು ಸೂಚಿಸುತ್ತದೆ. ಇದು 'ಕರ್ಮ್ ಕಾರಕ್' ಅಥವಾ ಕ್ರಿಯೆ ಆಧಾರಿತ ಗ್ರಹವಾಗಿದೆ. ಶನಿಗ್ರಹವನ್ನು ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಶನಿಯು ನಮಗೆ ಹೆಚ್ಚು ಇಷ್ಟವಾಗದ ವಿಷಯಗಳ ಪ್ರಪಂಚದಿಂದ ನಮ್ಮನ್ನು ಬೇರ್ಪಡಿಸುತ್ತದೆ. ಆದ್ದರಿಂದ ಶನಿಗ್ರಹವನ್ನು ಸ್ವೀಕರಿಸಲು ನಮಗೆ ಕಷ್ಟವಾಗುತ್ತದೆ.

ಗುಜರಾತ್ ಚುನಾವಣೆ, ಯಾರಿಗೆ ಗೆಲುವು; ಜ್ಯೋತಿಷ್ಯ ಭವಿಷ್ಯಗುಜರಾತ್ ಚುನಾವಣೆ, ಯಾರಿಗೆ ಗೆಲುವು; ಜ್ಯೋತಿಷ್ಯ ಭವಿಷ್ಯ

ಈಗ 30ನೇ ಜನವರಿ, 2023 ರಂದು ಮಧ್ಯರಾತ್ರಿ 12:02 ಗಂಟೆಗೆ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ದಹನಗೊಳ್ಳುತ್ತಿದೆ. ಕುಂಭ ರಾಶಿ ನಮ್ಮ ಆಸೆಗಳನ್ನು, ಆರ್ಥಿಕ ಲಾಭಗಳನ್ನು ಪ್ರತಿನಿಧಿಸುವ ರಾಶಿಚಕ್ರ ವ್ಯವಸ್ಥೆಯ ನೈಸರ್ಗಿಕ ಹನ್ನೊಂದನೇ ಮನೆಯನ್ನು ನಿಯಂತ್ರಿಸುತ್ತದೆ. ಶನಿಯು ಇಲ್ಲಿ ಅತ್ಯಂತ ಆರಾಮದಾಯಕವಾಗಿದೆ. ಹೀಗಾಗಿ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಅದು ದಹನವಾಗುವುದಿಲ್ಲ. ಹಾಗಾದರೆ ಮುಂದೆ ಸಾಗುವ ಮೊದಲು ಮತ್ತು ಕುಂಭ ರಾಶಿಯಲ್ಲಿ ಶನಿಗ್ರಹದ ದಹನದ ಪ್ರಭಾವವನ್ನು ತಿಳಿದುಕೊಳ್ಳುವ ಮೊದಲು ದಹನ ಎಂದರೇನು ಎಂದು ತಿಳಿಯೋಣ. ಸರಳವಾಗಿ ಹೇಳುವುದಾದರೆ, ಒಂದು ಗ್ರಹವು ಸೂರ್ಯನಿಗೆ ಸಮೀಪದಲ್ಲಿ ಬಂದಾಗ ಉಂಟಾಗುವ ಪರಿಸ್ಥಿತಿಯನ್ನು ಗ್ರಹದ ದಹನ ಎಂದು ನಾವು ಹೇಳಬಹುದು. ಶನಿ ಸೂರ್ಯನ ಎರಡೂ ಬದಿಯಲ್ಲಿ 15 ಡಿಗ್ರಿ ಹತ್ತರದಲ್ಲಿ ಬಂದಾಗ ಅದು ದಹನವನ್ನು ಪಡೆಯುತ್ತದೆ.

ಈ ಗ್ರಹವು ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಕಾರಣದಿಂದ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದನ್ನು ದಹನ ಗ್ರಹ ಎಂದು ಕರೆಯಲಾಗುತ್ತದೆ. ಆದ್ದರಿಂದ ದಹನದಿಂದಾಗಿ, ಶನಿಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಶನಿಯ ದಹನದ ಸಮಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಮತ್ತು ಜನರ ಕಾನೂನು ವಿಷಯಗಳಲ್ಲಿ ವಿಳಂಬ, ಮುಷ್ಕರ ಅಥವಾ ಇತರ ಯಾವುದೇ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಮೇಷ: ಹೆಚ್ಚು ಖರ್ಚು, ಸಂಬಳದಲ್ಲಿ ವಿಳಂಬ

