ಐದು ರಾಶಿಯವರ ಜೀವನಕ್ಕೆ ಕಾಲಿಟ್ಟಿದೆ ಅದೃಷ್ಟ : ಮನೆ, ವಾಹನ ಖರೀದಿ ಭಾಗ್ಯ, ಇನ್ನು ಎಲ್ಲಾ ಶುಭವೇ

ಅಕ್ಟೋಬರ್‌ನಲ್ಲಿ ರಾಹು ತನ್ನ ಸ್ಥಾನವನ್ನು ಬದಲಾಯಿಸಿಯಾಗಿದೆ. ರಾಹು ಈಗ ಕುಂಭ ರಾಶಿಯಲ್ಲಿ ಧನಿಷ್ಠ ನಕ್ಷತ್ರದ ಮೂರನೇ ಪಾದವನ್ನು ಪ್ರವೇಶಿಸಿದ್ದಾನೆ. ಈ ವರ್ಷದ ಕೊನೆಯಲ್ಲಿ ರಾಹು ತನ್ನ ರಾಶಿಯನ್ನು ಕೂಡಾ ಬದಲಿಸುತ್ತಾನೆ. ಹಾಗಾಗಿ, ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಸಮಯ ಜ್ಯೋತಿಷ್ಯ ದೃಷ್ಟಿಯಿಂದ ಬಹಳ ಮುಖ್ಯ.

ರಾಹುವಿನ ಸ್ಥಾನ ಜಾತಕದಲ್ಲಿ ಉತ್ತಮವಾಗಿದ್ದರೆ ಹಠಾತ್ ಬದಲಾವಣೆಗಳು ಆಗುವುದು. ಇದ್ದಕ್ಕಿದ್ದ ಹಾಗೆ ಹಣ, ಕೀರ್ತಿ, ಸಂಪತ್ತು ಎಲ್ಲವೂ ಸಿಗುವುದು. ರಾಹುವಿನ ಸ್ಥಾನ ಬದಲಾವಣೆಯ ಪರಿಣಾಮ ವೃತ್ತಿ, ವ್ಯವಹಾರ, ಹಣ ಮತ್ತು ನಿರ್ಧಾರಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾಣುತ್ತದೆ. ಡಿಸೆಂಬರ್ 5ಕ್ಕೆ ರಾಹು ಕುಂಭ ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಅದೇ ದಿನ, ಕೇತು ಕೂಡಾ ಸಿಂಹ ರಾಶಿಯಿಂದ ಹೊರ ಬಂದು ಕರ್ಕಾಟಕ ರಾಶಿಗೆ ಕಾಲಿಡುತ್ತಾನೆ. ಡಿಸೆಂಬರ್‌ನಲ್ಲಿ ಪ್ರಮುಖ ಸಂಚಾರಕ್ಕೂ ಮುನ್ನ ರಾಹುವಿನ ನಕ್ಷತ್ರದ ಪಾದದಲ್ಲಿ ಬದಲಾವಣೆಯಾಗುತ್ತದೆ.

Rahu Transit 2026 Fortune Of Five Zodiac Signs To Change Luck To Follow From December Rahu Gochara

ಈ ರಾಶಿಯವರ ಜೀವನದಲ್ಲಿ ಆಗುವುದು ಪ್ರಮುಖ ಬದಲಾವಣೆ

ಮೇಷ ರಾಶಿ (Aries): ರಾಹುವಿನ ಸಂಚಾರದಲ್ಲಿ ಆಗುವ ಬದಲಾವಣೆ ಹೊಸ ವೃತ್ತಿ ಅವಕಾಶವನ್ನು ತರುವುದು. ಜವಾಬ್ದಾರಿ ಹೆಚ್ಚಾಗಬಹುದು. ಹೊಸ ಕೆಲಸದ ಅವಕಾಶವೂ ಸಿಗುವ ಸಾಧ್ಯತೆ ಇದೆ. ಹೊಸ ಜನರ ಪರಿಚಯದಿಂದ ಉದ್ಯಮಿಗಳಿಗೆ ಲಾಭವಾಗುವುದು. ಕೈ ಬಿಟ್ಟಿರುವ ಹಳೆಯ ಯೋಜನೆಗಳು ಮತ್ತೆ ಜೀವ ಪಡೆಯಬಹುದು. ಈ ಸಮಯದಲ್ಲಿ ಕೆಲಸ, ವ್ಯವಹಾರದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರ ಅಗತ್ಯ.

ಮಿಥುನ ರಾಶಿ (Gemini): ಹಣದ ವಿಷಯದಲ್ಲಿ ಮಿಥುನ ರಾಶಿಯವರಿಗೆ ಇದು ಶುಭ ಕಾಲ. ಆದಾಯ ಹೆಚ್ಚಿಸುವ ಹೊಸ ಮಾರ್ಗಗಳು ಹೊರಹೊಮ್ಮಬಹುದು. ಕೆಲಸ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈಗ ಪ್ರಯತ್ನಿಸಬಹುದು. ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಹೆಚ್ಚಿದೆ. ಹಳೆಯ ಸಂಪರ್ಕದಿಂದ ಪ್ರಯೋಜನವಾಗುವುದು. ಆದರೂ ಹೂಡಿಕೆ ಮಾಡುವಾಗ ಅಥವಾ ಹಣದ ವ್ಯವಹಾರ ನಡೆಸುವಾಗ ರಿಸ್ಕ್‌ ತೆಗೆದುಕೊಳ್ಳಲು ಹೋಗಬೇಡಿ.

ತುಲಾ ರಾಶಿ (Libra): ಹೊಸ ಕೆಲಸ ಸಿಗುವುದು. ಹೊಸ ಉದ್ಯೋಗ, ವ್ಯವಹಾರ ಶುರು ಮಾಡುವವರಿಗೆ ಒಳ್ಳೆಯ ಕಾಲ. ಬಡ್ತಿ ಸಿಗಬಹುದು. ವ್ಯವಹಾರ ಆರಂಭಿಸಿದರೂ ಯಶಸ್ವಿಯಾಗುವುದು. ಈ ಸಮಯದಲ್ಲಿ ನಡೆಸುವ ಎಲ್ಲಾ ವ್ಯವಹಾರ ಭವಿಷ್ಯದಲ್ಲಿ ದೊಡ್ಡ ಮಟ್ಟದ ಲಾಭ ತರುವುದು. ಅನಿರೀಕ್ಷಿತವಾಗಿ ಹಣ ಸಿಗುವುದು. ಹಣ, ಕೀರ್ತಿ ತರುವ ಸಮಯ ಇದು. ಆದರೆ ನೀವು ಮಾಡುವ ಕೆಲಸ, ವ್ಯವಹಾರ, ಸಿಗುವ ಲಾಭದ ಬಗ್ಗೆ ಎಲ್ಲರಿಗೂ ತಿಳಿಸದೇ ಇದ್ದರೆ ಒಳ್ಳೆಯದು. ಮನೆ, ವಾಹನ ಖರೀದಿ ಯೋಗವಿದೆ.

ಧನು ರಾಶಿ (Sagittarius): ರಾಹುವಿನ ಸಂಚಾರವು ಪ್ರಯಾಣ, ಉದ್ಯೋಗ ಮತ್ತು ವ್ಯವಹಾರದ ಮೇಲೆ ಪರಿಣಾಮ ಬೀರುವುದು. ಬೇರೆ ನಗರ ಅಥವಾ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಹೊಸ ಕೆಲಸ ಹುಡುಕುತ್ತಿರುವವರಿಗೆ ಪರಿಹಾರ ಸಿಗಬಹುದು. ವಿದ್ಯಾರ್ಥಿಗಳಿಗೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಸಕ್ಸಸ್‌ ಆಗುವರು. ಕಠಿಣ ಪರಿಶ್ರಮದ ಫಲ ಸಿಗುವುದು.ಹೊಸ ವಿಷಯಗಳನ್ನು ಕಲಿಯಲು ಅವಕಾಶ ಇರುವುದು.

ಕುಂಭ ರಾಶಿ (Aquarius): ರಾಹು ಸದ್ಯಕ್ಕೆ ಕುಂಭ ರಾಶಿಯಲ್ಲಿಯೇ ಇದ್ದಾನೆ. ಹಾಗಾಗಿ ರಾಹುವಿನ ರಾಶಿ, ನಕ್ಷತ್ರ ಪಾದ ಬದಲಾವಣೆಯ ಪ್ರಭಾವ ಇವರ ಮೇಲೆ ಹೆಚ್ಚು ಇರುವುದು. ವೃತ್ತಿಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಯಾಗುವುದು. ಹೊಸ ಜವಾಬ್ದಾರಿ ಅಥವಾ ಹೊಸ ಕೆಲಸ ಸಿಗಬಹುದು. ಆತ್ಮವಿಶ್ವಾಸ ಹೆಚ್ಚಾಗುವುದು. ರಾಹುವಿನ ಪ್ರಭಾವ ಇರುವ ಕಾರಣ ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಈ ಅವಧಿಯಲ್ಲಿ ಹೆಚ್ಚು ಪ್ರಯೋಜನ ಪಡೆಯುವ ರಾಶಿ ನಿಮ್ಮದೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+