Pishachi Yoga 2025: ರಾಹು ಶನಿ ಸಂಯೋಗದಿಂದ ಈ ರಾಶಿಯವರಿಗೆ ವಾಹನ ಚಾಲನೆ ವೇಳೆ ಅಪಾಯ
ಗ್ರಹಗಳ ಚಲನೆಯ ಪರಿಣಾಮ ಪ್ರಕೃತಿ ಹಾಗೂ 12 ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. 2025ರ ಅತಿದೊಡ್ಡ ರಾಶಿ ಬದಲಾವಣೆಯು ಇತ್ತೀಚೆಗೆ ಮಾರ್ಚ್ 29, 2025ರಂದು ಸಂಭವಿಸಿತು. ಆ ದಿನದಂದು ಶನಿಯು ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಿದನು.
ಪಾಪ ಗ್ರಹ ರಾಹು ಈಗಾಗಲೇ ಮೀನ ರಾಶಿಯಲ್ಲಿದ್ದಾನೆ. ಶನಿಯು ಮೀನ ರಾಶಿಗೆ ಹೋಗುವುದರಿಂದ, ಈ ರಾಶಿಯಲ್ಲಿ ಶನಿ ಮತ್ತು ರಾಹುವಿನ ಸಂಯೋಗವು ಪಿಶಾಚಿ ಯೋಗವನ್ನು ಸೃಷ್ಟಿಸುತ್ತಿದೆ. ಮಾರ್ಚ್ 29 ರಿಂದ ಮೇ 18ರವರೆಗೆ ಎರಡೂ ಗ್ರಹಗಳ ಸಂಯೋಗ ಮೀನ ರಾಶಿಯಲ್ಲಿ ಇರುತ್ತದೆ. ಇದರ ಪರಿಣಾಮ ಅನೇಕ ರಾಶಿಗಳ ಮೇಲೆ ಕಂಡುಬರುತ್ತದೆ.
ಪಿಶಾಚಿ ಯೋಗ
ಜ್ಯೋತಿಷ್ಯದಲ್ಲಿ ರಾಹು ಮತ್ತು ಶನಿ ಯಾವುದೇ ಗ್ರಹದ ಜೊತೆಯಲ್ಲಿದ್ದಾಗ ಪಿಶಾಚ ಯೋಗ ರೂಪುಗೊಳ್ಳುತ್ತದೆ. ಶನಿ ಮತ್ತು ರಾಹು ಇಬ್ಬರೂ ಜಲ ಗ್ರಹಗಳೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಶಾಪಗ್ರಸ್ತ ಯೋಗವು ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಜನರು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಏಕೆಂದರೆ ಹಾನಿ ಮತ್ತು ಅಪಘಾತದ ಸಾಧ್ಯತೆಗಳು ಇದೆ.
ಈ ರಾಶಿಗಳು ಮೇ 18ರವರೆಗೆ ಅತ್ಯಂತ ಜಾಗ್ರತೆ:-

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಜಾಗರೂಕರಾಗಿರಬೇಕಾದ ಸಮಯ ಇದು. ಕರ್ಕಾಟಕ ರಾಶಿಯ ಜನರು ಮೇ 18ರವರೆಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ.

ಸಿಂಹ ರಾಶಿ
ಸಿಂಹ ರಾಶಿಯ ಜನರು ಮಾರ್ಚ್ 29ರಿಂದ ಮೇ 18ರವರೆಗೆ ಬಹಳ ಜಾಗರೂಕರಾಗಿರಬೇಕು. ಪಿಶಾಚಿ ಯೋಗದ ರಚನೆಯಿಂದಾಗಿ ಸಿಂಹ ರಾಶಿಯ ಜನರ ಮೇಲೆ ಕೆಲಸದ ಹೊರೆ ಹೆಚ್ಚಾಗಬಹುದು. ಇದರಿಂದಾಗಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆಗೊಳಗಾಗಬಹುದು.

ಕನ್ಯಾ ರಾಶಿ
ಕನ್ಯಾ ರಾಶಿಯ ಜನರು ಪಿಶಾಚಿ ಯೋಗದ ಕಾರಣ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಅಪಘಾತದ ಸಾಧ್ಯತೆ ಇರುವುದರಿಂದ ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದಿರಿ. ರಸ್ತೆ ದಾಟುವಾಗ ಮೈಯಲ್ಲಾ ಕಣ್ಣಾಗಿರಲಿ.

ಕುಂಭ ರಾಶಿ
ಅಶುಭ ಯೋಗವಾದ ಪಿಶಾಚಿ ಯೋಗದ ರಚನೆಯಿಂದಾಗಿ ಕುಂಭ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಮಾಡಲು ಬಯಸಿದರೆ ಸ್ವಲ್ಪ ಸಮಯ ಕಾಯಿರಿ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

ಮೀನ ರಾಶಿ
ಮೀನ ರಾಶಿಯವರಿಗೆ ಪಿಶಾಚಿ ಯೋಗ ತೊಂದರೆಗಳನ್ನು ಉಂಟು ಮಾಡಲಿದೆ. ಮೂಳೆಗಳು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ಜಾಗರೂಕರಾಗಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications