ಇಂದಿನಿಂದ ಈ ರಾಶಿಯವರಿಗೆ ತೆರೆಯುವುದು ಭಾಗ್ಯದ ಬಾಗಿಲು:ಸುಗಮವಾಗುವುದು ಹಣ ಗಳಿಸುವ ಹಾದಿ, ಕಷ್ಟ ಕಳೆಯುವ ಸಮಯ

Parivartini Ekadashi: ಇವತ್ತು ಪರಿವರ್ತಿನಿ ಏಕಾದಶಿ. ವಿಶ್ರಾಂತಿ ಪಡೆಯುತ್ತಿರುವ ಭಗವಾನ್ ವಿಷ್ಣು ಇಂದು ಅಂದರೆ ಪರಿವರ್ತಿನಿ ಏಕಾದಶಿಯಂದು ಬೆನ್ನು ತಿರುಗಿಸುತ್ತಾನೆ ಎನ್ನುವುದು ನಂಬಿಕೆ. ಈ ದಿನ ವಿಷ್ಣು ಭಕ್ತರಿಗೆ ವಿಶೇಷ. ಜ್ಯೋತಿಷ್ಯ ದೃಷ್ಟಿಕೋನದಿಂದ, ಇಂದು ಜನರ ಜೀವನದ ಮೇಲೆ ಪರಿಣಾಮ ಬೀರುವ ಹಲವಾರು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಬುಧ ಮತ್ತು ಗುರು ಪರಸ್ಪರ 60 ಡಿಗ್ರಿಗಳಲ್ಲಿ ಲಾಭ ದೃಷ್ಟಿ ಯೋಗವನ್ನು ರೂಪಿಸುತ್ತಿದ್ದಾರೆ. ಜೊತೆಗೆ ರವಿ ಯೋಗ ಮತ್ತು ಸುಕ್ರಮ ಯೋಗವೂ ಇದೆ.

Parivartini Ekadashi Will Bring Luck To Four Zodiac Sign Opportunity To Earn Huge Money And Happiness

ಶುಭ ಯೋಗದಿಂದ ಲಾಭ :

ಕೇವಲ ನಾಲ್ಕು ದಿನಗಳ ಹಿಂದೆ, ಮಂಗಳ ಗ್ರಹವು ಕರ್ಕ ರಾಶಿಗೆ ಪ್ರವೇಶಿಸಿದ್ದು, ಗುರುವಿನ ಜೊತೆಗೂಡಿ ನೀಚಭಂಗ ರಾಜಯೋಗವನ್ನು ರೂಪಿಸುತ್ತಿದೆ. ಇದೀಗ ಬುಧ ಮತ್ತು ಗುರುವಿನ ಸ್ಥಾನದ ಕಾರಣದಿಂದ ಲಾಭ ದೃಷ್ಟಿ ಯೋಗವೂ ನಿರ್ಮಾಣವಾಗುತ್ತಿದೆ. ಈ ಶುಭಯೋಗಗಳು ಕೆಲವು ರಾಶಿಯವರಿಗೆ ಅನುಕೂಲಕರ ಸ್ಥಿತಿಯನ್ನು ನಿರ್ಮಾಣ ಮಾಡುವುದು. ಹಣಕಾಸು ಮತ್ತು ಇತರ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವುದು.

ವೃಷಭ ರಾಶಿ (Taurus): ಬಾಕಿ ಹಣ ನಿಮಗೆ ಸಿಗುತ್ತೆ

ವೃಷಭ ರಾಶಿಯವರಿಗೆ ಅಕ್ಟೋಬರ್ ವಿಶೇಷ ತಿಂಗಳು. ಬಾಕಿ ಇರುವ ಹಣ ವಾಪಸ್‌ ಕೈ ಸೇರುವುದು. ಹಣಕಾಸಿನ ಸಮಸ್ಯೆಗಳು ( financial crisis) ನಿವಾರಣೆಯಾಗುವುದು. ಇಲ್ಲಿವರೆಗಿನ ಕಷ್ಟಕ್ಕೆ ತಕ್ಕ ಮಟ್ಟಿನ ಪರಿಹಾರ ಸಿಗುವುದು. ನೆಮ್ಮದಿಯ ಜೀವನ ನಿಮ್ಮ ಮುಂದಿರುವುದು. ವೃತ್ತಿಜೀವನದಲ್ಲಿಯೂ ಪ್ರಗತಿಯ ಹಾದಿ ತೆರೆದುಕೊಳ್ಳುವುದು. ಪ್ರೀತಿಪಾತ್ರರೊಂದಿಗೆ ಸಂತೋಷದ ಸಮಯವನ್ನು ಆನಂದಿಸುವಿರಿ. ಒಂದು ಪ್ರಮುಖ ಕೆಲಸ ಈ ಅವಧಿಯಲ್ಲಿ ಪೂರ್ಣಗೊಳ್ಳಬಹುದು.

ಕರ್ಕಾಟಕ ರಾಶಿ (Cancer): ಪ್ರಯತ್ನಗಳು ಯಶಸ್ವಿ

ಕರ್ಕಾಟಕ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯ. ಈ ರಾಶಿಯಲ್ಲಿ ಮಂಗಳ ಮತ್ತು ಗುರುಗಳ ಸಂಯೋಗವು ಅದೃಷ್ಟದ ನೀಚಭಂಗ ಯೋಗವನ್ನು ಸೃಷ್ಟಿಸುತ್ತಿದೆ. ಹಾಗಾಗಿ ನಿಮ್ಮ ಕೆಲಸವು ವೇಗವಾಗಿ ಪ್ರಗತಿಯಾಗುವುದು. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು (success) ಸಿಗುವುದು. ನೀವು ಪಡುವ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಬಹುದು. ಆರ್ಥಿಕ ಲಾಭ ಹೆಚ್ಚಾಗುವುದು. ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಒಂದೊಂದಾಗಿಯೇ ನಿವಾರಣೆಯಾಗುತ್ತಾ ಬರುವುದು.

ಕನ್ಯಾ ರಾಶಿ (Virgo): ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

ಸೂರ್ಯ ಮತ್ತು ಬುಧ ಪ್ರಸ್ತುತ ಕನ್ಯಾರಾಶಿಯಲ್ಲಿದ್ದು, ಬುಧಾದಿತ್ಯ ರಾಜಯೋಗವನ್ನು ರೂಪಿಸುತ್ತಿದ್ದಾರೆ. ಈ ಸಂಯೋಜನೆಯು ಆರ್ಥಿಕ ಯಶಸ್ಸಿಗೆ ತುಂಬಾ ಅದೃಷ್ಟಶಾಲಿಯಾಗಿದೆ. ಕನ್ಯಾರಾಶಿಯವರು ಉತ್ತಮ ಸಾಧನೆ ಸಾಧಿಸುವಿರಿ. ನಿಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಮಯ ಇದು. ಯಾವುದೇ ಪ್ರಮುಖ ವಿಚಾರದಲ್ಲಿಯೂ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ಸಮಯ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವುದು.

ಮಕರ ರಾಶಿ (Capricorn): ಆರ್ಥಿಕ ಲಾಭದ ಸಾಧ್ಯತೆ

ಇಂದು, ಚಂದ್ರನು ದಿನವಿಡೀ ಮಕರ ರಾಶಿಯಲ್ಲಿದ್ದು, ಗುರುವು ಮಕರ ರಾಶಿಯ ಮೇಲೆ ದೃಷ್ಟಿ ಬೀರುತ್ತಿರುತ್ತಾನೆ. ಇದರಿಂದಾಗಿ ವೃತ್ತಿ ಮತ್ತು ಆರ್ಥಿಕ ವಿಷಯಗಳಿಗೆ ಇದು ಶುಭ ಸಮಯ. ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು. ಹೊಸ ಕೆಲಸ ಶುರು ಮಾಡುವುದಕ್ಕೂ ಸಮಯ ಅನುಕೂಲಕರವಾಗಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ತೆಗೆದುಕೊಳ್ಳುವ ನಿರ್ಧಾರ ಲಾಭದಾಯಕವಾಗಿರುವುದು.

ಧನು ರಾಶಿ (Sagittarius): ಜ್ಞಾನ ಮತ್ತು ಹಣ ವೃದ್ಧಿ

ಧನು ರಾಶಿಯವರಿಗೆ ಇದು ಶುಭ ಸಮಯ. ಅದೃಷ್ಟವು ನಿಮ್ಮ ಜೊತೆಗೆ ಇರುವುದು. ವ್ಯವಹಾರ ವಿಸ್ತರಿಸುವುದಕ್ಕೆ ಸಮಯ ಅನುಕೂಲಕರವಾಗಿರುವುದು. ನಿಮ್ಮ ವೃತ್ತಿಜೀವನ ಸುಧಾರಿಸುವುದು. ಸಂಪತ್ತು ಕೂಡಾ ಹೆಚ್ಚಾಗುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಮನೆ ನಿರ್ಮಾಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸೂಕ್ತ ಸಮಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+