ಈ ರಾಶಿಯವರಿಗೆ ಅತಿ ಭಾವುಕತೆಯೇ ಪ್ರಗತಿಗೆ ತೊಡಕು: ಕಟಕ, ಸಿಂಹ, ಕನ್ಯಾ ರಾಶಿಗಳ ಜನವರಿ ಮಾಸ ಭವಿಷ್ಯ
ಹೊಸ ಕ್ಯಾಲೆಂಡರ್ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಕಟಕ, ಸಿಂಹ ಮತ್ತು ಕನ್ಯಾ ರಾಶಿಗಳ ಫಲಾಫಲಗಳು ಹೇಗಿರುತ್ತವೆ ಎನ್ನುವ ಮಾಹಿತಿ ಇಲ್ಲಿದೆ. ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದಂತೆ ಈ ಫಲಗಳ ವಿವರಗಳನ್ನು ಖ್ಯಾತ ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ಅವರು ನೀಡಿದ್ದಾರೆ. ಎಲ್ಲ ರಾಶಿಗಳ ದಿನ ಭವಿಷ್ಯ, ವಾರ ಭವಿಷ್ಯ ಮತ್ತು ಮಾಸ ಭವಿಷ್ಯಗಳು ಒನ್ ಇಂಡಿಯಾ ಕನ್ನಡ ಜಾಲತಾಣದಲ್ಲಿ ಲಭ್ಯ.
ಕಟಕ ರಾಶಿ: ಕುಟುಂಬದ ಬೆಂಬಲ ಅಚಲ
ಜನವರಿ ತಿಂಗಳು ಕಟಕ ರಾಶಿಯವರಿಗೆ ಭಾವನಾತ್ಮಕವಾಗಿ ಏರುಪೇರಿನ ತಿಂಗಳು. ಉದ್ಯೋಗದಲ್ಲಿ ಸ್ಥಿರತೆ ಇದ್ದರೂ ಮನಸ್ಸಿನ ಅಶಾಂತಿ ಕೆಲಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ದೊಡ್ಡ ಲಾಭ ಇಲ್ಲದಿದ್ದರೂ ನಷ್ಟದ ಭಯವೂ ಇಲ್ಲ. ಕುಟುಂಬ ಮತ್ತು ಮನೆಯ ವಿಚಾರಗಳು ಹೆಚ್ಚಿನ ಗಮನ ಬೇಡುತ್ತವೆ. ತಾಯಿ ಅಥವಾ ಹಿರಿಯ ಮಹಿಳೆಯ ಆರೋಗ್ಯದ ಕಡೆ ಗಮನ ಅಗತ್ಯ. ದಾಂಪತ್ಯದಲ್ಲಿ ಸಂವಹನದ ಕೊರತೆಯಿಂದ ತಪ್ಪು ಅರ್ಥೈಸಿಕೆ ಉಂಟಾಗಬಹುದು.

ಪಾಸಿಟಿವ್ ಅಂಶವೆಂದರೆ ಕುಟುಂಬ ಬೆಂಬಲ ಮತ್ತು ಒಳಗಿನ ಬಲ. ನೆಗಟಿವ್ ಅಂಶವೆಂದರೆ ಅತಿಯಾದ ಭಾವನಾತ್ಮಕ ಪ್ರತಿಕ್ರಿಯೆ ಮತ್ತು ಹಳೆಯ ವಿಚಾರಗಳಲ್ಲಿ ಅಂಟಿಕೊಳ್ಳುವುದು. ಈ ತಿಂಗಳು ಚಂದ್ರ ದೇವರ ಆರಾಧನೆ, ಸೋಮವಾರ ಉಪವಾಸ ಅಥವಾ ಶಿವಾಲಯ ದರ್ಶನ ಕರ್ಕಾಟಕ ರಾಶಿಗೆ ಶಾಂತಿ ಮತ್ತು ಶುಭ ಫಲ ಕೊಡುತ್ತದೆ
ನಕ್ಷತ್ರಗಳು: ಪುನರ್ವಸು (4 ನೇ ಪಾದ), ಪುಷ್ಯ (1 ರಿಂದ 4 ಪಾದ), ಆಶ್ಲೇಷಾ (1 ರಿಂದ 4 ಪಾದ). ಶುಭ ಸಂಖ್ಯೆ: 2, ಶುಭ ಬಣ್ಣ: ಬೆಳ್, ಶುಭ ದಿಕ್ಕು: ಪಶ್ಚಿಮ, ಚಂದ್ರನ ಆರಾಧನೆಯಿಂದ ಶುಭ ಫಲ.
ಸಿಂಹ ರಾಶಿ: ಅಹಂಕಾರವೇ ವಿರೋಧಕ್ಕೆ ನಾಂದಿ
ಜನವರಿ ತಿಂಗಳು ಸಿಂಹ ರಾಶಿಯವರಿಗೆ ಗೌರವ ಮತ್ತು ಜವಾಬ್ದಾರಿಗಳ ತಿಂಗಳು. ಉದ್ಯೋಗದಲ್ಲಿ ಅಧಿಕಾರ ಸಂಬಂಧಿತ ವಿಚಾರಗಳು ಹೆಚ್ಚಾಗಬಹುದು. ನಿಮ್ಮ ನಾಯಕತ್ವ ಮೆರೆದರೂ ಅಹಂಕಾರ ತೋರಿಸಿದರೆ ವಿರೋಧ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಆದಾಯ ಉತ್ತಮವಾಗಿದ್ದರೂ ಆಕರ್ಷಕ ಖರ್ಚುಗಳು ತಲೆದೋರುವ ಸಾಧ್ಯತೆ ಇದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮೌಲ್ಯ ಸಿಗುತ್ತದೆ, ಆದರೆ ಹಟ ಕಡಿಮೆಯಾಗಬೇಕು. ಪಾಸಿಟಿವ್ ಅಂಶವೆಂದರೆ ಮಾನ, ಸ್ಥಾನ ಮತ್ತು ಆತ್ಮವಿಶ್ವಾಸದಲ್ಲಿ ಪ್ರಗತಿ. ನೆಗಟಿವ್ ಅಂಶವೆಂದರೆ ಅತಿಯಾದ ಗರ್ವ ಮತ್ತು ಕೋಪ. ಈ ತಿಂಗಳು ಸೂರ್ಯ ದೇವರ ಆರಾಧನೆ, ಭಾನುವಾರ ಸೂರ್ಯ ನಮಸ್ಕಾರ ಮತ್ತು ಆದಿತ್ಯ ಹೃದಯ ಸ್ತೋತ್ರ ಪಠಣ ಸಿಂಹ ರಾಶಿಗೆ ಅತ್ಯಂತ ಶುಭ.
ನಕ್ಷತ್ರಗಳು: ಮಖಾ (1 ರಿಂದ 4 ಪಾದ), ಪೂರ್ವಾ ಫಲ್ಗುಣಿ (1 ರಿಂದ 4 ಪಾದ), ಉತ್ತರ ಫಲ್ಗುಣಿ (1 ಮತ್ತು 2 ಪಾದ). ಅದೃಷ್ಟ ಸಂಖ್ಯೆ: 1, ಶುಭ ಬಣ್ಣ: ಕಿತ್ತಳೆ, ಶುಭ ದಿಕ್ಕು: ಪೂರ್ವ ಸೂರ್ಯನ ಆರಾಧನೆಯಿಂದ ಶುಭ ಫಲ.
ಕನ್ಯಾ ರಾಶಿ: ಪರೀಕ್ಷೆಯ ಕಾಲದಲ್ಲಿ ಸಂಯಮವೇ ಆಸರೆ
ಜನವರಿ ತಿಂಗಳು ಕನ್ಯಾ ರಾಶಿಯವರಿಗೆ ಪರಿಶ್ರಮ ಮತ್ತು ಶಿಸ್ತು ಪರೀಕ್ಷಿಸುವ ಕಾಲ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಸಣ್ಣ ತಪ್ಪುಗಳು ದೊಡ್ಡ ಸಮಸ್ಯೆ ತರಬಹುದಾದ್ದರಿಂದ ಎಚ್ಚರಿಕೆ ಅಗತ್ಯ. ಉದ್ಯೋಗ ಬದಲಾವಣೆ ಯೋಚಿಸುತ್ತಿರುವವರು ತಾತ್ಕಾಲಿಕವಾಗಿ ನಿರ್ಧಾರ ಮುಂದೂಡುವುದು ಒಳಿತು. ಆರ್ಥಿಕವಾಗಿ ಆದಾಯ ಸ್ಥಿರವಾಗಿದ್ದರೂ ಖರ್ಚಿನಲ್ಲಿ ನಿಯಂತ್ರಣ ಇಲ್ಲದಿದ್ದರೆ ಒತ್ತಡ ಉಂಟಾಗಬಹುದು. ವಿವಾಹಿತರಿಗೆ ದಾಂಪತ್ಯದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಕಂಡುಬಂದರೂ ಸಂಯಮದಿಂದ ಬಗೆಹರಿಸಬಹುದು. ಅವಿವಾಹಿತರಿಗೆ ವಿವಾಹ ವಿಚಾರದಲ್ಲಿ ವಿಳಂಬ ಸಾಧ್ಯ. ಸಂತಾನ ವಿಚಾರದಲ್ಲಿ ನಿರೀಕ್ಷೆ ಇದ್ದವರಿಗೆ ಧೈರ್ಯ ಮತ್ತು ಸಹನೆ ಅಗತ್ಯ. ಆರೋಗ್ಯದ ದೃಷ್ಟಿಯಿಂದ ಜೀರ್ಣಕ್ರಿಯೆ, ನರವ್ಯೂಹ ಸಂಬಂಧಿತ ಸಮಸ್ಯೆಗಳಿಗೆ ಗಮನ ಕೊಡಿ. ರೈತರಿಗೆ ಬೆಳೆ ಕೆಲಸದಲ್ಲಿ ಶ್ರಮ ಹೆಚ್ಚಾಗುತ್ತದೆ, ಆದರೆ ತಿಂಗಳ ಅಂತ್ಯದ ವೇಳೆಗೆ ಉತ್ತಮ ಫಲ ಸಿಗುವ ಸೂಚನೆ ಇದೆ. ದುರ್ಗಾ ದೇವಿಯ ಆರಾಧನೆ ಶುಭ ಫಲ ನೀಡುತ್ತದೆ.
ನಕ್ಷತ್ರಗಳು: ಉತ್ತರ ಫಲ್ಗುಣಿ (2 ರಿಂದ 4 ಪಾದ), ಹಸ್ತಾ (1 ರಿಂದ 4 ಪಾದ), ಚಿತ್ತಾ (1 ಮತ್ತು 2 ಪಾದ). ಅದೃಷ್ಟ ಸಂಖ್ಯೆ: 4, ಶುಭ ಬಣ್ಣ: ಹಸಿರು, ಶುಭ ದಿಕ್ಕು: ಉತ್ತರ, ದುರ್ಗಾ
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications