• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟ್ಟಪರ್ತಿ ಬಾಬಾ ಆತ್ಮದ ಜೊತೆ ಮಾತನಾಡಿದ್ದೆ, ಪುನೀತ್ ಆತ್ಮದ ಜೊತೆಗೂ ಮಾತನಾಡುವೆ!

|
Google Oneindia Kannada News

ಕರ್ನಾಟಕದ ಯುವರತ್ನ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನೂ ಅಗಲಿ 22 ದಿನಗಳಾಗಿದೆ, ಆದರೆ, ಅವರ ಸಾವು ಮತ್ತು ಮತ್ತವರ ಸಾಮಾಜಿಕ ಕಳಕಳಿಯ ಕೆಲಸದ ಸುತ್ತ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ. ಅವರ ಸಮಾಧಿಯನ್ನು ವೀಕ್ಷಿಸಲು ಮಳೆಯಲ್ಲೂ ಜನರು ಹರಿದು ಬರುತ್ತಿದ್ದಾರೆ.

ಕೆಲವು ದಿನಗಳ ಹಿಂದೆ, ಚಾರ್ಲಿ ಚೆಟ್ಟಿನ್‌ಡೆನ್ ಎನ್ನುವ ವ್ಯಕ್ತಿ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಪು ಆತ್ಮದೊಂದಿಗೆ ಮಾತಾಡಿದ್ದೇನೆ ಎನ್ನುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಅದು ಅಸ್ಪಷ್ಟ ವಿಡಿಯೋವಾಗಿತ್ತು ಮತ್ತು ಇದಕ್ಕೆ ಅಭಿಮಾನಿಗಳಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು.

ಪುನೀತ್ ರಾಜಕುಮಾರ್ ಅಕಾಲಿಕ ಸಾವು: ಹೊರಬರುತ್ತಿರುವ ಒಂದೊಂದೇ ಸತ್ಯಗಳುಪುನೀತ್ ರಾಜಕುಮಾರ್ ಅಕಾಲಿಕ ಸಾವು: ಹೊರಬರುತ್ತಿರುವ ಒಂದೊಂದೇ ಸತ್ಯಗಳು

ಈಗ, ಖ್ಯಾತ ಸಮ್ಮೋಹನ ತಜ್ಞ ಡಾ.ರಾಮಚಂದ್ರ ಗುರೂಜಿಯವರು ಪುನೀತ್ ರಾಜಕುಮಾರ್ ಅವರ ಆತ್ಮದ ಜೊತೆಗೆ ಮಾತನಾಡುವೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಯತ್ನವನ್ನು ಮಾಡಲಿದ್ದೇನೆ ಮತ್ತು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಅಪ್ಡೇಟ್ ಕೊಡಲಿದ್ದೇನೆ ಎಂದು ಹೇಳಿದ್ದಾರೆ.

ಪುನೀತ್ ಆತ್ಮದೊಂದಿಗೆ ಮಾತುಕತೆ: ಸಿಟ್ಟಿಗೆದ್ದ ಅಪ್ಪು ಅಭಿಮಾನಿಗಳು

"ಆತ್ಮೀಯರೇ ನಮಸ್ಕಾರ, ಪುನೀತ್ ರಾಜಕುಮಾರ್ ಅವರ ಬಗ್ಗೆ ಜನರಿಗಿರುವ ಪ್ರೇಮಾಭಿಮಾನ ಕಂಡು ಮೂಕವಿಸ್ಮಿತನಾಗಿರುವೆ. ಧನ್ಯ, ಸಾರ್ಥಕ ಜೀವನ ಅವರದು, ಪುನೀತ್ ರವರು ಎಲ್ಲರನ್ನೂ ಭೌತಿಕವಾಗಿ ಅಗಲಿ ಹೋಗಿದ್ದರೂ ಸಹ ಕೊಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅವರು ಅಜರಾಮರರಾಗಿ ಚಿರಂಜೀವಿಯಾಗಿದ್ದಾರೆ" ಎಂದು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟಿನಲ್ಲಿ ಬರೆದು ಕೊಂಡಿದ್ದಾರೆ.

 ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮ ಸಂಭಾಷಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮ ಸಂಭಾಷಣೆ

"ಆತ್ಮ ಸಂಭಾಷಣೆ ಎನ್ನುವ ಸೈನ್ಸ್ ಇದೆ, ನಾನೊಬ್ಬ ಆತ್ಮ, ಪುನರ್ಜನ್ಮ ಮತ್ತು ಸಮ್ಮೋಹಿನ ತಜ್ಞನಾಗಿ ಆ ವಿದ್ಯೆಯ ಬಗ್ಗೆ ಅರಿವಿದೆ. ಸ್ವಲ್ಪದಿನಗಳ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗ ಅಮೆರಿಕಾದ ವ್ಯಕ್ತಿಯೊಬ್ಬರು ಇಲೆಕ್ಟ್ರಾನಿಕ್ ಮಷಿನ್ ಇಟ್ಟುಕೊಂಡು ಆತ್ಮ ಸಂಭಾಷಣೆ ಮಾಡಿದ್ದರು. ಜಿಯಾ ಖಾನ್ ಸತ್ತಾಗಲೂ, ಆಕೆಯ ಆತ್ಮವನ್ನು ಅವರ ತಾಯಿಯ ಮೂಲಕ ಮಾತನಾಡಿಸಿದ ಉದಾಹರಣೆಗಳಿವೆ"ಎಂದು ಡಾ.ರಾಮಚಂದ್ರ ಗುರೂಜಿ ಹೇಳಿದ್ದಾರೆ.

 ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತಾಡಿದ್ದೇನೆ

ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತಾಡಿದ್ದೇನೆ

ಪ್ಯಾರಾನಾರ್ಮಲ್ ಸ್ಪೆಷಲಿಸ್ಟ್ ಚಾರ್ಲಿ, ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತಾಡಿದ್ದೇನೆ ಎನ್ನವ ವಿಡಿಯೋ ವೈರಲ್ ಆಗಿತ್ತು. 3 ನಿಮಿಷ 51 ಸೆಕೆಂಡುಗಳ ವಿಡಿಯೋ ಅದಾಗಿತ್ತು. ಆ ವಿಡಿಯೊದಲ್ಲಿ ಚಾರ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಅತ್ತ ಕಡೆಯಿಂದ 'ಐ ಲವ್ ದೆಮ್' ಎನ್ನುವ ಉತ್ತರ ಬಂದಿದೆ. ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದರೂ ಅವುಗಳಿಗೆ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಈಗ, ಡಾ.ರಾಮಚಂದ್ರ ಗುರೂಜಿಯವರು ಪುನೀತ್ ಆತ್ಮದ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

 ಪುಟ್ಟಪರ್ತಿ ಸಾಯಿಬಾಬಾ ಅವರ ಆತ್ಮದ ಜೊತೆಗೆ ಮಾತನಾಡಿದ್ದೆ

ಪುಟ್ಟಪರ್ತಿ ಸಾಯಿಬಾಬಾ ಅವರ ಆತ್ಮದ ಜೊತೆಗೆ ಮಾತನಾಡಿದ್ದೆ

ಈ ಹಿಂದೆ ರಾಮಚಂದ್ರ ಗುರೂಜಿಯವರು ಪುಟ್ಟಪರ್ತಿ ಸಾಯಿಬಾಬಾ ಅವರ ಆತ್ಮವನ್ನು ಜೀವಂತ ವ್ಯಕ್ತಿಯ ದೇಹದೊಳಗೆ ಕರೆಸಿ ಆತ್ಮದ ಜೊತೆ ಸಂಭಾಷಣೆ ನಡೆಸಿದ್ದಂತಹ ವಿಡಿಯೋ ತುಂಬಾ ವೈರಲ್ ಆಗಿತ್ತು. "ಆತ್ಮ ಕೊಟ್ಟ ಸಾಕ್ಷಿಯನ್ನು ಕೋರ್ಟ್ ಕೂಡಾ ಒಪ್ಪುತ್ತೆ ಎನ್ನುವುದಕ್ಕೆ ಜಿಯಾ ಖಾನ್ ಅವರ ಸಾವೇ ಉದಾಹರಣೆ. ನಾನು ಅನೇಕ ಸಂಭಾಷಣೆಯನ್ನು ಈ ರೀತಿ ಮಾಡಿದ್ದೇನೆ. ಪುಟ್ಟಪರ್ತಿಯವರ ಆತ್ಮವನ್ನು ನೇರ ಪ್ರಸಾರದಲ್ಲಿ ಮಾತನಾಡಿಸಿದ್ದೆ"ಎಂದು ರಾಮಚಂದ್ರ ಗುರೂಜಿ ಹೇಳಿದ್ದಾರೆ.

 ಪುನೀತ್ ಅವರ ಆತ್ಮದ ಜೊತೆಗೆ ಮಾತನಾಡುವ ಪ್ರಯತ್ನ

ಪುನೀತ್ ಅವರ ಆತ್ಮದ ಜೊತೆಗೆ ಮಾತನಾಡುವ ಪ್ರಯತ್ನ

"ಅಗಲಿರುವ ಆತ್ಮ ಎಲ್ಲಿವೆ, ಅದಕ್ಕೆ ಮುಕ್ತಿ ಸಿಕ್ಕಿದೆಯಾ, ಸಾವಿಗೆ ನಿಖರವಾದ ಕಾರಣವನ್ನು ನೀಡುತ್ತಾ ಎನ್ನುವ ಪ್ರಯತ್ನವನ್ನು ಮಾಡಿದ್ದೇನೆ. ಪುನೀತ್ ಅವರ ಆತ್ಮದ ಜೊತೆಗೆ ಮಾತನಾಡುವ ಪ್ರಯತ್ನವನ್ನು ಮಾಡುತ್ತೇನೆ. ಅವರ ಅನಿಸಿಕೆ, ಅವರ ಕೊನೆಯ ಕ್ಷಣದ ಚಿಕಿತ್ಸೆ ಹೇಗಿತ್ತು, ಮತ್ತೆ ಅದೇ ಕುಟುಂಬದಲ್ಲಿ ಹುಟ್ಟಿ ಬರಲು ಇಷ್ಟ ಪಡುತ್ತಾರಾ ಎಂದು ಅವರ ಆತ್ಮದ ಜೊತೆಗೆ ಮಾತನಾಡುತ್ತೇನೆ"ಎಂದು ರಾಮಚಂದ್ರ ಗುರೂಜಿ ಹೇಳಿದ್ದಾರೆ. ಅವರ ಈ ಸಾಮಾಜಿಕ ಜಾಲತಾಣದ ಪೋಸ್ಟಿಗೆ ಪರವಿರೋಧ ಹೇಳಿಕೆಗಳು ವ್ಯಕ್ತವಾಗಿದೆ.

   ತಿಮ್ಮಪ್ಪನಿಗೆ ಮಳೆಯ ದಿಗ್ಭಂಧನ:ಮಹಾ ಪ್ರವಾಹದಿಂದ ತಿರುಪತಿ ತತ್ತರ | Oneindia Kannada
   English summary
   Past life Regression Therapy Specialist Dr Sri Ramachandra Guruji said He will Speak with Kannada Actor Puneeth Rajkumar Soul and will give update on the same. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X