Chandra Gochara: ಇಂದಿನಿಂದ ಈ ರಾಶಿಯವರ ಭಾಗ್ಯೋದಯ: ಚಂದ್ರ ಸಂಚಾರದಿಂದ ಧನ ಯೋಗ, ಭರ್ಜರಿ ಯಶಸ್ಸು
Chandra Gochara: ಇವತ್ತು ಚಂದ್ರ ಶುಕ್ರನ ಅಧಿಪತ್ಯದ ಪೂರ್ವಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ನಾಳೆ ರಾಶಿಯನ್ನು ಬದಲಿಸಿ ಕನ್ಯಾ ರಾಶಿಗೆ ಕಾಲಿಡುತ್ತಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಶುಕ್ರನ ನಕ್ಷತ್ರಕ್ಕೆ ಚಂದ್ರನ ಪ್ರವೇಶವನ್ನು ಬಹಳ ವಿಶೇಷ ಎಂದು ಹೇಳಲಾಗುತ್ತದೆ. ಚಂದ್ರ ಮನಸ್ಸು ಮತ್ತು ಭಾವನೆಗಳಿಗೆ ಸಂಬಂಧಪಟ್ಟ ಗ್ರಹ. ಅದೇ ಶುಕ್ರ ಸಂಪತ್ತು ಮತ್ತು ಸಮೃದ್ಧಿಯ ಅಂಶ. ಆದ್ದರಿಂದ, ಶುಕ್ರ ಮತ್ತು ಚಂದ್ರನ ಸಂಯೋಗವು ಆರ್ಥಿಕ ವಿಷಯಗಳಲ್ಲಿ ಬಹಳ ಶುಭವಾಗಿರುವುದು. ಚಂದ್ರನ ಈ ನಕ್ಷತ್ರ ಸಂಚಾರದಿಂದ ಮೂರು ರಾಶಿಯವರು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ.
ಮೇಷ ರಾಶಿ (Aries)
ಮೇಷ ರಾಶಿಯಲ್ಲಿ ಜನಿಸಿದವರಿಗೆ ಚಂದ್ರನ ಸಂಚಾರವು ಹೆಚ್ಚು ಫಲ ನೀಡುವುದು. ಈ ಸಮಯದಲ್ಲಿ, ಲಾಭ ಗಳಿಸಲು ಹೆಚ್ಚು ಅವಕಾಶಗಳು ಸಿಗುವುದು. ಆರ್ಥಿಕವಾಗಿ ಸಮಯ ತುಂಬಾ ಅನುಕೂಲಕರವಾಗಿರುವುದು. ಕೆಲವು ಪ್ರಯತ್ನಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುವಿರಿ. ಬಾಕಿ ಇರುವ ಕೆಲಸಗಳು ಬೇಗನೇ ಪೂರ್ಣಗೊಳ್ಳುವುದು. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಹಳೆಯ ಹೂಡಿಕೆಯಿಂದ ಲಾಭವಾಗುವುದು.

ಸಿಂಹ ರಾಶಿ (Leo)
ಚಂದ್ರನ ಸಂಚಾರ ಸಿಂಹ ರಾಶಿಯವರಿಗೂ ಶುಭ ಫಲವನ್ನೇ ನೀಡುವುದು. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ನಿಮ್ಮ ವ್ಯಕ್ತಿತ್ವದಲ್ಲಿ ತುಂಬಾ ಸುಧಾರಣೆಯಾಗುವುದು. ಆರ್ಥಿಕ ಪರಿಸ್ಥಿತಿ ಸದೃಢವಾಗುವುದು. ಕಲೆ, ಮಾಧ್ಯಮ, ಮಾರ್ಕೆಟಿಂಗ್ ಅಥವಾ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿರುವವರು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಹೆಚ್ಚು. ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ಸೋಲುವ ಭಯವಿಲ್ಲದೆ ಹೊಸ ಕೆಲಸ ಆರಂಭ ಮಾಡಬಹುದು.
ಧನು ರಾಶಿ (Sagittarius)
ಚಂದ್ರ ಸಂಚಾರದ ಕಾರಣದಿಂದ ಧನು ರಾಶಿಯವರ ಕೈ ಹಿಡಿಯುವುದು ಅದೃಷ್ಟ. ಈ ಸಂಚಾರದ ಸಮಯದಲ್ಲಿ ಗೆಲುವು ನಿಮ್ಮದಾಗುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಹಣಕಾಸಿನ ಸ್ಥಿತಿ ಸುಧಾರಿಸುವುದು. ಪ್ರತಿಯೊಂದು ಕೆಲಸದಲ್ಲಿಯೂ ಗಮನಾರ್ಹ ಪ್ರಯೋಜನವಾಗುವುದು. ಕೆಲವು ಪ್ರಯತ್ನಗಳಲ್ಲಿ ತುಸು ಹೆಚ್ಚೇ ಯಶಸ್ಸು ಸಿಗುವುದು. ಮನಸ್ಸಿನ ಆಸೆಗಳು ಈಡೇರುವುದು. ಹೊಸ ಮತ್ತು ಉತ್ತಮ ಅವಕಾಶಗಳು ಹೊರಹೊಮ್ಮುವುದು.
ಈ ರಾಶಿಯವರಿಗೆ ಚಂದ್ರನ ಸಂಚಾರ ಸಾಮಾನ್ಯವಾಗಿರುವುದು
ಚಂದ್ರನ ನಕ್ಷತ್ರ ಪರಿವರ್ತನೆಯಿಂ ಕೆಲವು ರಾಶಿಯವರಿಗೆ ಸಾಮಾನ್ಯ ಫಲ ಸಿಗುವುದು. ವೃಷಭ ರಾಶಿ, ಮಿಥುನ ರಾಶಿ, ತುಲಾ ರಾಶಿ ಮತ್ತು ಕುಂಭ ರಾಶಿಯವರಿಗೆ ಈ ಸಂಚಾರವು ಸಾಮಾನ್ಯ ಫಲವನ್ನು ನೀಡುವುದು. ನಿಮ್ಮ ಸೌಕರ್ಯ ಮತ್ತು ಐಷಾರಾಮ ಜೀವನದ ಆನಂದ ಹೆಚ್ಚುವುದು. ಆರ್ಥಿಕ ಸ್ಥಿತಿ ಸ್ಥಿರವಾಗಿ ಇರುವುದು. ಅನಾವಶ್ಯಕ ಒತ್ತಡಗಳು ದೂರವಾಗುವುದು.
ಈ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು
ಚಂದ್ರ ಸಂಚಾರದಿಂದ ಕೆಲವು ರಾಶಿಯವರಿಗೆ ಶುಭ ಫಲ, ಕೆಲವರುಗೆ ಸಾಮಾನ್ಯ ಫಲ ಸಿಗುವುದು. ಇನ್ನು ಮೂರು ರಾಶಿಯವರಿಗೆ ಈ ಸಂಚಾರದ ಬಹಳ ಕಷ್ಟದ ಸಮಯವನ್ನು ತರುವುದು. ಕರ್ಕ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿಯವರು ಚಂದ್ರ ಸಂಚಾರದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಕೆಲಸದಲ್ಲಿ ತಾಳ್ಮೆ ಅಗತ್ಯ. ಮಾತಿನ ಬಗ್ಗೆ ಎಚ್ಚರ ಇರಲಿ. ಬಳಸುವ ಪದಗಳ ಬಗ್ಗೆ ಜಾಗೃತೆ ಇರಲಿ.
ಚಂದ್ರ ಸಂಚಾರದ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಇರುವ ಕ್ರಮಗಳು
ಚಂದ್ರನ ಸಂಚಾರದ ದುಷ್ಪರಿಣಾಮಗಳನ್ನು ದೂರ ಮಾಡಲು ವಿಧಿ ವಿಧಾನಗಳೊಂದಿಗೆ ಶಿವನನ್ನು ಪೂಜಿಸಬೇಕು. ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಬೇಕು.


Click it and Unblock the Notifications
