Get Updates
Get notified of breaking news, exclusive insights, and must-see stories!

January Horoscope 2024 : ಜನವರಿ 2024ರ ಮಾಸಭವಿಷ್ಯ: ಈ ರಾಶಿಯ ಜನರಿಗೆ ಶುಭವಾಗಲಿದೆ!

ಜೋತಿಷ್ಯ ಶಾಸ್ತ್ರದ ಮೂಲಕ ನಿತ್ಯದ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಸಂಘಟಿಸಬಹುದಾದ ಘಟನೆಗಳ ಕುರಿತು ತಿಳಿದುಕೊಳ್ಳಲು ಪ್ರತಿಯೋರ್ವರು ಉತ್ಸುಕರಾಗಿರುತ್ತಾರೆ. ನಿಮ್ಮ ರಾಶಿ ಚಕ್ರದ ಪ್ರಕಾರ ಜನವರಿ ತಿಂಗಳಿನಲ್ಲಿ ಉಂಟಾಗಬಹುದಾದ ಲಾಭ-ನಷ್ಟಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಮಾಸ ವಿಶೇಷ:

ಜನವರಿ 1: ಕ್ರೈಸ್ತ ವರ್ಷಾರಂಭ

ಜನವರಿ 15: ಮಕರ ಸಂಕ್ರಾಂತಿ

ಸೂರ್ಯ ಮಕರ ರಾಶಿಗೆ ಪ್ರವೇಶ.

ಜನವರಿ 23: ನೇತಾಜಿ ಜನ್ಮದಿನ

ಜನವರಿ 26: ಗಣರಾಜ್ಯೋತ್ಸವ

ಜನವರಿ 30: ಸರ್ವೋದಯ ದಿನ

ಮೇಷ ರಾಶಿ:

ಮೇಷ ರಾಶಿ:

ಈ ವರ್ಷಪೂರ್ತಿ ಶನಿ ನಿಮಗೆ ಲಾಭಸ್ಥಾನದಲ್ಲಿ ಇದ್ದು ಅಪಾರ ಧನಲಾಭ ಕೊಡಿಸುತ್ತಾನೆ. ಜೊತೆಗೆ ಮೇ ತಿಂಗಳಲ್ಲಿ ಗುರು ಎರಡನೇ ಮನೆಗೆ ಪ್ರವೇಶವಾಗಿ ಗುರುಬಲ ಬರುತ್ತದೆ. ಇದರಿಂದ ಜೀವನದಲ್ಲಿ ಸಕಲ ಅನುಕೂಲಗಳು ಸಿದ್ಧಿಸುತ್ತದೆ. ಸ್ಥಾನಮಾನ ದೊರೆಯುತ್ತದೆ. 07.01.24 ರಂದು ಬುಧ ಒಂಬತ್ತನೇ ಮನೆಗೆ ಪ್ರವೇಶವಾಗಿ ಅಲ್ಲಿ ಮೂರು ಗ್ರಹಗಳು ಸೇರುತ್ತದೆ. ಇದೂ ಸಹ ನಿಮಗೆ ಬೆಂಬಲವನ್ನೂ ಸಹಕಾರವನ್ನೂ ಸೂಚಿಸುತ್ತದೆ. ಆರನೇ ಮನೆಯಲ್ಲಿ ಕೇತು ವರ್ಷಪೂರ್ತಿ ಇದ್ದು ಸಾಹಸ ಧೈರ್ಯಗಳನ್ನು ಕೊಡುತ್ತಾನೆ. ಶತ್ರುಗಳನ್ನು ನಿವಾರಣೆ ಮಾಡುತ್ತಾನೆ. ಆದರೆ 12ನೇ ಮನೆ ವ್ಯಯಸ್ಥಾನದಲ್ಲಿ ರಾಹು ಇದ್ದು ದಿಢಿರ್ ಖರ್ಚುಗಳನ್ನು ಸೂಚಿಸುತ್ತಾನೆ. ಅಂದರೆ ಮುಂಬರುವ ಖರ್ಚುಗಳ ಬಗ್ಗೆ ನಿಮಗೆ ಸುಳಿವು ಇರುವುದಿಲ್ಲ. ಅಜ್ಞಾತ ಖರ್ಚುಗಳು ಎದುರಾಗುತ್ತದೆ. ಶನಿ ಬಲ ಹಾಗೂ ಕೇತುಬಲ ಇರುವುದರಿಂದ ಮತ್ತು ಮೇ ನಂತರ ಗುರುಬಲ ಸಿಗುವುದರಿಂದ ರಾಹುವಿನ ಉಪಟಳ ತಡೆದುಕೊಳ್ಳುವ ಶಕ್ತಿ ನಿಮಗೆ ಇರುತ್ತದೆ. ದುರ್ಗೆಯನ್ನು ಆರಾಧಿಸಿ.

ವೃಷಭ ರಾಶಿ:

ವೃಷಭ ರಾಶಿ:

ಈಗ ನಿಮಗೆ ಈ ವರ್ಷಪೂರ್ತಿ ರಾಹುವಿನ ಬಲ ಇದೆ. ರಾಹು ಲಾಭಸ್ಥಾನದಲ್ಲಿ ಇದ್ದು ನಿಮಗೆ ಧನಲಾಭ ಕೊಡಿಸುತ್ತಾನೆ. ಗುರು ಮೇ ನಂತರ ನಿಮ್ಮ ರಾಶಿಗೇ ಬರುವುದು ನಿಮಗೆ ಒತ್ತಡಗಳನ್ನು ಸೂಚಿಸುತ್ತದೆ. ದೈಹಿಕ ಶ್ರಮ ಇರುತ್ತದೆ. ರಾಹುಬಲ ಇರುವುದರಿಂದ ಈ ಒತ್ತಡಗಳನ್ನು ತಡೆದುಕೊಳ್ಳಬಲ್ಲಿರಿ. ರಾಹು ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಾನೆ. ಇನ್ನು ಶನಿ ಹತ್ತನೇ ಮನೆಯಲ್ಲಿ ತಟಸ್ಥ. ಶನಿ ಹನ್ನೊಂದನೇ ಮನೆಗೆ ಬಂದಾಗ ನಿಮಗೆ ಭಾಗ್ಯೋದಯವಾಗುತ್ತದೆ. ಕೇತು ಐದನೇ ಮನೆಯಲ್ಲಿ ಇರುವುದರಿಂದ ಈ ರಾಶಿಯ ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ. ಉನ್ನತ ವ್ಯಾಸಂಗಕ್ಕೆ ಹೋಗುವವರು ಕೊಂಚ ಅಡೆತಡೆಗಳನ್ನು ಎದುರಿಸುತ್ತಾರೆ. ವೃತ್ತಿಯಲ್ಲಿ ಹಾಗೂ ಕೌಟುಂಬಿಕವಾಗಿ ಒತ್ತಡಗಳು ಇರುತ್ತದೆ. ನೀವು ಸಹಿಸುವ ಸ್ವಭಾವದವರು ಆಗಿರುವುದರಿಂದ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸುತ್ತೀರಿ. ಹಣದ ಹರಿವು ಉತ್ತಮವಾಗಿದೆ ಹಾಗೆಯೇ ಖರ್ಚುಗಳು ಇದೆ.

ಮಿಥುನ ರಾಶಿ:

ಮಿಥುನ ರಾಶಿ:

ನಿಮಗೆ ಲಾಭಸ್ಥಾನದಲ್ಲಿ ಗುರು ಮೇ ವರೆಗೂ ಇದ್ದು ನಂತರ ಹನ್ನೆರಡನೇ ಮನೆಗೆ ಬರುತ್ತಾನೆ. ಒಂದು ಸಣ್ಣ ಜಾಗ ಬದಲಾವಣೆ ಆಗಬಹುದು. ಅಥವಾ ನೌಕರಿಯಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಹತ್ತರಲ್ಲಿ ಇರುವ ರಾಹುವಿನಿಂದ ಔಷಧೀಯ ವ್ಯವಹಾರ ಮಾಡುವವರಿಗೆ ಲಾಭ ಇದೆ. ನಾಲ್ಕನೇ ಮನೆಯ ಕೇತು ತಾಯಿಯ ಅನಾರೋಗ್ಯ ಅಥವಾ ಒತ್ತಡಗಳನ್ನು ಕೊಡಬಹುದು. ತಾಯಿಗೆ ವಿಶ್ರಾಂತಿ ಇಲ್ಲವಾಗುತ್ತದೆ. ಈ ತಿಂಗಳು ಗುರುಬಲ ಇರುವುದರಿಂದ ನಿಮಗೆ ಅನುಕೂಲಗಳು ಸಾಕಷ್ಟಿವೆ. ವಿದೇಶ ಪ್ರಯಾಣ ಯೋಗ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇದೆ. ಹೊಸ ವಾಹನ ಕೊಳ್ಳಲು ಈಗ ಸಕಾಲ ಅಲ್ಲ. ಸ್ತಿರಾಸ್ತಿ ಸಹ ಈಗ ಕೊಳ್ಳಬೇಡಿ. ಅದರಿಂದ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದಂಪತಿಗಳ ನಡುವೆ ಸಾಮರಸ್ಯಕ್ಕೆ ಕೊರತೆ ಇದೆ. ಮನಸ್ಸಿಗೆ ಬೇಸರವಾಗುತ್ತದೆ. ಇಂಥ ದಂಪತಿಗಳು ಅವರೇ ಕೂತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಮಕ್ಕಳಿಂದ ಸಂತೋಷ ಇದೆ.

ಕಟಕ ರಾಶಿ:

ಕಟಕ ರಾಶಿ:

ಈ ತಿಂಗಳು ನಿಮಗೆ ವ್ಯತಿರಿಕ್ತ ಪರಿಣಾಮಗಳು ಏನೇ ಬಂದರೂ ಭಯ ಬೇಡ. ಮುಂದೆ ಮೇ ತಿಂಗಳಲ್ಲಿ ಗುರುಬಲ ಬಂದು ನಿಮ್ಮ ಪರಿಸ್ಥಿತಿ ತುಂಬಾ ಸುಧಾರಣೆಯಾಗುತ್ತದೆ. ಮಾನಸಿಕ ಒತ್ತಡ ಗೊಂದಲ ನಿವಾರಣೆ ಆಗಿ ನೀವು ಏನು ಮಾಡಬೇಕು ಎಂಬುದು ನಿಚ್ಚಳವಾಗಿ ಗೋಚರಿಸುತ್ತದೆ. ಮೂರನೇ ಮನೆಯಲ್ಲಿ ಕೇತು ನಿಮಗೆ ಬೆಂಬಲವಾಗಿ ಈ ವರ್ಷಪೂರ್ತಿ ಇರುತ್ತಾನೆ. ಮೂರನೇ ಮನೆಯ ಕೇತು ಸವಾಲುಗಳನ್ನು ಎದುರಿಸುವ ಧೈರ್ಯವನ್ನೂ, ಧನಬಲವನ್ನೂ ಕೊಡುತ್ತಾನೆ. ಆದರೆ ಒಂಬತ್ತನೇ ಮನೆಯಲ್ಲಿ ರಾಹು ಇರುವುದು ತಂದೆಗೆ ಕೊಂಚ ಅನಾರೋಗ್ಯ ಸೂಚಿಸುತ್ತದೆ. ಅಷ್ಠಮ ಶನಿಯ ಪ್ರಭಾವ ಇದೆ. ಇದೂ ಕೂಡ ಒತ್ತಡ ಹಾಗೂ ಧನ ನಷ್ಟ ಸೂಚಿಸುತ್ತದೆ. ಆದರೆ ಮೇ ತಿಂಗಳ ನಂತರ ಗುರುಬಲ ಒದಗಿಬಂದು ನಿಮ್ಮ ಸಮಸ್ಯೆಗಳು ಸರಳವಾಗುತ್ತದೆ. ಹಗುರವಾಗುತ್ತದೆ. ದೊಡ್ಡ ಭಾರ ತಲೆಯಿಂದ ಇಳಿದಂತೆ ನಿರಾಳತೆ ಅನುಭವಿಸುತ್ತೀರಿ. ಹಣದ ಹರಿವು ಉತ್ತಮವಾಗುತ್ತದೆ. ಆರೋಗ್ಯ-ಕೌಟುಂಬಿಕ ಶಾಂತಿ ವೃದ್ಧಿಯಾಗುತ್ತದೆ.

ಸಿಂಹ ರಾಶಿ:

ಸಿಂಹ ರಾಶಿ:

ಈಗ ನಿಮಗೆ ಸಾಮಾಜಿಕ ಗೌರವ ಸ್ಥಾನಮಾನ ಸಿಗುವ ಸಮಯ. ಅವಿವಾಹಿತರಿಗೆ ಮೇ ತಿಂಗಳ ಒಳಗಾಗಿ ಮದುವೆ ಆಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಪದವಿ ಅಧಿಕಾರ ಪ್ರಮೋಷನ್ ಸಿಗುವ ಸಮಯ. ಭಾಗ್ಯ ಸ್ಥಾನದಲ್ಲಿ ಗುರು ಇರುವುದರಿಂದ ದೇವರ ಕೆಲಸ ಧರ್ಮದ ಕೆಲಸ ಮಾಡುತ್ತೀರಿ. ಆದರೆ ಎಂಟನೇ ಮನೆಯಲ್ಲಿ ರಾಹು ಇರುವುದು ಆರೋಗ್ಯಕ್ಕೆ ತೊಂದರೆ. ವಿಷಾಹಾರ ಸೇವನೆ ಅಥವಾ ರಾಸಾಯನಿಕಗಳಿಂದ ಆರೋಗಕ್ಕೆ ಹಾನಿ ಆಗಬಹುದು. ಜಾಗ್ರತೆಯಿಂದ ಇರಿ. ಕೇತು ಎರಡನೇ ಮನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ಅಶಾಂತಿ ಅಸೌಖ್ಯ ಕಂಡುಬರುತ್ತದೆ. ಮನೆಯ ಸದಸ್ಯರಿಂದ ನಿಮಗೆ ಒಮ್ಮತ ದೊರೆಯದಿರುವುದು. ಮನೆಯ ಸದಸ್ಯರೊಡನೆ ವಾಗ್ವಾದ, ಅಭಿಪ್ರಾಯ ಭೇದ ಮುಂತಾದವು ಕಂಡುಬರುತ್ತದೆ. ಶುಕ್ರ ಮತ್ತು ಮಂಗಳ ಒಳ್ಳೆಯ ಸ್ಥಾನದಲ್ಲಿ ಇದ್ದು ನಿಮಗೆ ಅಲ್ಪಮಟ್ಟಿಗೆ ಸಹಾಯವಾಗುತ್ತದೆ. ವಾಹನದಿಂದ ಲಾಭ ಇದೆ. ಬುಧ ಸೂರ್ಯ ಐದನೇ ಮತ್ತು ಆರನೇ ಮನೆಯಲ್ಲಿ ನಿಮಗೆ ಬೆಂಬಲ ಕೊಡುತ್ತಾರೆ. ಶನಿ ಏಳನೇ ಮನೆಯಲ್ಲಿದ್ದು ನಿಮ್ಮ ರಾಶಿಯನ್ನು ನೋಡುವುದರಿಂದ ನಿಮಗೆ ಕೋಪ ತಾಪಗಳು ಹೆಚ್ಚಾಗುತ್ತದೆ. ಸಣ್ಣಪುಟ್ಟ ವಿಷಯವನ್ನು ಅಪಾರ್ಥ ಮಾಡಿಕೊಂಡು ಜನಗಳ ವಿರೋಧ ಗಳಿಸುತ್ತೀರಿ. ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಿ. ವಿಶಾಲವಾಗಿ ಯೋಚಿಸಿ ಸಮಸ್ಯಗೆಳನ್ನು ಬಗೆಹರಿಸಿಕೊಳ್ಳಿ.

ಕನ್ಯಾ ರಾಶಿ:

ಕನ್ಯಾ ರಾಶಿ:

ಈಗ ನಿಮಗೆ ಶನಿಬಲ ಈ ವರ್ಷಪೂರ್ತಿ ಇದ್ದು ಹಣಕಾಸಿನ ಸ್ಥಿತಿಯನ್ನು ಭದ್ರವಾಗಿ ಇಡುತ್ತದೆ. ಆರನೇ ಮನೆಯ ಶನಿ ನಿಮಗೆ ಸಾಹಸ ಧೈರ್ಯಗಳನ್ನು ಕೊಟ್ಟು ನಿಮಗೆ ಎಲ್ಲ ಕೆಲಸಗಳಲ್ಲೂ ಜಯ ಸಿಗುವಂತೆ ಮಾಡುತ್ತಾನೆ. ಈಗ ಗುರುಬಲ ಇಲ್ಲದಿದ್ದರೂ ಮೇ ನಂತರ ಗುರುಬಲ ಸಿಕ್ಕು ನಿಮಗೆ ಇನ್ನಷ್ಟು ಶುಭ ಫಲಗಳು ದೊರೆಯುತ್ತದೆ. ಅವಿವಾಹಿತರಿಗೆ ಮೇ ನಂತರ ವಿವಾಹಯೋಗ ಇದೆ. ಪದವಿ, ಅಧಿಕಾರ ಪ್ರಮೋಷನ್ ಸಿಗುವ ಯೋಗ ಇದೆ. ವಿದೇಶ ಪ್ರಯಾಣ ಯೋಗವೂ ಇದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ದೊರೆಯುತ್ತದೆ. ಆದರೆ ಏಳನೇ ಮನೆಯಲ್ಲಿ ರಾಹು ನಿಮ್ಮ ರಾಶಿಯಲ್ಲೇ ಇರುವ ಕೇತು ಆಷ್ಟೊಂದು ಶುಭಕಾರಕರವಾಗಿಲ್ಲ. ಏನಾದರೂ ಎಡವಟ್ಟುಗಳು ಆಗುತ್ತಲೇ ಇರುತ್ತದೆ. ಅದು ಆರೋಗ್ಯ ಇರಬಹುದು ಅಥವಾ ಕೌಟುಂಬಿಕ ಇರಬಹುದು ಅಥವಾ ಸಾಮಾಜಿಕವಾಗಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಬರಬಹುದು. ಯಾವುದಕ್ಕೂ ಯೋಚಿಸಿ ಮುಂದೆ ಹೆಜ್ಜೆ ಇಡಿ. ಮೂರರಲ್ಲಿ ಶುಕ್ರ, ನಾಲ್ಕರಲ್ಲಿ ಬುಧ ಐದರಲ್ಲಿ ಸೂರ್ಯ ನಿಮಗೆ ಅಲ್ಪಮಟ್ಟಿನ ಬೆಂಬಲ ಕೊಡುತ್ತಾರೆ.

ತುಲಾ ರಾಶಿ:

ತುಲಾ ರಾಶಿ:

ಮೇ ತಿಂಗಳ ವರೆಗೂ ಗುರುಬಲ ಇರುತ್ತದೆ. ಈ ವರ್ಷಪೂರ್ತಿ ರಾಹುಬಲ ಇರುತ್ತದೆ. ಈ ಎರಡೂ ಗ್ರಹಗಳ ಬೆಂಬಲದಿಂದ ನಿಮಗೆ ಈ ವರ್ಷ ಬಹಳ ಶುಭ ಫಲಗಳು ಸಿಗುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸುತ್ತದೆ. ಅವಿವಾಹಿತರಿಗೆ ಈ ವರ್ಷದ ಮೇ ತಿಂಗಳ ಒಳಗೆ ವಿವಾಹಯೋಗ ಇದೆ. ಮಕ್ಕಳ ಫಲ ಬಯಸುವವರಿಗೂ ಶುಭ ಸುದ್ದಿ ಇದೆ. ನೌಕರಿಯಲ್ಲಿ ಒಳ್ಳೆಯ ಸ್ಥಾನಮಾನ ಗಳಿಸುತ್ತೀರಿ. ಯಾವುದೇ ಕೆಲಸ ಪರಾಕ್ರಮದಿಂದ ಸಾಹಸದಿಂದ ಮಾಡಿ ಮುಗಿಸುತ್ತೀರಿ. ರಾಹು ಸಹ ಧನಲಾಭ ಕೊಡುತ್ತಾನೆ. ಸಾಮಾಜಿಕವಾಗಿ ಸನ್ಮಾನ ಗೌರವ ಸಿಗುವ ಯೋಗ ಇದೆ. ಸರ್ಕಾರದಿಂದ ಲಾಭ ಇದೆ. ಕಲಾವಿದರಿಗೂ ಈ ವರ್ಷಪೂರ್ತಿ ಶುಭ ಸಮಯ. ಆಧ್ಯಾತ್ಮದತ್ತ ಹೆಚ್ಚು ಗಮನ ಹರಿಸುತ್ತೀರಿ. ಈ ತಿಂಗಳ ಪೂರ್ತಿ ಶುಕ್ರ ನಿಮಗೆ ಎರಡನೇ ಮನೆಯಲ್ಲಿ ನಂತರ ಮೂರನೇ ಮನೆಯಲ್ಲಿ ಇದ್ದು ಶುಭ ಫಲಗಳನ್ನು ಕೊಡುತ್ತಾನೆ. ಶನಿ ಐದನೇ ಮನೆಯಲ್ಲಿ ಇರುವುದು ಕೊಂಚ ಅಡಚಣೆಗಳಿಗೆ ಕಾರಣವಾದರೂ ಗುರುಬಲ ಮತ್ತು ರಾಹುಬಲ ನಿಮ್ಮನ್ನು ಕಾಪಾಡುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ನಿಮಗೆ ಗುರುಬಲ ಇಲ್ಲ. ಆದರೆ ಮೇ ತಿಂಗಳ ನಂತರ ಗುರುಬಲ ಬರುತ್ತದೆ. ಈಗ ಅಸಾಧ್ಯ ಎಂದುಕೊಂಡ ಕೆಲಸಗಳು ಹಿಂದಕ್ಕೆ ಹಾಕಿದ್ದ ಸಂಗತಿಗಳು ಸುಲಭ ಸಾಧ್ಯವಾಗುತ್ತದೆ. ನೌಕರಿಯಲ್ಲಿ ಕಿರಿಕಿರಿ ಅಸಂತುಷ್ಟಿ ಅಥವಾ ಗುರುತಿಸುವಿಕೆ ಇಲ್ಲದೆ ಕಷ್ಟಪಡುತ್ತಿದ್ದರೆ ಈ ವರ್ಷದ ಮೇ ನಂತರ ನಿಮಗೆ ಹೊಸ ನೌಕರಿ ಸಿಗಬಹುದು ಅಥವಾ ಇರುವ ನೌಕರಿಯಲ್ಲಿ ಒಳ್ಳೆಯ ಸ್ಥಾನಮಾನ ಸಿಗಬಹುದು. ಅವಿವಾಹಿತರಿಗೆ ವಿವಾಹಯೋಗ ಈ ಮೇ ನಂತರ ಬರುತ್ತದೆ. ಈ ತಿಂಗಳ ಮಟ್ಟಿಗೆ ಹೇಳುವುದಾದರೆ ಕೊಂಚ ಕಿರಿಕಿರಿ ಮಾನಸಿಕ ಅಶಾಂತಿ ಇರುತ್ತದೆ. ಜನವರಿ 14ರ ನಂತರ ಸೂರ್ಯ ಮೂರನೇ ಮನೆಗೆ ಪ್ರವೇಶವಾದಾಗ ಶುಭಫಲಗಳು ಸಿಗುತ್ತದೆ. ಸರ್ಕಾರದಿಂದ ಲಾಭ ಇದೆ. ನಾಲ್ಕನೇ ಮನೆಯಲ್ಲಿ ಶನಿ ಅಷ್ಟು ಉಪಕಾರಿ ಅಲ್ಲ. ನಾಲ್ಕನೇ ಮನೆ ವಾಹನ ಸ್ಥಾನ ಅಲ್ಲಿ ಶನಿ ಇರುವುದು ವಾಹನದಿಂದ ನಷ್ಟ ಆಗುತ್ತದೆ. ಹನ್ನೊಂದನೇ ಮನೆಯಲ್ಲಿ ಕೇತು ಧನಲಾಭ ಕೊಡಿಸುತ್ತಾನೆ. ಐದನೇ ಮನೆಯಲ್ಲಿ ರಾಹು ಮಕ್ಕಳಿಂದ ವಿರೋಧ ಆಗುವಂತೆ ಮಾಡುತ್ತಾನೆ. ಅಂದರೆ ನಿಮ್ಮ ಚಟುವಟಿಕೆಗಳು ಅಭಿಪ್ರಾಯಗಳು ಮಕ್ಕಳಿಗೆ ಸೇರುವುದಿಲ್ಲ. ಭಿನ್ನಾಭಿಪ್ರಾಯ ಮೂಡುತ್ತದೆ. ಇದರ ಬಗ್ಗೆ ಜಾಗರೂಕತೆ ವಹಿಸಿ.

ಧನಸ್ಸು ರಾಶಿ:

ಧನಸ್ಸು ರಾಶಿ:

ಈಗ ನಿಮಗೆ ರಾಜಯೋಗ, ಐದರಲ್ಲಿ ಗುರು, ಮೂರರಲ್ಲಿ ಶನಿ ಬಹಳ ಶುಭ ಫಲಗಳನ್ನು ಕೊಡುತ್ತಾರೆ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಸರಿಯಾಗಿ ಪ್ರೀತಿ ವಿಶ್ವಾಸ ಮೂಡುತ್ತದೆ. ಮೇ ತನಕ ಗುರುಬಲ ಇದ್ದು ಮೇ ನಂತರ ಗುರು ಆರನೇ ಮನೆಗೆ ಹೋದಾಗ ಕೊಂಚ ಮಾನಸಿಕ ಕಿರುಕುಳ, ಅಭದ್ರತೆ ಉಂಟಾಗುತ್ತದೆ. ಈ ವರ್ಷ ಪೂರ್ತಿ ಶನಿ ಮೂರನೇ ಮನೆಯಲ್ಲಿ ಇದ್ದು ಧನಲಾಭ ಕೊಡುತ್ತಾನೆ. ಪರಾಕ್ರಮದಿಂದ ಕೆಲಸ ಕಾರ್ಯಗಳನ್ನು ನಡೆಸುತ್ತಾನೆ. ಯಾವುದೇ ಕೆಲಸಕ್ಕೆ ವೇಗ ಇರುತ್ತದೆ. ಅಡೆತಡೆಗಳು ಕಡಿಮೆ. ರಾಹು ನಾಲ್ಕನೇ ಮನೆಯಲ್ಲಿ ಈ ವರ್ಷಪೂರ್ತಿ ಇರುತ್ತಾನೆ. ನಾಲ್ಕನೇ ಮನೆ ಸುಖಸ್ಥಾನ. ವಾಹನ ಸ್ಥಾನ. ಹೀಗಾಗಿ ವಾಹನದಿಂದಲೂ ನಷ್ಟ ಇದೆ. ಹಾಗೂ ಸುಖ ನೆಮ್ಮದಿಗೆ ಕೊಂಚ ಭಂಗ ಬರುತ್ತದೆ. ಯಾವುದೋ ಒಂದು ಇಷ್ಟವಾಗದ ನಿಮಗೆ ಮನಸ್ಸನ್ನು ಕೆಡಿಸುವ ಸಂಗತಿ ಮುಳ್ಳುಚುಚ್ಚಿದಂತೆ ಮನಸ್ಸಿಗೆ ಕಿರಿಕಿರಿಯುಂಟು ಮಾಡುತ್ತಿರುತ್ತದೆ. 10ನೇ ಮನೆಯಲ್ಲಿ ಕೇತು ತಟಸ್ಥ. ವೃತ್ತಿಯ ಕ್ಷೇತ್ರದಲ್ಲಿ ಯಾವುದೇ ಏರುಪೇರು ಇರುವುದಿಲ್ಲ. ಅವಿವಾಹಿತರಿಗೆ ಮೇ ಒಳಗೆ ವಿವಾಹವಾಗುತ್ತದೆ. ಪ್ರಮೋಷನ್, ಪದವಿ ಅಧಿಕಾರ ಸಿಗುತ್ತದೆ. ಸಂತಾನ ಫಲವೂ ಇದೆ.

ಮಕರ ರಾಶಿ:

ಮಕರ ರಾಶಿ:

ಈಗ ನಿಮಗೆ ರಾಹು ಮೂರನೇ ಮನೆಯಾದ ಪರಾಕ್ರಮ ಸ್ಥಾನದಲ್ಲಿ ಈ ವರ್ಷಪೂರ್ತಿ ಇದ್ದು ನಿಮ್ಮ ಎಲ್ಲಾ ಕೆಲಸಗಳನ್ನು ಪರಾಕ್ರಮದಿಂದ ಮಾಡಿ ಯಶಸ್ವಿ ಗೊಳಿಸುತ್ತಾನೆ. ಕಾರ್ಯ ಕ್ಷೇತ್ರದಲ್ಲಿ ಇರುವ ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. ಮೇ ನಂತರ ಗುರುಬಲವೂ ಜೊತೆಯಾಗಲಿದ್ದು ಸಾಡೆಸಾತಿಯ ಪ್ರಭಾವವೂ ಕಡಿಮೆಯಾಗಿ ಬಿಡುತ್ತದೆ. ಮೇ ನಂತರ ನಿಮಗೆ ಸಮಯ ಬಹಳ ಚೆನ್ನಾಗಿದೆ. ಶುಭ ಸಂಗತಿಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ನೆಮ್ಮದಿ ಇದೆ. ಪ್ರೀತಿ ಪಾತ್ರರೊಡನೆ ಸಂತೋಷವಾಗಿ ಇರುತ್ತೀರಿ. ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಉನ್ನತ ಶಿಕ್ಷಣಕ್ಕೆ ಅವಕಾಶ ಒದಗಿಬರುತ್ತದೆ. ನೀವು ಕಾಯುತ್ತಿರುವ ಅನೇಕ ಶುಭ ಸಂಗತಿಗಳು ಈ ವರ್ಷ ಜರುಗುತ್ತದೆ. ಮನಸ್ಸಿಗೆ ನೆಮ್ಮದಿ ಇದೆ. ಹಣದ ಹರಿವು ಉತ್ತಮವಾಗಿದೆ. ನಿರುದ್ಯೋಗಿಗಳಿಗೆ ನೌಕರಿ ಸಿಗುವುದು, ಪ್ರಮೋಷನ್, ಪದವಿ, ಅಧಿಕಾರ ಎಲ್ಲವೂ ಸಿಗುವ ಸಮಯ. ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಮಹತ್ತರವಾದ ಬದಲಾವಣೆ ಇದೆ. ಕಲಾವಿದರಿಗೆ ಸರ್ಕಾರದಿಂದ ಸನ್ಮಾನ ಗೌರವ ಸಿಗಲಿದೆ. ಆರೋಗ್ಯ ಸುಧಾರಿಸಲಿದೆ. 2024 ಜನವರಿಯಿಂದಲೇ ನಿಮಗೆ ಅದೃಷ್ಟದ ಮುನ್ಸೂಚನೆಗಳು ಕಾಣಬರುತ್ತದೆ.

ಕುಂಭ ರಾಶಿ:

ಕುಂಭ ರಾಶಿ:

ಯಾವುದೇ ಗ್ರಹಬಲ ಇಲ್ಲ. ಶನಿ ಮತ್ತು ರಾಹು ಈ ವರ್ಷ ಪೂರ್ತಿ ಎರಡನೇ ಮನೆಯಲ್ಲಿ ಇರುತ್ತಾರೆ. ಕೇತು ಎಂಟನೇ ಮನೆಯಲ್ಲಿ ಈ ವರ್ಷಪೂರ್ತಿ ಇರುತ್ತಾನೆ. ಒತ್ತಡಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಗುರು ಮೇ ನಂತರ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಇದೂ ಕೂಡ ನಿಮಗೆ ವ್ಯತಿರಿಕ್ತ ಪರಿಣಾಮಗಳನ್ನೇ ಕೊಡುತ್ತದೆ. ಪದವಿ ಅಥವಾ ಅಧಿಕಾರ ಕಳೆದುಕೊಳ್ಳುವುದು. ಸರ್ಕಾರದ ಅವಕೃಪೆಗೆ ಪಾತ್ರರಾಗುವುದು. ನಿಮಗೆ ಬೇಡದ ಜಾಗಕ್ಕೆ ವರ್ಗಾವಣೆ ಆಗುವುದು. ಕಾರ್ಯ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರುಕುಳ, ಕೆಲಸದ ಒತ್ತಡ ನಿಮ್ಮನ್ನು ಹೈರಾಣಾಗಿಸಬಹುದು. ಈ ವರ್ಷಪೂರ್ತಿ ನಿಮಗೆ ಒತ್ತಡದ ಜೀವನ. ಜನವರಿ 14 ರ ವರೆಗೆ ಸೂರ್ಯ 11ನೇ ಮನೆಯಲ್ಲಿ ಇದ್ದು ಸರ್ಕಾರದಿಂದ ಲಾಭ ಇದೆ. ಯಾವುದೇ ಮುಖ್ಯ ತೀರ್ಮಾನಗಳನ್ನು ಈ ವರ್ಷ ತೆಗೆದುಕೊಳ್ಳಬೇಡಿ. ಜನವರಿ ತಿಂಗಳು ಕೂಡ ನಿಮಗೆ ಅನುಕೂಲವಾಗುವುದು ಕಡಿಮೆ. ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡಿ. ಫಲಾ-ಫಲಗಳನ್ನು ದೇವರಿಗೆ ಬಿಡಿ. ಈಗ ನಿಮ್ಮ ಪ್ರಾಮಾಣಿಕತೆ ಹಾಗೂ ಸತ್ಯ ಧರ್ಮವೇ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಮನೆ ದೇವರನ್ನು ಪಾರ್ಥನೆ ಮಾಡಿಕೊಳ್ಳಿ.

ಮೀನ ರಾಶಿ:

ಮೀನ ರಾಶಿ:

ಶನಿ ವ್ಯಯ ಸ್ಥಾನದಲ್ಲಿ ವರ್ಷಪೂರ್ತಿ ಇರುತ್ತಾನೆ. ಗುರು ಮೇ ವರೆಗೂ ಧನ ಸ್ಥಾನದಲ್ಲಿರುತ್ತಾನೆ. ಗುರುಬಲ ಇರುವವರೆಗೂ ತೊಂದರೆ ಇಲ್ಲ. ಆದರೆ ಮೇ ತಿಂಗಳಲ್ಲಿ ಗುರು ಮೂರನೇ ಮನೆಗೆ ಪ್ರವೇಶವಾದಾಗ ಸಾಡೆಸಾತಿಯ ಬಿಸಿ ತಾಕುತ್ತದೆ. ಕೆಲಸಗಳಿಗೆ ಒಂದಲ್ಲ ಒಂದು ರೀತಿಯ ವಿಘ್ನಗಳು ಎದುರಾಗುತ್ತದೆ. ಆರೋಗ್ಯ ಕೈಕೊಡಬಹುದು. ರಾಜಕೀಯ ವ್ಯಕ್ತಿಗಳು ವಿದ್ಯಾರ್ಥಿಗಳು ಮೇ ತಿಂಗಳ ನಂತರ ಕಷ್ಟ ಅನುಭವಿಸುತ್ತಾರೆ. ಹೆಜ್ಜೆ-ಹೆಜ್ಜೆಗೂ ಜಾಗರೂಕರಾಗಿರಿ. ಶತ್ರುಗಳು ನಿಮ್ಮ ಬೆನ್ನ ಹಿಂದೆಯೇ ಇರುತ್ತಾರೆ. ನಿಮಗೆ ಅರಿವೇ ಆಗದಂತೆ ನಿಮ್ಮ ವಿರುದ್ಧ ಪಿತೂರಿ ನಡೆಯುತ್ತದೆ. ನಿಮ್ಮ ಮಾತುಗಳು ನಿಮಗೆ ಮುಳುವಾಗುತ್ತದೆ. ಈ ಹಿಂದಿನ ತಪ್ಪುಗಳು ಈಗ ಎದ್ದುನಿಂತು ಕಿರುಕುಳ ಕೊಡುತ್ತದೆ. ಆಂಜನೇಯನ ಪ್ರಾರ್ಥನೆ ಮಾಡಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ಸಾಧ್ಯವಾದ ಮಟ್ಟಿಗೆ ಜಾಗ್ರತೆಯಿಂದ ನಡೆದುಕೊಳ್ಳಿ. ಮಾಡುವ ಕೆಲಸಗಳಲ್ಲಿ ಪ್ರಾಮಾಣಿಕತೆ ಇರಲಿ.

ಶುಭಮಸ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+