ಮಿಥುನ : ಪಂಚಮದ ಗುರು ಸಹಾಯ

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ನೀವು ನಿರುದ್ಯೋಗಿಗಳಾಗಿದ್ದಲ್ಲಿ ಪಂಚಮದ ಗುರು ಸಹಾಯದಿಂದಾಗಿ ಈ ತಿಂಗಳು ಉದ್ಯೋಗ ಸಿಗುವಂತೆ ಮಾಡುತ್ತದೆ. ಆದರೆ ಸಿಕ್ಕ ಚಿಕ್ಕ ಅವಕಾಶವನ್ನು ಮಾತ್ರ ತಪ್ಪಿಸಿಕೊಳ್ಳದೆ ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಮಾತ್ರ ಧನಲಾಭವಿದೆ.

ಈ ತಿಂಗಳ ಆದಿಯಲ್ಲಿ ಸದೃಢ ಮನಸ್ಸು ಹಾಗೂ ನೆಮ್ಮದಿ ಕಂಡುಬರುತ್ತದೆ. ಒಂದು ವೇಳೆ ಯಾವುದೋ ಕಾರಣಗಳಿಂದ ದುಃಖ ಆದರೂ ಬಾಳ ಸಂಗಾತಿ ಅಥವಾ ಸ್ನೇಹಿತರು ಆಡುವ ಧೈರ್ಯದ ಮಾತುಗಳಿಂದ ಮತ್ತೆ ಸಂತೋಷದಿಂದ ಇರುತ್ತೀರಿ. ನೀವು ಮಾಡಿದ ಖರ್ಚು ಅಥವಾ ಇನ್ನೊಂದಕ್ಕೆ ಏನೇ ಇರಲಿ ಹಣದ ವಿಚಾರದಲ್ಲಿ ತಿಂಗಳ ಮಧ್ಯಭಾಗದಲ್ಲಿ ಕುಟುಂಬದಲ್ಲಿ ಕಲಹ ಸಂಭವಿಸುವುದು.

Gemini monthly horoscope in Kannada for July 2017

ಪೂರ್ವಜರ ಆಸ್ತಿ ಹಂಚಿಕೆ ಆಗದೆ ಉಳಿದಿದ್ದಲ್ಲಿ, ಆ ಆಸ್ತಿ ಮೇಲೆ ಆಸೆ ಇದ್ದಲ್ಲಿ ಆ ವಿಚಾರವಾಗಿ ಮಾತುಕತೆ ಮಾಡಿ ಫಲಿಸಬಹುದು. ಆದರೂ ಯಾವುದೋ ಒಂದು ಅನಿರೀಕ್ಷಿತ ಕಾರಣಗಳಿಂದ ಬರಬೇಕಾದ ಪಾಲು ಸಂಪೂರ್ಣ ನಿಮಗೆ ಸಿಗುವುದಿಲ್ಲ.

ಸ್ತ್ರೀಯರು: ವ್ಯಾವಹಾರಿಕವಾಗಿ ನೋಡಿದಾಗ ಮಾತ್ರ ನಿಮಗೆ ಖರ್ಚು ಹೆಚ್ಚು ಕಾಣಿಸುತ್ತಿದೆ. ಆದರೆ ಸಮಯಕ್ಕೆ ಸರಿಯಾಗಿ ದುಡ್ಡು ಸಿಗುತ್ತದೆ ಎಂಬುದೇ ಆಶ್ಚರ್ಯಕರ. ನಿಮ್ಮ ಆರ್ಥಿಕ ಸ್ಥಿತಿ ವಿಚಿತ್ರವಾಗಿ ಇರುತ್ತದೆ. ಪ್ರಯತ್ನಿಸಿದರೆ ಮಾತ್ರ ಸಂತೋಷಕ್ಕೆ ಏನೂ ಕೊರತೆ ಇರುವುದಿಲ್ಲ. ಮನಸಿನಲ್ಲಿ ಇರುವ ಭಯ ಎಲ್ಲ ಬಿಟ್ಟು ಇರಬೇಕಾದ ತಿಂಗಳು ಇದು.

ಹಣಕಾಸಿನ ವ್ಯವಹಾರಗಳಿಂದ ಆದಷ್ಟೂ ದೂರವಿರಿ. ತಿಂಗಳಿನ ಮೊದಲ ಅರ್ಧ ಭಾಗದ ತನಕ ಅಷ್ಟಾಗಿ ಯಶಸ್ಸು ಸಿಗದು. ಆದರೆ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಲಭಿಸುತ್ತದೆ. ಮಾಸಿಕ ಋತು ಚಕ್ರದ ಸಮಸ್ಯೆ ಅದೇ ಸಂಬಂಧಿತ ಆರೋಗ್ಯ ಬಾಧೆ ಇಲ್ಲದಿದ್ದರೆ ಮಾತ್ರ ಇನ್ನಾವ ಸಮಸ್ಯೆ ಆಗುವುದಿಲ್ಲ.

ಇಬ್ಬರೂ ಅಥವಾ ಅದಕ್ಕೂ ಹೆಚ್ಚಿನ ಜನರಿಗಾಗಿ ಅಡುಗೆ ಮಾಡಬೇಕಾದ ಜವಾಬ್ದಾರಿ ಹೆಗಲ ಮೇಲೆ ಬಂದಲ್ಲಿ ನೀವು ಒಬ್ಬರೇ ಅದನ್ನು ವಹಿಸಿಕೊಳ್ಳದೆ ಬೇರೆಯವರ ಸಹಾಯ ಪಡೆದರೆ ಉತ್ತಮ. ಇಲ್ಲದಿದ್ದರೆ ನಿಮ್ಮಿಂದ ಅಡುಗೆ ಹಾಳಾಗುತ್ತದೆ.

ವಿದ್ಯಾರ್ಥಿಗಳು: ಸಂಘಟನೆ ಮಾಡಲು ಉತ್ತಮ ಸಹಕಾರ ಲಭಿಸುತ್ತದೆ. ಅಧ್ಯಾಪಕರಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಸುಳ್ಳು ಮಾತ್ರ ನುಡಿಯಬೇಡಿ.

Mithuna ( Gemini ) Rashi : Know The Nature Of People Who Belongs To This Sign | Watch Video

ಪರಿಹಾರ: ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ದರ್ಶನ ಮಾಡಿಕೊಂಡು, ಕಾವೇರಿ ಸ್ನಾನ ಮಾಡಿ ಬನ್ನಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Get the complete month predictions of September 2017. Read monthly horoscope of Gemini in Kannada. Get free monthly horoscope, astrology and monthly predictions in Kannada.
Please Wait while comments are loading...