ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚ ಮಹಾಪುರುಷ ಯೋಗ: ನಿಮ್ಮ ಜಾತಕದಲ್ಲಿ ಯಾವುದಿದೆ?

|
Google Oneindia Kannada News

ನಮ್ಮ ಜಾತಕದಲ್ಲಿ ಯಾವುದಾದರೂ ಯೋಗವಿದೆಯೇ ನೋಡಿ ಎಂದು ಜ್ಯೋತಿಷಿಗಳನ್ನು ಕೇಳುವುದುಂಟು. ಇಲ್ಲೊಂದು ಯೋಗವಿದೆ. ನೀವೇ ಸುಲಭಕ್ಕೆ ಕಂಡುಹಿಡಿದುಕೊಳ್ಳಬಹುದಾದ ಯೋಗ. ಇದಕ್ಕೆ ಪಂಚ ಮಹಾಪುರುಷ ಯೋಗ ಅಂತಾರೆ.

ಕುಜ, ಬುಧ, ಗುರು, ಶುಕ್ರ, ಶನಿ- ಈ ಐದು ಗ್ರಹಗಳು ನೀವು ಹುಟ್ಟಿದ ಸಮಯದಲ್ಲಿ ಯಾವ ರಾಶಿಯಲ್ಲಿದ್ದವು, ನಿಮ್ಮ ಲಗ್ನಕ್ಕೆ ಎಷ್ಟನೇ ಸ್ಥಾನದಲ್ಲಿದ್ದವು ಎಂಬುದರ ಆಧಾರದಲ್ಲಿ ನಿಮ್ಮ ಜೀವನದಲ್ಲಿ ಯೋಗ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಯಾವುದೇ ಜಾತಕದಲ್ಲಿ ಲಗ್ನದಿಂದ ಕೇಂದ್ರಸ್ಥಾನಗಳು ಬಹಳ ಮುಖ್ಯ ಕೇಂದ್ರ ಸ್ಥಾನ ಅಂದರೆ, ಲಗ್ನ (ಒಂದು), ಹಾಗೂ ಲಗ್ನದಿಂದ ನಾಲ್ಕು, ಏಳು ಹಾಗೂ ಹತ್ತನೇ ಮನೆ. ಈ ನಾಲ್ಕು ಸ್ಥಾನಗಳ ರಾಶಿಯ ಅಧಿಪತಿ ಅಥವಾ ಆ ರಾಶಿಯಲ್ಲಿ ಉಚ್ಚನಾಗುವ ಗ್ರಹವಿದ್ದರೆ ಈ ಯೋಗ ಬರುತ್ತದೆ. [ವೃಶ್ಚಿಕ ರಾಶಿಗೆ ಗೋಲ್ಡನ್ ಟೈಮ್, ಕಡೆಗೂ ಬಂದ ಗುರುಬಲ]

ಮೇ‍ಷ-ವೃಶ್ಚಿಕ ರಾಶಿಗೆ ಕುಜ ಅಧಿಪತಿ, ವೃಷಭ-ತುಲಾಕ್ಕೆ ಶುಕ್ರ, ಮಿಥುನ-ಕನ್ಯಾಕ್ಕೆ ಬುಧ, ಕರ್ಕಾಟಕಕ್ಕೆ ಚಂದ್ರ, ಸಿಂಹಕ್ಕೆ ರವಿ, ಧನು-ಮೀನ ರಾಶಿಗೆ ಗುರು, ಮಕರ-ಕುಂಭಕ್ಕೆ ಶನಿ ಅಧಿಪತಿ. ಅದೇ ರೀತಿ ಕರ್ಕಾಟಕದಲ್ಲಿ ಗುರು, ತುಲಾದಲ್ಲಿ ಶನಿ, ಮಕರದಲ್ಲಿ ಕುಜ, ಮೀನದಲ್ಲಿ ಶುಕ್ರ ಉಚ್ಚನಾಗಿರುತ್ತಾನೆ.

ಜನ್ಮ ಜಾತಕದಲ್ಲಿ ಲಗ್ನ ಯಾವುದು ಎಂದು ಮೊದಲಿಗೆ ನೋಡಿಕೊಳ್ಳಬೇಕು. ನಿಮ್ಮ ಲಗ್ನದಿಂದ ಲೆಕ್ಕ ಹಾಕುವಾಗ ಕೇಂದ್ರ ಸ್ಥಾನವಾಗುವ (1, 4, 7, 10ನೇ ಮನೆ) ರಾಶಿ ಗುರುತಿಸಬೇಕು. ಆ ನಂತರ ಆ ರಾಶಿಯ ಅಧಿಪತಿಯೋ ಅಥವಾ ಆ ರಾಶಿಯಲ್ಲಿ ಉಚ್ಚವಾದ ಗ್ರಹ ಇದೆಯೇ ಎಂದು ನೋಡಿಕೊಂಡರೆ ಯಾವ ಯೋಗವಿದೆ ಎಂದು ತಿಳಿಯುತ್ತದೆ.

ಕುಜ ಗ್ರಹದಿಂದ ರುಚಕ ಯೋಗ, ಬುಧನಿಂದ ಭದ್ರಯೋಗ, ಗುರುವಿಂದ ಹಂಸ ಯೋಗ, ಶುಕ್ರನಿಂದ ಮಾಲವ್ಯ ಯೋಗ ಹಾಗೂ ಶನಿ ಗ್ರಹದಿಂದ ಶಶ ಯೋಗ ಉಂಟಾಗುತ್ತದೆ

ಆದರೆ, ಈ ಯೋಗದ ಶುಭಾಶುಭ ಫಲವು ಜಾತಕದಲ್ಲಿನ ಗ್ರಹಗಳ ಸ್ಥಿತಿ, ಬಲ ಹಾಗೂ ದಶೆ, ಭುಕ್ತಿ, ಪಾಪ ಗ್ರಹಗಳ ದೃಷ್ಟಿ, ಸಂಯೋಗವನ್ನು ಅವಲಂಬಿಸಿರುತ್ತದೆ.

ನಿಮ್ಮ ಲಗ್ನ ತಿಳಿದುಕೊಳ್ಳಬೇಕಾ?

ನಿಮ್ಮ ಲಗ್ನ ತಿಳಿದುಕೊಳ್ಳಬೇಕಾ?

ನಿಮ್ಮ ನಕ್ಷತ್ರ, ರಾಶಿ, ಲಗ್ನ ಯಾವುದು ಅಂತ ತಿಳಿದುಕೊಳ್ಳಬೇಕಾ? ಈ ಲಿಂಕ್ ಕ್ಲಿಕ್ ಮಾಡಿ

ರುಚಕ ಯೋಗ (ಕುಜ ಗ್ರಹ)

ರುಚಕ ಯೋಗ (ಕುಜ ಗ್ರಹ)

ಮೇಷ, ವೃಶ್ಚಿಕ, ಮಕರ ಲಗ್ನದವರಿಗೆ ಜನ್ಮದಲ್ಲೇ ಕುಜನಿದ್ದರೆ, ಸಿಂಹ, ತುಲಾ, ಮಕರ ಲಗ್ನದವರಿಗೆ ನಾಲ್ಕನೇ ಸ್ಥಾನದಲ್ಲಿ ಕುಜನಿದ್ದರೆ, ವೃಷಭ, ಕರ್ಕಾಟಕ, ತುಲಾ ಲಗ್ನದವರಿಗೆ ಏಳರಲ್ಲಿ ಕುಜನಿದ್ದರೆ ಯೋಗ.

ಉದಾ:ಶ್ರೀರಾಮಚಂದ್ರ, ಸ್ವಾಮಿ ವಿವೇಕಾನಂದ, ಅಡಾಲ್ಫ್ ಹಿಟ್ಲರ್, ಸರ್ದಾರ್ ವಲ್ಲಭ ಭಾಯ್ ಪಟೇಲ್, ಐಶ್ವರ್ಯಾ ರೈ.

ಇದರ ಫಲಕ್ಕೆ ಮುಂದಿನ ಸ್ಲೈಡ್ ನೋಡಿರಿ

ರುಚಕ ಯೋಗದ ಫಲ

ರುಚಕ ಯೋಗದ ಫಲ

ಕುಜನಿಂದ ಏರ್ಪಡುವ ಈ ಯೋಗ ಶ್ರೀಮಂತಿಕೆ, ಕೀರ್ತಿ, ಶಕ್ತಿ, ಧೈರ್ಯವನ್ನು ನೀಡುತ್ತದೆ. ವೃತ್ತಿಯ ಮೇಲೆ ಸಕಾರಾತ್ಮಕ ಬದಲಾವಣೆ ತರುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಪಕ್ಷ ಈ ಯೋಗವಿರುತ್ತದೆ. ಕೆಲವು ಕುಖ್ಯಾತ ಕ್ರಿಮಿನಲ್ ಗಳ ಜಾತಕದಲ್ಲೂ ಈ ಯೋಗ ಕಂಡುಬರುತ್ತದೆ.

ಭದ್ರ ಯೋಗ (ಬುಧ ಗ್ರಹ)

ಭದ್ರ ಯೋಗ (ಬುಧ ಗ್ರಹ)

ಮಿಥುನ ಲಗ್ನದವರಿಗೆ ಜನ್ಮ ಹಾಗೂ ನಾಲ್ಕನೇ ಸ್ಥಾನದಲ್ಲಿ ಬುಧನಿದ್ದರೆ, ಕನ್ಯಾ ಲಗ್ನದವರಿಗೆ ಒಂದು ಅಥವಾ ಹತ್ತನೇ ಮನೆಯಲ್ಲಿದ್ದರೆ, ಧನುಸ್ಸು ರಾಶಿಯವರಿಗೆ ಏಳು ಅಥವಾ ಹತ್ತರಲ್ಲಿದ್ದರೆ, ಮೀನ ಲಗ್ನದವರಿಗೆ ಏಳು ಅಥವಾ ನಾಲ್ಕನೇ ಸ್ಥಾನದಲ್ಲಿ ಬುಧ ಗ್ರಹವಿದ್ದರೆ ಯೋಗ.

ಉದಾ: ಲಾಲ್ ಬಹಾದ್ದೂರ್ ಶಾಸ್ತ್ರಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ವೀನಸ್ ವಿಲಿಯಮ್ಸ್.

ಇದರ ಫಲಕ್ಕೆ ಮುಂದಿನ ಸ್ಲೈಡ್ ನೋಡಿರಿ

ಭದ್ರ ಯೋಗದ ಫಲದ ಫಲ

ಭದ್ರ ಯೋಗದ ಫಲದ ಫಲ

ಬುಧನಿಂದ ಏರ್ಪಡುವ ಈ ಯೋಗ ಬುದ್ಧಿವಂತಿಕೆ, ಜ್ಞಾನ, ವಿದ್ಯೆ, ಚುರುಕಾದ ಮಾತು ಮತ್ತು ವ್ಯವಹಾರದಲ್ಲಿ ಗೆಲುವು ನೀಡುತ್ತದೆ. ಮ್ಯಾನೇಜ್ ಮೆಂಟ್, ಮಾರಾಟ, ಮಾರುಕಟ್ಟೆ ಹಾಗೂ ಹಣಕಾಸು ವಿಭಾಗದಲ್ಲಿರುವವರಿಗೆ ಈ ಯೋಗ ಇರುತ್ತದೆ. ತುಂಬ ಆಕಸ್ಮಿಕವಾಗಿ ಶ್ರೀಮಂತಿಕೆ ತರುತ್ತದೆ.

ಹಂಸ ಯೋಗ (ಗುರು ಗ್ರಹ)

ಹಂಸ ಯೋಗ (ಗುರು ಗ್ರಹ)

ಕರ್ಕಾಟಕ, ಧನುಸ್ಸು, ಮೀನ ಲಗ್ನದವರಿಗೆ ಜನ್ಮದಲ್ಲೇ ಗುರುವಿದ್ದರೆ, ಮಕರ, ಮೀನ, ಕನ್ಯಾ ಲಗ್ನದವರಿಗೆ ಏಳರಲ್ಲಿದ್ದರೆ, ತುಲಾ, ಮೀನ, ಮಿಥುನ ಲಗ್ನದಿಂದ ಹತ್ತರಲ್ಲಿದ್ದರೆ, ಮೇಷ, ಕನ್ಯಾ, ಧನುಸ್ಸು ಲಗ್ನದವರಿಗೆ ನಾಲ್ಕರಲ್ಲಿದ್ದರೆ ಯೋಗ.

ಉದಾ:ರಾಜ ವಿಕ್ರಮಾದಿತ್ಯ, ರಾಮಚಂದ್ರ, ವಿ.ಪಿ.ಸಿಂಗ್, ಜಯಲಲಿತಾ, ಮಾಧುರಿ ದೀಕ್ಷಿತ್.

ಇದರ ಫಲಕ್ಕೆ ಮುಂದಿನ ಸ್ಲೈಡ್ ನೋಡಿರಿ

ಹಂಸಯೋಗದ ಫಲ

ಹಂಸಯೋಗದ ಫಲ

ಗುರುವಿನಿಂದ ಉಂಟಾಗುವ ಈ ಯೋಗ ಅದೃಷ್ಟವಂತರು ಎಂಬುದನ್ನು ಸುಲಭವಾಗಿ ಗುರುತಿಸುವಂತೆ ಮಾಡುತ್ತದೆ. ದೈವಾನುಗ್ರಹ ನೀಡುತ್ತದೆ. ಹೆಣ್ಣುಮಕ್ಕಳಿಗೆ ಈ ಯೋಗವಿದ್ದರೆ ಅವರ ಪತಿಗೆ ಅದೃಷ್ಟ ತರುತ್ತಾರೆ. ಬುದ್ಧಿವಂತರು, ಆದರ್ಶವಾದಿಗಳನ್ನಾಗಿ ಮಾಡುತ್ತದೆ. ಸಾರ್ವಜನಿಕ ಜೀವನದಲ್ಲಿ ಖ್ಯಾತಿ ದೊರೆಯುತ್ತದೆ.

ಮಾಲವ್ಯ ಯೋಗದ ಫಲ (ಶುಕ್ರ ಗ್ರಹ)

ಮಾಲವ್ಯ ಯೋಗದ ಫಲ (ಶುಕ್ರ ಗ್ರಹ)

ವೃಷಭ, ತುಲಾ, ಮೀನ ಲಗ್ನದವರಿಗೆ ಜನ್ಮದಲ್ಲಿ, ಮೇಷ, ವೃಶ್ಚಿಕ, ಕನ್ಯಾ ಲಗ್ನದವರಿಗೆ ಏಳರಲ್ಲಿ, ಮಿಥುನ, ಸಿಂಹ, ಮಕರ ಲಗ್ನದವರಿಗೆ ಹತ್ತರಲ್ಲಿ, ಧನುಸ್ಸು, ಕುಂಭ, ಕರ್ಕಾಟಕ ಲಗ್ನದವರಿಗೆ ನಾಲ್ಕರಲ್ಲಿ ಶುಕ್ರ ಇದ್ದರೆ ಯೋಗ.

ಉದಾ: ಪಂಡಿತ್ ಜವಾಹರ ಲಾಲ್ ನೆಹರೂ, ಜಾನ್ ಎಫ್.ಕೆನಡಿ, ಸೋನಿಯಾ ಗಾಂಧಿ, ಸಾನಿಯಾ ಮಿರ್ಜಾ.

ಇದರ ಫಲಕ್ಕೆ ಮುಂದಿನ ಸ್ಲೈಡ್ ನೋಡಿರಿ

ಮಾಲವ್ಯ ಯೋಗ

ಮಾಲವ್ಯ ಯೋಗ

ಶುಕ್ರನಿಂದ ಏರ್ಪಡುವ ಈ ಯೋಗದಿಂದ ಹಲವು ವಾಹನಗಳ ಒಡೆಯರನ್ನಾಗಿ ಮಾಡುತ್ತದೆ. ಶ್ರೀಮಂತರಾಗಿರುತ್ತಾರೆ. ಸುಖದ ಎಲ್ಲ ಮಜಲುಗಳನ್ನು ಅನುಭವಿಸುವ ಅವಕಾಶ ದೊರೆಯುತ್ತದೆ. ಜೀವನದಲ್ಲಿಟ್ಟು ಕೊಂಡ ಗುರಿ ತಲುಪಲು ಸಲೀಸಾದ ಮಾರ್ಗ ಗೋಚರವಾಗುತ್ತದೆ. ಗಂಡಾಗಲಿ, ಹೆಣ್ಣಾಗಲಿ ತುಂಬ ಚೆಂದನೆಯ ದಾಂಪತ್ಯ ಎನಿಸಿಕೊಂಡು, ಸುಖ ಪಡೆಯುತ್ತಾರೆ.

ಶಶ ಯೋಗ (ಶನಿ ಗ್ರಹ)

ಶಶ ಯೋಗ (ಶನಿ ಗ್ರಹ)

ತುಲಾ, ಮಕರ, ಕುಂಭ ಲಗ್ನದವರಿಗೆ ಜನ್ಮದಲ್ಲಿದ್ದರೆ, ಕರ್ಕಾಟಕ, ತುಲಾ, ವೃಶ್ಚಿಕ ಲಗ್ನಕ್ಕೆ ನಾಲ್ಕನೇ ಸ್ಥಾನ, ಮೇಷ, ಕರ್ಕಾಟಕ, ಸಿಂಹ ಲಗ್ನಕ್ಕೆ ಏಳರಲ್ಲಿದ್ದರೆ, ಮಕರ, ಮೇಷ, ವೃಷಭ ಲಗ್ನಗಳಿಗೆ ಹತ್ತರಲ್ಲಿ ಶನಿಯಿದ್ದರೆ ಯೋಗ.

ಉದಾ: ಜಿಮ್ಮಿ ಕಾರ್ಟರ್, ಮಾರ್ಗರೇಟ್ ಥ್ಯಾಚರ್.

ಇದರ ಫಲಕ್ಕೆ ಮುಂದಿನ ಸ್ಲೈಡ್ ನೋಡಿರಿ

ಶಶ ಯೋಗ

ಶಶ ಯೋಗ

ಶನಿ ತರುವ ಈ ಯೋಗದ ಜಾತಕರು ತುಂಬ ಎತ್ತರಕ್ಕೆ ಏರುತ್ತಾರೆ. ಆದರೆ ಅಭಿವೃದ್ಧಿಯ ವೇಗ ನಿಧಾನವಾಗಿರುತ್ತದೆ. ಉತ್ತಮ ಚಿಂತನೆ, ಯೋಚನೆಗಳನ್ನು ಪರಿಣಾಮಕಾರಿ ಜಾರಿಗೆ ತರುವಲ್ಲಿ ಗಟ್ಟಿತನ ಇರುತ್ತದೆ. ಹಲವಾರು ಕೆಲಸದಾಳುಗಳು ಇರುತ್ತಾರೆ. ಶ್ರೀಮಂತಿಕೆ ಹಾಗೂ ವೈಭವಯುತ ಜೀವನ ನಡೆಸುತ್ತಾರೆ. ಯಾವುದೇ ಸಂಸ್ಥೆಯಲ್ಲಿ ಹೊಸ ಆಲೋಚನೆಗಳನ್ನು ಜಾರಿಗೆ ತರುವ ಸ್ಥಾನದಲ್ಲಿ ಈ ಜಾತಕರು ಇರುತ್ತಾರೆ.

English summary
Pancha Mahapurusha Yoga is formed due to specific positions(planets in exalted or own signs) of five different planets. Ascendant is known as the first house and the last house is known as the twelfth house. Each house represents specific traits used for prediction. in quadrant(kendra) This combination (Yoga) is created by Mars, Mercury, Jupiter, Venus or Saturn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X