ಮೇಷ: ಹೆಚ್ಚು ಖರ್ಚು, ಸಂಬಳದಲ್ಲಿ ವಿಳಂಬ

ಕುಂಭ ರಾಶಿಯಲ್ಲಿ ಶನಿಗ್ರಹದ ದಹನ ಮೇಷ ರಾಶಿಯವರಿಗೆ ಆರ್ಥಿಕ ನಷ್ಟವನ್ನುನ್ನುಂಟು ಮಾಡಲಿದೆ. ಇದರಿಂದಾಗಿ ಆದಾಯ, ಹಣಕಾಸಿನ ಲಾಭಗಳು ಸಿಗುವ ಸಾಧ್ಯತೆಗಳು ಕಡಿಮೆ. ಕುಂಭ ರಾಶಿಯಲ್ಲಿ ಶನಿ ದಹನದ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಶತ್ರುಗಳ ಕಾಟ ಹೆಚ್ಚಾಗಬಹುದು. ಬಡ್ತಿಯಲ್ಲಿ ಸಮಸ್ಯೆಯನ್ನು ಎದುರಿಸಬಹುದು ಅಥವಾ ನಿಮ್ಮ ಬಡ್ತಿಯನ್ನು ಮುಂದೂಡಬಹುದು ಅಥವಾ ಸಂಬಳದಲ್ಲಿ ವಿಳಂಬವಾಗಬಹುದು. ಯಾವುದೋ ಕಾರಣದಿಂದಾಗಿ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗಬಹುದು. ಶಿಕ್ಷಣಕ್ಕಾಗಿ ಹೆಚ್ಚು ಖರ್ಚಾಗಬಹುದು. ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಬಹುದು. ಆದ್ದರಿಂದ ನೀವು ಮಾಡುವ ನಿಮ್ಮ ಕಾರ್ಯಗಳ ಬಗ್ಗೆ ಹಾಗೂ ಖರ್ಚುಗಳ ಬಗ್ಗೆ ಜಾಗರೂಕರಾಗಿರಿ. ನೀವು ಯಾರನ್ನು ನಂಬುತ್ತೀರಿ ಎಂಬುದರ ಬಗ್ಗೆ ಜಾಗೃತರಾಗಿರಲು ಸಲಹೆ ನೀಡಲಾಗುತ್ತದೆ.

ವೃಷಭ: ಕ್ರಮೇಣ ಸಮಸ್ಯೆಗಳಿಂದ ಮುಕ್ತಿ

ವೃಷಭ: ಕ್ರಮೇಣ ಸಮಸ್ಯೆಗಳಿಂದ ಮುಕ್ತಿ

ಕುಂಭ ರಾಶಿಯಲ್ಲಿ ಶನಿಗ್ರಹ ದಹನದಿಂದ ವೃಷಭ ರಾಶಿಯವರಿಗೆ ಕೆಲ ಸಮಸ್ಯೆಗಳು ಎದುರಾಗಬಹುದು. ನಿಮ್ಮ ವೃತ್ತಿಪರ ಜೀವನ ತೊಂದರೆಗೊಳಗಾಗುವ ಸಮಯ ಸೃಷ್ಟಿಯಾಗಬಹುದು. ಕೆಲಸದ ಸ್ಥಳದಲ್ಲಿ ನೀವು ಆತ್ಮವಿಶ್ವಾಸ ಮತ್ತು ಪ್ರೇರಣೆಯ ಕೊರತೆಯನ್ನು ಅನುಭವಿಸಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಕಡಿಮೆ ವೇತನವನ್ನು ಪಡೆಯಬಹುದು. ಕಂಪನಿಯನ್ನು ಬದಲಾವಣೆಗೆ ಯೋಜಿಸುತ್ತಿದ್ದರೆ, ಶನಿಯು ದಹನದಿಂದ ಹೊರಬರುವ ಸಮಯದವರೆಗೆ ಯೋಜನೆಯನ್ನು ಮುಂದೂಡಲು ನಿಮಗೆ ಸಲಹೆ ನೀಡಲಾಗುತ್ತದೆ. ಆಗ ವಿಷಯಗಳು ನಿಮ್ಮ ಪರವಾಗಿ ಪ್ರಾರಂಭವಾಗುತ್ತವೆ. ನಿಮ್ಮ ಪೋಷಕರ ಯೋಗಕ್ಷೇಮದ ಬಗ್ಗೆ ನೀವು ಜಾಗೃತರಾಗಿರಬೇಕು. ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಅವರ ನಿಯಮಿತ ತಪಾಸಣೆ ಮಾಡಿಸಿ. ಕೆಲಸದ ಒತ್ತಡದಿಂದ ದೂರವಿರಲು ಪ್ರಯತ್ನಿಸಿ. ಕ್ರಮೇಣ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.

ಮಿಥುನ: ಸಮಸ್ಯೆಗಳನ್ನು ಜಯಿಸುವ ಸಾಮಾರ್ಥ್ಯ

ಮಿಥುನ: ಸಮಸ್ಯೆಗಳನ್ನು ಜಯಿಸುವ ಸಾಮಾರ್ಥ್ಯ

ಶನಿ ನಿಮ್ಮ ಅದೃಷ್ಟದ ಮನೆಯನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ನೀವು ಆರ್ಥಿಕವಾಗಿ ಸದೃಢವಾಗುತ್ತೀರಿ. ನೀವು ಮಾಡುವ ಎಲ್ಲಾ ಕಾರ್ಯಗಳು ಕೈಗೆಟಕುತ್ತವೆ. ಲಾಭದಾಯಕ ಹುದ್ದೆಗಳನ್ನು ನೀವು ಮಾಡುವಿರಿ. ದೂರ ಪ್ರಯಾಣ, ತೀರ್ಥಯಾತ್ರೆ ಮಾಡುವ ಸಮಯವಿದು. ಆದರೆ ನಿಮ್ಮ ಅಜಾಗೂರುಕತೆಯಿಂದ ಅದೃಷ್ಟದ ಕೊರತೆಯನ್ನು ನೀವು ಅನುಭವಿಸುವಿರಿ. ಲವು ಹಠಾತ್ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಹೀಗಾಗಿ ಇದು ನಿಮ್ಮ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮಕ್ಕೆ ಪರೀಕ್ಷಾ ಸಮಯವಾಗಿದೆ. ನಿಮ್ಮ ಪ್ರಯತ್ನ ಮತ್ತು ಕಠಿಣ ಪರಿಶ್ರಮಕ್ಕೆ ಅನುಗುಣವಾಗಿರಲು ಸಲಹೆ ನೀಡುತ್ತಾರೆ. ಇದರಿಂದ ನೀವು ಎಲ್ಲಾ ಸಮಸ್ಯೆಗಳನ್ನು ಜಯಿಸಲು ಸಾಧ್ಯವಾಗುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ನಿರ್ಲಕ್ಷ್ಯವು ಹಾನಿಕಾರಕವಾಗಿರುತ್ತದೆ. ಮೂಳೆ ದೌರ್ಬಲ್ಯ, ಮೊಣಕಾಲುಗಳು, ಕೀಲು ನೋವು ಮತ್ತು ಸಂಧಿವಾತದಂತಹ ಆರೋಗ್ಯ ಸಮಸ್ಯೆಗಳು ಸಂಭವಿಸಬಹುದು. ದಿನನಿತ್ಯದ ತಪಾಸಣೆಯನ್ನು ಸಮಯಕ್ಕೆ ಸರಿಯಾಗಿ ಮಾಡಿ.

ಕಟಕ: ದಾಂಪತ್ಯ ಜೀವನದಲ್ಲಿ ಹಠಾತ್ ಬದಲಾವಣೆ

ಕಟಕ: ದಾಂಪತ್ಯ ಜೀವನದಲ್ಲಿ ಹಠಾತ್ ಬದಲಾವಣೆ

ಈ ದಹನದಿಂದಾಗಿ ನಿಮ್ಮ ವೈವಾಹಿಕ ಸಂತೋಷ ಕುಗ್ಗುತ್ತದೆ. ನಿಮ್ಮ ದಾಂಪತ್ಯ ಜೀವನ ಹಲವಾರು ಹಠಾತ್ ಏರಿಳಿತಗಳಿಗೆ ಒಳಗಾಗಬಹುದು. ಮದುವೆಯಾದರೆ ನಿಮ್ಮ ನಿಕಟ ಕುಟುಂಬದ ಸದಸ್ಯರ ಹಸ್ತಕ್ಷೇಪ ಅಥವಾ ಅವರೊಂದಿಗೆ ನಿಮ್ಮ ಕಠಿಣ ಸಂವಹನದಿಂದಾಗಿ ನಿಮ್ಮ ಸಂಗಾತಿಯೊಂದಿಗೆ ನೀವು ಕೆಲವು ಭಿನ್ನಾಭಿಪ್ರಾಯ ಅಥವಾ ಘರ್ಷಣೆಯನ್ನು ಎದುರಿಸಬಹುದು. ಆದ್ದರಿಂದ ನೀವು ನಿಮ್ಮ ದಾಂಪತ್ಯ ಜೀವನದಲ್ಲಿ ಯಾರಿಗೂ ಹಸ್ತಕ್ಷೇಪ ಮಾಡಲು ಬಿಡಬೇಡಿ. ನಿಮ್ಮ ಸಂವಹನದ ಬಗ್ಗೆ ಹೆಚ್ಚು ಗಮನ ಕೊಡಿ. ನೀವು ವ್ಯಾಪಾರದಲ್ಲಿದ್ದರೂ ಸಹ, ನಿಮ್ಮ ವೃತ್ತಿಪರ ಪಾಲುದಾರಿಕೆಯಲ್ಲಿ ನೀವು ಅದೇ ಸಮಸ್ಯೆಯನ್ನು ಎದುರಿಸಬಹುದು. ಹೀಗಾಘಿ ನಿಮ್ಮ ಮಾತಿನ ಬಗ್ಗೆ ಜಾಗರೂಕತೆಯಿಂದಿರಿ. ಆದಷ್ಟು ಈ ಸಮಯದಲ್ಲಿ ವಿವಾದವನ್ನು ತಪ್ಪಿಸಿ. ತಾಳ್ಮೆಯಿಂದ ವರ್ತಿಸುವುದು ಉತ್ತಮ. ಅದೃಷ್ಟದ ಬಲ ಕಟಕ ರಾಶಿಯ ಮೇಲಿರುವುದರಿಂದ ಸಮಸ್ಯೆಗಳು ಕ್ರಮೇಣ ದೂರವಾಗುತ್ತವೆ.

ಸಿಂಹ: ಕೆಲಸದಲ್ಲಿ ಬದಲಾವಣೆ

ಸಿಂಹ: ಕೆಲಸದಲ್ಲಿ ಬದಲಾವಣೆ

ಈ ದಹನ ಸಮಯದಲ್ಲಿ ಸಿಂಹ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಕೆಲಸದಲ್ಲಿ ಕೆಲ ಬದಲಾವಣೆಗಳಾಗಲಿವೆ. ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ನಿಗಾ ಇಡಬೇಕು. ಏಕೆಂದರೆ ನಿಮ್ಮ ಸಂಗಾತಿಯೊಂದಿಗೆ ನೀವು ಆಕ್ರಮಣಕಾರಿಯಾಗಿ ವರ್ತಿಸಬಹುದು. ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಅವರ ಆರೋಗ್ಯ ಹದಗೆಡುವ ಸಾಧ್ಯತೆಯಿರುವುದರಿಂದ ಅವರ ಆರೋಗ್ಯದ ಬಗ್ಗೆಯೂ ಗಮನ ಕೊಡಿ. ಶನಿಯ ದಹನದ ಸಮಯದಲ್ಲಿ ನಿಮ್ಮ ಶತ್ರುಗಳನ್ನು ದೂರವಿಡಿ. ನಿಮಗಾಗಿ ಸಮಸ್ಯೆಗಳನ್ನು ಉಂಟುಮಾಡುವ ಸಂದರ್ಭಗಳು ಬರಬಹುದು ಆದ್ದರಿಂದ ಜಾಗೃತರಾಗಿರಿ.

ಕನ್ಯಾ: ಆರ್ಥಿಕ ಸ್ಥಿತಿಯಲ್ಲಿ ಬಲ

ಕನ್ಯಾ: ಆರ್ಥಿಕ ಸ್ಥಿತಿಯಲ್ಲಿ ಬಲ

ಕನ್ಯಾ ರಾಶಿಯವರಿಗೆ ಈ ಸಮಯ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳಬಹುದು. ಶತ್ರುಗಳ ಕಾಟ ಕಡಿಮೆಯಾಗುತ್ತದೆ. ಸ್ಪರ್ಧಾತ್ಮಕ ಮನೋಭಾವ ನಿಮ್ಮನ್ನು ಕಾಪಾಡುತ್ತದೆ. ಜಾಣ್ಮೆಯಿಂದ ಕೆಲಸ ಮಾಡಿ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ. ಆದರೆ ಫಲಿತಾಂಶಗಳು ವಿಳಂಬವಾಗಬಹುದು. ನಿಮ್ಮ ಅಧ್ಯಯನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಶತ್ರುಗಳಿಂದ ಎದುರಿಸಬಹುದು. ಹೀಗಾಗಿ ಜಾಗರೂಕರಾಗಿರಿ. ಉದ್ಯೋಗಸ್ಥರು ಕೆಲಸದಲ್ಲಿ ಬೆಳವಣಿಗೆ ಹೊಂದುತ್ತಾರೆ. ಹೊಸ ಆಲೋಚನೆಯೊಂದಿಗೆ ನಿಮ್ಮ ಕಾರ್ಯಗಳನ್ನು ಆರಂಭಿಸುವಿರಿ. ಉನ್ನತ ಅಧ್ಯಯನಗಳಿಗೆ ಯೋಚಿಸುತ್ತಿರುವವರಿಗೆ ಕೊಂಚ ಸಮಸ್ಯೆಗಳು ಕಿರಿಕಿರಿ ಎನಿಸಬಹುದು. ವಿದೇಶಿ ವಿಶ್ವವಿದ್ಯಾಲಯದಿಂದ ಸಂಶೋಧನೆಗೆ ಸೇರಲು ಪ್ರಯತ್ನಿಸುತ್ತಿದ್ದರೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತೀರಿ. ನಿಮ್ಮ ಆಪ್ತರು ಅನಾರೋಗ್ಯದಿಂದ ಬಳಲಬಹುದು. ಇದರಿಂದ ನಿಮ್ಮ ಕಾರ್ಯಕ್ಷಮತೆಯಲ್ಲಿ ಕುಸಿತವನ್ನು ಕಾಣಬಹುದು.

ತುಲಾ: ಷೇರು ಮಾರುಕಟ್ಟೆಯಲ್ಲಿರುವವರಿಗೆ ಕಠಿಣ ಸಮಯ

ತುಲಾ: ಷೇರು ಮಾರುಕಟ್ಟೆಯಲ್ಲಿರುವವರಿಗೆ ಕಠಿಣ ಸಮಯ

ತುಲಾ ರಾಶಿಯವರಿಗೆ ಶನಿಯು ಯೋಗಕಾರಕ ಗ್ರಹವಾಗಿದ್ದು ಶಿಕ್ಷಣ, ಪ್ರೀತಿ ಸಂಬಂಧಗಳು, ಮಕ್ಕಳನ್ನು ಪ್ರತಿನಿಧಿಸುತ್ತದೆ. ಇದರಿಂದ ಷೇರು ಮಾರುಕಟ್ಟೆ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿರುವವರು ಕಠಿಣ ಸಮಯವನ್ನು ಹೊಂದಿರುತ್ತಾರೆ. ನಿಮ್ಮ ಮಕ್ಕಳ ಬಗ್ಗೆಯೂ ನೀವು ಹೆಚ್ಚು ಚಿಂತಿತರಾಗಿರಬೇಕು. ಅಧ್ಯಯನದ ಕಡೆಗೆ ಹೆಚ್ಚು ಗಮನ ಕೊಡುವಂತೆ ಮಕ್ಕಳಿಗೆ ತಿಳಿ ಹೇಳುವುದು ಉತ್ತಮ. ಈ ಸಮಯದಲ್ಲಿ ಮಕ್ಕಳ ವಿಚಾಋದಲ್ಲಿ ಕೆಲ ಸಮಸ್ಯೆಗಳು ಬರಬಹುದು. ಅವರ ಆರೋಗ್ಯ ಅಥವಾ ನಡವಳಿಕೆಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಂದು ಕುಂಭ ರಾಶಿಯಲ್ಲಿ ಶನಿಗ್ರಹವು ಹೇಳುತ್ತದೆ. ಗರ್ಭಿಣಿಯರು ತಮ್ಮ ಯೋಗಕ್ಷೇಮಕ್ಕಾಗಿ ಜಾಗೃತರಾಗಿರಲು ಸಲಹೆ ನೀಡಲಾಗುತ್ತದೆ.

ವೃಶ್ಚಿಕ: ವೃತ್ತಿಪರ ಜೀವನದಲ್ಲಿ ಒತ್ತಡ

ವೃಶ್ಚಿಕ: ವೃತ್ತಿಪರ ಜೀವನದಲ್ಲಿ ಒತ್ತಡ

ಕುಂಭ ರಾಶಿಯಲ್ಲಿ ಶನಿಗ್ರಹದ ದಹನ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲವನ್ನು ನೀಡುತ್ತದೆ. ಶನಿಯು ಮನೆ, ವಾಹನ ಮತ್ತು ಆಸ್ತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ನೀವು ಹೊಸ ಮನೆ, ವಾಹನ ಅಥವಾ ಇನ್ನಾವುದೇ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಕಾಯಬೇಕಾಗಬಹುದು. ನಿಮ್ಮ ಯೋಜನೆಯನ್ನು ತಡೆಹಿಡಿಯಬೇಕು. ಇದು ಆಸ್ತಿ ಸಂಬಂಧಿತ ವಿಷಯಗಳಲ್ಲಿ ಪಾಲ್ಗೊಳ್ಳಲು ಸೂಕ್ತ ಸಮಯವಲ್ಲ. ಶನಿಯ ದಹನದ ಸಮಯದಲ್ಲಿ ಹೂಡಿಕೆದಾರರು ದೊಡ್ಡ ಹೂಡಿಕೆಗಳನ್ನು ಮಾಡುವುದನ್ನು ತಡೆಯಲು ಸಲಹೆ ನೀಡಲಾಗುತ್ತದೆ. ವೃತ್ತಿಪರ ಜೀವನದಿಂದ ಅತಿಯಾದ ಒತ್ತಡದಿಂದಾಗಿ ನಿಮ್ಮ ಮನೆಯ ಸಂತೋಷ ಮತ್ತು ಮನೆಯ ವಾತಾವರಣ ತೊಂದರೆಗೊಳಗಾಗಬಹುದು. ಆದ್ದರಿಂದ ಎರಡೂ ಜೀವನದ ಪ್ರಮುಖ ಅಂಶಗಳಾಗಿರುವುದರಿಂದ ಎರಡನ್ನೂ ಬುದ್ಧಿವಂತಿಕೆಯಿಂದ ಸಮತೋಲನಗೊಳಿಸಲು ಸಲಹೆ ನೀಡಲಾಗುತ್ತದೆ. ನಿಮ್ಮ ಕುಟುಂಬಸ್ಥರ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಅವರ ಎಲ್ಲಾ ದಿನನಿತ್ಯದ ತಪಾಸಣೆಯನ್ನು ಮಾಡಿಸಿಕೊಳ್ಳುವಂತೆಗೆ ಸಲಹೆ ನೀಡಲಾಗುತ್ತದೆ.

ಧನು: ಸಂವಹನದ ಕೊರತೆ

ಧನು: ಸಂವಹನದ ಕೊರತೆ

ಶನಿಯು ಧನು ರಾಶಿಯವರ ಹವ್ಯಾಸಗಳು, ಕಡಿಮೆ ದೂರ ಪ್ರಯಾಣ ಮತ್ತು ಸಂವಹನ ಕೌಶಲ್ಯಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ದಹನ ಸಮಯವು ನಿಮಗೆ ಸ್ವಲ್ಪ ಕಠಿಣವಾಗಿರುತ್ತದೆ. ಏಕೆಂದರೆ ಸಂವಹನ ನಿಮ್ಮ ದೊಡ್ಡ ಆಸ್ತಿಯಾಗಿದೆ. ಶನಿಯ ದಹನದಿಂದಾಗಿ ನೀವು ಉತ್ತಮವಾಗಿ ಸಂವಹನ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೀವು ಸಾಮಾಜಿಕ ನಿಯಮಗಳು ಮತ್ತು ನಂಬಿಕೆಗಳಿಂದ ನಿರ್ಬಂಧಿತರಾಗುತ್ತೀರಿ. ಶಿಕ್ಷಕರು, ಉಪನ್ಯಾಸಗಳು, ಸಲಹೆಗಾರರಂತಹ ಸಂವಹನ ವೃತ್ತಿಗಳಲ್ಲಿ ಕೆಲಸ ಮಾಡುವವರಿಗೆ ಕೆಲ ಸಮಸ್ಯೆಗಳು ಎದುರಿಸಬಹುದು. ಈ ಸಮಯದಲ್ಲಿ ಶನಿ ನಿಮ್ಮ ಸಂವಹನದಲ್ಲಿ ಬದಲಾವಣೆಯನ್ನು ತರಬಹುದು. ಹೀಗಾಗಿ ಮಾತನಾಡುವಾಗ ಜಾಗರೂಕರಾಗಿರಿ. ಕುಂಭ ರಾಶಿಯಲ್ಲಿ ಈ ಶನಿ ದಹನದ ಸಮಯದಲ್ಲಿ, ನಿಮ್ಮ ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧವನ್ನು ನೋಡಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ನೀವು ಅವರೊಂದಿಗೆ ವಾದಗಳನ್ನು ಹೊಂದಿರಬಹುದು.

ಮಕರ: ಕೆಟ್ಟ ಮನಸ್ಥಿತಿಯಿಂದ ಸಮಯ ವ್ಯರ್ಥ

ಮಕರ: ಕೆಟ್ಟ ಮನಸ್ಥಿತಿಯಿಂದ ಸಮಯ ವ್ಯರ್ಥ

ಮಕರ ರಾಶಿಯವರು ಶನಿ ದಹನದ ಸಮಯದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ಕುಟುಂಬದ ಜೊತೆಗೆ ಸಾಮಾಜಿಕ ಚಟುವಟಿಕೆಗಳು ತುಂಬ ಸಂತೋಷಕರವಾಗಿರುತ್ತವೆ. ಉನ್ನತ ಮಟ್ಟದಲ್ಲಿ ಕೆಲಸ ಮಾಡುವ ಕೆಲವರಿಂದ ಸ್ವಲ್ಪ ವಿರೋಧ ಬರಬಹುದಾದರೂ ಶಾಂತವಾಗಿರುವುದು ಮುಖ್ಯ. ನೀವು ಯಾವುದೇ ಕಾರಣವಿಲ್ಲದೆ ಕೆಲವು ಜನರೊಂದಿಗೆ ಗೊಂದಲ ಮಾಡಬಹುದು. ಹಾಗೆ ಮಾಡುವುದರಿಂದ ನಿಮ್ಮ ಮನಸ್ಥಿತಿ ಹಾಳಾಗುತ್ತದೆ ಮತ್ತು ಅದು ನಿಮ್ಮ ಅಮೂಲ್ಯ ಸಮಯವನ್ನು ಸಹ ವ್ಯರ್ಥ ಮಾಡುತ್ತದೆ.

ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯಕರ ಆಹಾರ ಪದ್ಧತಿಗಳಲ್ಲಿ ತೊಡಗಿಸಿಕೊಳ್ಳಿ. ಜೊತೆಗೆ ನಿಮ್ಮ ಹತ್ತಿರದ ಕುಟುಂಬದ ಸದಸ್ಯರೊಂದಿಗೆ ನೀವು ಘರ್ಷಣೆಯನ್ನು ಸಹ ಎದುರಿಸಬಹುದು. ನಿಮ್ಮ ಮಾತು ಕಠೋರವಾಗಿರಬಹುದು. ಇದು ತಪ್ಪು ತಿಳುವಳಿಕೆ ಮತ್ತು ಘರ್ಷಣೆಗಳಿಗೆ ಕಾರಣವಾಗಬಹುದು. ಇದರಿಂದ ನಿಮ್ಮ ಕುಟುಂಬಸ್ಥರಿಗೆ ಬೇಸರವನ್ನುಂಟು ಮಾಡುವ ಸಾಧ್ಯತೆ ಇದೆ. ಶನಿ ನಿಮ್ಮ ಜಾತಕದಲ್ಲಿ ದುರ್ಬಲವಾಗಿದ್ದರಿಂದ ಈ ಸಮಯದಲ್ಲಿ ಎಲ್ಲಾ ವಿಚಾರದಲ್ಲೂ ಜಾಗರೂಕರಾಗಿರುವುದು ಉತ್ತಮ.

ಕುಂಭ: ಆತ್ಮೀಯರೊಂದಿಗೆ ಘರ್ಷಣೆ

ಕುಂಭ: ಆತ್ಮೀಯರೊಂದಿಗೆ ಘರ್ಷಣೆ

ಕುಂಭ ರಾಶಿಯಲ್ಲಿ ಶನಿ ದಹನ ಕುಂಭ ರಾಶಿಯವರ ಆರೋಗ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಮತ್ತು ಕೆಲವು ಹಠಾತ್ ಕಾಯಿಲೆಗಳನ್ನು ತರಬಹುದು. ಆದ್ದರಿಂದ ನೀವು ಸರಿಯಾದ ವಿಶ್ರಾಂತಿ ಮತ್ತು ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಅಹಂಕಾರವು ಹೆಚ್ಚಾಗಬಹುದು. ಅದು ನಿಮ್ಮ ಆತ್ಮೀಯರೊಂದಿಗೆ ಘರ್ಷಣೆಯನ್ನು ಉಂಟುಮಾಡಬಹುದು. ಕುಂಭ ರಾಶಿಯಲ್ಲಿನ ಶನಿಗ್ರಹದ ದಹನವು ನಿಮ್ಮ ವೈವಾಹಿಕ ಜೀವನಕ್ಕೆ ಒಳ್ಳೆಯದಲ್ಲ. ನಿಮ್ಮ ಸಂಗಾತಿಯೊಂದಿಗೆ ಅಧಿಕಾರ ಮತ್ತು ಶ್ರೇಷ್ಠತೆಯ ಹಗ್ಗಜಗ್ಗಾಟದಲ್ಲಿ ನೀವು ತೊಡಗಿಸಿಕೊಳ್ಳಬಹುದು. ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಕ್ರಮೇಣ ಇದು ನಿಮ್ಮ ಒಟ್ಟಾರೆ ಜೀವನದ ಬೆಳವಣಿಗೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ಜಾಗೃತರಾಗಿರಿ ಮತ್ತು ಅನಗತ್ಯ ಅಹಂಕಾರ ಮತ್ತು ಕೋಪದಿಂದ ಸಮಯವನ್ನು ಹಾಳುಮಾಡಲು ಬಿಡಬೇಡಿ.

ಮೀನ: ಖರ್ಚಿನ ಮೇಲೆ ಇರಲಿ ಹಿಡಿತ

ಮೀನ: ಖರ್ಚಿನ ಮೇಲೆ ಇರಲಿ ಹಿಡಿತ

ಈ ಸಮಯದಲ್ಲಿ ಮೀನ ರಾಶಿಯವರ ಖರ್ಚುಗಳು ಹೆಚ್ಚಾಗುವುದರಿಂದ ನಿಮ್ಮ ಹಣವನ್ನು ಉಳಿಸುವತ್ತ ನೀವು ಗಮನ ಹರಿಸಬೇಕು. ನಿಮ್ಮ ಖರ್ಚಿನ ಮೇಲೆ ನೀವು ಹಿಡಿತ ಕಾಪಾಡಿಕೊಳ್ಳಬೇಕು. ಯಾರಿಗಾದರೂ ಖರ್ಚು ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಸಾಲವನ್ನು ಪಡೆಯಲು ಯೋಜಿಸುತ್ತಿರುವ ಮೀನ ರಾಶಿಯವರು ಕುಂಭ ರಾಶಿಯಲ್ಲಿ ಶನಿಗ್ರಹದ ಸಮಯದಲ್ಲಿ ಇದನ್ನು ತಪ್ಪಿಸಬೇಕು. ಧಾರ್ಮಿಕ ಪ್ರವಾಸಗಳು ಅಥವಾ ವ್ಯಾಪಾರ ಪ್ರವಾಸಗಳಿಗೆ ಯೋಜಿಸುತ್ತಿರುವ ಹಿರಿಯರು ಇದು ಉತ್ತಮ ಸಮಯ. ಈ ಪ್ರವಾಸದಿಂದ ನೀವು ನಿಮ್ಮ ಜೀವನದಲ್ಲಿ ಎಲ್ಲಾ ಒತ್ತಡದಿಂದ ದೂರವಾಗಬಹುದು. ಕೆಲಸದ ಒತ್ತಡದಿಂದ ದೂರವಾಗಲು ನೀವು ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡಲು ಪ್ರಾರಂಭಿಸಲು ಸಲಹೆ ನೀಡಲಾಗುತ್ತದೆ.

English summary
Saturn Combust In Aquarius 2023 Impact on Zodiac Signs : The Saturn Combust In Aquarius will take place on 30 January 2023. Learn about remedies to perform in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X