Name Astrology: ಈ ಅಕ್ಷರದಿಂದ ಹೆಸರು ಆರಂಭವಾದ್ರೆ ಅದೃಷ್ಟ ನಿಮ್ಮ ಜೊತೆಗಿರುತ್ತೆ; ಗೆಲುವು ಸಾಧಿಸೋ ಛಲಗಾರರು!
Name Astrology:ಒಬ್ಬ ವ್ಯಕ್ತಿಯನ್ನು ಗುರುತಿಸುವುದಕ್ಕಾಗಿ ಹೆಸರು ಬೇಕು, ಹೆಸರಿನಲ್ಲಿ ಏನಿದೆ ಎಂದು ನೀವು ಅಂದುಕೊಳ್ಳಬಹುದು. ಆದರೆ ಹೆಸರಿನಲ್ಲಿಯೇ ಎಲ್ಲವೂ ಅಡಗಿರುವುದು ಎನ್ನುವ ಸತ್ಯ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಹೆಸರಿನ ಮಹತ್ವ ದೊಡ್ಡದು. ನಮ್ಮ ಹೆಸರು ನಮ್ಮ ವ್ಯಕ್ತಿತ್ವದ ಮೇಲೆ ಕೂಡಾ ಪರಿಣಾಮ ಬೀರುತ್ತದೆ.
ಹೆಸರಿನ ಮೂಲಕವೇ ವ್ಯಕ್ತಿ ಗುಣ ಸ್ವಭಾವ ನಡವಳಿಕೆ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು. ಇದು ಆಶ್ಚರ್ಯವೆನಿಸಬಹುದು. ಆದರೆ ಜ್ಯೋತಿಷ್ಯದಲ್ಲಿ ಇದಕ್ಕೆ ಮನ್ನಣೆ ಇದೆ. ಸಂಖ್ಯಾ ಶಾಸ್ತ್ರದಲ್ಲಿಯೂ ಅಷ್ಟೇ. ಸಂಖ್ಯಾ ಶಾಸ್ತ್ರದಲ್ಲಿ ಹೆಸರಿನ ಎಲ್ಲಾ ಅಕ್ಷರಗಳನ್ನು ಬಳಸಿಕೊಂಡು ಭವಿಷ್ಯ ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲಿ ಹೆಸರಿನ ಮೊದಲ ಅಕ್ಷರ ಇದ್ದರೆ ಸಾಕು.

ನಮ್ಮ ಜನ್ಮ ಜಾತಕ ಮಾಡಿಸಬೇಕಾದರೆ ಹುಟ್ಟಿದ ನಿಖರವಾದ ದಿನಾಂಕ, ಸಮಯ ಬೇಕು. ಇಲ್ಲವಾದರೆ ಜಾತಕ ರಚಿಸುವುದು ಸಾಧ್ಯವಾಗುವುದಿಲ್ಲ. ಆಗ ಅವರ ಹೆಸರಿನ ಆಧಾರದ ಮೇಲೆ ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ. ಅಂದರೆ ಹೆರಿನ ಮೊದಲ ಅಕ್ಷರವನ್ನಿ ತೆಗೆದುಕೊಂಡು ಅವರ ಭವಿಷ್ಯದಲ್ಲಿ ಏನೇನಿದೆ ಎನ್ನುವುದನ್ನು ಅಂದಾಜು ಮಾಡಲಾಗುತ್ತದೆ. ಹಾಗಾಗಿ ನಮ್ಮ ಹೆಸರು ಯಾವ ಅಕ್ಷರದಿಂದ ಹೆಸರು ಆರಂಭವಾಗಬೇಕು ಎನ್ನುವುದು ಕೂಡಾ ಮುಖ್ಯ. ಕೆಲವೊಂದು ಅಕ್ಷರಗಳಿಗೆ ವಿಪರೀತ ಶಕ್ತಿ ಇರುತ್ತದೆ. ಹಾಗಾಗಿ ಆ ಅಕ್ಷರದಿಂದ ಹೆಸರು ಆರಂಭವಾದರೆ ಅಕ್ಷರದಲ್ಲಿರುವ ಶಕ್ತಿ ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ.
name astrology: ಸಮಾಜದಲ್ಲಿ ಮನ್ನಣೆ
ಇಂಗ್ಲಿಷ್ ಅಕ್ಷರ 'ಪಿ' ಯಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ಸಮಾಜದಲ್ಲಿ ವಿಶೇಷ ಮನ್ನಣೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಅವರು ಯೋಚನೆ ಮಾಡುವ ರೀತಿ, ಅವರ ಕಠಿಣ ಪರಿಶ್ರಮದ ನೀತಿ ಮತ್ತು ವ್ಯಕ್ತಿತ್ವದ ಲಕ್ಷಣಗಳು ಇತರರಿಗಿಂತ ಬೇರೆಯಾಗಿಯೇ ಇರುವುದು.
ಕೆಲಸವನ್ನು ಸಾಧಿಸುವ ಹಠ
ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ತುಂಬಾ ತುಂಬಾ ಆಕ್ಟಿವ್ ಆಗಿ ಇರುತ್ತಾರೆ. ಒಮ್ಮೆ ಯಾವುದಾರೂ ಕೆಲಸವನ್ನು ಮಾಡಬೇಕು ಎಂದು ನಿರ್ಧಾರ ಮಾಡಿದರೆ ಅದನ್ನು ಸಾಧಿಸುವ ತನಕ ಸುಮ್ಮನಿರುವುದಿಲ್ಲ. ಅದೆಂಥಾ ಅಡೆತಡೆಗಳು ಎದುರಾದರೂ ಕೈ ಹಾಕಿದ ಕೆಲಸವನ್ನು ಪೂರ್ಣ ಮಾಡಿಯೇ ತೀರುತ್ತಾರೆ. ಈ ವಿಷಯದಲ್ಲಿ ಇವರು ಹಠಮಾರಿಗಳು.ಯಾರ ಮಾತನ್ನೂ ಕೇಳುವುದಿಲ್ಲ. ಆದರೆ ಅವರ ಈ ಹಠವೇ ಅವರ ಜೀವನದ ಯಶಸ್ಸಿಗೆ ಕಾರಣವಾಗುವುದು.
ಭಾವನಾತ್ಮಕ ಜೀವಿಗಳು
ಇವರು ಬೇರೆಯವರ ಭಾವನೆಗಳನ್ನು ಗೌರವಿಸುತ್ತಾರೆ. ಯಾಋ ಮನಸ್ಸನ್ನೂ ನೋಯಿಸುವುದು ಇವರಿಗೆ ಇಷ್ಟವಿರುವುದಿಲ್ಲ.ತಮ್ಮ ನಡೆ ನುಡಿಯಿಂದ ಯಾರ ಮನಸ್ಸನ್ನೂ ನೋಯಿಸದಂತೆ ಎಚ್ಚರಿಕೆಯಿಂದ ಇರುತ್ತಾರೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಸದಾ ಮುಂದೆ ಇರುತ್ತಾರೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಪ್ರೀತಿಯನ್ನು ಯಾವತ್ತೂ ಕಳೆದುಕೊಳ್ಳಲು ಇಟಪಡುವುದಿಲ್ಲ.
ಸಂಗಾತಿಗೆ ಪ್ರಾಮುಖ್ಯತೆ
ಇವರು ದಾಂಪತ್ಯ ಜೀವನದಲ್ಲಿಯೂ ತಮ್ಮ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಮದುವೆಯ ನಂತರ, ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪೂರೈಸಲು ಶ್ರಮಿಸುತ್ತಾರೆ. ತಮ್ಮ ಸಂಗಾತಿ ಸಂತೋಷವಾಗಿರಬೇಕೆಂದು ಎಲ್ಲಾ ರೀತಿಯಲ್ಲಿಯೂ ಪ್ರಯತ್ನ ಪಡುತ್ತಾರೆ. ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ ಅವರು ತಮ್ಮ ಉದ್ಯೋಗ ಅಥವಾ ವ್ಯವಹಾರ ಜೀವನದಲ್ಲಿ ಆರಂಭದಲ್ಲಿ ಕೆಲವು ಹಿನ್ನೆಡೆಗಳನ್ನು ಎದುರಿಸಬಹುದು. ಸರಿಯಾದ ವೃತ್ತಿಜೀವನವನ್ನು ಆಯ್ಕೆಮಾಡುವಲ್ಲಿ ಕೆಲವೊಮ್ಮೆ ಎಡವಿದರೂ ತಮ್ಮ ಕಠಿಣ ಪರಿಶ್ರಮದ ಸ್ವಭಾವದಿಂದಾಗಿ ಸಮಸ್ಯೆಗಳನ್ನು ಮೀರಿ ಗೆಲ್ಲುತ್ತಾರೆ. ಅದಕ್ಕಾಗಿಯೇ 'ಪಿ' ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳಿರುವ ಜನರು ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಲು ಹೆಚ್ಚು ಆಸಕ್ತಿ ತೋರುತ್ತಾರೆ.
ಈ ವಿವರಗಳು ಸಂಖ್ಯಾಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿದ ಸಾಮಾನ್ಯ ಅಭಿಪ್ರಾಯಗಳಾಗಿವೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ, ಆಲೋಚನೆಗಳು ಮತ್ತು ಯಶಸ್ಸು ಅವರ ಪಾಲನೆ, ಅನುಭವಗಳು ಮತ್ತು ಕಠಿಣ ಪರಿಶ್ರಮದಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಇವುಗಳನ್ನು ವೈಯಕ್ತಿಕ ನಂಬಿಕೆಗಳೆಂದು ಮಾತ್ರ ಪರಿಗಣಿಸಿದರೆ ಸಾಕು.


Click it and Unblock the Notifications
