ಫೆಬ್ರವರಿಯಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ: ಈ ತಿಂಗಳು ಯಾರಿಗೆ ಶುಭ, ಯಾರಿಗೆ ಅಶುಭ
ಪುಷ್ಯಮಾಸದ ಕೃಷ್ಣ ಪಕ್ಷದ ಷಷ್ಠಿಯಿಂದ ಮಾಘಮಾಸದ ಶುಕ್ಲಪಕ್ಷದ ಪಂಚಮಿಯವರೆಗೆ.
ಈ ತಿಂಗಳಲ್ಲಿ ಚಂದ್ರ ಚಿತ್ತಾ ನಕ್ಷತ್ರದಿಂದ ಸ್ವಾತಿ ನಕ್ಷತ್ರದವರೆಗೆ ಸಂಚಾರ ಮಾಡುತ್ತಾನೆ.
ಈ ತಿಂಗಳ ವಿಶೇಷಗಳು
- 16/02/2024-ರಥಸಪ್ತಮಿ
- 18/02/2024-ಮಧ್ವನವಮಿ
- 13/02/2024-ಸೂರ್ಯ ಕುಂಭ ರಾಶಿಗೆ ಪ್ರವೇಶ
- 01/02/2024-ಬುಧ ಮಕರರಾಶಿಗೆ ಪ್ರವೇಶ
- 05/02/2024- ಕುಜ ಮಕರ ರಾಶಿಗೆ ಪ್ರವೇಶ
- 11/02/2024-ಶುಕ್ರ ಮಕರರಾಶಿಗೆ ಪ್ರವೇಶ
- 19/02/2024 ಕುಂಭರಾಶಿಗೆ ಬುಧನ ಪ್ರವೇಶ

ಮೇಷ ರಾಶಿಯ ಮಾಸ ಭವಿಷ್ಯ
ನಿಮಗೆ ಈ ತಿಂಗಳು ಉತ್ತಮ ಫಲಗಳು ಇವೆ. ಸದ್ಯದಲ್ಲೇ ನಿಮಗೆ ಗುರುಬಲ ಶುರುವಾಗುತ್ತದೆ. ಹಾಗೂ ಶನಿ ಈಗಾಗಲೇ ಲಾಭ ಸ್ಥಾನದಲ್ಲಿ ಇದ್ದು ಶುಭಫಲಗಳನ್ನು ಕೊಡುತ್ತಿದ್ದಾನೆ. ಧನಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರುಗಳ ನಿವಾರಣೆ, ವೃತ್ತಿಯಲ್ಲಿ ಯಶಸ್ಸು, ಕುಟುಂಬದಲ್ಲಿ ಹರ್ಷ ಉತ್ಸಾಹ ಇವೆಲ್ಲವನ್ನೂ ಈಗಾಗಲೇ ಅನುಭವಿಸುತ್ತಿದ್ದೀರಿ. ಇದಕ್ಕೆ ಕಲಶವಿಟ್ಟಂತೆ ಮುಂದಿನ ದಿನಗಳಲ್ಲಿ ಗುರುಬಲವೂ ಜೊತೆ ಸೇರಿ ಯಶಸ್ಸು ಸಂತೋಷ ಇನ್ನಷ್ಟು ಹೆಚ್ಚಾಗುತ್ತದೆ.
14ರ ನಂತರ ಸೂರ್ಯ ಕೂಡ ಲಾಭಸ್ಥಾನಕ್ಕೆ ಪ್ರವೇಶವಾಗಿ ನಿಮಗೆ ಇನ್ನೂ ಹೆಚ್ಚಿನ ಅದೃಷ್ಟ ಉಂಟಾಗಲಿದೆ. ಸರ್ಕಾರಿಂದ ಲಾಭ ಇದೆ. ಸರ್ಕಾರಿ ನೌಕರರಿಗೆ ಶುಭಫಲಗಳಿವೆ. ರಾಜಕೀಯ ನಾಯಕರಿಗೆ ದೊಡ್ಡ ಜವಾಬ್ದಾರಿಗಳು ಅಧಿಕಾರ ದೊರೆಯಲಿದೆ. ಮಾಸದ ಮಧ್ಯದಲ್ಲಿ ವೃತ್ತಿಸ್ಥಾನದಲ್ಲಿ ನಾಲ್ಕು ಗ್ರಹಗಳು ಸೇರಿ ವೃತ್ತಿಯಲ್ಲಿ ಮಹತ್ತರ ಬದಲಾವಣೆ ಆಗುತ್ತದೆ. ಅದು ನಿಮಗೆ ಯಶಸ್ಸನ್ನು ತಂದುಕೊಡುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರ ಇದ್ದು ನಿಮಗೆ ಸುಖ-ಸಂತೋಷಗಳನ್ನು ಹೆಚ್ಚು ಮಾಡುತ್ತಾನೆ. ಭಾಗ್ಯೋದಯವಾಗುತ್ತದೆ.

ವೃಷಭ ರಾಶಿಯ ಮಾಸ ಭವಿಷ್ಯ
ಈ ತಿಂಗಳು ನಿಮಗೆ ಒತ್ತಡ ಜವಾಬ್ದಾರಿ ಹೆಚ್ಚು. ಕುಟುಂಬದಲ್ಲಿ ಹಾಗೂ ವೃತ್ತಿಸ್ಥಾನದಲ್ಲಿ ಜವಾಬ್ದಾರಿ ಹೆಚ್ಚು ನಿಭಾಯಿಸ ಬೇಕಾಗುತ್ತದೆ. ಇದು ನಿಮಗೆ ಹೊರೆ ಎನಿಸಿದರೂ ಲಾಭ ಸ್ಥಾನದ ರಾಹು ನಿಮಗೆ ಶಕ್ತಿಯನ್ನೂ ಛಾತಿಯನ್ನೂ ಕೊಟ್ಟು ಎಲ್ಲವನ್ನೂ ನಿಭಾಯಿಸುವಂತೆ ಮಾಡುತ್ತಾನೆ. ನಿಮಗೆ ಒಳ್ಳೆಯ ಹೆಸರು ಗಳಿಸಲು ಈ ಜವಾಬ್ದಾರಿಗಳು ಸಹಾಯ ಮಾಡುತ್ತವೆ.
ಮಾಸದ ಮಧ್ಯದಲ್ಲಿ ಒಂಬತ್ತನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ನಿಮಗೆ ಅದೃಷ್ಟ ತಂದುಕೊಡುತ್ತದೆ. ತವರು ಮನೆಯಿಂದ ಅಥವಾ ತಂದೆಯಿಂದ ಸೋದರರಿಂದ ಸಹಾಯ ಸಿಗಲಿದೆ. ಈಗ ಗುರು 12ನೇ ಮನೆಯಲ್ಲಿ ಇರುವುದರಿಂದ ನಿಮಗೆ ಶುಭಕಾರ್ಯಗಳಿಗೆ ಖರ್ಚು ಇರುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಮಯ. ಬಂಧುಬಾಂಧವರೊಂದಿಗೆ ಸಂತೋಷದಿಂದ ಇರುವ ಸಮಯ. ಹಣದ ಹರಿವು ಉತ್ತಮವಾಗಿದೆ. ಸಮಯಕ್ಕೆ ಹಣ ಒದಗಿ ಬರುತ್ತದೆ.

ಮಿಥುನ ರಾಶಿಯ ಮಾಸ ಭವಿಷ್ಯ
ಈ ಮಾಸ ಪೂರ್ತಿಯಾಗಿ ನಿಮಗೆ ಗುರುಬಲ ಇರುವುದರಿಂದ ಯಾವುದಕ್ಕೂ ಯೋಚನೆ ಇಲ್ಲ. ವೃತ್ತಿಯಲ್ಲಿ ಯಶಸ್ಸು ಕೌಟುಂಬಿಕ ಸುಖಶಾಂತಿ ಎಲ್ಲವೂ ಇದೆ. ಕೋರ್ಟ್ ಕೆಲಸಗಳಲ್ಲಿ ಜಯ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ವಿದೇಶ ಪ್ರಯಾಣ ಮಾಡುವ ಯೋಗ ಇದೆ. ಉದ್ಯೋಗದಲ್ಲಿ ಯಶಸ್ಸು ಪ್ರಶಂಸೆ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ವೃತ್ತಿಯಲ್ಲಿ ಒತ್ತಡ ಹೆಚ್ಚಾಗಬಹುದು. ಈಗಿಂದಲೇ ತಯಾರಾಗಿ ಇರಿ.
ನಿಮ್ಮ ಯಶಸ್ಸು ಏಳ್ಗೆಗಾಗಿ ಉತ್ತಮ ಯೋಜನೆಗಳನ್ನು ಈಗಿನಿಂದಲೇ ರೂಪಿಸಿಕೊಳ್ಳಿ. ಔಷದಿ, ರಾಸಾಯನಿಕ ಹಾಗೂ ವೈದ್ಯಕೀಯ ವೃತ್ತಿಯವರಿಗೆ ಲಾಭ ಇದೆ. ಚಲಚಿತ್ರರಂಗದವರಿಗೂ ಈ ತಿಂಗಳು ಯಶಸ್ಸು ಇದೆ. ಈ ರಾಶಿಯ ಕಲಾವಿದರ ಚಿತ್ರಗಳು ಬಿಡುಗಡೆಯಾದರೆ ಯಶಸ್ಸು ಗಳಿಸುತ್ತದೆ. ಸಂಗಾತಿಯಿಂದ ಲಾಭ ಇದೆ. ತಾಯಿಗೆ ಒತ್ತಡಗಳು ಮನಸ್ಸಿಗೆ ಬೇಜಾರು ಇರುತ್ತದೆ. ತಾಯಿಯ ಆರೋಗ್ಯಕ್ಕಾಗಿ ಗಣಪತಿಗೆ ಪೂಜೆ ಮಾಡಿಸಿ ಹುರುಳಿಯನ್ನು ದಾನವಾಗಿ ಕೊಡಿ. ಎಂಟನೇ ಮನೆಯಲ್ಲಿ ಈ ಮಾಸ ಮಧ್ಯ ಭಾಗದಲ್ಲಿ ನಾಲ್ಕು ಗ್ರಹಗಳು ಸೇರಿ ನಿಮ್ಮನ್ನು ಒಂದು ಅಪಾಯದಿಂದ ಪಾರು ಮಾಡುತ್ತದೆ. ಲಾಭ ಸ್ಥಾನದ ಗುರು ನಿಮಗೆ ಸಕಲ ವಿಧದಲ್ಲೂ ರಕ್ಷೆಯಾಗಿ ಇದ್ದಾನೆ.

ಕಟಕ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ತುಸು ಗಂಭೀರ ಸಮಯ. ಗುರುಬಲ ಇಲ್ಲ ಹಾಗೂ ಅಷ್ಟಮ ಶನಿಯ ಪ್ರಭಾವದಿಂದ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿದ್ದೀರಿ. ಹಣಕಾಸಿಗೆ ಸಂಕಷ್ಟ. ಖರ್ಚು ವಿಪರೀತ. ಅದಕ್ಕೆ ತಕ್ಕಂತೆ ಹಣ ಒದಗಿ ಬರುತ್ತಿಲ್ಲ. ಯಾವ ಕಡೆ ನೋಡಿದರೂ ಒತ್ತಡಗಳು ಗುಡ್ಡದಂತೆ ನಿಂತಿವೆ. ಮೂರನೇ ಮನೆಯ ಕೇತು ಮಾತ್ರ ಈಗ ನಿಮಗೆ ರಕ್ಷಕನಾಗಿ ಇದ್ದಾನೆ. ಏನೇ ಸಂಕಷ್ಟಗಳು ಎದುರಾದರೂ ನೀವು ನೆಲಕ್ಕೆ ಬೀಳದಂತೆ ಕಾಪಾಡುತ್ತಾನೆ.
ಮಾನಸಿಕ ಶಕ್ತಿಯನ್ನೂ ದೈಹಿಕ ಕ್ಷಮತೆಯನ್ನೂ ಕೊಡುತ್ತಾನೆ. ಈ ತಿಂಗಳ ಆರನೇ ತಾರೀಖು ಮಂಗಳ ಮಕರರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳ ಜೊತೆಗೆ ಸೂರ್ಯ ಹಾಗೂ ಬುಧ ಮಕರರಾಶಿಯಲ್ಲೇ ಇದ್ದಾರೆ. ಈ ಮೂರು ಗ್ರಹಗಳು ನಿಮ್ಮ ರಾಶಿಯನ್ನು ವೀಕ್ಷಿಸುತ್ತದೆ. ಇದರಿಂದ ನಿಮಗೆ ಒತ್ತಡ ಗಳು ಹೆಚ್ಚಾಗಬಹುದು. ಯಾರಮೇಲೂ ಕೋಪ ಮಾಡಬೇಡಿ. ಕೂಗಾಡಬೇಡಿ. ತಾಳ್ಮೆಯಿಂದ ಪರಿಸ್ಥಿಯನ್ನು ನಿಭಾಯಿಸಿ. ಪ್ರಾಮಾಣಿಕವಾಗಿ ವರ್ತಿಸಿ. ನಿಮ್ಮ ಪ್ರಮಾಣಿಕತೆಯೇ ನಿಮ್ಮನ್ನು ಕಾಪಾಡುತ್ತದೆ.

ಸಿಂಹ ರಾಶಿಯ ಮಾಸ ಭವಿಷ್ಯ
ಗುರುಬಲ ಇದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಸುಲಭವಾಗಿ ನೆರವೇರುತ್ತದೆ. ಹೊಸ ಕೆಲಸ ಸಿಗುವುದೂ, ವ್ಯಾಪಾರದಲ್ಲಿ ಅಭಿವೃದ್ಧಿ, ಅವಿವಾಹಿತರಿಗೆ ವಿವಾಹ ಯೋಗ, ವಿದೇಶ ಪ್ರಯಾಣ, ವಿಹಾರ ಧಾಮಗಳಿಗೆ ಭೇಟಿ ಮೊದಲಾದ ಮನಸ್ಸಿಗೆ ಖುಷಿ ನೆಮ್ಮದಿ ಕೊಡುವಂಥ ಸಂಗತಿಗಳು ನಡೆಯುತ್ತದೆ. ಮಾಸದ ಮಧ್ಯದಲ್ಲಿ ಆರನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ನಿಮಗೆ ಇನ್ನೂ ಶಕ್ತಿ ಸಾಮಥ್ಯವನ್ನು ತಂದುಕೊಡುತ್ತದೆ. ಯಾವುದಾದರೂ ಹೊಸ ಯೋಜನೆಯಲ್ಲಿ ಹಣ ತೊಡಗಿಸುವುದು ಈಗ ಮಾಡಬಹುದು.
ಶೇರ್ಸ್ ನಲ್ಲಿ ಸಹ ಹಣ ಹೂಡಬಹುದು. ವ್ಯಾಪಾರ ಮಾಡುವವರಿಗೆ ಸವಾಲುಗಳು ಎದುರಾದರೂ ಗುರುಬಲದಿಂದ ಅವೆಲ್ಲವನ್ನೂ ಎದುರಿಸಿ ಮುಂದೆ ಸಾಗುತ್ತೀರಿ. ದೇವರ ಕೆಲಸಗಳನ್ನು ಮಾಡುತ್ತೀರಿ. ಒಂಬತ್ತನೆಯ ಗುರು ಧರ್ಮ ಕಾರ್ಯಗಳನ್ನು ಮಾಡಿಸಿ ನಿಮಗೆ ಪುಣ್ಯ ಸಂಚಯನ ಮಾಡಿಕೊಡುತ್ತಾನೆ. ಎಂಟನೇ ಮನೆಯಲ್ಲಿ ರಾಹು ಇರುವುದು ಆರೋಗ್ಯಕ್ಕೆ ತೊಂದರೆ. ವಿಷವಸ್ತುಗಳಿಂದ ದೂರವಿರಿ. ವಿಷಾಹಾರ ಸೇವನೆಯಾಗಬಹುದು ಜಾಗರೂಕರಾಗಿರಿ. ಮನೆಯಲ್ಲಿ ನಿಮ್ಮ ಬಂಧುಬಾಂಧವರಿಂದಲೇ ವಿರೋಧಾಭಾಸಗಳು ಉಂಟಾಗುತ್ತದೆ. ಎಚ್ಚರಿಕೆಯಿಂದ ನಿಭಾಯಿಸಿ.

ಕನ್ಯಾ ರಾಶಿಯ ಮಾಸ ಭವಿಷ್ಯ
ಶನಿ ಆರನೇ ಮನೆಯಲ್ಲಿ ಇದ್ದು ಬಹಳ ಧನಲಾಭ ಕೊಡುತ್ತಾನೆ. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕೊಡುತ್ತಾನೆ. ಯಾವುದೇ ಅಡೆತಡೆ ಬರದಂತೆ ಜೀವನ ಸರಾಗವಾಗಿ ನಡೆಯುವಂತೆ ಅನುಗ್ರಹಿಸುತ್ತಾನೆ. ಹೊಸ ಹೊಸ ಯೋಜನೆಗಳಲ್ಲಿ ಹಣ ತೊಡಗಿಸಿ ಲಾಭ ಮಾಡಿಕೊಳ್ಳಿ. ಯಾವುದಾದರೂ ಹಣ ಬಾಕಿಯಾಗಿ ಉಳಿದಿದ್ದರೆ ಈಗ ವಸೂಲಾಗುತ್ತದೆ. ಏಳನೇ ಮನೆಯಲ್ಲಿ ರಾಹು ನಿಮ್ಮ ರಾಶಿಯಲ್ಲೇ ಕೇತು ಇರುವುದು ಆರೋಗಯಕ್ಕೆ ಕೌಟುಂಬಿಕ ಶಾಂತಿಗೆ ಧಕ್ಕೆ.
ಮನೆಯಲ್ಲಿ ಮನೆಯ ಸದಸ್ಯರೊಡನೆ ಮಾತನಾಡುವಾಗ ಎಚ್ಚರಿಕೆ ಇರಲಿ. ಉಡಾಫೆಯಿಂದ ಮಾತನಾಡಿ ಅವರ ಮನಸ್ಸು ನೋಯಿಸಬೇಡಿ. ಮನೆಯ ಸದಸ್ಯರಿಗೂ ಅವರ ಅಭಿಪ್ರಾಯ ತಿಳಿಸಲು ಅವಕಾಶ ಕೊಡಿ. ನಿಮ್ಮ ಅಭಿಪ್ರಾಯ ಬಲವಂತವಾಗಿ ಹೇರಬೇಡಿ. ಈಗ ಗುರುಬಲ ಇಲ್ಲ. ಆದ್ದರಿಂದ ಶುಭಕಾರ್ಯಗಳ ಸಂಕಲ್ಪವಿದ್ದರೆ ಮುಂದಕ್ಕೆ ಹಾಕಿ. ವಿವಾಹ ಹೊಸ ಕೆಲಸ ಪ್ರಾಪ್ತಿ ಮುಂತಾದವೆಲ್ಲ ಇನ್ನೂ ಕೆಲವು ದಿನ ಕಾಯಬೇಕು. ವಿವಾಹಕ್ಕೆ ಈಗ ಯೋಗ್ಯ ಸಮಯ ಅಲ್ಲ. ಹಣ ಒದಗಿ ಬರುತ್ತದೆ, ಆದರೆ ಶುಭ ಕಾರ್ಯಗಳಿಗೆ ಅಡ್ಡಿ ಆತಂಕ ಇರುತ್ತದೆ. ವಿವೇಚಿಸಿ ನಿಭಾಯಿಸಿ. ಮಕ್ಕಳಿಂದ ಶುಭ ಸಂಗತಿಗಳು ಇವೆ. ಮಕ್ಕಳ ಅಭಿವೃದ್ಧಿ ನಿಮಗೆ ಖುಷಿ ಕೊಡುತ್ತದೆ.

ತುಲಾ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಅನುಕೂಲಕರ ಸಮಯ. ರಾಹು ಆರನೇ ಮನೆಯಲ್ಲಿ, ಗುರು ಏಳನೇ ಮನೆಯಲ್ಲಿ ಇದ್ದು ಹಣಕ್ಕೂ ಜೀವನಕ್ಕೂ ಯಾವುದೇ ತೊಂದರೆ ಇರುವುದಿಲ್ಲ. ಮಕ್ಕಳ ಅಭಿವೃದ್ಧಿಯಿಂದ ಮನಸ್ಸಿಗೆ ಖುಷಿ ಇದೆ. ಯಾವುದೇ ಕೆಲಸ ಕಾರ್ಯ ನಿರಾತಂಕವಾಗಿ ನೆರವೇರುತ್ತದೆ. ರಾಹುಬಲ ನಿಮಗೆ ದೈಹಿಕ ಶಕ್ತಿಯನ್ನು, ಗುರುಬಲ ನಿಮಗೆ ಯಶಸ್ಸನ್ನೂ ತಂದುಕೊಡುತ್ತದೆ. ಹಣದ ಹರಿವು ಉತ್ತಮವಾಗಿದೆ. ಹೆಚ್ಚು ಇಲ್ಲದಿದ್ದರೂ ಸಮಯಕ್ಕೆ ಒದಗಿ ಬರುತ್ತದೆ. ವಿ
ದ್ಯಾರ್ಥಿಗಳಿಗೆ ಶುಭ. ದೊಡ್ಡ ಪರೀಕ್ಷೆಗಳನ್ನು ಎದುರಿಸುವವರು, ಪರೀಕ್ಷೆಗಳನ್ನು ಬರೆದವರು ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ಹೊಸ ಕೆಲಸ ಸಿಗುವುದು ಬಡ್ತಿ ಮೊದಲಾದ ಸಂಗತಿಗಳು ಇವೆ. ವಿದೇಶ ಪ್ರವಾಸ ಯೋಗ ಇದೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ಲಾಭ ಇದೆ. ಜೀವನ ಸರಾಗವಾಗಿ ನಡೆಯುತ್ತಿದೆ ಎನಿಸುವಂತ ವಾತಾವರಣ ಇರುತ್ತದೆ. ಪಂಚಮ ಶನಿಯ ಪ್ರಭಾವ ಇದ್ದರೂ ಗುರುಬಲ ಇರುವುದರಿಂದ ಅದು ಅಷ್ಟಾಗಿ ಕಾಡಿಸುವುದಿಲ್ಲ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಯಾವುದೇ ಗ್ರಹಬಲ ಇಲ್ಲ. ಕೇತು ಮಾತ್ರ ಲಾಭ ಸ್ಥಾನದಲ್ಲಿ ಇದ್ದು ಕೊಂಚ ಶಕ್ತಿಯನ್ನು ಕೊಡುತ್ತಾನೆ. ವ್ಯಾಪಾರ ವ್ಯವಹಾರದಲ್ಲಿ ಕೊಂಚ ಹಿನ್ನೆಡೆ ನಿಮ್ಮ ಅನುಭವಕ್ಕೆ ಬಂದಿರುತ್ತದೆ. ವೃಥಾ ಹಣಕಾಸು ಖರ್ಚು ಮಾನಸಿಕ ಕಿರಿಕರಿ ಆರೋಗ್ಯದಲ್ಲಿ ಏರುಪೇರು ಕುಟುಂಬದಲ್ಲಿ ಅಶಾಂತಿ ಮೊದಲಾದ ಹಿನ್ನಡೆಗಳು ಅನುಭವಕ್ಕೆ ಬರುತ್ತದೆ. ಮನೆಯಲ್ಲಿ ಹಿರಿಯರ ಅನಾರೋಗ್ಯ ಧೃತಿಗೆಡಿಸುತ್ತದೆ. ಹಠಾತ್ತಾಗಿ ಕೆಲವು ಬದಲಾವಣೆಗಳು ವೃತ್ತಿ ಹಾಗೂ ವೈಯುಕ್ತಿಕ ಜೀವನದಲ್ಲಿ ನಡೆದು ನಿಮಗೆ ಅಘಾತವಾಗುತ್ತದೆ. ಯಾವುದು ಏನೇ ಆದರೂ ಅಧೈರ್ಯ ಬೇಡ. ಕೊಂಚ ತಾಳ್ಮೆಯಿಂದ ವರ್ತಿಸಿ. ಸಹನೆ ಕಳೆದುಕೊಳ್ಳಬೇಡಿ.
ಕೆಲವೇ ದಿನಗಳಲ್ಲಿ ಇದಕ್ಕೆಲ್ಲ ಪರಿಹಾರ ಒದಗಿ ಬರುತ್ತದೆ. ಮುಂದಿನ ದಿಗಳಲ್ಲಿ ಗುರುಬಲ ಒದಗಿಬಂದು ನಿಮ್ಮ ಸಮಸ್ಯೆಗಳು ಹಗುರವಾಗುತ್ತದೆ. ಯಾವುದೇ ಸ್ಥಿರಾಸ್ತಿ ಖರೀದಿಸಲು ಹೋಗಬೇಡಿ. ಈಗ ಬೆಲೆ ಹೆಚ್ಚು ಇರುವುದು ಅಥವಾ ದಾಖಲೆಗಳು ಸರಿಯಿಲ್ಲದೆ ಮೋಸ ಹೋಗುವುದು ಮುಂತಾದ ವ್ಯತಿರಿಕ್ತ ಪರಿಣಾಮ ಇರುತ್ತದೆ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ನಿಮ್ಮ ಪ್ರಮೇಯವೇ ಇಲ್ಲದೆ ನಿಮಗೆ ಕೆಟ್ಟಹೆಸರು ಬರಬಹುದು. ಜನರೊಂದಿಗೆ ವ್ಯವಹರಿಸುವಾಗ ಜಾಗ್ರತೆ. ಹಗ್ಗ ಹಾವಾಗುವ ಸಮಯ. ಸತ್ಯ ಹಾಗೂ ಪ್ರಾಮಾಣಿಕ ದಾರಿ ನಿಮ್ಮದಾಗಿರಲಿ.

ಧನಸ್ಸು ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಹಗ್ಗವೂ ಹೂಮಾಲೆಯಾಗುವ ಸಮಯ. ನೀವು ಮುಟ್ಟಿದ್ದೆಲ್ಲ ಚಿನ್ನ. ಏಳು ವರ್ಷಗಳ ನಂತರ ಒಳ್ಳೆಯ ಸಂಗತಿಗಳನ್ನು ಕಾಣುತ್ತ ಇದ್ದೀರಿ. ಮಕ್ಕಳಿಂದ ಶುಭಫಲಗಳಿವೆ. ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ. ವಿದ್ಯಾಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗ ಮಾಡುತ್ತಿರುವವರು, ಉನ್ನತ ಪರೀಕ್ಷೆಗಳನ್ನು ಬರೆದವರಿಗೂ ಉತ್ತಮ ಫಲಿತಾಂಶ ದೊರೆಯುತ್ತದೆ. ಜನ ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ನಿಮಗೆ ಸಮಾಜದಲ್ಲಿ ಗೌರವ ಮರ್ಯಾದೆಗಳು ಸಿಗುತ್ತದೆ. ಹಣದ ಹರಿವು ಬಹಳ ಉತ್ತಮವಾಗಿದೆ.
ಮೂರನೇ ಮನೆಯ ಶನಿ ಸಹ ನಿಮಗೆ ಬಹಳ ಪ್ರಯೋಜನಗಳನ್ನು ನೀಡುತ್ತಾನೆ. ಹಣ, ಅಧಿಕಾರ ಪದವಿಗಳು ನಿಮ್ಮನ್ನು ಹುಡುಕಿ ಬರುತ್ತದೆ. ಸಾಧ್ಯವಾಗದೆಂದು ಕೈಬಿಟ್ಟ ಕೆಲಸಗಳ ಕಗ್ಗಂಟು ಕರಗಿ ನಿಮ್ಮ ಅಪೇಕ್ಷೆ ನೆರವೇರುತ್ತದೆ. ಪಿತ್ರಾರ್ಜಿತ ಆಸ್ತಿ ಬರುತ್ತದೆ. ಹಣ ಬರಲು ಇಂಥದ್ದೇ ಕಾರಣ ಎಂಬುದಿಲ್ಲ. ಈಗ ಹಣ ಯಾವುದೇ ಮೂಲದಿಂದ ಬರಬಹುದು. ಆಸ್ತಿ ಕೊಳ್ಳುವ ಯೋಗ ಇದೆ. ಅರ್ಹರಿಗೆ ವಿವಾಹ ಯೋಗ ಇದೆ. ಸಂತಾನಪ್ರಾಪ್ತಿ ಇದೆ. ಹೊಸ ವಾಹನ ಆಭರಣ ಖರೀದಿ ಮೊದಲಾದ ಮನಸ್ಸಿಗೆ ಖುಷಿಕೊಡುವ ಸಂಗತಿಗಳು ನಡೆಯುತ್ತದೆ. ಆರೋಗ್ಯ ಸಹ ಉತ್ತಮವಾಗಿದೆ. ಯಾವುದೇ ಅಡೆತಡೆಗಳಿಲ್ಲದ ಜೀವನ ಈಗ ನಿಮ್ಮದು.

