ಮೀನ : ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅನಿವಾರ್ಯ ತಿಳಿಯುತ್ತದೆ
ಪುರುಷರು: ವ್ಯಾಪಾರಿಗಳಿಗೆ ಉತ್ತಮ ಕಾಲ. ಸ್ನೇಹಿತರಿಂದ ಸಾಲ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ನೀವು ಏನು, ಸಂಸ್ಥೆಗೆ ನಿಮ್ಮ ಅನಿವಾರ್ಯ ಎಷ್ಟಿದೆ ಎಂಬುದನ್ನು ತೋರಿಸುತ್ತೀರಿ. ಅಂಥ ಅವಕಾಶ ಲಭಿಸುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಯೋಗವಿದೆ. ಆದರೆ ಕೆಲ ದಿನಗಳು ಕಾಯಬೇಕಾಗಬಹುದು.
ಸರಕಾರಿ ಕೆಲಸ ಕಾರ್ಯಗಳು ಮಾಡಿಸಬೇಕಿದ್ದಲ್ಲಿ ಸಹ ಅದೇ ಸಮಯದಲ್ಲಿ ಪ್ರಯತ್ನ ಮಾಡಿದರೆ ಯಶಸ್ಸಾಗುವ ಸಾಧ್ಯತೆ ಹೆಚ್ಚು ಇದೆ. ಮರೆವು ಬಹಳ ಕಾಡುತ್ತದೆ. ಈ ಹಿಂದೆ ಎಂದೂ ಆಗದ ವಿಧದಲ್ಲಿ ನೀವು ಸಾಲ ರೂಪದಲ್ಲಿ ಹಣ ಕೊಟ್ಟು ಮರೆತು ಬಿಡುವ ಸಾಧ್ಯತೆಗಳಿವೆ, ಎಚ್ಚರ!

ನೆನಪಿಟ್ಟು ಸ್ತ್ರೀಯರಿಂದ ಆದಷ್ಟು ದೂರ ಇರಿ. ಏಕೆಂದರೆ, ಸ್ತ್ರೀ ಸಹವಾಸ ಅದರಲ್ಲಿಯೂ ಅದು ಅಕ್ರಮ ವಿಧಾನ ಆಗಿದ್ದಲ್ಲಿ ಭಾರೀ ಮೌಲ್ಯವನ್ನು ತೆರಬೇಕಾಗುತ್ತದೆ. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಮರಳಿ ಬಾರದು ಎಂಬ ಗಾದೆ ಸದಾ ನಿಮ್ಮ ತಲೆಯಲ್ಲಿ ಓಡುತ್ತಾ ಇರಲಿ.
ನೀವು ತೂಕ ಹಾಕಿ ಎಷ್ಟು ಬೇಕೋ ಅಷ್ಟೇ ಮಾತನಾಡುವವರು ಆದರೂ ಈಗ ಸ್ವಲ್ಪ ಕಡಿಮೆ ಮಾತನಾಡಿ ಹಾಗೂ ಯಾರಿಗೂ ಏನನ್ನೂ ಮಾಡಿಕೊಡುವುದಾಗಿ ಭರವಸೆಗಳನ್ನು ಕೊಡಬೇಡಿ.
ಸ್ತ್ರೀಯರು: ಪ್ರೀತಿ-ಪ್ರೇಮ-ಪ್ರಣಯ ಈ ವಿಚಾರಗಳಿಂದ ದೂರ ಇದ್ದರೆ ನಗು ನಗುತ್ತ ಇರುತ್ತೀರಿ. ಇಲ್ಲ ಆಗಲ್ಲ ಅವೆಲ್ಲ ಬೇಕೇ ಬೇಕು ಎಂದಾದಲ್ಲಿ ಈ ತಿಂಗಳಿನಲ್ಲಿ ನಿಮಗೆ ಕಣ್ಣಿರು ಕಟ್ಟಿಟ್ಟ ಬುತ್ತಿ. ಕೆಲ ಅನಿವಾರ್ಯದ ವಿಚಾರಗಳನ್ನು ನಿಮ್ಮ ತಂದೆಯವರಿಗೆ ತಿಳಿಸುವ ಪರಿಸ್ಥಿತಿಗಳಿದ್ದಲ್ಲಿ ಮಾಸಾಂತ್ಯದ ತನಕ ಕಾಯುವುದೇ ಲೇಸು.
ದುಡ್ಡಿಗಾಗಿ ಸ್ವಲ್ಪ ಅಲೆದಾಡುವ, ಪರದಾಡುವ ಸಂದರ್ಭಗಳು ಬರಬಹುದು. ಬೇಸರ ಬೇಡಿ, ಅದು ತಾತ್ಕಾಲಿಕ. ಟೀಕಿಸುವವರ ಪಾಲಿಗೆ ನಿಮ್ಮ ಯಶಸ್ಸೇ ಆಯುಧ ಆಗಬೇಕು. ಅದು ಈಗ ಸಾಧ್ಯವಿದೆ
ವಿದ್ಯಾರ್ಥಿಗಳು: ಅಧ್ಯಾಪಕರು ವಿಚಾರವನ್ನು ತಿಳಿಸುವ ಮೊದಲೇ ನಿಮಗೆ ಎಲ್ಲ ತಿಳಿದಿದೆ ಎನ್ನುವಂತೆ ಅವತಾರ ಇರಬಾರದು. ಸಾಧನೆಯಿಂದ ನಿಮ್ಮನ್ನು ಗುರುತಿಸುವಂತೆ ಆಗಬೇಕು. ನೀವು ಗಟ್ಟಿ ಮನಸ್ಸು ಮಾಡಿದರೆ ಅದಾಗುವ ಸಾಧ್ಯತೆಗಳಿವೆ.
ಪರಿಹಾರ: ಈ ತಿಂಗಳಿನಲ್ಲಿ ನಂಜುಂಡೇಶ್ವರನ ದರ್ಶನ ಮಾಡಿ ಬನ್ನಿ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications