December Horoscope 2023: ಡಿಸೆಂಬರ್ ಮಾಸದಲ್ಲಿ ದ್ವಾದಶಿ ರಾಶಿಗಳ ಗ್ರಹಚಾರ ಫಲ ಹೀಗಿರಲಿದೆ...
ಡಿಸೆಂಬರ್ ಮಾಸದಲ್ಲಿ ಗ್ರಹಗಳ ಸ್ಥಾನ ಪಲ್ಲಟನೆಯಿಂದ ಯಾವ ರಾಶಿಗಳಿಗೆ ಮಂಗಳವಾಗಲಿದೆ ಮತ್ತು ಯಾವ ರಾಶಿಯ ಜನರು ಸಂಕಷ್ಟವನ್ನು ಎದುರಿಸಲಿದ್ದಾರೆ ಎಂಬ ಮಾಹಿತಿ ತಿಳಿದುಕೊಳ್ಳಿ. ಡಿಸೆಂಬರ್ ತಿಂಗಳಿನಲ್ಲಿ ಯಾವ ರಾಶಿಗಳಿಗೆ ಆರ್ಥಿಕವಾಗಿ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಅದೃಷ್ಟದ ಯೋಗವಿದೆ, ಯಾರಿಗೆ ಅಲ್ಪ ಅದೃಷ್ಟ, ಯಾರಿಗೆ ನಷ್ಟವಾಗಲಿದೆ ಎಂಬುದನ್ನು ತಿಳಿದುಕೊಳ್ಳುವ ಬನ್ನಿ.
ಮಾಸವಿಶೇಷ:
ಡಿಸೆಂಬರ್ 1: ವಿಶ್ವ ಏಡ್ಸ್ ದಿನ
ಡಿಸೆಂಬರ್ 25: ಕ್ರಿಸ್ ಮಸ್
ಸೂರ್ಯ 16.12.23 ರಂದು ವೃಶ್ಚಿಕರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶ.

ಮೇಷ ರಾಶಿ:
ಏಳನೇ ಮನೆಯಲ್ಲಿ ಶುಕ್ರ ಸ್ವಂತ ಮನೆಯಲ್ಲಿ ಇರುವುದು ನಿಮಗೆ ಶುಭ ತರುತ್ತದೆ. ಸಂಗಾತಿಯಿಂದ ಲಾಭ. ಎಂಟರಲ್ಲಿ ಸೂರ್ಯ ಮತ್ತು ಮಂಗಳ ಅಷ್ಟು ಅನುಕೂಲಕರವಾಗಿಲ್ಲ. ಒಂಬತ್ತರಲ್ಲಿ ಬುಧ ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಲೆಕ್ಕ ಪರಿಣಿತರಿಗೆ, ಕಂಪ್ಯೂಟರ್ ತಜ್ಞರಿಗೆ, ಬರಹಗಾರರಿಗೆ, ಒಳ್ಳೆಯ ಫಲಗಳಿವೆ. ಆರರಲ್ಲಿ ಕೇತು ಧನಲಾಭ ಕೊಡುತ್ತಾನೆ. ಹಾಗೆಯೇ ಶತ್ರುಗಳ ಮೇಲೆ ವಿಜಯ ಸಾಧಿಸುತ್ತಾನೆ. ನಿಮ್ಮ ಕೆಲಸಗಳಿಗೆ ಇರುವ ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. 12ರ ರಾಹುವಿನಿಂದ ಕೊಂಚ ನಷ್ಟಗಳು ಇವೆ. ಆದರೆ 11 ಶನಿ ಬಲಾಢ್ಯನಾಗಿ ನಿಮಗೆ ರಕ್ಷಣೆಗೆ ಇದ್ದಾನೆ. ಶನಿ ಲಾಭಸ್ಥಾನದಲ್ಲಿ ಇರುವುದು ನಿಮಗೆ ಹಲವಾರು ವಿಷಯಗಳಲ್ಲಿ ಲಾಭಕರ ಪರಿಣಾಮ ಆಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಯಾವುದಾದರೂ ಬಾಕಿಯಿರುವ ಹಣ ವಸೂಲಾಗುತ್ತದೆ. ಸ್ಟಾಕ್ಸ್‌ನಲ್ಲಿ ನಲ್ಲಿ ಹಣ ಹಾಕಬೇಡಿ. ನಷ್ಟವಾಗುವ ಸಂಭವ ಇದೆ. ರಾಶಿಯಲ್ಲೇ ಇರುವ ಗುರು ಧರ್ಮಕಾರ್ಯಗಳಿಗೆ ಖರ್ಚುಗಳನ್ನು ಮಾಡಿಸುತ್ತಾನೆ. ಈ ಮಾಸ ನಿಮಗೆ ಮಿಶ್ರಫಲ.

ವೃಷಭ ರಾಶಿ:
ಈಗ ನಿಮಗೆ ರಾಹುಬಲದಿಂದ ಉತ್ತಮ ಫಲಗಳು ದೊರೆಯುತ್ತದೆ. ರಾಹು ನಿಮಗೆ ಬಹಳ ಶಕ್ತಿ ಪರಾಕ್ರಮ ಕೊಟ್ಟು ಕಾಪಾಡುತ್ತಾನೆ. ವೃಷಭ ರಾಶಿಗೆ ರಾಹು ಮಿತ್ರ. ಹಾಗಾಗಿ ಲಾಭಸ್ಥಾನದ ರಾಹುವಿನಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು. ನಾನಾ ಮೂಲಗಳಿಂದ ಹಣದ ಹರಿವು ಹರಿದು ಬರುತ್ತದೆ. ಸ್ಟಾಕ್ಸ್‌ನಲ್ಲಿಉತ್ತಮ ಲಾಭ ಇದೆ. 12ರ ಗುರು ಖರ್ಚುಗಳನ್ನು ಕೊಟ್ಟರೂ ಹಣದ ಹರಿವು ಉತ್ತಮವಾಗಿಯೇ ಇರುತ್ತದೆ. ಕೊಂಚ ಮಾನಸಿಕ ಕಿರುಕುಳ ಇರುತ್ತದೆ. ಆದರೆ ನಿಮ್ಮ ಇಷ್ಟದೈವವನ್ನು ನಂಬಿ. ಪ್ರಾಮಾಣಿಕರಾಗಿ ಇರಿ. ನಿಮ್ಮನ್ನು ಆಕ್ಷೇಪಿಸುವವರು ತಣ್ಣಗಾಗುತ್ತಾರೆ. ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ. ನಿಮ್ಮನ್ನು ದೂರ ಮಾಡಿರುವವರೂ ಸಹ ನಿಮ್ಮ ಬಳಿ ವಾಪಸು ಬರುತ್ತಾರೆ. ಈಗ ನಿಮಗೆ ಗುರುಬಲ ಹಾಗೂ ಶನಿ ಬಲ ಎರಡೂ ಇಲ್ಲದಿದ್ದರೂ ರಾಹುಬಲದಿಂದ ನೀವು ಮುಂದುವರೆಯುತ್ತೀರಿ. ರಾಹುವಿನ ಶಕ್ತಿ ನಿಮ್ಮನ್ನು ಕಾಪಾಡುತ್ತದೆ. ಎದುರಿಸಿ ಮುನ್ನಡೆವ ಶಕ್ತಿ ಕೊಡುತ್ತದೆ.

ಮಿಥುನ ರಾಶಿ:
ಈಗ ನಿಮಗೆ ಸಂಪೂರ್ಣ ಗುರುಬಲ ಇರುವುದರಿಂದ ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈಗ ಸಲೀಸಾಗಿ ನಡೆಯುತ್ತದೆ. ಸಮಸ್ಯೆಗಳಿಗೆ ಒಂದು ಪರಿಹಾರ ಗೋಚರವಾಗುತ್ತದೆ. ಲಾಭಸ್ಥಾನದ ಗುರು ನಿಮಗೆ ಧನಲಾಭ, ಗೌರವ, ಸುಖಭೋಜನ, ಮಾನ್ಯತೆ, ಬಡ್ತಿ ಮುಂತಾದ ಶುಭಫಲಗಳನ್ನು ಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮಕ್ಕಳಿಗಾಗಿ ಪ್ರಯತ್ನ ಪಡುತ್ತಿರುವವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ನಾಲ್ಕನೇ ಮನೆಯ ಕೇತುವಿನಿಂದ ತಾಯಿಗೆ ಒತ್ತಡ ಹೆಚ್ಚಾಗುತ್ತದೆ. ಐದನೇ ಮನೆಯಲ್ಲಿ ಶುಕ್ರ ನಿಮಗೆ ಉತ್ತಮಫಲಗಳನ್ನು ನೀಡುತ್ತಾನೆ. ಧನಲಾಭ, ಸಂತಾನದಿಂದ ಖುಷಿ, ಮನೆಯಲ್ಲಿ ಮಂಗಳ ಕಾರ್ಯ ನಡೆಯುವುದು ಮುಂತಾದ ಶುಭ ಸಂಗತಿಗಳು ನಡೆಯುತ್ತದೆ. ಆಭರಣ ಖರೀದಿ ಮಾಡುತ್ತೀರಿ. ಮನಸ್ಸಿಗೆ ಖುಷಿ ಕೊಡುವಂಥ ವಿಷಯಗಳು ನಡೆಯುತ್ತದೆ. ವಿದೇಶ ಪ್ರಯಾಣ ಯೋಗ ಇದೆ. ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ. ಸರ್ಕಾರಿ ನೌಕರಿಗೆ ಪ್ರಯತ್ನ ಪಡುತ್ತಿದ್ದರೆ ಈಗ ಯಶಸ್ಸು ಸಿಗುತ್ತದೆ.

ಕಟಕ ರಾಶಿ:
ಹಿಂದೆಂದೂ ಇಲ್ಲದ ಸಮಸ್ಯೆಗಳು ಈಗ ದಿಢೀರನೆ ಕಾಣಿಕೊಳ್ಳುತ್ತದೆ. ನಿಮಗೆ ತಾಳ್ಮೆ ಕಡಿಮೆಯಾಗುತ್ತದೆ. ಇದು ಗಾಢ ಸಂಬಂಧಗಳನ್ನು ಕೆಡಿಸುತ್ತದೆ. ಅಷ್ಟಮ ಶನಿಯ ತೊಂದರೆ ನಿಮಗೆ ಹೀಗೆ ನಾನಾ ವಿಧದ ಉಪಟಳ ಕೊಡುತ್ತದೆ. ಚೆನ್ನಾಗಿಯೇ ಇದ್ದ ಪತಿ-ಪತ್ನಿಯರ ನಡುವೆ ವೈಮನಸ್ಸು ಮೂಡಬಹುದು. ಸಹೋದರರ ನಡುವೆ ಮನಸ್ಥಾಪ ಬರಬಹುದು. ತಂದೆ-ತಾಯಿಯರ ಜೊತೆಗಿನ ಸಂಬಂಧ ಕೆಡಬಹುದು. ಮಕ್ಕಳಿಂದ ಬೇಜಾರಾಗಬಹುದು. ಹೀಗೆ ನಾನಾರೀತಿಯಲ್ಲಿ ನಿಮ ತಾಳ್ಮೆಯನ್ನು ಪರೀಕ್ಷಿಸುವ ಘಟನೆಗಳು ನಡೆಯುತ್ತದೆ. ಹೆದರಬೇಡಿ. ಆದಷ್ಟು ಮೌನವಾಗಿ ಇರಿ. ಅನಾವಶ್ಯಕವಾಗಿ ಯಾರೊಂದಿಗೂ ಮಾತನಾಡಬೇಡಿ. ನೀವೇ ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ. ಧ್ಯಾನದಲ್ಲಿ ಹೆಚ್ಚು ಸಮಯ ಮೀಸಲಿಡಿ. ಕೇತು ಮೂರನೇ ಮನೆಯಲ್ಲಿ ಇರುವುದರಿಂದ ಆರೋಗ್ಯ ಹಾಗೂ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಆದರೆ ಖರ್ಚುಗಳೂ ಒಂದರ ಹಿಂದೆ ಒಂದು ಕಾದಿರುತ್ತದೆ. ನಾಲ್ಕನೇ ಮನೆ ಶುಕ್ರ ಇರುವುದರಿಂದ ನಿಮಗೆ ಶುಭಫಲಗಳು ಇವೆ. ಶುಕ್ರ ತೊಂದರೆಗಳಿಂದ ಕಾಪಾಡುತ್ತಾನೆ. ವೃತ್ತಿಯಲ್ಲಿ ಒತ್ತಡ ಇದೆ. ಅಕ್ಕಪಕ್ಕದ ಜನರೊಡನೆ ಎಚ್ಚರಿಕೆಯಿಂದ ವರ್ತಿಸಿ. ಮಾತು ಕಡಿಮೆ ಕೆಲಸ ಹೆಚ್ಚು ಮಾಡಿ.

ಸಿಂಹ ರಾಶಿ:
ಅಲರ್ಜಿಗಳು ಕಾಡಿಸುತ್ತದೆ. ಚರ್ಮದ ಅಲರ್ಜಿ, ಸೈನಸ್ ಅಲರ್ಜಿ, ಕಣ್ಣು ಕಿವಿಗಳ ಅಲರ್ಜಿ ಆಗಬಹುದು. ರಾಹು ಎಂಟನೇ ಮನೆಯಲ್ಲಿ ಇರುವುದರಿಂದ ಈ ರೀತಿ ತೊಂದರೆಗಳು ಇವೆ. ಹೆಣ್ಣು ಮಕ್ಕಳಲ್ಲಿ ಋತುಸ್ರಾವದ ತೊಂದರೆ ಆಗಬಹುದು. ಸಿಂಹರಾಶಿಯ ವಿವಾಹಿತರು ಮಕ್ಕಳಿಗಾಗಿ ಈಗ ಪ್ರಯತ್ನ ಮಾಡದಿರುವುದು ಲೇಸು. ಗರ್ಭಪಾತ ಆಗುವಂಥ ಸಂಭವ ಇರುತ್ತದೆ. ಗರ್ಭ ಧರಿಸಿದರೂ ವೈದ್ಯರ ನಿಗಾವಣೆಯಲ್ಲಿ ಇರಬೇಕು. ಹಣದ ಹರಿವು ಉತ್ತಮವಾಗಿದೆ. ಎರಡನೇ ಮನೆಯಲ್ಲಿ ಕೇತು ಇರುವುದರಿಂದ ನಿಮ್ಮ ಕುಟುಂಬದಲ್ಲಿ ಮನಸ್ತಾಪ ಆಂತರಿಕ ಸಮಸ್ಯೆಗಳು ಆಗಬಹುದು. ಇವೆಲ್ಲವನ್ನೂ ನೀವು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು. ಮನಸ್ಸಿಗೆ ಕೊಂಚ ಕಳವಳ ಬೇಸರ ಆಗುವಂತ ಸಮಯ. ಅಂಥ ಘಟನೆಗಳು ನಡೆಯುತ್ತದೆ. ಧೈರ್ಯಗೆಡದಿರಿ. ಭಾಗ್ಯಸ್ಥಾನದಲ್ಲಿ ಗುರು ಇರುವುದರಿಂದ ಸಮಸ್ಯೆಗಳಿಗೆ ತಂತಾನೆ ಪರಿಹಾರವೂ ದೊರೆಯುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. ಧರ್ಮಕಾರ್ಯಗಳಲ್ಲಿ ಕೈಜೋಡಿಸುತ್ತೀರಿ. ಮೂರನೇ ಮನೆಗೆ ಶುಕ್ರ ಇರುವುದರಿಂದ ಸಹೋದರಿಯರ ಬೆಂಬಲ ಸಹಾಯ ಸಿಗುತ್ತದೆ. ಶನಿ ಏಳನೇ ಮನೆಯಲ್ಲ ಇದ್ದು ನಿಮ್ಮ ರಾಶಿಯನ್ನು ನೇರವಾಗಿ ನೋಡುವುದರಿಂದ ನಿಮಗೆ ಹಠ ಮತ್ತು ಕೋಪ ಹೆಚ್ಚಾಗುತ್ತದೆ. ಇದರಿಂದ ಸಂಬಂಧಗಳು ಕೆಡಬಹುದು. ಜಾಗ್ರತೆ ವಹಿಸಿ

ಕನ್ಯಾ ರಾಶಿ:
ಶನಿ ಆರನೇ ಮನೆಯಲ್ಲಿ ಇರುವುದು ನಿಮಗೆ ಬಹುದೊಡ್ಡ ಗುಣಾತ್ಮಕ ಅಂಶ. ಶತ್ರುಗಳ ಮೇಲೆ ವಿಜಯ ಸಾಧಿಸಿವುದು, ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದು, ಹಣದ ಹರಿವು ಸರಾಗ ಆಗುವುದು, ಅಡೆತಡೆಗಳನ್ನು ನಿವಾರಿಸಿಕೊಂಡು ಮುನ್ನುಗ್ಗುವುದು ಮುಂತಾದ ಒಳ್ಳೆಯ ಸಂಗತಿಗಳನ್ನು ಶನಿಯ ಅನುಗ್ರಹದಿಂದ ಪಡೆಯುತ್ತೀರಿ. ಆದರೆ ಗುರುಬಲ ಇಲ್ಲ. ಕೆಲಸ ಕಾರ್ಯಗಳು ಅಲ್ಲಿಲ್ಲಿ ನಿಂತು ನಿಂತು ಸಾಗುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತೀರಿ. ಏಳನೇ ಮನೆಯಲ್ಲಿ ರಾಹು ಹಾಗೂ ನಿಮ್ಮ ರಾಶಿಯಲ್ಲೇ ಕೇತು ಇರುವುದು ಕೊಂಚ ಕಿರಿಕಿರಿಗೆ ಕಾರಣವಾಗುತ್ತದೆ. ವಿನಾಕಾರಣ ಕೋಪ,ಹಠ ಎದುರು ಇರುವವರ ಮನಸ್ಸಿಗೆ ನೋವಾಗುವಂತಹ ಘಟನೆಗಳು ಆಗಿಬಿಡಬಹುದು. ಜಾಗರೂಕತೆಯಿಂದ ಇರಿ. ಎರಡನೇ ಮನೆಯಲ್ಲಿ ಶುಕ್ರ ಸ್ವಂತ ಮನೆಯಲ್ಲಿ ಇದ್ದಾನೆ. ಇದು ನಿಮಗೆ ಸಂಪತ್ತನ್ನು ಕೊಡುತ್ತದೆ. ಮಕ್ಕಳಿಂದ ಮನಸ್ಸಿಗೆ ಹರ್ಷ ಇದೆ. ವಿದೇಶ ಪ್ರಯಾಣ ಮಾಡುವ ಯೋಜನೆ ಇರುವವರಿಗೆ ವೀಸಾ ದೊರೆತು ಅಡೆತಡೆ ನಿವಾರಣೆ ಆಗುತ್ತದೆ. ವಿದೇಶ ವ್ಯವಹಾರಗಳಲ್ಲಿ ಧನಲಾಭ ಇದೆ. 16ರ ವರೆಗೂ ಸೂರ್ಯ ಮೂರನೇ ಮನೆಯಲ್ಲಿ ಇದ್ದು ಸರ್ಕಾರಿ ಕೆಲಸ ಕಾರ್ಯಗಳನ್ನು ಸುಲಭ ಮಾಡಿಸುತ್ತಾನೆ.

ತುಲಾ ರಾಶಿ:
ಬಹಳ ದಿನಗಳಿಂದ ಕಾಯುತ್ತಿದ್ದ ನಿಮ್ಮ ಒಂದು ಯೋಜನೆ ಈಗ ಕಾರ್ಯಗತವಾಗುತ್ತದೆ. ಹೊಸ ಹೊಸ ಅವಕಾಶ ಅರಸಿ ಬರುತ್ತದೆ. ಹೊಸ ನೌಕರಿಯ ಹುಡುಕಾಟದಲ್ಲಿ ಇರುವವರಿಗೆ ಶುಭ ಸುದ್ದಿ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆಯಲ್ಲಿ ಶುಭಕಾರ್ಯಗಳ ಸಡಗರ ಇರುತ್ತದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ಇವೆ. ವಿದೇಶ ಪ್ರಯಾಣ ಯೋಗ ಇದೆ. ನಿಮ್ಮ ಕೆಲಸಗಳಿಗೆ ತಕ್ಕ ಗೌರವ,ಸನ್ಮಾನ ದೊರೆತು ಮನಸ್ಸಿಗೆ ಸಂತಸ ಸಿಗುತ್ತದೆ. ರಾಹು ಆರನೇ ಮನೆಯಲ್ಲಿ ಇದ್ದು ನಿಮ್ಮ ಪರಾಕ್ರಮವನ್ನು ಹೆಚ್ಚಿಸುತ್ತಾನೆ. ಶತ್ರುಗಳ ವಿರುದ್ದ ವಿಜಯ ಸಾಧಿಸುತ್ತೀರಿ. ವೈದ್ಯ ವೃತ್ತಿ ಹಾಗೂ ರಾಸಾಯನಿಕ ವಸ್ತುಗಳ ವೃತ್ತಿ ಮಾಡುವವರಿಗೆ ಲಾಭ ಇದೆ. ಕಲಾವಿದರಿಗೆ ಬಹಳ ಶುಭಫಲಗಳು ದೊರೆಯುತ್ತದೆ. ಈ ತಿಂಗಳ 25ರ ವರೆಗೂ ಶುಕ್ರ ನಿಮ್ಮ ರಾಶಿಯಲ್ಲೇ ಇದ್ದು ನಿಮಗೆ ಹೊಸ ಚೈತನ್ಯವನ್ನು ಕೊಡುತ್ತಾನೆ. 16ರ ನಂತರ ಸೂರ್ಯ ಮೂರನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಶುಭಫಲಗಳು ಸಿಗುತ್ತವೆ. ವೃತ್ತಿಯಲ್ಲಿ ಯಶಸ್ಸು ಇದೆ. ವೃತ್ತಿಯಲ್ಲಿನ ಕಿರಿಕಿರಿಗಳು ಮಾಯವಾಗುತ್ತದೆ. ಬೆಳವಣಿಗೆಗೆ ಹೇರಳ ಅವಕಾಶಗಳು ಸಿಗುತ್ತದೆ. ಪಂಚಮ ಶನಿಯ ಕಿರಿಕಿರಿ ಇದ್ದರೂ ಗುರುಬಲ ಅವೆಲ್ಲವನ್ನೂ ತೊಡೆದು ಹಾಕುತ್ತದೆ.

ವೃಶ್ಚಿಕ ರಾಶಿ:
ಈಗ ಯಾವ ಗ್ರಹಬಲವೂ ಇಲ್ಲ. ಆರರಲ್ಲಿ ಗುರು ಕೆಲಸಕಾರ್ಯಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ. ಗಂಡ-ಹೆಂಡಿರ ನಡುವೆ ವೈಮನಸ್ಸು, ಸ್ನೇಹಿತರ ನಡುವೆ ಮನಸ್ತಾಪ, ಮನೆಯಲ್ಲಿ ಕಿರಿಕಿರಿ ಈ ರೀತಿಯ ವ್ಯತಿರಿಕ್ತ ಪರಿಣಾಮಗಳು ಇವೆ. ಹನ್ನೊಂದನೇ ಮನೆಯಲ್ಲಿ ಕೇತು ಇರುವುದರಿಂದ ಹಣದ ಹರಿವು ಉತ್ತಮವಾಗಿದೆ. ಹಾಗೂ ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ. ಐದನೇ ಮನೆಯಲ್ಲಿ ರಾಹು ಇರುವುದು ಮಕ್ಕಳಿಂದ ಸಣ್ಣ ಕಿರಿಕಿರಿ ಉಂಟಾಗುತ್ತದೆ. ಅಥವಾ ಮಕ್ಕಳ ಅಭಿವೃದ್ಧಿಗೆ ಅಡೆತಡೆ ಬರಬಹುದು. ವಿದ್ಯಾರ್ಥಿಗಳಿಗೆ ಈಗ ಶುಭಕಾಲ ಅಲ್ಲ. ನೀವು ಉನ್ನತ ವ್ಯಾಸಂಗ ಅಥವಾ ಯಾವುದೇ ಪರೀಕ್ಷೆಯ ಸುಗಮ ಫಲಿತಾಂಶಕ್ಕೆ ಕಾಯಬೇಕು. ಮಕ್ಕಳಿಗಾಗಿ ಪ್ರಯತ್ನ ಪಡುತ್ತಿರುವವರು ನಿಮ್ಮ ಯೋಜನೆಯನ್ನು ಮುಂದೂಡಿ. ಈಗ ಸಂತಾನಕ್ಕೆ ಶುಭಕಾಲ ಅಲ್ಲ. 12ನೇ ಮನೆಯಲ್ಲಿ ಶುಕ್ರ ಇರುವುದರಿಂದ ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುತ್ತದೆ. ವೃತ್ತಿಯಲ್ಲಿ ಒತ್ತಡಗಳು ಇದ್ದರೂ ನೀವು ನಿಭಾಯಿಸಿಕೊಂಡು ಮುಂದೆ ಹೋಗುತ್ತೀರಿ. ಆದಷ್ಟು ಮನಸ್ಸಿಗೆ ಯಾವುದೇ ಕಿರಿಕಿರಿ ಆಗದಂತೆ ಮನಸ್ಸನ್ನು ಹಗುರವಾಗಿ ಇರಿಸಿಕೊಳ್ಳಿ. ಮಾನಸಿಕವಾಗಿ ದೃಢರಾಗಿ.

ಧನಸ್ಸು ರಾಶಿ:
ನಿಮಗೆ ಗುರುಬಲ ಶನಿಬಲ ಎರಡೂ ಇರುವುದರಿಂದ ಯಾವ ತೊಂದರೆಯು ಇಲ್ಲ. ಹೊಸ ಕೆಲಸ ಸಿಗುವುದು, ಕೆಲಸದಲ್ಲಿ ಬಡ್ತಿ ಸಿಗುವುದು, ಅವಿವಾಹಿತರಿಗೆ ವಿವಾಹ ಯೋಗ, ಮನೆ ಕಟ್ಟುವುದು-ಕೊಳ್ಳುವುದು, ಇತರೆ ಆಸ್ತಿ ಖರೀದಿ, ಪ್ರವಾಸ ವಿದೇಶ ಪ್ರಯಾಣ ಮೊದಲಾದ ಎಲ್ಲ ಸಂಗತಿಗಳೂ ಈಗ ನಡೆಯುತ್ತದೆ. ಮೂರರ ಶನಿ ನಿಮಗೆ ಅಪಾರ ಶಕ್ತಿಯ ಜೊತೆಗೆ ಧನ ಲಾಭವನ್ನು ಕೊಡುತ್ತಾನೆ. ವೃತ್ತಿ ಸಂಬಂಧವಾಗಿ ಕೊಂಚ ಅಲೆದಾಟ ಇರುತ್ತದೆ. ಆಸ್ತಿ ಕೊಳ್ಳುವಾಗ ಯೋಚಿಸಿ ದಾಖಲೆಗಳನ್ನು ಪರಿಶೀಲಿಸಿ ಖರೀದಿ ಮಾಡಿಕೊಳ್ಳುವುದು ಸೂಕ್ತ. ರಾಹು ನಾಲ್ಕನೇ ಮನೆಯಲ್ಲಿ ಇರುವುದರಿಂದ ಕೊಂಚ ದಾರಿ ತಪ್ಪಿಸುತ್ತಾನೆ. ತಾಯಿಯ ಆರೋಗ್ಯ ಜಾಗ್ರತೆ ಇರಲಿ. 16ರಂದು ರವಿ, 27 ರಂದು ಕುಜ ಧನಸ್ಸು ರಾಶಿಗೆ ಪ್ರವೇಶವಾಗುವುದು ನಿಮಗೆ ಕೊಂಚ ಉಷ್ಣ ಪ್ರಕೋಪ ಹೆಚ್ಚಾಗುತ್ತದೆ. ಹಠ ಜಾಸ್ತಿಯಾಗುತ್ತದೆ. ಇದರಿಂದ ಯಾವುದೇ ಅನಾಹುತಗಳಾಗದಂತೆ ತಡೆಯುವುದು ನಿಮ್ಮ ಕೈಯಲ್ಲೇ ಇದೆ. ಮಗನೊಂದಿಗೆ ಬಾಂಧವ್ಯ ಚೆನ್ನಾಗಿ ಇರುತ್ತದೆ. ಮಗನಿಂದ ಖುಷಿ, ಸಂತೋಷದ ಸಂಗತಿಗಳು ಇವೆ. ಲೋಹದ ವ್ಯಾಪಾರಿಗಳಿಗೆ ಈಗ ಬಹಳ ಒಳ್ಳೆಯ ಕಾಲ. ವಿದ್ವಾಂಸರಿಗೆ ಬರಹಗಾರರಿಗೆ ಅಧ್ಯಾಪಕ ವೃತ್ತಿಯವರಿಗೆ ಈಗ ಶುಭಕಾಲ.

ಮಕರ ರಾಶಿ:
ಈಗ ನಿಮಗೆ ಕಳೆದ ದಿನಗಳಷ್ಟು ಮನಃಕ್ಲೇಶ ಹಣದ ಅಭಾವ ಇರುವುದಿಲ್ಲ. ನಿಂತು ಹೋಗಿದ್ದ ಕೆಲಸಗಳು ಈಗ ವೇಗ ಪಡೆದುಕೊಳ್ಳುತ್ತದೆ. ಸಾಡೆಸಾತಿಯ ಪ್ರಭಾವದಿಂದ ಸಹ ನೀವು ಬಹಳ ಮುಂದೆ ಬಂದಿದ್ದೀರಿ. ಮೊದಲಿನಷ್ಟು ಈಗ ಶನಿಯ ದುಷ್ಟ ಪ್ರಭಾವ ಈಗ ಇರುವುದಿಲ್ಲ. ರಾಹು ಮೂರನೇ ಮನೆಯಾದ ಪರಾಕ್ರಮ ಸ್ಥಾನದಲ್ಲಿ ಬಂದಿದ್ದಾನೆ. ಇದು ನಿಮಗೆ ಮನೋಬಲವನ್ನು ವೃದ್ಧಿಸುತ್ತದೆ. ಪರಾಕ್ರಮವನ್ನು ಹೆಚ್ಚಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಯಾವುದೇ ಕೆಲಸ ಈಗ ಕ್ಷಿಪ್ರಗತಿಯಲ್ಲಿ ಮುಂದುವರೆಯುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಡಿಸೆಂಬರ್ 16ರ ವರೆಗೂ ಸೂರ್ಯ ಹನ್ನೊಂದನೇ ಮನೆಯಲ್ಲಿ ಇದ್ದು ನಿಮಗೆ ಲಾಭ ತಂದುಕೊಡುತ್ತಾನೆ. 24ಕ್ಕೆ ಶುಕ್ರ ಹನ್ನೊಂದನೇ ಮನೆಗೆ ಪ್ರವೇಶವಾದಾಗಲೂ ನಿಮಗೆ ಒಳ್ಳೆಯ ಫಲಗಳು ಸಿಗಲಿದೆ. 5 ವರ್ಷದಿಂದ ಸಾಡೆಸಾತಿ ಶನಿಯ ಪ್ರಭಾವದಲ್ಲಿ ಬಹಳ ಬಳಲಿದ್ದೀರಿ. ಈಗ ಒಂದೊಂದಾಗಿ ಶುಭಫಲಗಳನ್ನು ಕಾಣಲಿದ್ದೀರಿ. ಮುಂದೆ ನಿಮಗೆ ಒಳ್ಳೆಯ ದಿನಗಳ ಸರಮಾಲೆಯೇ ಬರಲಿದೆ. ಸಾಲ ಸಂದಾಯಮಾಡುವುದು, ಹೊಸ ವಾಹನ ಕೊಳ್ಳುವುದು, ಆಸ್ತಿ ಕೊಳ್ಳುವುದು ಮುಂತಾದ ಶುಭಸಂಗತಿಗಳು ಇವೆ. ಮನಸ್ಸಿಗೆ ಕವಿದಿದ್ದ ಚಿಂತೆಗಳು ದೂರವಾಗುತ್ತವೆ.

ಕುಂಭ ರಾಶಿ:
ಈಗ ನಿಮಗೆ ತುಸು ಗಂಭೀರ ಸಮಯ. ಗುರುಬಲ,ಶನಿಬಲ ಮತ್ತು ರಾಹು-ಕೇತು ಬಲ ಇಲ್ಲ. ಸಾಡೆಸಾತಿ ಶನಿಯ ಮಧ್ಯಭಾಗದಲ್ಲಿ ಇದ್ದೀರಿ. ಶನಿಯ ಪ್ರಭಾವಕ್ಕೆ ಸಿಕ್ಕು ನುಜ್ಜುಗುಜ್ಜಾಗುತ್ತೀರಿ. ಹಣದ ಹರಿವು ಕಡಿಮೆಯಾಗಲಿದೆ. ಖರ್ಚು ಹೆಚ್ಚಾಗಲಿದೆ. 16ರ ನಂತರ ಸೂರ್ಯ 27ರ ನಂತರ ಕುಜ ಹನ್ನೊಂದನೇ ಮನೆಗೆ ಪ್ರವೇಶವಾದಾಗ ನಿಮ್ಮ ಪರಿಸ್ಥಿತಿ ಕೊಂಚ ಹಿಡಿತಕ್ಕೆ ಬರುತ್ತದೆ. ಹಣದ ಹರಿವು ಸರಾಗವಾಗುತ್ತದೆ. ಕುಟುಂಬದಲ್ಲಿ ಮನಸ್ತಾಪ ಭಿನ್ನಾಭಿಪ್ರಾಯ ಇರುತ್ತದೆ. ಹೆಚ್ಚು ವಾದ ಮಾಡಬೇಡಿ. ನಿಮ್ಮದೇ ಸರಿ ಎಂದು ವಾದಿಸಬೇಡಿ. ಆದಷ್ಟು ಮೌನ ಕಾಯ್ದುಕೊಳ್ಳಿ. ಕಿರಿಕಿರಿ ಉಂಟಾಗುವ ಸಂದರ್ಭಗಳಲ್ಲಿ ಜನರಿಂದ ದೂರ ಉಳಿದುಕೊಳ್ಳವುದು ಸೂಕ್ತ. ಆಪ್ತರೊಂದಿಗೆ ಹರಿತವಾಗಿ ಮಾತನಾಡಬೇಡಿ. ಇವೆಲ್ಲವೂ ನಿಮಗೆ ಋಣಾತ್ಮಕ ಪರಿಣಾಮವನ್ನುಂಟು ಮಾಡಲಿವೆ. ಮನಃ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ವಿವಾಹವಾಗಬಯಸುವವರು ಇನ್ನೂ ಮೂರು ತಿಂಗಳು ಕಾಯಬೇಕು. ವೃತ್ತಿಯಲ್ಲಿ ಒತ್ತಡ ಇರುತ್ತದೆ. ವರ್ಗಾವಣೆಯ ಸಾಧ್ಯತೆಯು ಇದೆ. ಮನಸ್ಸನ್ನು ಕುಗ್ಗಿಸುವ ಸಂಗತಿಗಳಿಂದ ದೂರವಿದ್ದು ಸಮಾಧಾನ ಕಾಪಾಡಿಕೊಳ್ಳಿ.

ಮೀನ ರಾಶಿ:
ಸಾಡೆಸಾತಿ ಶನಿಯ ಮೊದಲ ಭಾಗದಲ್ಲಿದ್ದೀರಿ. ಖರ್ಚುಗಳು, ಕಿರಿಕರಿಗಳು ಇದ್ದರೂ ಗುರುಬಲ ಇರುವುದರಿಂದ ನಿಮಗೆ ಅದರ ಬಿಸಿ ತಾಕಿಲ್ಲ. ಈಗ ರಾಹು ನಿಮ್ಮ ರಾಶಿಗೆ ಬಂದಿರುವುದರಿಂದ ಆರೋಗ್ಯದ ಕಡೆ ಗಮನ ಹರಿಸಿಬೇಕಿದೆ. ಏಳನೇ ಮನೆಯಲ್ಲಿ ಕೇತು ಇರುವುದರಿಂದ ಸಂಗಾತಿಯೊಂದಿಗಿನ ಬಾಂಧವ್ಯದಲ್ಲಿ ಚಿಕ್ಕಪುಟ್ಟ ಘರ್ಷಣೆಗಳಾಗಬಹುದು. ಯಾವುದೇ ಕಿರಿಕಿರಿಗೆ ಅವಕಾಶ ಕೊಡಬೇಡಿ. ವಾದಗಳಿಂದ ದೂರವಿರಿ. 24ರ ನಂತರ ಶುಕ್ರ ಭಾಗ್ಯಸ್ಥಾನಕ್ಕೆ ಬರುವುದು ನಿಮಗೆ ಲಾಭವನ್ನು ತಂದುಕೊಡುತ್ತದೆ. ದೇವಿ ಕೃಪೆ ಸಿಗುತ್ತದೆ. ಪ್ರವಾಸ ಅಥವಾ ವಿಹಾರಕ್ಕೆ ಹೋಗುವ ಅವಕಾಶ ಒದಗಿ ಬರುತ್ತದೆ. ಸುಖ ಭೋಜನ, ಸಮಾರಂಭಗಳಿಗೆ ಭೇಟಿಯಾಗುವುದು, ಬಂಧುಬಾಂಧವರ ಜೊತೆ ಉಲ್ಲಾಸದಿಂದ ಬೆರೆಯುವುದು ಮುಂತಾದ ಮನಸ್ಸಿಗೆ ಮುದ ಕೊಡುವ ಸಂಗತಿಗಳು ಇವೆ. ಒಡವೆ ಖರೀದಿ ಮಾಡುತ್ತೀರಿ. ಖರ್ಚುಗಳು ಹೆಚ್ಚು ಇದ್ದರೂ ಜಾಣ್ಮೆಯಿಂದ ನಿಭಾಯಿಸುತ್ತೀರಿ. ವೃತ್ತಿಯಲ್ಲಿ ಯಶಸ್ಸು ಗಳಿಸುತ್ತೀರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸುತ್ತೀರಿ. ಅವಿವಾಹಿತರಿಗೆ ವಿವಾಹಯೋಗ ಇದೆ. ಜನರು ನಿಮ್ಮ ಸಲಹೆಗಳನ್ನು ಪಾಲಿಸುತ್ತಾರೆ. ನಿಮ್ಮ ಮಾತಿಗೆ ಬೆಲೆ ಇದೆ.
ಶುಭಮಸ್ತು.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications