2020 ಹೇಗಿರಲಿದೆ: ನಾಸ್ಟ್ರಡಾಮಸ್ ಹೇಳಿದ್ದಾನೆ ಭೀಕರ ಭವಿಷ್ಯ
Recommended Video
ನಾಸ್ಟ್ರಡಾಮಸ್ ಯಾರಿಗೆ ಗೊತ್ತಿಲ್ಲ? ಜಗದ್ವಿಖ್ಯಾತ ಭವಿಷ್ಯಕಾರ ಆತ. ಇಡೀಯ ಭೂಮಂಡಲದ ಬಗ್ಗೆಯೇ ಆತ ಭವಿಷ್ಯ ನುಡಿದಿದ್ದಾನೆ. ಅದೂ ಸಾವಿರಾರು ವರ್ಷಗಳ ಹಿಂದೆ. ಆತ ನುಡಿದಿರುವ ಭವಿಷ್ಯ ಬಹುತೇಕ ಜರುಗಿದೆ ಎನ್ನಲಾಗುತ್ತದೆ. ಒಂದು ಸಮಯದಲ್ಲಂತೂ ಕನ್ನಡ ಸೇರಿದಂತೆ ಭಾರತದ ಬಹುತೇಕ ಟಿವಿ ಚಾನೆಲ್ ಗಳು ತಿಂಗಳುಗಟ್ಟಲೆ ನಾಸ್ಟ್ರಡಾಮಸ್ ಭವಿಷ್ಯದ ಬಗ್ಗೆ ಕಾರ್ಯಕ್ರಮಗಳನ್ನು ಭಿತ್ತರಿಸಿದ್ದವು.
ಇದೀಗ ನಾಸ್ಟ್ರಡಾಮಸ್ ಮತ್ತೆ ಮುನ್ನೆಲೆಗೆ ಬಂದಿದ್ದಾನೆ. 2020 ನೇ ವರ್ಷ ವಿಶ್ವದಾದ್ಯಂತ ನಡೆಯುವ ಪ್ರಮುಖ ಘಟನೆಗಳ ಬಗೆಗೆ ಆತ ನುಡಿದಿದ್ದ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ನಾಸ್ಟ್ರಡಾಮಸ್ ಭವಿಷ್ಯದ ಪ್ರಕಾರ, 2020 ವರ್ಷ ಹಿಂಸಾಚಾರದಿಂದ ಕೂಡಿರುತ್ತದೆಯಂತೆ. ಯುದ್ಧಗಳು, ಆಂತರಿಕ ಯುದ್ಧಗಳು, ಹಿಂಸಾತ್ಮಕ ಪ್ರತಿಭಟನೆಗಳು ಸಾಕಷ್ಟು ನಡೆಯುತ್ತವೆಯಂತೆ. 2020 ಮನುಕುಲದ ಹಿಂಸಾತ್ಮಕ ವರ್ಷ ಆಗಿರಲಿದೆಯಂತೆ.

'ದೇವರ ದೇಶದಲ್ಲಿ ದೊಡ್ಡ ಬಿರುಗಾಳಿ'
'ದೇವರ ನಾಡಿನಲ್ಲಿ ದೊಡ್ಡ ಬಿರುಗಾಳಿ ಏಳಲಿದೆ, ಸಹೋದರರಿಬ್ಬರು ಕಿತ್ತಾಡಿಕೊಂಡು ದೂರಾಗಿ ವೈರಿಗಳಾಗುತ್ತಾರೆ, ದೊಡ್ಡ ನಗರವೊಂದು ಹೊತ್ತಿ ಉರಿದಾಗ ಮೂರನೇ ಮಹಾ ಯುದ್ಧ ಆರಂಭವಾಗುತ್ತದೆ' ಈ ರೀತಿಯ ಸೂಕ್ಷ್ಮ ವ್ಯಾಖ್ಯಾನಗಳೊಂದಿಗೆ ನಾಸ್ಟ್ರಡಾಮಸ್ ವಿಶ್ವದ ಭವಿಷ್ಯ ನುಡಿದಿದ್ದಾನೆ.

ವ್ಲಾಡಿಮಿರ್ ಪುಟಿನ್ ಹತ್ಯೆ ಯತ್ನ
ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್‌ರ ಕೊಲೆ ಯತ್ನ ನಡೆಯುತ್ತದೆ. ಇಂಗ್ಲೆಂಡ್ ರಾಣಿ ಮರಣಹೊಂದುತ್ತಾರೆ, ಅಮೆರಿಕ ದೇಶವು ಏಷ್ಯಾ ರಾಷ್ಟ್ರಗಳಲ್ಲಿ ಬೃಹತ್ ಯುದ್ಧ ತಾಲೀಮು ನಡೆಸಿ ಮೂರನೇ ಮಹಾಯುದ್ಧಕ್ಕೆ ಇಂಬು ನೀಡಲಿದೆ ಎಂಬಿತ್ಯಾದಿಯಾಗಿ ನಾಸ್ಟ್ರಡಾಮಸ್ ನ ಭವಿಷ್ಯವನ್ನು ವಿಶ್ಲೇಶಿಸಲಾಗಿದೆ.

ವಿಶ್ವದೆಲ್ಲೆಡೆ ಮಹಾ ಆರ್ಥಿಕ ಕುಸಿತ
ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ಆರ್ಥಿಕ ಕುಸಿತ 2020 ರಲ್ಲಿ ಉಂಟಾಗಲಿದೆಯಂತೆ. ಷೇರು ಮಾರುಕಟ್ಟೆ ನೆಲಕಚ್ಚಲಿದೆ. ಸಾಲ ತೀರಿಸುವ ಶಕ್ತಿಯನ್ನು ಜನರು ಕಳೆದುಕೊಳ್ಳಲಿದ್ದಾರೆ. ಭಾರಿ ಆರ್ಥಿಕ ದಿವಾಳಿ 2020 ರಲ್ಲಿ ವಿಶ್ವದೆಲ್ಲೆಡೆ ಕಾಣಲಿದೆಯಂತೆ.

ಭಾರತದಲ್ಲಿ ತೀವ್ರ ಆಂತಕರಿಕ ಕಲಹ
ಭಾರತದಲ್ಲೂ ಬಹುವಾಗಿ ಆಂತರಿಕ ಜಗಳಗಳು ನಡೆಯುತ್ತವೆ. ಮತೀಯ ಗಲಭೆಗಳು ಹೆಚ್ಚಲಿವೆ. ಆರ್ಥಿಕ ಸಂಕಷ್ಟಕ್ಕೆ ಭಾರತ ತುತ್ತಾಗುತ್ತದೆ. ಪ್ರಾಕೃತಿಕ ಹಾನಿಗಳು ಬಹುಮಟ್ಟಿಗೆ 2020 ರಲ್ಲಿ ಸಂಭವಿಸುತ್ತವೆ ಎಂದು ನಾಸ್ಟ್ರಡಾಮಸ್ ಹೇಳಿದ್ದಾನೆ.

ಶಾಂತಿಯುತ ತಲೆಮಾರಿನ ಹುಟ್ಟು
ಕೇವಲ ಹಿಂಸಾಚಾರ ಮಾತ್ರವಲ್ಲದೆ 2020 ಕೆಲವು ಹೊಸ ಘಟನೆಗಳಿಗೂ ಸಾಕ್ಷಿ ಆಗಲಿದೆ. ಹೊಸ ತಲೆಮಾರಿನ, ವಿಶ್ವಕ್ಕೆ ಶಾಂತಿಯ ಸಂದೇಶ ನೀಡುವ ತಲೆಮಾರಿನ ಉದಯವೂ ಇದೇ ವರ್ಷದಲ್ಲಿ ಆಗಲಿದೆಯಂತೆ.
-
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ -
Karnataka Rain: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ: ಐಎಂಡಿ ವರದಿ -
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
SSLC ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್: ಸರ್ಕಾರದ ದಿಢೀರ್ ನಿರ್ಧಾರಕ್ಕೆ ಖಾಸಗಿ ಶಾಲೆಗಳ ತೀವ್ರ ವಿರೋಧ -
ರಾಜ್ಯದಲ್ಲಿ ತೃತೀಯ ಭಾಷೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ', ಆದರೆ ಕೇಂದ್ರದಿಂದ ಕಡ್ಡಾಯದ ಹೊಸ ಆದೇಶ : ರಾಜೀವ ಹೆಗಡೆ ಬರಹ -
RCB Vs CSK ಮ್ಯಾಚ್ ನೋಡಲು ಬರೋಬ್ಬರಿ 1.46 ಲಕ್ಷ ಕಳೆದುಕೊಂಡ ಕಳೆದುಕೊಂಡ ಟೆಕ್ಕಿ, ಐಪಿಎಲ್ ಅಭಿಮಾನಿಗಳೇ ಹುಷಾರ್ -
April 6 Horoscope: ಈ ರಾಶಿಗಳಿಗೆ ಲಾಭ, ಕೆಲವರಿಗೆ ಎಚ್ಚರಿಕೆ ಸೂಚನೆ -
ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್ಡೇಟ್ ಇಲ್ಲಿದೆ












Click it and Unblock the Notifications