Get Updates
Get notified of breaking news, exclusive insights, and must-see stories!

October Horoscope 2023: ಅಕ್ಟೊಬರ್ ಮಾಸದಲ್ಲಿ ದ್ವಾದಶಿ ರಾಶಿಗಳ ಗ್ರಹಚಾರ ಫಲ ಹೀಗಿರಲಿದೆ ನೋಡಿ...

ಅಕ್ಟೊಬರ್ ಮಾಸದಲ್ಲಿ ಗ್ರಹಗಳ ಸ್ಥಾನ ಪಲ್ಲಟನೆಯಿಂದ ಯಾವ ರಾಶಿಗಳಿಗೆ ಮಂಗಳಕರವಾಗಲಿದೆ ಮತ್ತು ಯಾವ ರಾಶಿಯ ಜನರು ಸಂಕಷ್ಟವನ್ನು ಎದುರಿಸಲಿದ್ದಾರೆ ಎಂಬ ಮಾಹಿತಿ ತಿಳಿದುಕೊಳ್ಳಿ. ಅಕ್ಟೊಬರ್‌ನಲ್ಲಿ ಯಾವ ರಾಶಿಗಳಿಗೆ ಆರ್ಥಿಕವಾಗಿ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಅದೃಷ್ಟದ ಯೋಗವಿದೆ, ಯಾರಿಗೆ ಅಲ್ಪ ಅದೃಷ್ಟ, ಯಾರಿಗೆ ನಷ್ಟವಾಗಲಿದೆ ತಿಳಿದುಕೊಳ್ಳುವ ಬನ್ನಿ.

01.10.2023 ಕನ್ಯಾ ರಾಶಿಗೆ ಬುಧನ ಪ್ರವೇಶ ಮತ್ತು ಸಿಂಹ ರಾಶಿಗೆ ಶುಕ್ರನ ಪ್ರವೇಶ. 03.10.2023 ರಂದು ತುಲಾ ರಾಶಿಗೆ ಕುಜನ ಪ್ರವೇಶ. 18.10.2023 ರಂದು ತುಲಾ ರಾಶಿಗೆ ಸೂರ್ಯ ಹಾಗೂ ಬುಧನ ಪ್ರವೇಶ. 30.10.2023 ರಂದು ಮೀನರಾಶಿಗೆ ರಾಹು ಹಾಗೂ ಕನ್ಯಾರಾಶಿಗೆ ಕೇತು ಪ್ರವೇಶ.

2023 ಅಕ್ಟೋಬರ್ ಮಾಸದ ವಿಶೇಷಗಳು:

*02.10.2023: ಗಾಂಧಿ ಜಯಂತಿ/ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ.

*14.10.2023: ಮಹಾಲಯ ಅಮಾವಾಸ್ಯೆ

*15.10.2023: ಶರನ್ನವರಾತ್ರಿ ಪ್ರಾರಂಭ

*23.10.2023: ಮಹಾನವಮಿ ಆಯುಧ ಪೂಜಾ

*24.10.2023: ವಿಜಯದಶಮಿ

*28.10.2023: ವಾಲ್ಮಿಕಿ ಜಯಂತಿ

ಮೇಷ ರಾಶಿ:

ಮೇಷ ರಾಶಿ:

ಈ ಮಾಸದಲ್ಲಿ ನಿಮಗೆ ಬಹುದೊಡ್ಡ ಆತಂಕ ನಿವಾರಣೆ ಆಗುತ್ತದೆ. 20ರಂದು ರಾಹು ನಿಮ್ಮ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಅಂದರೆ ನಿಮಗೆ 12ನೇ ಮನೆಯಲ್ಲಿ ರಾಹು ಹಾಗೂ ಆರನೇ ಮನೆಯಲ್ಲಿ ಕೇತು ಇರುತ್ತಾರೆ. 12ನೇ ಮನೆಯ ರಾಹು ನಿಮಗೆ ಅನುಕೂಲಕರವಾಗಿಲ್ಲದಿದ್ದರೂ 6ನೇ ಮನೆಯಲ್ಲಿರುವ ಕೇತು ಅಧಿಕ ಧನ ಲಾಭ ಮತ್ತು ಶಕ್ತಿಯನ್ನು ಕೊಡುತ್ತಾನೆ. ನಿಮ್ಮ ಯಾವುದೇ ಕೆಲಸಗಳಿಗೆ ಅಡೆತಡೆಗಳಿದ್ದರೂ ನಿವಾರಣೆ ಆಗುತ್ತವೆ. ಶುಕ್ರ ಐದನೇ ಮನೆಯಲ್ಲಿ ಇರುವುದರಿಂದ ಬಂಧುಗಳಿಂದ ಉಪಕಾರ ಸಹಕಾರ ಇದೆ. ಇವೆಲ್ಲಕ್ಕೂ ಮಿಗಿಲಾಗಿ ನಿಮಗೆ ಶನಿ ಹನ್ನೊಂದನೇ ಮನೆಯಲ್ಲಿ ಇರುವುದು ಬಹಳ ಲಾಭಗಳನ್ನು ಕೊಡುತ್ತದೆ. ಧನಲಾಭ, ಶತ್ರುಧ್ವಂಸ, ಕಾರ್ಯಸಫಲತೆ, ವೃತ್ತಿಯಲ್ಲಿ ಯಶಸ್ಸು , ಕುಟುಂಬ ಸೌಖ್ಯ ಮೊದಲಾದ ಶನಿಯ ಲಾಭಸ್ಥಾನ ಸ್ಥಿತಿಯಿಂದ ದೊರೆಯುತ್ತದೆ. ಆದರೆ ಗುರು ನಿಮ್ಮ ರಾಶಿಯಲ್ಲೇ ಇದ್ದಾನೆ. ಖರ್ಚುಗಳು ಹೆಚ್ಚಾಗುತ್ತವೆ. ಹೊಸ ಕಾರ್ಯಗಳಿಗೆ ಅಡೆತಡೆ ಉಂಟಾಗಬಹುದು. ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಲು ಇದು ಸೂಕ್ತ ಸಮಯವಲ್ಲ. ಕೆಲವು ದಿನಗಳು ಕಾಯಬೇಕು. ಈಗ ನಿಮಗೆ ಇನ್ನೂ ಒಂದೂವರೆ ವರ್ಷಕಾಲ ಕೇತುವಿನ ಬಲ ಇದೆ. ರಾಹು ನಿಮ್ಮ ರಾಶಿಯಿಂದ ಮೀನಕ್ಕೆ ಪ್ರವೇಶವಾಗಿರುವುದು ನಿಮಗೆ ಬಹಳ ರಿಲೀಫ್ ಸಿಗುತ್ತದೆ. ಆರೋಗ್ಯ ಸುಧಾರಿಸುತ್ತದೆ.

ವೃಷಭ ರಾಶಿ:

ವೃಷಭ ರಾಶಿ:

ನಿಮಗೆ ಈ ತಿಂಗಳಿನಿಂದ ಬಹಳ ಪರಿವರ್ತನೆ ಆಗಲಿದೆ. ರಾಹು ಒಂದೂವರೆ ವರ್ಷದಿಂದ ನಿಮಗೆ 12ನೇ ಮನೆಯಾದ ವ್ಯಯಸ್ಥಾನದಲ್ಲಿ ಇದ್ದು ಖರ್ಚುಗಳನ್ನು ಹೆಚ್ಚಿಸಿದ್ದ. ಈಗ 11ನೇ ಮನೆಗೆ ಪ್ರವೇಶಿಸಿ ಧನಲಾಭವನ್ನು ಕೊಡಿಸುತ್ತಾನೆ. ಶತ್ರುಗಳ ನಿವಾರಣೆ ಮಾಡುತ್ತಾನೆ. ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತಾನೆ. ನಾಲ್ಕನೇ ಮನೆಯಲ್ಲಿ ಶುಕ್ರ ನಿಮಗೆ ಮತ್ತುಷ್ಟು ಶುಭಫಲಗಳನ್ನು ಕೊಡುತ್ತಾನೆ. ವಾಹನದಿಂದ ಲಾಭ ಇದೆ. ಗೃಹ ಖರೀದಿ ಯೋಗ ಇದೆ. ಸಾಲಗಳನ್ನು ತೀರಿಸುತ್ತೀರಿ. ವ್ಯವಹಾರದಲ್ಲಿ ಲಾಭ ಇದೆ. ಐದನೇ ಮನೆೆಯಲ್ಲಿ ಬುಧ ಉಚ್ಛಸ್ಥಾನದಲ್ಲಿ ಇದ್ದು ವಿದ್ಯಾರ್ಥಿಗಳಿಗೆ ಶುಭ ಫಲಗಳನ್ನು ಕೊಡುತ್ತಾನೆ. 18ರ ನಂತರ ಸೂರ್ಯ ಹಾಗೂ ಬುಧ ಪ್ರವೇಶವಾಗುವುದು ಕೂಡ ನಿಮಗೆ ಲಾಭವನ್ನೇ ತಂದುಕೊಡುತ್ತದೆ. ವೃತ್ತಿಯಲ್ಲಿ ಇರುವ ಅಡ್ಡಿ ಆತಂಕಗಳು ನಿವಾರಣೆ ಆಗುತ್ತದೆ. ಸಂಬಳ ಹೆಚ್ಚಾಗುವುದು, ಬಡ್ತಿ ಮುಂತಾದ ಶುಭ-ಫಲಗಳು ಇವೆ. ಬಡ್ತಿಗೆ ಇದ್ದ ಅಡ್ಡಿಗಳು ದೂರವಾಗಿ ದಾರಿ ಸುಗಮವಾಗುತ್ತದೆ. ಸರ್ಕಾರದಿಂದ ಲಾಭ ಇದೆ. ಭೂಮಿ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಶುಭಫಲಗಳು ದೊರೆಯುತ್ತದೆ. ಅನಾವಶ್ಯಕ ಖರ್ಚುಗಳು ಕಡಿಮೆ ಆಗುತ್ತದೆ. ಶುಭಕಾರ್ಯಕ್ಕೆ ಖರ್ಚು ಮಾಡುತ್ತೀರಿ. ರಾಹುವಿನ ಪ್ರಭಾವದಿಂದ ಈ ಹಿಂದೆಯಿಂದಲೂ ಬಾಕಿಯಾಗಿದ್ದ ಹಣ ವಸೂಲಾಗುತ್ತದೆ.

ಮಿಥುನ ರಾಶಿ:

ಮಿಥುನ ರಾಶಿ:

ಈ ರಾಶಿಯವರಿಗೆ ರಾಹುವಿನ ಮೀನರಾಶಿಯ ಪ್ರವೇಶ ಹತ್ತನೇ ಮನೆಗೆ ಅಷ್ಟೊಂದು ಲಾಭದಾಯಕವಾಗಿಲ್ಲ. ಆದರೆ ನಿಮಗೆ ಗುರು ಬಲ ಈಗ ಸಂಪೂರ್ಣವಾಗಿ ದೊರೆಯುತ್ತದೆ. ಇಷ್ಟು ದಿನ ಗುರು-ರಾಹು ಯುತಿ ಯೋಗದಲ್ಲಿ ಇದ್ದುದರಿಂದ ಗುರುವಿನ ಅನುಗ್ರಹ ಕಡಿಮೆ ಇತ್ತು. ಈಗ ಅಕ್ಟೋಬರ್ ನಂತರ ಸಂಪೂರ್ಣ ಗುರು ಬಲ ಸಿಗಲಿದ್ದು ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ವೃತ್ತಿಯಲ್ಲಿ ಬಹಳ ಒಳ್ಳೆಯ ಬದಲಾವಣೆ ಇದೆ. ಶುಕ್ರನ ಮೂರನೇ ಮನೆಯ ಪ್ರವೇಶ ಸಹ ನಿಮಗೆ ಸೌಖ್ಯ,ಲಾಭವನ್ನು ಕೊಡುತ್ತದೆ. ನಾಲ್ಕನೇ ಮನೆಗೆ ಬುಧನ ಪ್ರವೇಶ 18 ದಿನಗಳ ಕಾಲ ನಿಮಗೆ ಜ್ಞಾನಾರ್ಜನೆಗೆ ಸಹಾಯ ಮಾಡುತ್ತದೆ. ಒಳ್ಳೆಯ ವ್ಯಕ್ತಿಗಳ ಸ್ನೇಹ ದೊರೆತು ನಿಮಗೆ ಸತ್ಸಂಗ ಲಭಿಸುತ್ತದೆ. ಮನಸ್ಸಿಗೆ ಶಾಂತಿ ಸಮಾಧಾನ ದೊರೆಯುತ್ತದೆ. ರಾಹುವಿನ ಹತ್ತನೇ ಮನೆಯ ಪ್ರವೇಶ ಹಾಗೂ ಕೇತುವಿನ ನಾಲ್ಕನೇ ಮನೆಯ ಪ್ರವೇಶ ನಿಮಗೆ ಅಷ್ಟೊಂದು ಸೌಖ್ಯವಲ್ಲ. ತಾಯಿಯ ಆರೋಗ್ಯಕ್ಕೆ ಹಾನಿ ಇದೆ. ಎಚ್ಚರಿಕೆ ಇರಲಿ. ನಿಮಗೂ ಶ್ರಮ ಹೆಚ್ಚಾಗುತ್ತದೆ. ಲಾಭವೂ ಇಲ್ಲ ನಷ್ಟವೂ ಇಲ್ಲ. ದೇವಿ ಪೂಜೆ ಮಾಡಿ.

ಕಟಕ ರಾಶಿ:

ಕಟಕ ರಾಶಿ:

ನಿಮಗೆ ಈಗ ಗುರು ಮತ್ತು ಶನಿ ಬಲ ಇಲ್ಲ. ಆದೆ ಅಕ್ಟೋಬರ್ ನಂತರ ಕೇತು ಮೂರನೇ ಮನೆ ಕನ್ಯಾರಾಶಿಗೆ ಪ್ರವೇಶಿಸಿದಾಗ ಒಂದೂವರೆ ವರ್ಷಗಳ ಕಾಲ ನಿಮಗೆ ಬೆಂಬಲವಾಗಿ ನಿಲ್ಲುತ್ತಾನೆ. ಕೇತು ಮೂರನೇ ಮನೆಯಲ್ಲಿ ಬಲಶಾಲಿಯಾಗಿರುವುದರಿಂದ ನಿಮಗೆ ದೈಹಿಕ ಚೈತನ್ಯ, ಧನ ಲಾಭವನ್ನು ಕೊಡುತ್ತಾನೆ. ಶತ್ರುಗಳ ನಿವಾರಣೆ ಮಾಡುತ್ತಾನೆ. ಆದರೆ 9ನೇ ಮನೆಯ ರಾಹು ಅಷ್ಟು ಶುಭಕರವಾಗಿಲ್ಲ. ತಂದೆಯ ಆರೋಗ್ಯಕ್ಕೆ ಹಾನಿ ಇದೆ. ಗುರುಬಲ ಇಲ್ಲದೇ ಇರುವುದರಿಂದ ನೀವು ನಂಬುವ ಗುರುವಿನ ದರ್ಶನ ಮಾಡಿ ಆಶಿರ್ವಾದ ಪಡೆದುಕೊಳ್ಳಿ. ದಿನವೂ ಗುರು ಮಂತ್ರ ಜಪಿಸಿ. ಅಷ್ಟಮ ಶನಿಯ ಪ್ರಭಾವ ಇದೆ. ಇದು ನಿಮ್ಮನ್ನು ವಿಚಲಿತಗೊಳಿಸುತ್ತದೆ. ಮನಸ್ಸಿನ ನೆಮ್ಮದಿಯನ್ನು ಕಸಿಯುತ್ತದೆ. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೇತುವಿನ ಮೂರನೇ ಮನೆಯ ಪ್ರವೇಶ ನಿಮಗೆ ಅಲ್ಪ ಲಾಭವನ್ನಷ್ಟೇ ಕೊಡಬಹುದೇ ವಿನಾ ಪೂರ್ಣ ಪ್ರಮಾಣದ ಶುಭ ಫಲಗಳಿಗಾಗಿ ಕಾಯಬೇಕಾಗಿದೆ. ನಿಮ್ಮ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಿ. ಸತ್ಯವನ್ನು ಬಿಡಬೇಡಿ. ಮನೆದೇವರ ಪ್ರಾರ್ಥನೆ ಮಾಡಿ. ಸತ್ಯವಂತರಿಗೆ ದೇವರ ರಕ್ಷೆ ಸದಾ ಇರುತ್ತದೆ. ಆರೋಗ್ಯ ಜಾಗ್ರತೆ. ವಿಷಪೂರಿತ ವಸ್ತುಗಳಿಂದ ದೂರವಿರಿ. ಊಹಾಪೋಹಗಳಿಂದ ದೂರವಿರಿ. ಕೆಟ್ಟಹೆಸರು ಬರದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಿ. ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ಅಪಕರಿಸುವಂತೆ ಆಗುತ್ತದೆ. ಮುಂದೆ ಒಳ್ಳೆಯಕಾಲ ಖಂಡಿತಾ ಇದೆ. ತಾಳ್ಮೆ ಇರಲಿ.

ಸಿಂಹ ರಾಶಿ:

ಸಿಂಹ ರಾಶಿ:

ಒಂದನೇ ತಾರೀಖಿನಂದು ನಿಮ್ಮ ರಾಶಿಗೆ ಶುಕ್ರನ ಪ್ರವೇಶವಾಗಲಿದೆ. ಇದರಿಂದ ನಿಮ್ಮ ದೇಹಕ್ಕೆ ಆರಾಮ ಸಿಗಲಿದೆ. ಉಷ್ಣ ಪ್ರಕೋಪದ ಸಮಸ್ಯೆ ಇದ್ದರೆ ನಿಯಂತ್ರಣಕ್ಕೆ ಬರುತ್ತದೆ. ಎರಡನೇ ಮನೆಯಲ್ಲಿರುವ ಬುಧ ನಿಮಗೆ ಶುಭಫಲಗಳನ್ನು ಕೊಡುತ್ತಾನೆ. ಒಂಬತ್ತರ ಗುರು ನಿಮಗೆ ಈ ವರ್ಷಪೂರ್ತಿ ಬೆಂಬಲವಾಗಿ ಇದ್ದು ಎಲ್ಲಾರೀತಿಯ ಸಹಕಾರ ರಕ್ಷೆಯನ್ನು ಕೊಡುತ್ತಾನೆ. ಈ ತಿಂಗಳ 20ರ ನಂತರ ಕೇತುವಿನ ಎರಡನೇ ಮನೆ ಹಾಗೂ ರಾಹುವಿನ ಎಂಟನೇ ಮನೆ ಪ್ರವೇಶ ನಿಮಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಹೆಜ್ಜೆ ಹೆಜ್ಜೆಗೂ ಜಾಗ್ರತೆ ವಹಿಸಬೇಕು. ಕೌಟುಂಬಿಕ ಸೌಖ್ಯಕ್ಕೆ ಧಕ್ಕೆ ಒದಗುತ್ತದೆ. ಮನೆಯಲ್ಲಿ ಅನಗತ್ಯ ಚರ್ಚೆ ವಾದ-ವಿವಾದಗಳು ನಡೆದು ಮನಸ್ಸಿನ ಶಾಂತಿಗೆ ಭಂಗ ಉಂಟಾಗಬಹುದು. ಸಂಗಾತಿಯೊಡನೆ ವೈಮನಸ್ಸು ಉಂಟಾಗಬಹುದು. ಎಂಟನೇ ಮನೆಯ ರಾಹುವಿನಿಂದ ಆರೋಗ್ಯಕ್ಕೆ ತೊಂದರೆ ಇದೆ. ವಿಷಮ ವಸ್ತುಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹೊರಗಡೆ ಆಹಾರ ಸೇವಿಸುವಾಗ ಜಾಗ್ರತೆ ವಹಿಸಿ. ನಿಗೂಢ ಸಂಗತಿಗಳಿಂದ ಅಪಾಯ ಇದೆ. ಒಂಬತ್ತ ಗುರು ರಕ್ಷಣೆ ಮಾಡುತ್ತಾನೆ ಆದರೂ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಬೇಕು. ದೇವರ ಧರ್ಮ ಕಾರ್ಯಗಳಲ್ಲಿ ಕೈಜೋಡಿಸುತ್ತೀರಿ. ಪುಣ್ಯದ ಕೆಲಸಗಳನ್ನು ಮಾಡುತ್ತೀರಿ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಅರ್ಹರಿಗೆ ಹೊಸ ಕೆಲಸ ಬಡ್ತಿ ಸಿಗುವ ಯೋಗವಿದೆ.

ಕನ್ಯಾ ರಾಶಿ:

ಕನ್ಯಾ ರಾಶಿ:

ನಿಮಗೆ ಈಗ ಗುರು ಬಲ ಇಲ್ಲ, ಆದರೆ ಶನಿ ಬಲ ಇದೆ. ಇದು ನಿಮಗೆ ಧನ ಲಾಭ ಕಾರ್ಯ ಸಫಲತೆ ಮಾಡಿಕೊಡುತ್ತದೆ. 12ನೇ ಮನೆಯಲ್ಲಿ ಶುಕ್ರನ ಪ್ರವೇಶ ನಿಮಗೆ ಲಾಭವನ್ನೇ ಕೊಡುತ್ತದೆ. ಸುಖಭೋಜನ, ಸುಖನಿದ್ರೆ, ವಿಹಾರ, ಮನಸ್ಸಿಗೆ ಖುಷಿಕೊಡುವ ಸಂಗತಿಗಳನ್ನು ಶುಕ್ರನಿಂದ ಪಡೆಯುತ್ತೀರಿ. ಹಾಗೆಯೇ ಐಷಾರಾಮಿ ವಸ್ತುಗಳ ಖರೀದಿ ನಿಮಗೆ ಖರ್ಚನ್ನೂ ಮಾಡುತ್ತೀರಿ. ನಿಮ್ಮ ರಾಶಿಯಲ್ಲೇ ಬುಧ ಸೂರ್ಯ ಇರುವುದು ನಿಮಗೆ ಪ್ರಯಾಣವನ್ನು ತೋರಿಸುತ್ತಿದೆ. ವೃತ್ತಿ ಸಂಬಂಧವಾಗಿ ಪ್ರಯಾಣ ಏರ್ಪಡಬಹುದು. ನಿಮ್ಮ ರಾಶಿಯಲ್ಲಿರುವ ಇರುವ ಸೂರ್ಯ ಕೊಂಚ ಉಷ್ಣ ಪ್ರಕೋಪವನ್ನು ತೋರಿಸುತ್ತಾನೆ. ಈ ತಿಂಗಳ 20ರಂದು ನಿಮ್ಮ ರಾಶಿಗೆ ಕೇತುವಿನ ಪ್ರವೇಶ ಹಾಗೂ ಏಳನೇ ಮನೆಗೆ ರಾಹುವಿನ ಪ್ರವೇಶ ನಿಮ್ಮನ್ನು ಕೊಂಚ ಇಕ್ಕಟ್ಟಿಗೆ ಸಿಕ್ಕಿಸಲಿದೆ. ಕೇತು ಸಹ ಅನಾರೋಗ್ಯ ಸೂಚಿಸುತ್ತಾನೆ. ಮನಸ್ಸಿಗೆ ನಾನಾ ಬಗೆಯ ಹಿಂಸೆಗಳು ಕಷ್ಟಗಳು ಇರುತ್ತದೆ. ಏಳನೇ ಮನೆಯ ರಾಹು ಸಂಗಾತಿಯೊಂದಿಗೆ ಘರ್ಷಣೆ ಆಗುವಂತೆ ಮಾಡಬಹುದು. ಈಗ ಗುರು ಬಲವೂ ಇಲ್ಲದೇ ಇರುವುದರಿಂದ ನೀವು ಆದಷ್ಟು ಮೌನವಾಗಿ ಯಾವುದೇ ವಿವಾದ ಮಾಡಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಇರುತ್ತದೆ. ಗುರು ಸೇವೆ ಮಾಡಿ. ಗುರುಗಳ ದರ್ಶನ ಮಾಡಿ.

ತುಲಾ ರಾಶಿ:

ತುಲಾ ರಾಶಿ:

ಈಗ ನಿಮಗೆ ಸಂಪೂರ್ಣ ಗುರು ಬಲ ಇರುವುದರಿಂದ ಎಲ್ಲ ಕೆಲಸಗಳು ಸುಲಲಿತವಾಗಿ ನಡೆಯುತ್ತವೆ. ಕುಟುಂಬದಲ್ಲಿ ಇದ್ದ ಸಮಸ್ಯೆಗಳಿಗೆ ಪರಿಹಾರ ಕಾಣಿಸುತ್ತದೆ. ಸಮಸ್ಯೆಗಳು ಕಡಿಮೆಯಾಗುತ್ತದೆ. ಈ ತಿಂಗಳ 20ಕ್ಕೆ ರಾಹು ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶಿಸುತ್ತಾನೆ. ಇದು ನಿಮಗೆ ಬಹಳ ಶುಭ ಫಲಗಳನ್ನು ನೀಡುತ್ತದೆ. ಆರನೇ ಮನೆಯ ರಾಹು ನಿಮಗೆ ಶಕ್ತಿ ಮತ್ತು ಛಲವನ್ನು ಕೊಡುತ್ತಾನೆ. ಅಧಿಕ ಧನ ಲಾಭ ಮಾಡಿಸುತ್ತಾನೆ. ಯಾವುದೇ ಅಡ್ಡಿ-ಅಂತಕಗಳಿದ್ದರೂ ಪರಿಹಾರ ಮಾಡುತ್ತಾನೆ. 12ನೇ ಮನೆಗೆ ಪ್ರವೇಶವಾಗುವ ಕೇತು ಆಧ್ಯಾತ್ಮದತ್ತ ಮನಸ್ಸು ಜಾರುವಂತೆ ಮಾಡುತ್ತಾನೆ. ಸತ್ಸಂಗ ಪ್ರವಚನಗಳಲ್ಲಿ ಭಾಗವಹಿಸುತ್ತಿರಿ. ಪಂಚಮ ಶನಿಯ ಕಿರಿಕಿರಿ ಇದ್ದರೂ ಗುರುಬಲ ಇರುವುದರಿಂದ ಅವೆಲ್ಲ ಹೆಚ್ಚು ಪ್ರಕೋಪಕ್ಕೆ ಹೋಗುವುದಿಲ್ಲ. ಸಂಗಾತಿಯಿಂದ ಕೆಲವು ಕಾಲ ದೂರ ಇರಬೇಕಾಗಬಹುದು. ಸಂಗಾತಿಗೆ ಅಥವಾ ನಿಮಗೆ ವೃತ್ತಿಯಲ್ಲಿ ವರ್ಗಾವಣೆ ಅಥವಾ ವಿದೇಶಕ್ಕೆ ಹೋಗುವ ಅವಕಾಶ ಬರಬಹುದು. ಹನ್ನೊಂದನೇ ಮನೆಯ ಶುಕ್ರನಿಂದ ಐಷಾರಾಮಿ ಜೀವನದತ್ತ ಆಸಕ್ತಿ ಇರುತ್ತದೆ. ಅಲಂಕಾರದ ವಸ್ತುಗಳನ್ನು ಕೊಳ್ಳುವುದು, ಸುಖಭೋಜನ, ವಿಹಾರ, ಮನಸ್ಸಿಗೆ ಮುದ ಕೆಲಸಗಳನ್ನು ಮಾಡುವುದು ಮುಂತಾದ ಸಂತೋಷಕರ ವಿಚಾರಗಳು ಇವೆ. ಹಣದ ಹರಿವು ಉತ್ತಮವಾಗಿದೆ. ವೃತ್ತಿಯಲ್ಲಿ ಬಡ್ತಿ, ಪ್ರಶಂಸೆ ಸಿಗಲಿದೆ. ಮನಸ್ಸಿಗೆ ನೆಮ್ಮದಿ ಸಿಗುವ ಕಾಲ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ನಿಮಗೆ ಈಗ ಗುರು ಬಲ ಮತ್ತು ಶನಿ ಬಲ ಇಲ್ಲ. ಆದರೂ ಭಯ ಬೇಡ. ಶನಿಯ ಸಾಡೆಸಾತಿಯ ಪ್ರಭಾವದಿಂದ ಹೊರಗೆ ಬಂದಿದ್ದೀರಿ. ಹೀಗಾಗಿ ತೊಂದರೆಗಳು ಕಡಿಮೆ ಆದರೂ ಒತ್ತಡಗಳು ಇವೆ. ಆರನೇ ಮನೆಯ ಗುರು ಒತ್ತಡವನ್ನು ಕೊಡುತ್ತಾನೆ. ಈ ತಿಂಗಳ ಕೊನೆಗೆ ಐದನೇ ಮನೆಗೆ ರಾಹು ಪ್ರವೇಶದಿಂದ ಸಂತಾನಕ್ಕೆ ಧಕ್ಕೆ ಇದೆ. ಸಂತಾನಫಲ ಅಪೇಕ್ಷಿಸುವವರಿಗೆ ಹಿನ್ನಡೆ ಇದೆ. ಕೊಂಚ ಕಾಯಬೇಕು. ಹನ್ನೊಂದನೇ ಮನೆಯ ಕೇತು ಒಬ್ಬನೇ ಈಗ ನಿಮಗೆ ಆಧಾರ. ಧನ ಲಾಭ ಹಾಗೂ ಹಿಡಿದ ಕೆಲಸವನ್ನು ಬಿಡದಂತೆ ಮಾಡಿಮುಗಿಸುವ ಛಲ ಕೊಡುತ್ತಾನೆ. ಹತ್ತನೇ ಮನೆಯಲ್ಲಿ ಶುಕ್ರ ವೃತ್ತಿಯಲ್ಲಿ ನೆಮ್ಮದಿ ಕಾಪಾಡುತ್ತಾನೆ. ಏರಿಳಿತವಿಲ್ಲದ ವೃತ್ತಿಜೀವನ ಇರುತ್ತದೆ. ಐದನೇ ಮನೆಯ ರಾಹು ಮಗನ ಜೊತೆ ಬಾಂಧವ್ಯಕ್ಕೆ ಕೊಂಚ ಧಕ್ಕೆ ತರುತ್ತಾನೆ. ಪೂರ್ವ ಪುಣ್ಯದ ಸ್ಥಾನಕ್ಕೆ ರಾಹು ಪ್ರವೇಶ ಮಾಡುವುದರಿಂದ ನಿಮ್ಮ ಪುಣ್ಯಕ್ಕೆ ಕಪ್ಪುಛಾಯೆ ಬೀಳಿದೆ. ಇದರಿಂದ ವೈಯುಕ್ತಿಕವಾಗಿ ಕೆಲವು ನಷ್ಟಗಳಾಗಬಹುದು. ವಿದ್ಯಾರ್ಥಿಗಳಿಗೂ ಹಿನ್ನಡೆ ಇದೆ. ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಉನ್ನತ ವ್ಯಾಸಂಗಕ್ಕೆ ಅಡ್ಡಿ ಆತಂಕಗಳು ಎದುರಾಗಬಹುದು. ಹನ್ನೊಂದನೇ ಮನೆಯಲ್ಲಿ ಬುಧ ಇರುವುದು ಕೂಡ ನಿಮಗೆ ಧನಲಾಭವನ್ನೇ ಸೂಚಿಸುತ್ತದೆ. ಒಟ್ಟಾರೆ ನಿಮಗೆ ಈ ಮಾಸ ಮಿಶ್ರಫಲ. ಗುರು-ರಾಹು ವ್ಯತಿರಿಕ್ತ ಸ್ಥಾನದಲ್ಲಿ ಇರುವುದರಿಂದ ಆರೋಗ್ಯ ಹಾಗೂ ಸಾಮಾಜಿಕ ಗೌರವಕ್ಕೆ ಕೊಂಚ ತೊಂದರೆ ಇದೆ. ಮನೆದೇವರ ದರ್ಶನ ಮಾಡಿ. ಕಾಳ ಹಸ್ತಿಯ ದರ್ಶನ ಮಾಡಿಬನ್ನಿ.

ಧನಸ್ಸು ರಾಶಿ:

ಧನಸ್ಸು ರಾಶಿ:

ಈಗ ನಿಮಗೆ ಸಂಪೂರ್ಣ ಗುರು ಹಾಗೂ ಶನಿ ಬಲ ಇದೆ. ಗುರು ರಾಹು ಒಟ್ಟಿಗೆ ಐದನೇ ಮನೆಯಲ್ಲಿ ಇದ್ದು ರಾಹು ಈ ತಿಂಗಳ ನಂತರ ಮೀನ ರಾಶಿಗೆ ಪ್ರವೇಶವಾಗುತ್ತಾನೆ. ಆಗ ನಿಮಗೆ ಗುರು ಬಲ ಸಂಪೂರ್ಣವಾಗಿ ಸಿಗುತ್ತದೆ. ಮಕ್ಕಳೊಂದಿಗೆ ಇರುವ ವೈಮನಸ್ಸು ಕಡಿಮೆಯಾಗುತ್ತದೆ. ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ. ಆದರೆ ನಾಲ್ಕನೇ ಮನೆಯ ರಾಹುವಿನಿಂದ ಸುಖ ಜೀವನಕ್ಕೆ ಅಡ್ಡಿ ಬರುತ್ತದೆ. ಜೀವನದಲ್ಲಿ ಕೊಂಚ ಕಿರಿಕಿರಿ ಎದುರಾಗಿ ಮಾನಸಿಕ ಶಾಂತಿ ಕದಡುತ್ತದೆ. ಹತ್ತನೇ ಮನೆಯಲ್ಲಿರುವ ಕೇತು ವೃತ್ತಿಯಲ್ಲಿನ ಯಶಸ್ಸನ್ನು ಕುಂಠಿತಗೊಳಿಸುತ್ತಾನೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯಲು ಕಷ್ಟವಾಗುತ್ತದೆ. 1ನೇ ತಾರೀಕಿನ ನಂತರ ಶುಕ್ರ ಒಂಬತ್ತನೇ ಮನೆಗೆ ಹಾಗೂ ಬುಧ ಹತ್ತನೇ ಮನೆಗೆ ಪ್ರವೇಶಿಸುತ್ತಾರೆ. ಶುಕ್ರನಿಂದ ಧನಲಾಭ, ವಸ್ತ್ರಾಭರಣ ಲಾಭ ಇದೆ. ಹತ್ತರ ಬುಧ ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿಗಳನ್ನು ಸರಿಪಡಿಸುತ್ತಾನೆ. ಮೂರರ ಶನಿ ಧನ ಲಾಭ ಕಾರ್ಯ ಸಫಲತೆ ಒದಗಿದಸಿಕೊಡುತ್ತಾನೆ. ಹಣದ ಹರಿವು ಬಹಳ ಉತ್ತಮವಾಗಿದೆ. ನಿಮಗೆ ಬೇಕಾದ್ದಕ್ಕೆ ಹಣ ಖರ್ಚು ಮಾಡಲು ಸರಾಗವಾಗಿ ಹಣ ಹರಿದು ಬರುತ್ತದೆ. ವಿದೇಶಕ್ಕೆ ಹೋಗಬೇಕೆಂದು ಯೋಜನೆ ಮಾಡಿಕೊಂಡಿರುವವರು ಆದಷ್ಟು ಬೇಗನೆ ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ. ಒಟ್ಟಾರೆಯಾಗಿ ಈ ತಿಂಗಳು ನಿಮಗೆ ಶುಭಫಲಗಳೇ ಹೆಚ್ಚು ಸಿಗುತ್ತವೆ.

ಮಕರ ರಾಶಿ:

ಮಕರ ರಾಶಿ:

ಈಗ ನಿಮಗೆ ಯಾವುದೇ ಗ್ರಹ ಬಲ ಇಲ್ಲದಿದ್ದರೂ ರಾಹು ಈ ತಿಂಗಳ ಕೊನೆಯಲ್ಲಿ ಮೂರನೇ ಮನೆಗೆ ಪ್ರವೇಶಿಸುತ್ತಾನೆ. ಇದು ನಿಮಗೆ ಅನೇಕ ಶುಭ ಫಲಗಳನ್ನು ನೀಡುತ್ತದೆ. ಯಾವುದಾದರೂ ಹೊಸ ಯೋಜನೆ ಅಥವಾ ಕೆಲಸಕ್ಕೆ ಪ್ರಯತ್ನ ಪಡುತ್ತಿರುವವರಿಗೆ ಶುಭ ಸುದ್ದಿ ಇದೆ. ಪರಾಕ್ರಮದಿಂದ ನಿಮ್ಮ ಯೋಜನೆ ಸಿದ್ಧಿಸುತ್ತದೆ. ಹೊಸ ಕೆಲಸ ಸಿಗುವ ಯೋಗ ಇದೆ. ಯಾವುದಾದರೂ ಒಂದು ಮೂಲದಿಂದ ಧನ ಸಹಾಯವಾಗುತ್ತದೆ. ಈಗ ಒಂಬತ್ತನೆಯ ಮನೆಯ ಸೂರ್ಯ ಹಾಗೂ ಕುಜ ನಿಮಗೆ ಕೊಂಚ ನಷ್ಟವನ್ನುಂಟು ಮಾಡುತ್ತಾರೆ. ಮಾನಸಿಕ ಕಿರಿಕಿರಿ ಇರುತ್ತದೆ. ಕುಟುಂಬದಲ್ಲಿ ಮನಸ್ತಾಪ ಇರುತ್ತದೆ. ಇವೆಲ್ಲವೂ ಇನ್ನು ಕೆಲವೇ ದಿನಗಳು ರಾಹುವಿನ ಶಕ್ತಿ ಬಂದಾಗ ನಿಮಗೆ ಬಹಳಷ್ಟು ಸಮಸ್ಯೆಗಳು ಪರಿಹಾರ ಆಗುತ್ತದೆ. ಮುಂದೆ ಕೆಲವೇ ತಿಂಗಳಲ್ಲಿ ಗುರು ಬಲವೂ ಸಿಕ್ಕಾಗ ನಿಮಗೆ ಭಾಗ್ಯದ ಬಾಗಿಲು ತೆರೆಯುತ್ತದೆ. ಈ ತಿಂಗಳಿನಿಂದ ನಿಮ್ಮ ಸಮಸ್ಯೆಗಳು ಹಂತಹಂತವಾಗಿ ಕಡಿಮೆಯಾಗಲಿವೆ. ಸಾಲ ತೀರಿಸಲು ಅವಕಾಶಗಳು ಒದಗಿ ಬರುತ್ತದೆ. ಉತ್ತಮ ಜೀವನಕ್ಕಾಗಿ ಹಲವಾರು ಅವಕಾಶಗಳು ಬಾಗಿಲು ತೆರೆದುಕೊಳ್ಳುತ್ತದೆ. ನಿರ್ಧಾರ ನಿಮ್ಮದು. ಯೋಚಿಸಿ ನಿರ್ಧರಿಸಿ. ಗುರುಬಲ ಬಂದ ಮೇಲೆ ನಿಮಗೆ ಅನುಕೂಲ ಹೆಚ್ಚು ಇರುತ್ತದೆ. ಈಗ ರಾಹು ಬಲ ಮಾತ್ರವೇ ಆದ್ದರಿಂದ ಬಂದ ಅವಕಾಶವನ್ನು ಬಿಡದೆ ಉಪಯೋಗಿಸಿಕೊಳ್ಳಿ. ಆಯ್ಕೆಗಳಿಗಾಗಿ ಕಾಯಬೇಡಿ. ಮುಂದೆ ಖಂಡಿತಾ ಒಳ್ಳೆಯ ದಿನಗಳು ಇವೆ.

ಕುಂಭ ರಾಶಿ:

ಕುಂಭ ರಾಶಿ:

ಈಗ ನಿಮಗೆ ಯಾವ ಗ್ರಹ ಬಲವೂ ಇಲ್ಲ. ಮೂರನೇ ಮನೆಯಲ್ಲಿರುವ ಗುರು ಅರ್ಧ ಬಲವನ್ನಷ್ಟೇ ಕೊಡುತ್ತಾನೆ. ಶನಿಯು ನಿಮ್ಮ ರಾಶೀಯಲ್ಲೇ ಇದ್ದಾನೆ. ಇದು ನಿಮಗೆ ಕಾಲಿಗೆ ಸರಪಣಿ ಹಾಕಿದಂತೆ. ಮುಂದೆ ಹೋಗಲು ಅನಗತ್ಯವಾದ ತಡೆಗಳನ್ನು ಒಡ್ಡುತ್ತದೆ. ಅನಾರೋಗ್ಯ ಕಾಡಿಸಲಿದೆ. ಈ ತಿಂಗಳ ಕೊನೆಯಲ್ಲಿ ರಾಹು ಕೇತುಗಳು ಮೀನ ಹಾಗೂ ಕನ್ಯಾರಾಶಿ ಪ್ರವೇಶದಿಂದ ಹೆಚ್ಚಿನ ಅನುಕೂಲಕರವಾಗಿಲ್ಲ. ಮನೆಯಲ್ಲಿ ವಾತಾವರಣ ಆಹ್ಲಾದಕರವಾಗಿ ಇರುವುದಿಲ್ಲ. ಮನೆಯ ಸದಸ್ಯರೊಡನೆ ಕೊಂಚ ಕಿರಿಕಿರಿ ಮನಸ್ತಾಪ ಇರುತ್ತದೆ. ನಿಮ್ಮ ಮುಖದ ಅಂದಕ್ಕೆ ಕೊಂಚ ಕುಂದು ಬರಬಹುದು. ಮೊಡಮೆ ಅಥವಾ ರಾಸಾಯನಿಕ ವಸ್ತುಗಳಿಂದ ಚರ್ಮಕ್ಕೆ ಹಾನಿ ಆಗಬಹುದು. ಅಲಂಕಾರಿಕ ವಸ್ತುಗಳನ್ನು ಉಪಯೋಗಿಸುವಾಗ ಎಚ್ಚರಿಕೆ ಇರಲಿ. ದೇಹಾಲಸ್ಯ ತೋರಲಿದೆ. ನೀವು ನಾಲ್ಕು ಹೆಜ್ಜೆ ಮುಂದಿಟ್ಟರೆ ಗ್ರಹಚಾರ ಎರಡು ಹೆಜ್ಜೆ ನಿಮ್ಮನ್ನು ಹಿಂದಕ್ಕೆ ಎಳೆಯುತ್ತದೆ. ಯಾವ ಮುಖ್ಯ ನಿರ್ಧಾರಗಳನ್ನು ಈಗ ತೆಗೆದುಕೊಳ್ಳುವುದು ಬೇಡ. ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುತ್ತೀರಿ. ನಿಮ್ಮ ದೈನಂದಿನ ಕೆಲಸ ಮಾಡಿಕೊಂಡು ಹೋಗಿ. ಸ್ತಿರಾಸ್ತಿ ಮತ್ತು ಚರಾಸ್ತಿಗಳ ಖರೀದಿ ಇದ್ದರೆ ಮುಂದಕ್ಕೆ ಹಾಕಿ. ರಾಜಕೀಯ ವ್ಯಕ್ತಿಗಳಿಗೂ ಹಿನ್ನಡೆ ಇದೆ. ಅನಗತ್ಯ ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳಬೇಡಿ. ಮಾತನಾಡುವಾಗ ಎಚ್ಚರಿಕೆ ಇರಲಿ. ಯಾರೊಂದಿಗೂ ಜಗಳ ವಾಗ್ವಾದ ಬೇಡ. ಮನೆ ದೇವರನ್ನು ಪ್ರಾರ್ಥನೆ ಮಾಡಿ.

ಮೀನ ರಾಶಿ:

ಮೀನ ರಾಶಿ:

ಈಗ ಶನಿ 12ನೇ ಮನೆಯಲ್ಲಿ ಇದ್ದು ಸಾಡೆಸಾತಿಯ ಪ್ರಭಾವ ಮೊದಲ ಹಂತದಲ್ಲಿದ್ದೆ. ಖರ್ಚುಗಳು ಅಧಿಕವಾಗುತ್ತದೆ. ಆದರೆ ಈಗ ಪ್ರಸ್ತುತವಾಗಿ ಹಣದ ಹರಿವೂ ಉತ್ತಮವಾಗಿದೆ. ಈ ತಿಂಗಳ ನಂತರ ರಾಹು ನಿಮ್ಮ ರಾಶಿಗೆ ಪ್ರವೇಶಿಸುತ್ತಾನೆ. ಕೇತು ಎಂಟನೇ ಮನೆಯಿಂದ ಏಳನೇ ಮನೆಗೆ ಬರುತ್ತಾನೆ. ಎಂಟನೇ ಮನೆಯ ಕೇತುವಿನ ಗಂಡಾಂತರ ಕಡಿಮೆಯಾದರೂ ನಿಮ್ಮ ರಾಶಿಯಲ್ಲೇ ರಾಹು ಮಾಡುವ ಉಪಟಳದಿಂದ ತಪ್ಪಿಸಿಕೊಳ್ಳಲಾಗದು. ಶತ್ರುಗಳ ಕಾಟ ಹೆಚ್ಚುತ್ತದೆ. ಯಾರ ಬಳಿಯು ನಿಮ್ಮ ರಹಸ್ಯಗಳನ್ನು ಹೇಳಿ ಕೊಳ್ಳಬೇಡಿ. ವ್ಯವಹಾರದಲ್ಲಿ ಯಾರನ್ನೂ ನಂಬಬೇಡಿ. ಹಿತ ಶತ್ರುಗಳು ಹೆಚ್ಚಾಗುತ್ತಾರೆ. ಜಾಗ್ರತೆಯಿಂದ ವ್ಯವಹರಿಸಿ. ಈ ತಿಂಗಳ ಫ್ರಾರಂಭದಲ್ಲಿ ಐದರಲ್ಲಿರುವ ಶುಕ್ರ ಮತ್ತು ಆರರಲ್ಲಿರುವ ಬುಧ ಶುಭ ಫಲಗಳನ್ನು ಕೊಡುತ್ತಾರೆ. ಏಳನೇ ಮನೆಯಲ್ಲಿ ಸೂರ್ಯ-ಕುಜ-ಬುಧ ಇರುವುದು ನಿಮಗೆ ಕೇಂದ್ರ ತ್ರಿಕೋಣಾಧಿಪತಿ ಯೋಗವಾಗಿ ಕೊಂಚ ಶುಭ ಫಲಗಳನ್ನು ನಿರೀಕ್ಷಿಸಬಹುದು. ಒಟ್ಟಾರೆಯಾಗಿ ನಿಮಗೆ ಈ ಮಾಸದಲ್ಲಿ ಮಧ್ಯಮ ಫಲ. ಆದಷ್ಟು ವಿವಾದಗಳಿಗೆ ಸಿಲುಕಿಕೊಳ್ಳಬೇಡಿ. ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿ. ದೇವರ ಧ್ಯಾನ ಹೆಚ್ಚು ಮಾಡಿ. ದಾನ-ಧರ್ಮಗಳನ್ನು ಮಾಡಿ. ಕರಿ ಹಸುವಿಗೆ ಗೋಗ್ರಾಸ ನೀಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+