ಡಿಸೆಂಬರ್ - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

ನಮ್ಮದು ಅನುದಿನದ ಧಾವಂತದ ಬದುಕು. ಸೂರ್ಯ ಉದಯಿಸುತ್ತಿದ್ದಂತೆ ಕಾಲುಗಳು ನಿಂತಲ್ಲಿ ನಿಲ್ಲುವುದಿಲ್ಲ. ಸ್ನಾನ, ಸಂಧ್ಯಾವಂದನೆ ಮಾಡಿ ತಿಂಡಿ ತಿನ್ನುವ ಹೊತ್ತಿಗೆ ಆಫೀಸಿಗೆ ಹೊರಡುವುದು ಹತ್ತು ನಿಮಿಷ ತಡವಾಗಿಬಿಟ್ಟಿರುತ್ತದೆ. ಬೆಳಗಿನ ಜಾವ ಪೇಪರಲ್ಲಿ ಬಂದಿರುವ ಹೆಡ್‌ಲೈನ್ ಓದಲೇ ಟೈಮ್ ಇರುವುದಿಲ್ಲ, ಇನ್ನು ದೈನಂದಿನ ಶುಭಫಲ ಏನು ಹೇಳುತ್ತದೆಂದು ತಿಳಿಯಲು ಸಮಯವಾದರೂ ಎಲ್ಲಿರುತ್ತದೆ?

ವಾರ ಭವಿಷ್ಯ ಅಥವಾ ತಿಂಗಳ ಭವಿಷ್ಯ ಒಂದು ಬಾರಿ ನೋಡಿ ಮರೆತುಬಿಟ್ಟಿರುತ್ತೇವೆ. ನಾವು ಅವುಗಳನ್ನು ಮರೆತರೂ ಗ್ರಹ, ನಕ್ಷತ್ರ ಮತ್ತು ಕಾಲಚಕ್ರಗಳನ್ನು ನಮ್ಮನ್ನು ಮರೆಯುವುದಿಲ್ಲ. ಭಾರತದ ಪ್ರಾಚೀನ ಜ್ಯೋತಿಷ್ಯಶಾಸ್ತ್ರ ನಮ್ಮ ಜೀವನದೊಂದಿಗೆ ಯಾವತ್ತೂ ಕೂಡಿಕೊಂಡಿರುತ್ತದೆ. ನಿಮ್ಮ ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ ಜ್ಯೋತಿಷ್ಯ ಕ್ಯಾಲೆಂಡರನ್ನು ಇಲ್ಲಿ ಸಾದರಪಡಿಸುತ್ತಿದ್ದೇವೆ. ನಮ್ಮ ಭವಿಷ್ಯಫಲ ಏನಿದೆ ಎಂದು ಇಲ್ಲಿ ಖುದ್ದಾಗಿ ನಾವೇ ನೋಡಿಕೊಳ್ಳಬಹುದು.

ಈ ಜ್ಯೋತಿಷ್ಯ ಕ್ಯಾಲೆಂಡರನ್ನು ಖ್ಯಾತ ಜ್ಯೋತಿಷಿ ಪಂಡಿತ ಅನುಜ್ ಕೆ. ಶುಕ್ಲಾ ಅವರು ಡಿಸೆಂಬರ್ 2013ರ ಪಂಚಾಂಗದ ಆಧಾರದ ಮೇಲೆ ಆಯಾ ರಾಶಿಗೆ ಅನುಗುಣವಾಗಿ ರೂಪಿಸಿದ್ದಾರೆ. ನಿಮ್ಮ ರಾಶಿಗೆ ತಕ್ಕಂತೆ ಅಂದಿನ ದಿನ ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂದು ಮಾತ್ರವಲ್ಲ, ನಾಳೆ, ನಾಡಿದ್ದು ಅಥವಾ ಮುಂದಿನ ದಿನ ಹೇಗಿರುತ್ತದೆಂದು ಕೂಡ ಈ ಕ್ಯಾಲೆಂಡರ್ ಮುಖಾಂತರ ತಿಳಿಯಬಹುದು.

ಚಂದ್ರನ ಚಲನೆಯನ್ನು ಆಧಿರಿಸಿ ರೂಪಿಸಲಾಗಿರುವ ಈ ಕ್ಯಾಲೆಂಡರನ್ನು ನೋಡಿ ಆಯಾ ದಿನ ಪ್ರೇಮ ಪರಿಣಯ ಎಂದು ಹೇಗೆ, ಮನೆ ಕೊಳ್ಳಲು ಯಾವ ದಿನ ಸೂಕ್ತ, ಎಂದು ಧನ ಪ್ರಾಪ್ತಿಯಾಗುತ್ತದೆ, ಯಾವ ದಿನ ಖಿನ್ನತೆ ಆವರಿಸುತ್ತದೆ, ಎಂದು ಸಂತಸದ ಬುಗ್ಗೆ ಉಕ್ಕುತ್ತದೆ ಮುಂತಾದ ವಿಷಯಗಳ ಬಗ್ಗೆ ತಿಳಿಯಬಹುದು. ಎಲ್ಲ ಸಂಗತಿಗಳನ್ನು ಪಂಡಿತರು ವಿವಿಧ ಚಿಹ್ನೆಗಳ ಮುಖಾಂತರ ಅತ್ಯಂತರ ಸರಳವಾಗಿ ತಿಳಿಸಿಕೊಡುತ್ತಾರೆ.

ಯಾವ ಚಿಹ್ನೆ ಏನು ಹೇಳುತ್ತದೆ?

ಹೃದಯ - ಪ್ರೀತಿ ಪ್ರೇಮ ಪ್ರಣಯಕ್ಕೆ ಆ ದಿನ ಅತ್ಯಂತ ಸುದಿನವಾಗಿರುತ್ತದೆ.
ಮಿಂಚು - ಆ ದಿನ ನಿಮ್ಮ ಜೀವನದಲ್ಲಿ ಆಪತ್ತು ಬರಬಹುದು.
ಮನೆ - ಮನೆ ಅಥವಾ ಅಂಗಡಿಯನ್ನು ಆ ದಿನ ಕೊಳ್ಳಬಹುದು ಅಥವಾ ಮಾರಬಹುದು.
ಮುಗುಳ್ನಗೆ - ಆ ದಿನ ನಿಮ್ಮ ಜೀವನದಲ್ಲಿ ಸಂತಸ ಬರಬಹುದು.
ಚಿಂತೆ - ಯಾವುದೋ ವಿಷಯದಲ್ಲಿ ಚಿಂತೆ ಅಥವಾ ಖಿನ್ನತೆ ಆವರಿಸಬಹುದು.
ನಕ್ಷತ್ರ - ಆ ದಿನ ಜೀವನದಲ್ಲಿ ಸೌಭಾಗ್ಯದ ದಿನವಾಗಿರುತ್ತದೆ.
ನಾಣ್ಯ - ನಾಣ್ಯ ಇದ್ದ ದಿನ ಧನ ಲಾಭ ಆಗುವ ಸಂಭವನೀಯತೆ ಇರುತ್ತದೆ.

ಪ್ರತಿದಿನ ಬಿಡುವು ಸಿಕ್ಕಾಗಲೆಲ್ಲ ಈ ಕ್ಯಾಲೆಂಡರನ್ನು ನೋಡಬೇಕೆಂದಿದ್ದರೆ ಈ ಪುಟವನ್ನು ಬುಕ್‌ಮಾರ್ಕ್ ಮಾಡಿಟ್ಟುಕೊಳ್ಳಿ.

ಮೇಷ - ತೊಂದರೆಗೆ ಎದೆಯೊಡ್ಡಲು ಸಿದ್ಧರಾಗಿ

ಮೇಷ - ತೊಂದರೆಗೆ ಎದೆಯೊಡ್ಡಲು ಸಿದ್ಧರಾಗಿ

ರಿಸ್ಕ್! ತೊಂದರೆಗಳಿಗೆ ಎದೆಯೊಡ್ಡುವ ತಾಕತ್ತಿದ್ದರೆ ಮಾತ್ರ ಯಾವುದೇ ಕೆಲಸಕ್ಕೆ ಕೈಹಾಕಿ. ಇಲ್ಲದಿದ್ದರೆ ಆಗದು ಎಂದು ಕೈಕಟ್ಟಿ ಕುಳಿತುಬಿಡಿ. ದೇವರಾಣೆ ಉದ್ಧಾರವಾಗಲ್ಲ. ಪ್ರೀತಿ ಪ್ರೇಮದ ವಿಷಯವೇ ಇರಲಿ, ಹಣ ಹೂಡಿಕೆಯ ಸಂಗತಿಯೇ ಇರಲಿ, ರಿಸ್ಕ್ ತೆಗೆದುಕೊಳ್ಳದಿದ್ದರೆ ಉದ್ಧಾರವಾಗುವುದಿಲ್ಲ. ಆದರೆ, ಅದೇ ಸಮಯದಲ್ಲಿ ವಾಸ್ತವಿಕತೆಯ ಅರಿವಿದ್ದು, ತೊಂದರೆಗಳಿಗೆ ಎದೆಯೊಡ್ಡಲು ಸಿದ್ಧರಾದರೆ ಅರ್ಧ ಯುದ್ಧ ಗೆದ್ದಂತೆ.

ವೃಷಭ - ಕನಸು ಕಾಣುತ್ತ ಕೂಡುವ ಸಮಯವಲ್ಲ

ವೃಷಭ - ಕನಸು ಕಾಣುತ್ತ ಕೂಡುವ ಸಮಯವಲ್ಲ

ಆಗಸದಲ್ಲಿ ಎಷ್ಟು ನಕ್ಷತ್ರಗಳಿವೆ ಎಂದು ಎಣಿಸಿಕೊಳ್ಳುತ್ತ, ಕನಸು ಕಾಣುತ್ತ ಕೂಡುವಂಥ ಸಮಯವಲ್ಲ. ಜೋಳಿಗೆ ತುಂಬಬೇಕಾದರೆ, ಕನಸುಗಳು ನನಸಾಗಬೇಕಾದರೆ ತೋಳೇರಿಸಿಕೊಂಡು 'ಎಕ್ಸ್‌ಟ್ರಾ' ದುಡಿಮೆಗೆ ಸಿದ್ಧರಾಗಿರಿ. ಜೇಬು ಖಾಲಿಯಾಗಿದ್ದರೆ ಯಾವ ಹೆಂಗಸು ಕೂಡ ಮೆಚ್ಚುವುದಿಲ್ಲ, ತಿಳಿದಿರಲಿ. ಇಷ್ಟಾದರೆ, ತಿಂಗಳ ದ್ವಿತೀಯಾರ್ಧದಲ್ಲಿ ಅಚ್ಚರಿಗಳ ಮೇಲೆ ಅಚ್ಚರಿ ಎದುರಾಗಲಿದೆ. ಅದೃಷ್ಟವೆಂಬುದು ದೇವರನ್ನು ಕೇಳಿಕೊಂಡಾಗ ಬರುವುದಿಲ್ಲ. ಶ್ರದ್ಧೆಯಿದ್ದರೆ ತಾನಾಗಿಯೇ ಎಲ್ಲ ತೊಂದರೆಗಳು ನಿವಾರಣೆಯಾಗಿ ಅದೃಷ್ಟವಂತ ಎಂಬ ಹಣೆಪಟ್ಟಿ ಸಿಗುತ್ತದೆ. ಮುಂದೇನು ಮಾಡಬೇಕೆಂದಿದ್ದೀರಿ ಆಯ್ಕೆ ನಿಮ್ಮದು.

ಮಿಥುನ - ಮಾನಸಿಕ ಬೇಡಿ ಕಳಚಿ ಬಿಸಾಡಿ

ಮಿಥುನ - ಮಾನಸಿಕ ಬೇಡಿ ಕಳಚಿ ಬಿಸಾಡಿ

ಇವನ್ಯಾಕೆ ಹೀಗೆ, ಕೈಕಾಲು ಬಾಯಿ ಬಿಗಿದ ಹಾಗಿರುತ್ತಾನೆ? ಎಂಬಿತ್ಯಾದಿ ಪ್ರಶ್ನೆಗಳು ಕೆಲವರನ್ನು ಕಾಡುತ್ತ ಇರುತ್ತವೆ. ಅವರಿಗೆ ದೈಹಿಕವಾಗಿ ಬೇಡಿ ಹಾಕಿರದಿದ್ದರೂ ಅವರು ತಮಗೆ ತಾವೇ ಮಾನಸಿಕವಾಗಿ ಬೇಡಿ ಹಾಕಿಕೊಂಡಿರುತ್ತಾರೆ? ನೀವೇ ಹಾಕಿಕೊಂಡ ಬೇಡಿ ಕಿತ್ತು ಬಿಸಾಡಿ, ಮುಂದೇನಾಗುತ್ತದೆಂದು ನೀವೇ ನೋಡಿ. ಹಣ, ಅದೃಷ್ಟ, ಹೆಸರು, ಸ್ನೇಹ, ಗೌರವ ಎಲ್ಲ ನಿಮ್ಮನ್ನು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ಹಾಗೆಯೆ, ಪ್ರೀತಿ ಕೂಡ. ಕನಿಷ್ಠಪಕ್ಷ ಈ ಸಂತೋಷವನ್ನಾದರೂ ಮುಕ್ತವಾಗಿ ಎಂಜಾಯ್ ಮಾಡಿ.

ಕರ್ಕಾಟಕ - ಅಡಚಣೆಗಳು ನೀರ ಗುಳ್ಳೆಗಳಂತೆ

ಕರ್ಕಾಟಕ - ಅಡಚಣೆಗಳು ನೀರ ಗುಳ್ಳೆಗಳಂತೆ

ಶುಭಸ್ಯ ಶೀಘ್ರಂ. ಯಾವುದೇ ಒಳ್ಳೆಯ ಕೆಲಸ ಮಾಡಬೇಕೆಂದು ಅಂದುಕೊಂಡಿದ್ದರೆ ತ್ವರಿತಗತಿಯಲ್ಲಿ ಆದರೆ ಸ್ಥಿರತೆಯಿಂದ ಮುಂದಡಿಯಿಡಿ. ಹೊರಡುವಾಗ, ಎಲ್ಲಿ ಹೊಂಟಿ, ಮೂರು ಮಂದಿ ಹೋಗಬೇಡಿ ಎಂದು ಯಾರಾದರೂ ಕೇಳಿದರೆ ತಲೆಕೆಡಿಸಿಕೊಳ್ಳಬೇಡಿ. ಎಡವಿದರೆ ಹಿಂದಡಿಯಿಡಬೇಡಿ. ಸಣ್ಣಪುಟ್ಟ ಅಡಚಣೆಗಳು ನೀರಿನ ಮೇಲಿನ ಗುಳ್ಳೆಗಳಂತೆ ನಿವಾರಣೆಯಾಗುತ್ತವೆ. ಮನೆಯ ಮೇಲೆ ಹೂಡಿಕೆಗೆ ಸುಸಮಯ. ಆದರೆ, ಪ್ರೀತಿ ಪ್ರೇಮದ ವಿಷಯದಲ್ಲಿ ಮಾತ್ರ ಸ್ವಲ್ಪ ಎಚ್ಚರದಿಂದಿರಿ. ಬಣ್ಣ ನೋಡಿ ಮೋಸ ಹೋಗುವಷ್ಟು ದಡ್ಡರು ನೀವಲ್ಲ ಎಂದು ತೋರಿಸಿ.

ಸಿಂಹ - ನಗುವಿನಿಂದಲೇ ದುಃಖವನ್ನೂ ದೂರಮಾಡಿ

ಸಿಂಹ - ನಗುವಿನಿಂದಲೇ ದುಃಖವನ್ನೂ ದೂರಮಾಡಿ

ಲವ್ ಸಕ್ಸಸ್ ಆದಾಗ, ಕೆಲಸ ಸಿಕ್ಕಾಗ ಎಷ್ಟು ಖುಷಿಪಡುತ್ತೇವೆಯೋ, ನಮ್ಮದಲ್ಲದ ತಪ್ಪಿಗೆ ಅವೆರಡನ್ನು ಕಳೆದುಕೊಳ್ಳಬೇಕಾದಂಥ ಪ್ರಸಂಗ ಬಂದಾಗ ಕೂಡ ಖುಷಿಯಿಂದ ಅಲ್ಲದಿದ್ದರೂ ದೃಢಮನಸ್ಸಿನಿಂದ ದೂರ ಮಾಡಿರಿ. ಜಗತ್ತು ವಿಶಾಲವಿದೆ, ಅವಕಾಶಗಳು ಸಾಕಷ್ಟಿವೆ. ಎಲ್ಲವನ್ನೂ ನಗುವಿನಿಂದಲೇ ಸ್ವೀಕರಿಸಿ ಅಥವಾ ತಿರಸ್ಕರಿಸಿ. ಇಂಥದೊಂದು ಮನಸ್ಥಿತಿ ನಿಮ್ಮನ್ನು ಯಶಸ್ಸಿನ ಹಂತಕ್ಕೆ ತಂದು ನಿಲ್ಲಿಸುತ್ತದೆ. ಕೆಲಸ ಕಿತ್ತುಕೊಳ್ಳಬಹುದೇ ಹೊರತು ಅವಕಾಶ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಅಲ್ಲವಾ?

ಕನ್ಯಾ - ಅದೃಷ್ಟ ಬದಲಾಯಿಸುವ ತಾಕತ್ತು ನಿಮ್ಮಲ್ಲಿದೆ

ಕನ್ಯಾ - ಅದೃಷ್ಟ ಬದಲಾಯಿಸುವ ತಾಕತ್ತು ನಿಮ್ಮಲ್ಲಿದೆ

ಕಷ್ಟ ದುಡಿಮೆಯ ಫಲ ಕಷ್ಟಪಡುವಾಗ ಸಿಗುವುದಿಲ್ಲ. ಕಾಯಿ ಹಣ್ಣಾಗಲು ಸ್ವಲ್ಪ ಸಮಯ ಬೇಕೇಬೇಕು. ಅವರೆಕಾಳು ಉಪ್ಪಿಟ್ಟು ತಿನ್ನಬೇಕೆಂದಿದ್ದರೆ ಚಳಿಗಾಲದವರೆಗೆ ಕಾಯಲೇಬೇಕು. ಅದಕ್ಕಾಗಿ ಕಾಯುವ ತಾಳ್ಮೆ ನಿಮಗಿರಬೇಕು. ಈಗ ಅದೃಷ್ಟ ನಿಮಗೆ ಕೂಡಿ ಬಂದಿದೆ. ಹಾಗಂತ, ಹಾರಾಡಬೇಡಿ. ಕಾಲು ನೆಲದ ಮೇಲಿರಲಿ, ತಲೆ ಕುತ್ತಿಗೆ ಮೇಲೆ ಸ್ಥಿರವಾಗಿರಲಿ. ಅದೃಷ್ಟವನ್ನು ಬದಲಾಯಿಸುವ ತಾಕತ್ತು ಇರುವುದು ನಿಮಗೆ ಮಾತ್ರ! ಬಂದ ಬಳುವಳಿಯನ್ನು ಉಳಿಸಿಕೊಳ್ಳಿ.

ತುಲಾ - ಒನ್ ವೇ ಪಯಣ ಡೇಂಜರಸ್

ತುಲಾ - ಒನ್ ವೇ ಪಯಣ ಡೇಂಜರಸ್

ಮೊದಲನೆ ನೋಟಕ್ಕೆ ಯಾವತ್ತೂ ಪ್ರೇಮ ಹುಟ್ಟುವುದಿಲ್ಲ. ಅದೆಲ್ಲ ಬೊಗಳೆ. ಒನ್ ವೇ ಟ್ರಾಫಿಕ್ ನಲ್ಲಿನ ಪಯಣ ಯಾವತ್ತೂ ಡೇಂಜರಸ್. ಜೊತೆಗೆ ಅಂದುಕೊಂಡ ಕೆಲಸ ಆಗುತ್ತಿಲ್ಲವೆಂದು ಪೇಚಾಡುತ್ತಿದ್ದರೆ ಅದಕ್ಕೆ ಕಾರಣ ನೀವು ನಿಯತ್ತಾಗಿಲ್ಲದಿರುವುದು. ಹೆಂಡತಿಗೂ ಕೆಲಸಕ್ಕೂ ನಿಯತ್ತಾಗಿರಬೇಕು ಎಂದು ಕಳೆದ ವಾರವೇ ಹೇಳಿತ್ತು. ಸಂಗಾತಿ ಮುನಿಸಿಕೊಂಡಾಳೆಂದು ಚಿಂತೆ ಮಾಡಲು ಹೋಗಬೇಡಿ. ಹಾಗೆಯೆ, ಕ್ಯಾಲೆಂಡರ್ ನೋಡಿ ಅದೃಷ್ಟದ ದಿನಗಳನ್ನು ಗುರುತುಹಾಕಿಕೊಳ್ಳಿ. ಆ ದಿನಗಳನ್ನು ಒಳ್ಳೆಯ ಕೆಲಸಕ್ಕಾಗಿ ಮೀಸಲಿಟ್ಟುಕೊಳ್ಳಿ.

ವೃಶ್ಚಿಕ - ಕೈಗೆ ದುಡ್ಡು ಹರಿದುಬಂದರೆ ಕೂಡಿಡಿ

ವೃಶ್ಚಿಕ - ಕೈಗೆ ದುಡ್ಡು ಹರಿದುಬಂದರೆ ಕೂಡಿಡಿ

ದೊಡ್ಡ ಮೊತ್ತದ ಹಣ ಕೈಸೇರಿದಾಗ ಆಸ್ತಿಕೊಳ್ಳಲು ಹೂಡಿಕೆ ಮಾಡದೆ ಜೋಪಾನವಾಗಿಟ್ಟುಕೊಳ್ಳಿ. ಕೈಯಲ್ಲಿ ಹಣವಿದೆ ಎಂಬ ಭಾವವೇ ಅನೇಕ ಸಮಸ್ಯೆಗಳಿಗೆ ತಾನಾಗಿಯೇ ದಾರಿ ತೋರಿಸುತ್ತದೆ, ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ. ಆರೋಗ್ಯ ಕಾಯ್ದುಕೊಳ್ಳುವ ಒಂದು ಸರಳ ಗುಟ್ಟು ಕೂಡ ಇದೇ. ಅಲ್ಪರಿಗೆ ದಾನ ಮಾಡಲು ಹಿಂಜರಿಯಬೇಡಿ. ದೇವರು ಮತ್ತು ದೊಡ್ಡವರ ಆಶೀರ್ವಾದ ಯಾವತ್ತೂ ನಿಮ್ಮನ್ನು ಕಾಪಿಡುತ್ತದೆ. ಯಾವುದೇ ಮೂರ್ಖತನದ ಕೆಲಸಕ್ಕೆ ಕೈಹಾಕಲೇಬೇಡಿ.

ಧನಸ್ಸು - ಪರಿಣಿತರ ಮಾತು ಚೆನ್ನಾಗಿ ಕೇಳಿಸಿಕೊಳ್ಳಿ

ಧನಸ್ಸು - ಪರಿಣಿತರ ಮಾತು ಚೆನ್ನಾಗಿ ಕೇಳಿಸಿಕೊಳ್ಳಿ

ಆರೋಗ್ಯದ ವಿಷಯದಲ್ಲೇ ಆಗಲಿ, ಹಣ ಹೂಡಿಕೆ ವಿಷಯದಲ್ಲೇ ಆಗಲಿ ನೀವೇ ಎಕ್ಸ್‌ಪರ್ಟ್‌ನಂತೆ ವರ್ತಿಸಲು ಹೋಗಬೇಡಿ. ತಿಳಿದವರ ಸಹಾಯ ಪಡೆಯಿರಿ. ಚೆನ್ನಾಗಿ ಕೇಳಿಸಿಕೊಳ್ಳುವವ ಮಾತ್ರ ಎಲ್ಲರ ಗೌರವಕ್ಕೆ ಪಾತ್ರನಾಗಬಲ್ಲ. ಯೋಗಿಯಾದವನು ಭೋಗಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ, ಭೋಗಿಯಾದವನು ಯೋಗಿಯಾಗಲು ಎಷ್ಟು ಸಮಯ ಬೇಕು ಲೆಕ್ಕಹಾಕಿ. ಇತಿಮಿತಿಯಲ್ಲೇ ಜೀವನ ನಡೆಸಲು ಕಲಿಯಿರಿ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಆದರೆ, ತೀರ್ಥಯಾತ್ರೆಯ ಅವಕಾಶ ಬಂದರೆ ಕಳೆದುಕೊಳ್ಳಬೇಡಿ.

ಮಕರ - ