ಈ ನಕ್ಷತ್ರದಲ್ಲಿ ಜನಿಸಿದವರಿಗೆ ಒಲಿಯುವಳು ಅದೃಷ್ಟ ಲಕ್ಷ್ಮೀ : ನನಸಾಗುವುದು ಸ್ವಂತ ಮನೆ ಕನಸು, ಪ್ರತಿ ಹಂತದಲ್ಲಿ ಸಿಗುವುದು ಯಶಸ್ಸು

ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜೀವನದಲ್ಲಿ ನಡೆಯುವ ಅನೇಕ ಘಟನೆಗಳು ಜಾತಕದಲ್ಲಿನ ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ. ರಾಹು ಮತ್ತು ಕೇತುವಿಗೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವ ಇದೆ. ರಾಹು ದೆಸೆ ಚೆನಾಗಿದ್ದರೆ ವ್ಯಕ್ತಿಗೆ ರಾತೋರಾತ್ರಿ ಹೆಸರು, ಕೀರ್ತಿ ಬಂದು ಬಿಡುವುದು. ಹಠಾತ್ ಅವಕಾಶಗಳು, ಆರ್ಥಿಕ ಲಾಭವಾಗುವುದು. ಕೇತು ಆಧ್ಯಾತ್ಮಿಕತೆ, ಜ್ಞಾನ, ಅಂತಃಪ್ರಜ್ಞೆ, ಹಿಂದಿನ ಕರ್ಮದ ಫಲಿತಾಂಶಗಳನ್ನು ಆಧರಿಸಿ ನಮ್ಮ ಜೀವನದಲ್ಲಿ ಅನಿರೀಕ್ಷಿತ ತಿರುವುಗಳಿಗೆ ಕಾರಣನಾಗುವನು.

ಜಾತಕದಲ್ಲಿ ರಾಹು ಅಥವಾ ಕೇತು ಅನುಕೂಲಕರ ಸ್ಥಾನದಲ್ಲಿದ್ದಾಗ ಮತ್ತು ಶುಭ ಗ್ರಹಗಳ ಜೊತೆ ಸಂಯೋಗವಿದ್ದಾಗ, ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು, ಹೊಸ ಅವಕಾಶಗಳು ಸಿಗುವುದು ಆರ್ಥಿಕ ಪ್ರಗತಿಯಾಗುವುದು. ಕೆಲವು ನಕ್ಷತ್ರಗಳಲ್ಲಿ ಜನಿಸಿದವರು ರಾಹು-ಕೇತುವಿನ ಪ್ರಭಾವದಿಂದಾಗಿ ಉದ್ಯೋಗ, ವ್ಯವಹಾರ, ಆದಾಯ, ಸ್ಥಾನಮಾನ ಮತ್ತು ಸಾಮಾಜಿಕ ಗೌರವದಂತಹ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.

Rahu Ketu Transit People Born Under Some Nakshatra Get Great Luck And Big Success Astrology Prediction

ಕೃತ್ತಿಕಾ ನಕ್ಷತ್ರ: ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರಿಗೆ ಈ ಅವಧಿಯು ಆರ್ಥಿಕವಾಗಿ ಗಮನಾರ್ಹ ಬದಲಾವಣೆಗಳನ್ನು ತರಬಹುದು. ಸೂರ್ಯನ ಅಧಿಪತ್ಯದ ಈ ನಕ್ಷತ್ರಕ್ಕೆ ರಾಹು-ಕೇತುವಿನ ಪ್ರಭಾವ ಅನುಕೂಲಕರವಾಗಿದ್ದರೆ, ಆತ್ಮವಿಶ್ವಾಸ ಹೆಚ್ಚಾಗುವುದು. ಹೊಸ ಪ್ರಯತ್ನಗಳಲ್ಲಿ ಯಶಸ್ಸು ಸಿಗುವುದು. ಆರ್ಥಿಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ. ಕೈಯ್ಯಲ್ಲಿ ಹಣ ಉಳಿಯುವುದು. ಮನೆ, ಭೂಮಿ ಅಥವಾ ವಾಹನವನ್ನು ಖರೀದಿಸಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ.

ಅರುದ್ರ ನಕ್ಷತ್ರ : ರಾಹು ಪ್ರಾಬಲ್ಯ ಹೊಂದಿರುವ ಅರುದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ರಾಹು ಅನುಕೂಲಕರ ಫಲಿತಾಂಶಗಳನ್ನು ನೀಡುವನು. ಹೊಸ ಆಲೋಚನೆಗಳು, ದಿಟ್ಟ ನಿರ್ಧಾರಗಳು ಮತ್ತು ಅನಿರೀಕ್ಷಿತ ಅವಕಾಶಗಳು ಜೀವನದಲ್ಲಿ ಪ್ರಗತಿಗೆ ಕಾರಣವಾಗುವುದು. ಜ್ಯೋತಿಷ್ಯ ಭವಿಷ್ಯವಾಣಿಗಳು ವಿಶೇಷವಾಗಿ ತಂತ್ರಜ್ಞಾನ, ವಿದೇಶಿ ಉದ್ಯೋಗಗಳು, ಆನ್‌ಲೈನ್ ವ್ಯವಹಾರ, ಮಾಧ್ಯಮ, ಸಂವಹನ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಅವಕಾಶಗಳು ಬರುತ್ತವೆ.

ಪುಷ್ಯ ನಕ್ಷತ್ರ : ಪುಷ್ಯ ನಕ್ಷತ್ರದಲ್ಲಿ ಜನಿಸಿದವರಿಗೆ ಈ ಅವಧಿಯು ಸ್ಥಿರವಾದ ಅಭಿವೃದ್ಧಿಯನ್ನು ತರುವುದು. ಈ ನಕ್ಷತ್ರದ ಅಧಿಪತಿ ಶನಿ. ಹಿಂದೆ ಮಾಡಿದ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಿಗುವುದು. ಹೊಸ ಹೂಡಿಕೆಯಿಂದ ಉದ್ಯಮಿಗಳಿಗೆ ಲಾಭವಾಗುವುದು. ವ್ಯವಹಾರ ವಿಸ್ತರಣೆಯ ಬಗ್ಗೆ ಯೋಚಿಸಬಹುದು. ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ.

ವಿಶಾಖ ನಕ್ಷತ್ರ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಶಾಖ ನಕ್ಷತ್ರದಲ್ಲಿ ಜನಿಸಿದವರಿಗೆ ತಮ್ಮ ಗುರಿಗಳನ್ನು ಸಾಧಿಸಲು ಹೊಸ ಅವಕಾಶಗಳು ಸಿಗುವುದು. ಗುರು ಗ್ರಹದ ಅಧಿಪತ್ಯದ ಈ ನಕ್ಷತ್ರಕ್ಕೆ ರಾಹು-ಕೇತುವಿನ ಪ್ರಭಾವವು ಹೊಸ ಹಾದಿಗಳನ್ನು ತೆರೆಯುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿಯಾಗುವುದು. ಹೊಸ ಅವಕಾಶಗಳು ಸಿಗುವುದು.

ಉತ್ತರಾಭಾದ್ರ ನಕ್ಷತ್ರ: ನಿಮ್ಮದು ಉತ್ತರಾಭಾದ್ರ ನಕ್ಷತ್ರವಾಗಿದ್ದರೆ ಈ ಅವಧಿಯು ಜೀವನದಲ್ಲಿ ಸ್ಥಿರವಾದ ಪ್ರಗತಿಯನ್ನು ನೀಡುವುದು. ತಾಳ್ಮೆ ಮತ್ತು ಶಿಸ್ತಿನಿಂದ ಮುನ್ನಡೆದರೆ ಉತ್ತಮ ಫಲ ಸಿಗುವುದು. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ತುಂಬಾ ಸಮಯದಿಂದ ಮಾಡಲು ಸಾಧ್ಯವಾಗದೆ ಇದ್ದ ಕೆಲಸ ಇದೀಗ ಕೈಗೂಡುವುದು.

ಪೂರ್ವಾಭಾದ್ರ ನಕ್ಷತ್ರ: ಪೂರ್ವಾಭಾದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಈ ಅವಧಿಯು ಅದೃಷ್ಟದ ಬಾಗಿಲುಗಳನ್ನು ತೆರೆಯಬಹುದು. ರಾಹು ಮತ್ತು ಕೇತುವಿನ ಪ್ರಭಾವದಿಂದಾಗಿ ಅನಿರೀಕ್ಷಿತ ಬದಲಾವಣೆಗಳಾಗುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ವ್ಯವಹಾರದಲ್ಲಿ ಪ್ರಗತಿಯಾಗುವುದು.

ಜ್ಯೇಷ್ಠ ನಕ್ಷತ್ರ: ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು. ಹೊಸ ಅವಕಾಶಗಳು ಸಿಗುವುದು. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಅನಿರೀಕ್ಷಿತ ಲಾಭವಾಗುವುದು. ಬಹಳ ಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಹೊಸ ಎತ್ತರಕ್ಕೆ ಏರುವಿರಿ.

ಪೂರ್ವ ಫಲ್ಗುಣಿ ನಕ್ಷತ್ರ: ಹಣ, ಹೆಸರು ಮತ್ತು ಮನ್ನಣೆ ಸಿಗುವುದು. ಶುಕ್ರನ ಅಧಿಪತ್ಯದ ಈ ನಕ್ಷತ್ರಕ್ಕೆ ರಾಹು-ಕೇತುವಿನ ಪ್ರಭಾವ ಅನುಕೂಲಕರವಾಗಿದ್ದರೆ, ಅನಿರೀಕ್ಷಿತ ಅವಕಾಶಗಳು ಸಿಗುವುದು. ಕಲೆ, ಸಿನಿಮಾ, ಸೌಂದರ್ಯ, ಫ್ಯಾಷನ್, ಮಾರಾಟ, ವ್ಯವಹಾರ ಮತ್ತು ಆನ್‌ಲೈನ್ ಕ್ಷೇತ್ರಗಳಲ್ಲಿರುವವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಹೊಸ ಅವಕಾಶಗಳು ಸಿಗುವುದು.

ಮೃಗಶಿರ ನಕ್ಷತ್ರ: ರಾಹುವಿನ ಪ್ರಭಾವವು ಹೊಸ ಆಲೋಚನೆಗಳು ಮತ್ತು ಅನಿರೀಕ್ಷಿತ ಅವಕಾಶಗಳಿಗೆ ದಾರಿ ಮಾಡಿ ಕೊಡುತ್ತದೆ. ತಂತ್ರಜ್ಞಾನ, ಸಂವಹನ, ಆನ್‌ಲೈನ್ ವ್ಯವಹಾರ, ಮಾಧ್ಯಮ ಮತ್ತು ವಿದೇಶಿ ಸಂಸ್ಥೆಗಳಲ್ಲಿರುವವರು ಉತ್ತಮ ಪ್ರಗತಿಯನ್ನು ಸಾಧಿಸಬಹುದು. ಹಣ ಗಳಿಸುವುದಕ್ಕೆ ವಿಶೇಷ ಅವಕಾಶ ಸಿಗುವುದು.

ಭರಣಿ ನಕ್ಷತ್ರ: ಜೀವನದಲ್ಲಿ ಹೊಸ ಬದಲಾವಣೆಗಳಾಗುವುದು. ನಿಂತು ಹೋಗಿದ್ದ ಕೆಲಸಗಳು ರಾಹು-ಕೇತುವಿನ ಪ್ರಭಾವದಿಂದಾಗಿ, ಚುರುಕು ಪಡೆಯುವುದು. ವ್ಯವಹಾರ ವಿಸ್ತರಣೆಗೆ ಅವಕಾಶಗಳು ಸಿಗುವುದು. ಉದ್ಯೋಗಿಗಳಿಗೆ ತಮ್ಮ ಮೇಲಧಿಕಾರಿಗಳಿಂದ ಬೆಂಬಲ ಸಿಗುವುದು. ಹೆಚ್ಚುವರಿ ಜವಾಬ್ದಾರಿಗಳು ಸಿಗುವುದು.

ಶತಭಿಷ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವರ ಮೇಲೆ ರಾಹುವಿನ ಪ್ರಭಾವವು ಹೆಚ್ಚಾಗಿರುವುದು. ಉದ್ಯೋಗಾವಕಾಶಗಳು ಒಲಿದು ಬರುವುದು. ಅನಿರೀಕ್ಷಿತ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಪ್ರತಿಭೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಲು ಉತ್ತಮ ಅವಕಾಶ ಸಿಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+