ಮಕರ ರಾಶಿಯ ಮಾಸ ಭವಿಷ್ಯ
ಆರು ವರ್ಷಗಳಿಂದ ಕಷ್ಟ ಪಟ್ಟಿದ್ದೀರಿ. ಈಗ ನಿಮಗೆ ನೆಮ್ಮದಿಯಾಗಿ ಉಸಿರಾಡುವ ಸಮಯ. ಅವಕಾಶಗಳು ನಿಮ್ಮ ಜೋಳಿಗೆಗೆ ಬಂದು ಬೀಳುತ್ತವೆ. ಆದರೆ ಸರಿಯಾದ ಆಯ್ಕೆ ನಿಮ್ಮ ಬುದ್ಧಿ ಮನಸ್ಸು ಉಪಯೋಗಿಸಿ ನೀವೇ ಮಾಡಬೇಕು. ಮೂರನೇ ಮನೆಯಲ್ಲಿ ರಾಹು ನಿಮಗೆ ಬಹಳ ಶಕ್ತಿಯನ್ನು ಕೊಡುತ್ತಾನೆ. ಯಾವುದೇ ಜವಾಬ್ದಾರಿ ನಿಭಾಯಿಸಲು ಈಗ ನೀವು ಸಮರ್ಥರಿದ್ದೀರಿ. ಮುಂದಿನ ದಿನಗಳಲ್ಲಿ ಗುರುಬಲವೂ ಜೊತೆಗೂಡುತ್ತದೆ. ಅದು ನಿಮ್ಮನ್ನು ಇನ್ನಷ್ಟು ಉತ್ತಮ ಸ್ಥಿತಿಗೆ ಉನ್ನತಿಗೆ ಕರೆದೊಯ್ಯುತ್ತದೆ.
ನಿಮ್ಮ ರಾಶಿಯಲ್ಲೇ ಸೂರ್ಯ ಚಂದ್ರ ಬುಧ ಕುಜ ಗಳ ಸಂಯೋಗದಿಂದ ನಿಮಗೆ ಒಂದು ಅಭೂತಪೂರ್ವ ಬದಲಾವಣೆ ಆಗಲಿದೆ. ವೃತ್ತಿಸ್ಥಾನದಲ್ಲಿ ಒಳ್ಳೆಯ ತಿರುವು ಇದೆ. ನೀವು ಬೇಡವೆಂದು ಬಿಟ್ಟ ಅವಕಾಶಗಳು ನಿಮ್ಮನ್ನು ಬೇಡವೆಂದು ಬಿಟ್ಟುಹೋದ ಅವಕಾಶಗಳು ಮತ್ತೆ ನಿಮ್ಮ ಬಳಿ ಬರುತ್ತದೆ. ಹಣದ ಹರಿವು ಉತ್ತಮವಾಗಿದೆ. ವ್ಯವಸಾಯದಿಂದ ಲಾಭ ಇದೆ. ಲೋಹದ ವ್ಯಾಪಾರದಿಂದ ಲಾಭ ಇದೆ. ರಾಜಕೀಯ ವ್ಯಕ್ತಿಗಳಿಗೂ ಈ ತಿಂಗಳಲ್ಲಿ ಶುಭವನ್ನು ತರುವ ಬದಲಾವಣೆ ನಡೆಯುತ್ತದೆ. ಇದು ಹೊಸ ನಿರೀಕ್ಷೆಗಳು ಸಾಕಾರಗೊಳ್ಳುವ ಕಾಲ.

ಕುಂಭ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರುಬಲ ಶನಿಬಲ ರಾಹುಬಲ ಯಾವುದೂ ಇಲ್ಲ. ಕೊಂಚ ಗಂಭೀರ ಸಮಯ. ಯಾವುದೇ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ದುಡುಕಬೇಡಿ. ಕೂತು ಮಲಗಬೇಕು ಇಲ್ಲವಾದರೆ ಅಪಾಯ. ತಣ್ಣಿರನ್ನೂ ತಣಿಸಿ ಕುಡಿಯುವ ಸಮಯ. ಯಾರನ್ನೂ ದೂಷಿಸಬೇಡಿ. ಗುರುಹಿರಿಯರನ್ನು, ದೇವರನ್ನು ನಿಂದಿಸ ಬೇಡಿ, ಅವಮಾನಿಸಬೇಡಿ. ಇವೆಲ್ಲವೂ ನಿಮ್ಮ ಹೊರೆಯನ್ನು ಹೆಚ್ಚು ಮಾಡುತ್ತದೆ. ಆದಷ್ಟು ಪ್ರಾಮಾಣಿಕರಾಗಿ ನಿಮ್ಮ ಕೆಲಸ ಮಾಡಿ. ಸತ್ಯ ಮತ್ತು ಪ್ರಾಮಾಣಿಕತೆ ನಿಮ್ಮನ್ನು ಕಾಪಾಡುತ್ತದೆ.
ಈ ಮಾಸದ ಮಧ್ಯಭಾಗದಲ್ಲಿ ವ್ಯಯಸ್ಥಾನದಲ್ಲಿ ನಾಲ್ಕು ಗ್ರಹಗಳು ಸೇರಿ ನಿಮ್ಮ ಖರ್ಚುಗಳನ್ನು ಮತ್ತೂ ಹೆಚ್ಚಿಸಬಹುದು. ಎಂಟನೇ ಮನೆಯಲ್ಲಿ ಕೇತು ಇದ್ದಾನೆ. ವಾಹನ ಚಲಾಯಿಸುವಾಗ ಚೂಪಾದ ವಸ್ತುಗಳೊಡನೆ ವ್ಯವಹರಿಸುವಾಗ ಎಚ್ಚರ ಇರಲಿ. ಕೊಂಚ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಗುರು ಮೂರನೇ ಮನೆಯಲ್ಲಿ ಇರುವುದು ಕೊಂಚಮಟ್ಟಿಗೆ ಬಲ ಕೊಡುತ್ತದೆ. ಆದರೂ ನೀವು ಎಚ್ಚರಿಕೆ ವಹಿಸಬೇಕು. ವೃತ್ತಿಯಲ್ಲಿ ಕುಟುಂಬದಲ್ಲಿ ಒತ್ತಡ ಇರುತ್ತದೆ. ಜಾಣತನದಿಂದ ನಿಭಾಯಿಸಿ.

ಮೀನ ರಾಶಿಯ ಮಾಸ ಭವಿಷ್ಯ
ಶನಿ 12ನೇ ಮನೆಯಲ್ಲಿ ರಾಹು ನಿಮ್ಮ ರಾಶಿಯಲ್ಲಿ, ಕೇತು ಏಳನೇ ಮನೆಯಲ್ಲಿ ಇರುವುದು ಅಷ್ಟೆನೂ ಶುಭಕರವಲ್ಲ. ದೈಹಿಕ ಶ್ರಮ ಜಾಸ್ತಿ. ಗುರು ಎರಡನೇ ಮನೆಯಲ್ಲಿ ಇರುವುದು ನಿಮಗೆ ಶನಿ ರಾಹುವಿನ ಒತ್ತಡವನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಒತ್ತಡ ಮತ್ತು ಶ್ರಮದ ನಡುವೆಯೂ ಗುರುಬಲ ನಿಮ್ಮನ್ನು ಕಾಪಾಡುತ್ತದೆ. ಯಶಸಿನ ಹಾದಿಯಲ್ಲಿ ನಡೆಸಿಕೊಂಡು ಹೋಗುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಇದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ವಿದೇಶ ಪ್ರಯಾಣ ಒದಗಿಬರುತ್ತದೆ.
ಖರ್ಚುಗಳ ನಡುವೆಯೂ ಖುಷಿ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇದೆ. ಮನೆ ಕಟ್ಟುವುದು ಅಥವಾ ಕೊಳ್ಳುವುದು, ವಾಹನ ಕೊಳ್ಳುವುದು ಮೊದಲಾದ ಅಭಿವೃದ್ಧಿ ಕಾರ್ಯ ಈಗ ಮಾಡಬಹುದು. ಅವಕಾಶ ಒದಗಿಬರುತ್ತದೆ. ಲಾಭಸ್ಥಾನದಲ್ಲಿ ನಾಲ್ಕು ಗ್ರಹಗಳು ಈ ಮಾಸ ಮಧ್ಯದಲ್ಲಿ ಆಗುವುದರಿಂದ ಸಹ ನಿಮಗೆ ಲಾಭ ಇದೆ. ಇದು ನಿಮಗೆ ಒಂದು ಮಹತ್ತರ ತಿರುವನ್ನು ಕೊಡುತ್ತದೆ. ನಿಮ್ಮ ರಾಶಿಯಲ್ಲೇ ರಾಹು ಇರುವುದರಿಂದ ಆರೋಗ್ಯದ ಕಡೆ ಗಮನ ಇರಲಿ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications