• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಲಾ : ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ

By ಪಂಡಿತ್ ವಿಠ್ಠಲ್ ಭಟ್
|

ಪುರುಷರು: ಈ ತಿಂಗಳಿನಲ್ಲಿ ನಿಮಗೆ ಅತ್ಯುತ್ತಮ ಸಮಯ ಇದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತೀರಿ. ಉದ್ಯೋಗದಲ್ಲಿಯೇ ವಿದೇಶ ಪ್ರಯಾಣ ಯೋಗ ಸಹ ಕೆಲವರಿಗೆ ಇದೆ. ನೀವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಎಂದು ಶ್ಲಾಘನೆ ಲಭಿಸಲಿದೆ.

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾ ಇರುವವರಿಗೆ ಉದ್ಯೋಗ ಸಿಗುವ ಯೋಗ ಇದೆ. ಆರ್ಥಿಕವಾಗಿ ಸಹ ನಿಮಗೆ ಈ ತಿಂಗಳು ಉತ್ತಮವಾಗಿದೆ. ನಾಲ್ಕಾರು ಕಡೆ ಓಡಾಡಿ ಆದರೂ ಹಣ ಸಂಪಾದನೆ ಮಾಡಿಬಿಡುತ್ತೀರಿ. ಪಿತ್ರಾರ್ಜಿತ ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿ ಪ್ರಯತ್ನಿಸುತ್ತ ಇದ್ದಲ್ಲಿ ಈ ತಿಂಗಳು ಯಶಸ್ಸು ಇದೆ.

ನಿಮ್ಮ ಸ್ನೇಹಿತರಿಗಾಗಿ ಹಣ ಖರ್ಚು ಮಾಡುತ್ತೀರಿ. ಕೌಟುಂಬಿಕವಾಗಿ ನಿಮಗೆ ಅತ್ಯುತ್ತಮ ಎನ್ನಬಹುದು. ಏಕೆಂದರೆ ಕುಟುಂಬದವರ ಎಲ್ಲರ ಸಹಕಾರ ಸಿಗಲಿದೆ.

ಸ್ತ್ರೀಯರು: ನಿಮ್ಮ ಪತಿಗೆ ಉದ್ಯೋಗ ಇಲ್ಲದೇ ಇದ್ದಲ್ಲಿ ಅವರಿಗೆ ಉದ್ಯೋಗ ಲಭಿಸಿ ನಿಮಗೆ ನೆಮ್ಮದಿ ಲಭಿಸುತ್ತದೆ. ಮಕ್ಕಳು ಸಹ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು, ಸಂತಸ ತರುತ್ತಾರೆ. ಅತೀ ಉಷ್ಣ ನಿಮ್ಮ ಆರೋಗ್ಯ ಹಾಳು ಮಾಡಲಿದೆ. ರಕ್ತದೊತ್ತಡ ಸಮಸ್ಯೆ ಇರುವವರಿಗೆ ಸಹ ಹೆಚ್ಚಿನ ಸಮಸ್ಯೆಗಳು ಕಾಡಲಿದೆ.

ಹೊಲಿಗೆ, ಅಡುಗೆ ಹೀಗೆ ಚಿಕ್ಕ ಪುಟ್ಟ ಸ್ವಂತ ಉದ್ಯೋಗ ಮಾಡುತ್ತಾ ಇರುವವರಿಗೆ ಉತ್ತಮ ಲಾಭ ಇದೆ. ಆದರೆ ಬೇರೆಯವರ ಜೊತೆ ಸೇರಿ ಅಂದರೆ ಪಾರ್ಟ್ ನರ್ ಜೊತೆ ಸೇರಿ ವ್ಯವಹಾರ ಮಾಡುತ್ತಾ ಇದ್ದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಿ ಸಮಸ್ಯೆ ಆಗುತ್ತದೆ.

ಬಾಳಸಂಗಾತಿ ಜೊತೆ ದೂರ ಪ್ರಯಾಣ ಅಥವಾ ತವರು ಮನೆಗೆ ಹೋಗುವ ಸಾಧ್ಯತೆ ಇದೆ. ತಂದೆಯ ಸಹಕಾರ ಲಭಿಸಿ ಧೈರ್ಯ ಹೆಚ್ಚುತ್ತದೆ. ಆದರೆ ಸಹೋದರರ ಸಹಕಾರ ಸಿಗಲು ಇನ್ನೂ ಸಮಯ ಬೇಕು.

ವಿದ್ಯಾರ್ಥಿಗಳು: ವೃತ್ತಿಪರ ವಿಷಯಗಳ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಲಭಿಸಲಿದೆ.

ಪರಿಹಾರ: ಈ ತಿಂಗಳಿನಲ್ಲಿ ಆದಷ್ಟೂ ಪ್ರಯತ್ನ ಮಾಡಿ. ಮನೆಯಲ್ಲಿ ಮಹಾಲಕ್ಷ್ಮೀ ಸಹಿತ ಸತ್ಯನಾರಾಯಣ ವ್ರತ ಮಾಡಿಸಿ.

English summary
Get the complete month predictions of September 2017. Read monthly horoscope of Libra in Kannada. Get free monthly horoscope, astrology and monthly predictions in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X