ರಾಹು-ಕೇತು ಸಂಕ್ರಮಣ: ಕೆಟ್ಟ ದುರಾದೃಷ್ಟ ಈ ರಾಶಿಯವರನ್ನು ಬೆನ್ನಟ್ಟಲಿದೆ
ಜ್ಯೋತಿಷ್ಯದಲ್ಲಿ ಪ್ರತಿ ಗ್ರಹಗಳ ಚಲನೆಯು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಚಲನೆಯು ಒಂದು ರಾಶಿಗೆ ಉತ್ತಮವಾದುದನ್ನು ತಂದರೆ, ಮತ್ತೊಂದು ರಾಶಿಯವರಿಗೆ ಸಂಕಷ್ಟಗಳನ್ನು ತರುತ್ತದೆ. ಇನ್ನು ಪ್ರಮುಖವಾದ ನಿಗೂಢ ನೆರಳು ಗ್ರಹಗಳಾದ ರಾಹು ಮತ್ತು ಕೇತು ಚಲನೆಯೂ ಮುಖ್ಯವಾಗಿದ್ದು, ಇವುಗಳ ಸಂಚಾರವು ಗಮನಾರ್ಹ ಪರಿಣಾಮ ಬೀರುತ್ತದೆ.
ಈ ವರ್ಷದ ಅಕ್ಟೋಬರ್ 30 ರಂದು ರಾಹು ಮತ್ತು ಕೇತು ತಮ್ಮ ರಾಶಿ ಚಿಹ್ನೆಗಳನ್ನು ಬದಲಾಯಿಸಲಿವೆ. ರಾಹು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿ ತನ್ನ ಸಂಚಾರ ಆರಂಭಿಸಲಿದ್ದಾನೆ. ಮತ್ತು ಕೇತು ಅಕ್ಟೋಬರ್ 30 ರಂದು ತುಲಾ ರಾಶಿಯ ಪ್ರಯಾಣ ಮುಗಿಸಿ ಕನ್ಯಾರಾಶಿಯಲ್ಲಿ ಸಂಚಾರ ಆರಂಭಿಸಲಿದ್ದಾನೆ. ಇದರಿಂದ ರಾಹು-ಕೇತು ಸಂಕ್ರಮಣ ಸಂಭವಿಸಲಿದ್ದು, ಇದು ಕೆಲವು ರಾಶಿಗಳಿಗೆ ದುರಾದೃಷ್ಟ ತರಲಿದೆ.
ರಾಹು-ಕೇತು ಸಂಕ್ರಮಣದ ಬಳಿಕ ಹನ್ನೆರಡು ರಾಶಿಗಳ ಪೈಕಿ ನಾಲ್ಕು ರಾಶಿಗಳಿಗೆ ಕೆಟ್ಟ ಸಮಯ ಆರಂಭವಾಗಲಿದೆ. ಇದು ಸ್ವಲ್ಪ ಸಮಯವಾದರೂ ಈ ಕೆಳಗಿನ ರಾಶಿಯವರು ಎಚ್ಚರದಿಂದ ಇರುವುದು ಮುಖ್ಯವಾಗಲಿದೆ.

ಮಿಥುನ ರಾಶಿ
ರಾಹು-ಕೇತು ಸಂಕ್ರಮಣದ ಬಳಿಕ ಮಿಥುನ ರಾಶಿಯವರ ಜೀವನದಲ್ಲಿ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಜಾಗ್ರತೆಯಿಂದ ಇರುವುದು ಉತ್ತಮ. ಸಮಯ ಕೆಟ್ಟಾಗ ಹಗ್ಗವೂ ಹಾವಂತೆ ಕಾಣುತ್ತದೆ. ಹೀಗಾಗಿ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇರಿ. ಕೌಟುಂಬಿಕ ಜೀವನದ ಬಗ್ಗೆ ಎಚ್ಚರವಿರಲಿ. ಸಂಬಂಧಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಮಾತಿನಲ್ಲಿ ಮಾಧುರ್ಯತೆ ಇರಲಿ. ಇನ್ನು ವ್ಯಾಪಾರದಲ್ಲಿ ಊಹಿಸಿದಷ್ಟು ಲಾಭ ಇರದ ಕಾರಣ ಖರ್ಚು ವೆಚ್ಚಗಳನ್ನು ಜಾಣ್ಮೆಯಿಂದ ನಿರ್ವಹಿಸಿ. ನಿಮ್ಮ ಬಗ್ಗೆ ನಿಮಗೆ ಭರವಸೆಯಿದ್ದು, ಈ ಸಮಯವನ್ನು ಛಲವಾಗಿ ಸ್ವೀಕರಿಸಿ ನಿರ್ವಹಿಸಿ. ಜೀವನದಲ್ಲಿ ಏರಿತಗಳು ಸಾಮಾನ್ಯ, ಅಂಜದಿರಿ.

ಕಟಕ ರಾಶಿ
ರಾಹು-ಕೇತುಗಳು ತಮ್ಮ ರಾಶಿ ಚಿಹ್ನೆಗಳನ್ನು ಬದಲಾಯಿಸುವುದು ಕಟಕ ರಾಶಿಯವರಿಗೆ ಸಂಕಷ್ಟಗಳನ್ನು ತಂದಿಡುವ ಸಾಧ್ಯತೆ ಇರುತ್ತದೆ. ಈ ಸಮಯವು ನಿಮ್ಮ ಉದ್ಯೋಗ ಹಾಗೂ ಉದ್ಯೋಗದ ಸ್ಥಳದಲ್ಲಿ ಕಷ್ಟಗಳನ್ನು ತಂದಿಡುವ ಸಾಧ್ಯತೆ ಇದೆ. ಹೀಗಾಗಿ ಕೆಲಸದ ಬಗ್ಗೆ ಹೆಚ್ಚಿನ ಗಮವಿರಲಿ. ಆದರೆ ಒತ್ತಡಗಳಿಂದ ದೂರವಿರಿ. ಸಂಯಮದಿಂದ ಬಂದಿರುವ ಸವಾಲುಗಳನ್ನು ಸ್ವೀಕರಿಸಿ ಎದುರಿಸಿ. ಇನ್ನು ಕಟಕ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಇದು ಉತ್ತಮ ಸಮಯವಲ್ಲ. ನಿರೀಕ್ಷಿಸಿದ ವೇಗದಲ್ಲಿ ಕೆಲಸ ಸಿಗದೇ ಇರಬಹುದು. ಆದರೆ ಪ್ರಯತ್ನಗಳನ್ನು ಬಿಡಬೇಡಿ.

ತುಲಾ ರಾಶಿ
ರಾಹು-ಕೇತು ಸಂಕ್ರಮಣದ ಬಳಿಕ ತುಲಾ ರಾಶಿಯರಿಗೆ ಸಂಕಷ್ಟದ ಸಮಯವಾಗಬಹುದು. ಆದರೆ ಎಚ್ಚರಿಕೆಯಿಂದ ಇರಿ. ಕೌಟುಂಬಿಕ ಜೀವನದಲ್ಲಿ ಏರುಪೇರಾಗಬಹುದು. ಸಂಬಂಧಗಳ ಬಗ್ಗೆ ಎಚ್ಚರಿಕೆ ಇರಲಿ. ಮಾತುಗಳನ್ನಾಡುವಾಗ ಯೋಚಿಸಿ ಆಡುವುದು ಉತ್ತಮ. ಕುಟುಂಬಸ್ಥರಿಗೆ ಸಮಯಕೊಡಿ. ವ್ಯಾಪಾರದಲ್ಲಿ ನಷ್ಟವಾಗಬಹುದು. ಈ ಒತ್ತಡವನ್ನು ಕುಟುಂಬದ ಮೇಲೆ ಹೇರಬೇಡಿ. ಉದ್ಯೋಗ-ಕುಟುಂಬ ಎರಡನ್ನು ಈ ಸಮಯದಲ್ಲಿ ಜಾಗ್ರತೆಯಿಂದ ನಿರ್ವಹಿಸಿ. ನಿರೀಕ್ಷಿಸಿದ ಜಯ ನಿಮ್ಮಿಂದ ದೂರವಾಗಬಹುದು. ಕುಗ್ಗದಿರಿ ಯಾಕೆಂದರೆ ಈ ಸಮಯ ಕಳೆದು ಹೋಗುತ್ತದೆ.

ಮಕರ ರಾಶಿ
ರಾಹು-ಕೇತು ಸಂಕ್ರಮಣದ ಸಮಯದಲ್ಲಿ ಮಕರ ರಾಶಿಯವರು ಕೂಡ ಎಚ್ಚರಿಕೆ ಇರಬೇಕು. ಈ ಸಮಯದಲ್ಲಿ ಅನಗತ್ಯ ಒತ್ತಡಗಳನ್ನು ತಪ್ಪಿಸಿ. ಹೊಸ ವಸ್ತುಗಳನ್ನು ಕೊಳ್ಳಲು ಇದು ಉತ್ತಮವಾದ ಸಮಯವಲ್ಲ. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಿ. ಅವರ ಆರೋಗ್ಯದ ಏರುಪೇರಾಗಿ ಖರ್ಚು ವೆಚ್ಚಗಳಿಗೆ ದಾರಿಯಾಗಬಹುದು. ಸಂಬಂಧಗಳಲ್ಲೂ ಎಚ್ಚರಿಕೆ ಇರಲಿ. ಕೌಟುಂಬಿಕ ಸಮಸ್ಯೆಗಳು ಸಹ ಎದುರಾಗಬಹುದು. ನೀವು ಅದನ್ನು ತಾಳ್ಮೆಯಿಂದ ನಿರ್ವಹಿಸಿ. ಯಾವುದೇ ಕೆಲಸ ಮಾಡುವಾಗಲೂ ಯೋಚಿಸಿ ಹೆಜ್ಜೆ ಇಡಿ. ಯಾಕೆಂದರೆ ಇದು ನಿಮಗೆ ಅನುಕೂಲಕರ ಸಮಯವಲ್ಲ.
(ಸೂಚನೆ-ಈ ಮೇಲಿನ ವಿಷಯಗಳನ್ನು ಅಂತರ್ಜಾಲದ ಮಾಹಿತಿ ಆಧಾರಿಸಿದೆ.ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜ್ಯೋತಿಷ್ಯ ಕ್ಷೇತ್ರದ ಪರಿಣಿತರಾದವರನ್ನು ಸಂಪರ್ಕಿಸುವುದು ಉತ್ತಮ)












Click it and Unblock the Notifications