Get Updates
Get notified of breaking news, exclusive insights, and must-see stories!

ಮೇ ತಿಂಗಳ ಭವಿಷ್ಯ: ನಿಮ್ಮ ರಾಶಿಯ ಫಲಾ ಫಲ ಹೇಗಿದೆ ನೋಡಿ...!

ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಮೇ ತಿಂಗಳು ಬಹಳ ವಿಶೇಷವಾಗಿದೆ. ಗ್ರಹಗತಿಗಳು ಬದಲಾದಂತೆಲ್ಲಾ ದ್ವಾದಶಿ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಆರ್ಥಿಕ ಸ್ಥಿತಿಗತಿ, ಮದುವೆ, ಉದ್ಯೋಗ, ವೈಯಕ್ತಿ ಜೀವನ, ಆರೋಗ್ಯ ಇಂತೆಲ್ಲಾ ವಿಚಾರಗಳ ಮೇಲೆ ಗ್ರಹಗಳ ಸ್ಥಾನಪಲ್ಲಟ ಪರಿಣಾಮ ಬೀರಲಿದೆ. ಕೆಲವರಿಗೆ ಇದರಿಂದ ಶುಭವಾದರೆ ಮತ್ತೂ ಕೆಲವರಿಗೆ ಇದರಿಂದ ಅಶುಭವಾಗಲಿದೆ. ಹಾಗಾದ್ರೆ ನಿಮ್ಮ ರಾಶಿಗೆ ಮೇ ತಿಂಗಳಲ್ಲಿ ಹೇಗಿರುತ್ತದೆ? ಎಂಬುದನ್ನು ತಿಳಿಯೋಣ.

ಶುಕ್ರ ಗ್ರಹ ಮೇ 2 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ನಂತರ ಮೇ 28 ರಂದು ವೃಷಭ ರಾಶಿಗೆ ಚಲಿಸುತ್ತದೆ. ಇದು ಪ್ರಯತ್ನಕ್ಕೆ ಯೋಗ್ಯವಾದ ಪ್ರತಿಫಲವನ್ನು ನೀಡುತ್ತದೆ. ಇನ್ನೂ ಬುಧ ಮೇ 10 ರಂದು ಮಿಥುನದಲ್ಲಿ ಹಿಮ್ಮುಖ ಸಂಚಾರ ಪ್ರಾರಂಭವಾಗುತ್ತದೆ. ನಂತರ ಮೇ 22ರಂದು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಸಂಚರಿಸಿ ಜೂನ್ 3 ರಂದು ಕೊನೆಗೊಳ್ಳುತ್ತದೆ. ಈ ವೇಳೆ ಸಂವಹನ, ತಂತ್ರಜ್ಞಾನ ಮತ್ತು ಪ್ರಯಾಣದ ದುರ್ಘಟನೆಗಳು ಸಂಭವಿಸಬಹುದು ಎಂದು ನಿರೀಕ್ಷಿಸಬಹುದು. ಮೇ 10 ರಂದು ಮೇಷ ರಾಶಿಗೆ ಗುರುವಿನ ಸಂಚಾರ ನಮ್ಮ ಆಸೆಗಳನ್ನು ಮತ್ತು ಜೀವನದ ಕಾಮವನ್ನು ಹೆಚ್ಚಿಸುತ್ತದೆ. ಮೇ 16 ರ ಚಂದ್ರ ಗ್ರಹಣವು ಸಂಬಂಧಗಳನ್ನು ವಿಕಸನಗೊಳಿಸಲು ಮತ್ತು ನಾವು ಇತರರಿಗೆ ಸಂಬಂಧಿಸಿರುವ ರೀತಿಯಲ್ಲಿ ನವೀಕರಿಸಲು ನಮ್ಮನ್ನು ಒತ್ತಾಯಿಸುತ್ತದೆ.

ಮೇ 20 ರಂದು ಮಿಥುನ ರಾಶಿಗೆ ಸೂರ್ಯನ ಪ್ರವೇಶವು ಶಕ್ತಿಯನ್ನು ಹಗುರಗೊಳಿಸುತ್ತದೆ ಮತ್ತು ನಮಗೆ ಮೋಜು ಮಾಡುವ ಅವಕಾಶವನ್ನು ನೀಡುತ್ತದೆ. ಮೇ 24ರಂದು ಮಂಗಳ ಗ್ರಹ ಮೇಷ ರಾಶಿಗೆ ಚಲಿಸುತ್ತದೆ. ಈ ಕ್ರಿಯೆಯು ಸ್ಫೂರ್ತಿಯನ್ನು ನೀಡುತ್ತದೆ. ಮೇ 30ರ ಅಮಾವಾಸ್ಯೆ ಹಳೆಯ ಕನಸುಗಳನ್ನು ನನಸಾಗಿಸುವ ಸಮಯವಾಗಿದೆ.

ಮೇಷ: ಹೂಡಿಕೆಯಲ್ಲಿ ಕುರುಡುತನ

ಮೇಷ: ಹೂಡಿಕೆಯಲ್ಲಿ ಕುರುಡುತನ

ಮೇ ತಿಂಗಳು ಮೇಷ ರಾಶಿಯವರಿಗೆ ಸ್ಥಿರವಾಗಿರುತ್ತದೆ. ಧೈರ್ಯಕ್ಕೆ ಹೆಸರುವಾಸಿಯಾಗಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲು ನೀವು ಹಿಂದೆ ಉಳಿಯುತ್ತೀರಿ. ಮೇ 2 ಮತ್ತು 10 ರಂದು ಶುಕ್ರ ಮತ್ತು ಗುರು ಸಂಚಾರದಿಂದ ಹಣಕಾಸಿನ ತೊಂದರೆಗಳಾಗುವ ಸಾಧ್ಯತೆ ಇದೆ. ಮೇ 16 ರ ಚಂದ್ರಗ್ರಹಣದ ಸಮಯದಲ್ಲಿ ಹಣ ನಿಮ್ಮ ಕೈ ಸೇರುವುದನ್ನು ತಪ್ಪಿಸಲು ಬಿಡಬೇಡಿ. ನಿಮ್ಮ ಹೂಡಿಕೆಯ ಆಯ್ಕೆಗಳನ್ನು ಎಚ್ಚರಿಕೆಯಿಂದ ಅಳೆಯಿರಿ. ಕುರುಡುತನದಿಂದ ಹೂಡಿಕೆ ಮಾಡಬೇಡಿ. ಹೂಡಿಕೆಯಲ್ಲಿ ಅನುಭವಿಗಳಿಂದ ಸಲಹೆ ಪಡೆದು ನಂತರ ಹೂಡಿಕೆ ಮಾಡುವುದು ಉತ್ತಮ. ಒಂಟಿಯಾಗಿ ಹಣಕಾಸಿನ ವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹಾಗಂತ ನಿಮ್ಮ ಗೌಪ್ಯ ವಿಚಾರಗಳನ್ನು ಬಹಿರಂಗಪಡಿಸುವುದು ಬೇಡ. ನಿಮಗೆ ವಿಶ್ವಾಸವಿಡಬಹುದು ಎನಿಸುವ ವ್ಯಕ್ತಿಗಳ ಸಲಹೆ ಪಡೆಯಿರಿ. ಮೇ 24 ರಂದು ನಿಮ್ಮ ಗ್ರಹದ ಅಧಿಪತಿಯಾದ ಮಂಗಳವು ಸೂರ್ಯನೊಂದಿಗೆ ಹೊಂದಿಕೆಯಾಗುವ ಹೊತ್ತಿಗೆ ಮತ್ತು ಮೇ 28 ರಂದು ಶುಕ್ರವು ವೃಷಭ ರಾಶಿಗೆ ಜಾರಿದಾಗ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಲು ಪ್ರಾರಂಭವಾಗುತ್ತದೆ.

ವೃಷಭ: ವೈವಾಹಿಕ ಜೀವನದಲ್ಲಿ ಸಂತೋಷ

ವೃಷಭ: ವೈವಾಹಿಕ ಜೀವನದಲ್ಲಿ ಸಂತೋಷ

ಮೇ ತಿಂಗಳು ವೃಷಭ ರಾಶಿಯವರನ್ನು ಚಿಂತೆಗೀಡುಮಾಡಬಹುದು. ಮೇ 2 ರಂದು ಮೇಷ ರಾಶಿಗೆ ಶುಕ್ರನ ಚಲನೆಯು ನಿಮ್ಮನ್ನು ಸಂಬಂಧಗಳಲ್ಲಿ ಬೇಸರಗೊಳಿಸಬಹುದು. ಕಾರನ್ನು ಚಾಲನೆ ಮಾಡುವ ಬದಲು, ನೀವು ಸವಾರನಾಗಿ ಸಂಬಂಧಿಕರೊಂದಿಗೆ ಜೊತೆಯಲ್ಲಿರುವವರಾಗಿರುತ್ತೀರಿ. ಅಂದರೆ ನಿಮ್ಮನ್ನು ಕಡೆಗಣಿಸುವವರು ಹುಟ್ಟಿಕೊಳ್ಳುತ್ತಾರೆ. ಈ ಬದಲಾವಣೆಯಿಂದ ನಿಮ್ಮ ಸಂಬಂಧಿಕರು ನಿಮ್ಮನ್ನು ಅಚ್ಚರಿಗೊಳಿಸಬಹುದು. ಮೇ 16 ರ ಚಂದ್ರಗ್ರಹಣವು ನಿಮ್ಮ ಅನಿಯಮಿತ ಪ್ರೇಮ ಜೀವನವನ್ನು ಹೆಚ್ಚಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. ವಿಶೇಷವಾಗಿ ನಿಮ್ಮ ಮೋಹ ಹೆಚ್ಚಾಗಲಿದೆ. ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಳ್ಳುವುದು ಉತ್ತಮ. ಆ ಗುರಿ ಸಾಧನೆಯತ್ತ ನಿಮ್ಮನ್ನು ಕೊಂಡೊಯ್ಯವಾಗ ಕಲ್ಲು ಮುಳ್ಳುಗಳಂತ ಅಡೆತಡೆಗಳು ಬರುತ್ತವೆ. ಆದರೆ ಹಿಂಜರಿಯದಿರಲು ಸೂಚಿಸಲಾಗುತ್ತದೆ. ಮೇ 22 ನಂತರ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತೀರಿ. ನಿಮಗೆ ಕುಟುಂಬಸ್ಥರ ವಿಶೇಷವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಸಮಸ್ಯೆಗಳು ಪರಿಹಾರಗೊಳ್ಳಲಿವೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ವ್ಯಾಪಾರದಲ್ಲಿ ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಲು ಸೂಚಿಸಲಾಗುತ್ತದೆ.

ಮಿಥುನ: ವೃತ್ತಿಪರ ಅವಕಾಶಗಳಲ್ಲಿ ಹೆಚ್ಚಳ

ಮಿಥುನ: ವೃತ್ತಿಪರ ಅವಕಾಶಗಳಲ್ಲಿ ಹೆಚ್ಚಳ

ಮಿಥುನ ರಾಶಿಯವರಿಗೆ ಮೇ ತಿಂಗಳು ಉತ್ತಮವಾಗಿದೆ. 10ನೇ ತಾರೀಖಿನಂದು ಗುರುವು ಮೇಷ ರಾಶಿಯನ್ನು ಪ್ರವೇಶಿಸಿದಾಗ ನಿಮಗೆ ವೃತ್ತಿಪರ ಅವಕಾಶಗಳು ಸಿಗಲಿವೆ. ನಿಮ್ಮ ಯಶಸ್ಸಿನಲ್ಲಿ ನೀವು ಆನಂದಿಸಲು ಬಯಸುತ್ತೀರಿ. ನಿಮ್ಮ ಸಾಮರ್ಥ್ಯವನ್ನು ಅವಲೋಕಿಸುತ್ತೀರಿ. ಮಾತ್ರವಲ್ಲದೆ ನೀವು ಕೆಲಸದಲ್ಲಿ ಉತ್ತಮ ವ್ಯಕ್ತಿಯಾಗಿರುತ್ತೀರಿ. ನಿಮ್ಮ ಚತುರ ಮೆದುಳು ಎಲ್ಲರಿಗಿಂತಲೂ ಹತ್ತು ಹೆಜ್ಜೆ ಮುಂದುವರೆದು ಯೋಚಿಸುತ್ತದೆ. ಹೀಗಾಗಿ ನಿಮ್ಮ ಸೃಜನಶೀಲತೆ ಮತ್ತು ಒಳನೋಟವನ್ನು ಗುರುತಿಸಲಾಗುತ್ತದೆ. ನಿಮ್ಮ ಜ್ಞಾನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮೇ 22 ನಂತರ ನಿಮ್ಮ ಆಸಕ್ತಿ ಕ್ಷೀಣಿಸಬಹುದು. ಆದರೆ ಅದನ್ನು ಯಥಾ ಸ್ಥಿತಿಗೆ ಕಾಪಾಡಿಕೊಂಡು ಹೋಗುವುದು ಉತ್ತಮ. ನಿಮ್ಮ ಜೀವನ ಸಂಗಾತಿಯಿಂದ ನೀವು ಉತ್ತಮ ಸಹಕಾರವನ್ನು ಪಡೆಯುತ್ತೀರಿ. ನೀವು ನಿಮ್ಮವರಿಗಾಗಿ ಸಮಯವನ್ನು ಕಾಯ್ದಿರಿಸುತ್ತೀರಿ. ಮುಂದಿನ ಭವಿಷ್ಯದ ನಿರ್ಧಾರಗಳನ್ನು ಈಗಿನಿಂದಲೇ ನೀವು ಯೋಚಿಸುತ್ತೀರಿ.

ಕರ್ಕಟಕ: ಸಮಸ್ಯೆಗಳನ್ನು ಸರಿಪಡಿಸಲು ಅವಕಾಶ

ಕರ್ಕಟಕ: ಸಮಸ್ಯೆಗಳನ್ನು ಸರಿಪಡಿಸಲು ಅವಕಾಶ

ಮೇ ತಿಂಗಳು ನಿಮಗೆ ಕೊಂಚ ಬೇಸರ ತರಬಹುದು. ಮೇ 16 ರಂದು ಚಂದ್ರಗ್ರಹಣ ಉದ್ವಿಗ್ನತೆಯನ್ನು ಉಂಟುಮಾಡಬಹುದು. ಮೇ 22ರ ನಂತರ ನಿಮಗೆ ಇತ್ತೀಚೆಗೆ ಆದ ಸಣ್ಣ ಗಾಯಗಳು ದೊಡ್ಡದಾಗಬಹುದು. ಆದರೆ ಯೋಚನೆ ಬೇಡ. ಅದು ಕೆಲ ದಿನಗಳ ಬಳಿಕ ಸರಿ ಹೋಗುತ್ತದೆ. ಹಳೆಯ ಸ್ನೇಹಿತರನ್ನು ಮರುಸಂಪರ್ಕಿಸಲು ಮತ್ತು ಸಮಸ್ಯೆಗಳನ್ನು ಸರಿಪಡಿಸಲು ನಿಮಗೆ ಅವಕಾಶವಿದೆ. ವಿಶೇಷವಾಗಿ ಮೇ 30 ರ ಅಮಾವಾಸ್ಯೆಯ ಸಮಯದಲ್ಲಿ ನಿಮ್ಮ ಅತಿಯಾದ ಎಚ್ಚರಿಕೆ ಭಾವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ ಮತ್ತು ಈ ಸಮಯದಲ್ಲಿ ಇತರರನ್ನು ಅರ್ಥಮಾಡಿಕೊಳ್ಳಲು ಮೃದುವಾದ ವಿಧಾನವನ್ನು ತೆಗೆದುಕೊಳ್ಳಿ. ಸ್ವಲ್ಪ ಸಹಾನುಭೂತಿ ಮತ್ತು ದಯೆಯೊಂದಿಗೆ, ನಿಮ್ಮ ಸ್ನೇಹವು ವಿಕಸನಗೊಳ್ಳಬಹುದು. ಇದರಿಂದ ಬೆಳವಣಿಗೆ ಹೊಂದಬಹುದು. ಕೆಲಸದಲ್ಲಿ ತಾಳ್ಮೆಯಿಂದ ವರ್ತಿಸಿದರೆ ಮುಂದೊಂದು ದಿನ ನೀವು ರಾಜನಂತೆ ಮುನ್ನುಗ್ಗಲು ಸಾಧ್ಯವಾಗುತ್ತದೆ. ಶತ್ರುಗಳ ಹೆಚ್ಚಾಗುವುದನ್ನು ಆದಷ್ಟು ತಪ್ಪಿಸಿ. ಸಹನೆಯಿಂದ ವರ್ತಿಸಿ ನಿಮ್ಮ ಮೇಲೆ ಗೌರವವಿಡುವಂತೆ ನೋಡಿಕೊಳ್ಳಿ. ಲಾಭದಾಯಕ ಕೆಲಸಗಳತ್ತ ಯೋಚಿಸಿ ಒಂದೇ ಕೆಲಸಕ್ಕೆ ಅಂಟಿಕೊಳ್ಳಬೇಡಿ.

ಸಿಂಹ: ಸಹೋದ್ಯೋಗಿಗಳೊಂದಿಗೆ ಮನಸ್ತಾಪ

ಸಿಂಹ: ಸಹೋದ್ಯೋಗಿಗಳೊಂದಿಗೆ ಮನಸ್ತಾಪ

ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಸಾಧನೆಗಳನ್ನು ಪೋಸ್ಟ್ ಮಾಡುವುದು ಮತ್ತು ನಿಮ್ಮ ಪ್ರಯತ್ನಗಳ ಬಗ್ಗೆ ಸ್ನೇಹಿತರಿಗೆ ಬಡಾಯಿ ಕೊಚ್ಚಿಕೊಳ್ಳುವುದು ಘರ್ಷಣೆಯನ್ನು ಉಂಟುಮಾಡುತ್ತದೆ. ಆದರೆ ನಿಮ್ಮ ಸಾಧನೆಯನ್ನು ನಿಲ್ಲಿಸಬೇಡಿ. ಮೇ 10 ರಂದು ಶಕ್ತಿ ಕುಂದಬಹುದು. ಅನಗತ್ಯ ವಾದಗಳನ್ನು ತಪ್ಪಿಸಿ. ನಿಮ್ಮವರನ್ನು ಗೌರವಿಸಿ. ಎಲ್ಲರಂತೆ ನೀವು ಒಬ್ಬರಾಗಿರಿ. ಮೇ 20 ರಂದು ಮಿಥುನ ರಾಶಿಗೆ ಸೂರ್ಯ ಪರಿವರ್ತನೆ, ಮೇ 30 ರ ಅಮಾವಾಸ್ಯೆ ನಂತರ ನಿಮ್ಮ ಶಕ್ತಿ ಪರೀಕ್ಷೆಗೊಳಪಡಬಹುದು ಮತ್ತು ಅದರ ಮೇಲೆ ಅಸೂಯೆ ಉಂಟುಮಾಡಬಹುದು. ಆದ್ದರಿಂದ ದುಷ್ಟ ಕಣ್ಣುಗಳಿಂದ ದೂರವಿರಿ. ವೃತ್ತಿಯಲ್ಲಿ ಅನುಭವ ಹೊಂದಿದರೆ ಸಾಲದ ನಿಮ್ಮ ಸಹೋದ್ಯೋಗಿಗಳೊಂದಿಗೂ ಅನುಭವಿ ವ್ಯಕ್ತಿಯಂತೆ ವರ್ತಿಸಲು ಸೂಚಿಸಲಾಗುತ್ತದೆ. ನಿಮ್ಮ ತಾಳ್ಮೆ ಮತ್ತೊಬ್ಬರಿಗೆ ಮಾದರಿಯಾದಗಲೇ ನಿಮ್ಮ ಬೆಳವಣಿಗೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಅನಾವಶ್ಯಕ ಸಮಯ ವ್ಯರ್ಥ ಮಾಡಬೇಡಿ. ಅದರಿಂದ ನಿಮ್ಮ ಲಾಭದಾಯಕ ವೃತ್ತಿಗೆ ಭಾರೀ ದೊಡ್ಡ ನಷ್ಟ ಉಂಟಾಗಲಿದೆ.

ಕನ್ಯಾ: ಸಂಬಂಧಗಳಲ್ಲಿ ಸಂಪರ್ಕ ಮಿತಿ

ಕನ್ಯಾ: ಸಂಬಂಧಗಳಲ್ಲಿ ಸಂಪರ್ಕ ಮಿತಿ

ನೀವು ನಿಮ್ಮ ಹೆಚ್ಚಿನ ಶಕ್ತಿ ಮತ್ತು ಸಮಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಆದರೆ ನೀವು ಓಡುವ ಸಮಯದೊಂದಿಗೆ ನಡೆಯಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿಯಿರಿ. ನಿಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಮುನ್ನುಗ್ಗುವುದು ಉತ್ತಮ. ಸಂಬಂಧಗಳಲ್ಲಿ ಸಂಪರ್ಕ ಮಿತಿಗೊಳಿಸುವುದು ಮುಖ್ಯವಾಗಿದೆ. ಮೇ 10 ರಂದು ಮಿಥುನ ರಾಶಿಯಲ್ಲಿ ಬುಧವು ತನ್ನ ಹಿಮ್ಮುಖ ಸಂಚಾರ ಪ್ರಾರಂಭಿಸಿದಾಗ, ನೀವು ನಿಮ್ಮ ಅಭಿಪ್ರಾಯಗಳಲ್ಲಿ ದೃಢವಾಗಿ ನಿಲ್ಲಬೇಕು ಮತ್ತು ಯಾವುದೇ ಹುಚ್ಚಾಟಗಳಿಗೆ ಮಣಿಯಬಾರದು. ಬೇರೆಯವರ ಆಸೆಗಳು ನಿಮಗೆ ಹೇಗೆ ಅನಿಸುತ್ತದೆ ಎಂಬುದರ ಕುರಿತು ಯೋಚಿಸಿ, ನಂತರ ಆಸೆ ಎಷ್ಟಮಟ್ಟಿಗೆ ಪಡಬೇಕು ಎನ್ನುವದನ್ನು ತಿಳಿಯಿರಿ. ಏಕೆಂದರೆ ಅತಿಯಾದ ಆಸೆ ನಿಮ್ಮನ್ನು ದುರಾಸೆಗೆ ತಳ್ಳಿ ಜೀವನ ಹಾಳು ಮಾಡಬಹುದು. ಆಸ್ತಿ ಖರೀದಿ ಮಾಡುವ ಬಗ್ಗೆ ಈ ತಿಂಗಳು ಯೋಚಿಸುವುದು ಬೇಡ. ಸಾಲಗಳಿದ್ದರೆ ಪಾವತಿಸುವುದು ಒಳ್ಳೆದು. ಯಾಕೆಂದರೆ ನಿಮ್ಮ ನಂಬಿ ಸಾಲ ನೀಡಿದವರಿಂದ ಗೌರವ ಉಳಿಸಿಕೊಳ್ಳಿ. ಕುಟುಂಬಸ್ಥರ ಆರೋಗ್ಯದ ಕಡೆಗೆ ಗಮನ ಹರಿಸುವುದು ಉತ್ತಮ.

ತುಲಾ: ಅಹಂಕಾರಕ್ಕೆ ಅಂತ್ಯ

ತುಲಾ: ಅಹಂಕಾರಕ್ಕೆ ಅಂತ್ಯ

ಮೇ ತಿಂಗಳು ನಿಮಗೆ ಉತ್ತಮವಾಗಿರಲಿದೆ. ಮೇ 16 ರಂದು ಚಂದ್ರಗ್ರಹಣ ನಿಮ್ಮನ್ನು ಒಂದು ವಿಷಯದ ಬಗ್ಗೆ ಆಳವಾಗಿ ಯೋಚಿಸುವಂತೆ ಮಾಡುತ್ತದೆ. ಇದು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಶಕ್ತಿಯನ್ನು ನೀಡುತ್ತದೆ. ಈ ಗ್ರಹಣದ ಸಮಯದಲ್ಲಿ ನಿಮ್ಮ ಅಹಂಕಾರ ಕೊನೆಗೊಳ್ಳಲಿದೆ. ಆದರೆ ಇದು ನಿಮಗೆ ಒಂಟಿತನದ ಭಾವನೆಯನ್ನು ಉಂಟುಮಾಡಬಹುದು. ಅದಕ್ಕಾಗಿಯೇ ನೀವು ಸ್ವಲ್ಪ ಸಮಯದವರೆಗೆ ಮಾತನಾಡದ ಕುಟುಂಬ ಮತ್ತು ಸ್ನೇಹಿತರನ್ನು ಸಂಪರ್ಕಿಸಿ. ಅವರೊಂದಿಗೆ ಬೆರೆಯಿರಿ. ಮೇ 30 ರ ಅಮಾವಾಸ್ಯೆಯ ಸಮೀಪದಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗಬಹುದು. ಕೆಲಸದಲ್ಲಿ ಅಭಿವೃದ್ಧಿ ಹೊಂದಬಹುದು. ಹೆಸರು ಖ್ಯಾತಿ ಗಳಿಸುವ ಸಾಧ್ಯತೆ ಇದೆ. ಆದರೆ ಯಾವುದೇ ಕಾರಣಕ್ಕೂ ಕೆಲಸದ ಮೇಲಿನ ಆಸಕ್ತಿ ಕಳೆದುಕೊಳ್ಳಬೇಡಿ. ನಿಮ್ಮ ಸಹೋದ್ಯೋಗಿಗಳಿಂದ ನಿಮಗೆ ಉತ್ತಮ ಬೆಂಬಲ ಸಿಗಲಿದೆ. ಕುಟುಂಬದೊಂದಿಗೆ ಸಂಬಂಧವನ್ನು ಕಾಪಾಡಲು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಈ ತಿಂಗಳು ಹಠಾತ್ ಆರ್ಥಿಕ ಲಾಭ ಪಡೆಯವ ಸಾಧ್ಯತೆ ಇದೆ.

ವೃಶ್ಚಿಕ: ಪ್ರಯಾಣ ಪ್ರಯೋಜನಕಾರಿ

ವೃಶ್ಚಿಕ: ಪ್ರಯಾಣ ಪ್ರಯೋಜನಕಾರಿ

ಮೇ 16 ರ ಚಂದ್ರ ಗ್ರಹಣ ನಂತರ ಎದುರಾಳಿಯು ಯಾವುದೇ ಹಾನಿಯನ್ನುಂಟು ಮಾಡಲು ಸಾಧ್ಯವಾಗುವುದಿಲ್ಲ. ಕುಟುಂಬ ಜೀವನವು ಭವ್ಯವಾಗಿರುತ್ತದೆ ಮತ್ತು ಮಕ್ಕಳು ತುಂಬಾ ಒಳ್ಳೆಯದನ್ನು ಅನುಭವಿಸುತ್ತಾರೆ. ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಿದೆ. ತಲೆಯ ಹಿಂಭಾಗಕ್ಕೆ ಗಾಯವಾಗುವ ಸಾಧ್ಯತೆಯಿದೆ. ಈ ತಿಂಗಳು ಆರೋಗ್ಯ ಸುಧಾರಿಸುತ್ತದೆ. ಕುಟುಂಬ ಸದಸ್ಯರಿಗೆ ಸಂತೋಷ ಸಿಗಲಿದೆ. ಮನಸ್ಸಿನ ತೊಂದರೆಗಳು ಕಡಿಮೆಯಾಗುತ್ತವೆ. ನೀವು ಹಠಾತ್ ಹಣದ ಲಾಭವನ್ನು ಹೊಂದುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಹೆಸರನ್ನು ಲೌಕಿಕವಾಗಿ ಮಾಡುತ್ತೀರಿ. ಮಕ್ಕಳು ನಿಮ್ಮ ಆದೇಶಗಳನ್ನು ಪಾಲಿಸುತ್ತಾರೆ ಮತ್ತು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತಾರೆ. ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ಪೂರ್ಣಗೊಳ್ಳಲಿವೆ. ನಿಮ್ಮ ಜೀವನ ಸಂಗಾತಿಯಿಂದ ನೀವು ಸಮಾಜದಲ್ಲಿ ಪ್ರತಿಷ್ಠೆಯನ್ನು ಪಡೆಯುತ್ತೀರಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವು ಉತ್ತಮವಾಗಿರುತ್ತದೆ ಆದರೆ ತಾಯಿ ಮತ್ತು ಸಂಗಾತಿಯ ಆರೋಗ್ಯವು ನಿಮ್ಮ ಕಾಳಜಿಯ ವಿಷಯವಾಗಿ ಉಳಿಯುತ್ತದೆ. ವಿದ್ಯಾರ್ಥಿಗಳಿಗೆ ಈ ತಿಂಗಳು ಉತ್ತಮವಾಗಿರುತ್ತದೆ.

ಧನು: ಪ್ರೀತಿಯಲ್ಲಿ ಬಲ

ಧನು: ಪ್ರೀತಿಯಲ್ಲಿ ಬಲ

ಬುಧ ಗ್ರಹದ ಸಂಚಾರದ ಸಮಯದಲ್ಲಿ ನೀವು ಹಿಂದಿನ ಪ್ರೀತಿಯ ಉತ್ತಮ ಅನುಗ್ರಹ ಪಡೆಯಲಿದ್ದೀರಿ. ಅವರ ಗಮನ ಮತ್ತು ಪ್ರೀತಿಯನ್ನು ಪಡೆಯಲು ಬಹಳ ಸಮಯ ತೆಗೆದುಕೊಂಡರೂ ಸಹ, ನೀವು ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುವುದಿಲ್ಲ. ನೀವು ಅವರ ಮೇಲೆ ಕಾಳಜಿ ವಹಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಈ ತಿಂಗಳು ಪ್ರಯಾಣ ಮತ್ತು ಮನರಂಜನೆಗೆ ಉತ್ತಮವಾಗಿರುತ್ತದೆ. ಎದುರಾಳಿಗಳ ಮೇಲೆ ಜಯವಿರುತ್ತದೆ. ಕಾನೂನು ವಿಷಯಗಳು ನಿಮ್ಮ ಪರವಾಗಿ ನಿರ್ಧಾರವಾಗುತ್ತವೆ. ಜೀವನವನ್ನು ಆನಂದಿಸಲು ಇದು ಸರಿಯಾದ ಸಮಯ. ಆದರೆ ನಿಮ್ಮ ಆರೋಗ್ಯದಲ್ಲಿ ಏರಿಳಿತಗಳನ್ನು ಕಾಣಬಹುದು. ನಿಮಗೆ ಅದೃಷ್ಟದ ಉತ್ತಮ ಬೆಂಬಲ ಸಿಗುತ್ತದೆ. ಕುಟುಂಬದಲ್ಲಿ ಆತ್ಮೀಯತೆಯ ವಾತಾವರಣವಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ಉನ್ನತ ಮಟ್ಟದ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳುತ್ತವೆ. ಈ ತಿಂಗಳು ನಿಮಗೆ ಅನುಕೂಲಕರವಾಗಿಲ್ಲದಿರುವುದರಿಂದ ಕುಟುಂಬದ ವಿಷಯಗಳಲ್ಲಿ ಜಾಗರೂಕರಾಗಿರಿ. ಕುಟುಂಬ ಸದಸ್ಯರ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿ ಮಾಡುವ ಅವಕಾಶವನ್ನು ನೀವು ಪಡೆಯುತ್ತೀರಿ.

ಮಕರ: ಧಾರ್ಮಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ

ಮಕರ: ಧಾರ್ಮಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ

ಮೇ 16 ರಂದು ಚಂದ್ರಗ್ರಹಣದ ಸಮಯದಲ್ಲಿ ಈ ತಿಂಗಳು ಅದೃಷ್ಟದಿಂದ ನಿಮಗೆ ಸಾಧ್ಯವಿರುವ ಎಲ್ಲ ಸಹಾಯ ಸಿಗುತ್ತದೆ. ಧಾರ್ಮಿಕ ಪ್ರವಾಸಗಳು ಅಥವಾ ಮನರಂಜನಾ ಪ್ರವಾಸಗಳು ಇರಬಹುದು. ವ್ಯಾಪಾರದಲ್ಲಿ ಲಾಭ ಇರುತ್ತದೆ. ಇತರರೊಂದಿಗೆ ನಿಮ್ಮ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಈ ತಿಂಗಳು ಅನೇಕ ಆದಾಯದ ಮೂಲಗಳು ಉದ್ಭವಿಸುತ್ತವೆ. ಕೆಲಸದಲ್ಲಿ ಲಾಭ ಇರುತ್ತದೆ. ಅವಿವಾಹಿತರು ಈ ತಿಂಗಳು ವಿವಾಹ ಪ್ರಸ್ತಾಪವನ್ನು ಪಡೆಯಬಹುದು. ವಿದ್ಯುತ್ ಉಪಕರಣಗಳೊಂದಿಗೆ ಜಾಗರೂಕರಾಗಿರಿ. ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೀರಿ. ನಿಮ್ಮ ಕೆಲಸದ ಮೇಲೆ ಲಾಭದ ನಂಬಿಕೆ ಹೆಚ್ಚಾಗಲಿದೆ. ನೀವು ಕಲ್ಪನೆಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯುವಾಗ ಹಿಮ್ಮುಖವಾಗಿ ನೋಡಬೇಡಿ. ಈ ತಿಂಗಳು ನಿಮಗೆ ಮತ್ತು ನಿಮ್ಮ ಪಾಲುದಾರರ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

ಕುಂಭ: ಖ್ಯಾತಿ ಮತ್ತು ಪ್ರಶಂಸೆ ಲಭ್ಯ

ಕುಂಭ: ಖ್ಯಾತಿ ಮತ್ತು ಪ್ರಶಂಸೆ ಲಭ್ಯ

ಕುಂಭ ರಾಶಿಯವರಿಗೆ ಈ ತಿಂಗಳು ಖ್ಯಾತಿ ಮತ್ತು ಪ್ರಶಂಸೆಗಳು ಸಿಗಲಿವೆ. ಆದರೆ ಇದು ಮುಂದುವರೆಯುದಿಲ್ಲ. ಮೇ 16 ರಂದು ಸಂಭವಿಸುವ ಚಂದ್ರಗ್ರಹಣ ನಿಮ್ಮನ್ನು ಪ್ರಜ್ವಲಿಸುವಂತೆ ಮಾಡುತ್ತದೆ. ಮಾತ್ರವಲ್ಲದೆ ಅದು ನಿಮ್ಮ ಅಭದ್ರತೆಯನ್ನು ಸಹ ಹೆಚ್ಚಿಸುತ್ತದೆ. ಪ್ರೀತಿಪಾತ್ರರ ಬೆಂಬಲದ ಕೊರತೆಯಿಂದಾಗಿ ನೀವು ನಿಮ್ಮನ್ನು ಅನುಮಾನಿಸಲು ಪ್ರಾರಂಭಿಸಬಹುದು. ಇದೆಲ್ಲವೂ ಯಾವುದಕ್ಕಾಗಿ ಎಂದು ನೀವು ಯೋಚಿಸಬಹುದು? ಮತ್ತು ನಾನು ಕೆಲಸಕ್ಕೆ ಸರಿಯಾದ ವ್ಯಕ್ತಿಯೇ? ಎಂದು ಯೋಚಿಸಬಹುದು. ಒಂದು ಹೆಜ್ಜೆ ಹಿಂತಿರುಗಿ ಮತ್ತು ನಿಮ್ಮ ಭಾವನೆಗಳನ್ನು ಸಮತೋಲಿತವಾಗಿರಿಸಿ ಕೆಲಸ ಮಾಡಿ. ಎಲ್ಲರನ್ನು ಸಂತೋಷ, ಸುರಕ್ಷಿತ ಮತ್ತು ತೃಪ್ತರಾಗಿರುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ನೀವು ಉತ್ತಮರು. ಈ ತಿಂಗಳು ನಿಮಗೆ ನ್ಯಾಯಯುತವಾಗಿರುವುದು. ಹೀಗಾಗಿ ನಿಮ್ಮ ಆಸೆಗಳನ್ನು ನಿಯಂತ್ರಣದಲ್ಲಿಡಿ.

ಮೀನ: ಆರ್ಥಿಕ ಲಾಭ

ಮೀನ: ಆರ್ಥಿಕ ಲಾಭ

ಮೇ ತಿಂಗಳಲ್ಲಿ ಶುಕ್ರ, ಗುರು, ಮತ್ತು ಮಂಗಳ ಗ್ರಹಗಳ ಸಂಚಾರದಿಂದ ನಿಮ್ಮ ಹಣಕಾಸು ಹೆಚ್ಚಾಗಲಿದೆ. ಈ ಗ್ರಹಗಳು ಮೇ 2, 10 ಮತ್ತು 24 ರಂದು ಮೇಷ ರಾಶಿಯಲ್ಲಿ ಚಲಿಸಿದಾಗ ಹಣ ಮತ್ತು ಅದೃಷ್ಟ ಹೆಚ್ಚಾಗಲಿದೆ. ಈ ಎಲ್ಲಾ ಗ್ರಹಗಳ ಸಂಚಾರ ನಿಮಗೆ ಉತ್ತೇಜನ ಮತ್ತು ಬೆಳವಣಿಗೆಗೆ ಪೂರಕವಾಗಿವೆ. ನೀವು ನಿಯಮಗಳಲ್ಲಿ ಸ್ಪಷ್ಟವಾಗಿರುತ್ತೀರಿ. ಇದರರ್ಥ ನಿಮ್ಮ ವೃತ್ತಿಜೀವನದ ಪ್ರಯತ್ನಗಳಿಂದ ನೀವು ಫಲಪ್ರದ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನಿಮ್ಮ ಜೀವನವನ್ನು ನಡೆಸುವ ಶಕ್ತಿ ವೃದ್ಧಿಯಾಗಲಿದೆ. ಮೇ 30ರ ಅಮಾವಾಸ್ಯೆಯ ನಂತರ ಹಣದ ಒಳಹರಿವು ಹೆಚ್ಚಾಗಲಿದೆ. ಒಂದು ವೇಳೆ ನೀವು ಅನಿರೀಕ್ಷಿತ ಖರ್ಚುಗಳನ್ನು ಎದುರಿಸಿದರೆ, ಹಿಂಜರಿಕೆ ಅಥವಾ ಹಣಕಾಸಿನ ಚಿಂತೆಗಳಿಲ್ಲದೆ ಬದುಕಲು ನಿಮ್ಮ ಬಳಿ ಹಣವಿರುತ್ತದೆ. ಈ ಹಣವನ್ನು ನೀವು ಬೇಸಿಗೆಯ ಅಂತ್ಯದವರೆಗೆ ಉಳಿಸಬೇಕಾಗಬಹುದು. ಆದರೂ ನೀವು ಮಾಡುವ ಕೆಲಸ ನಿಮ್ಮನ್ನು ಕೊನೆವರೆಗೂ ಕೈ ಹಿಡಿಯುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+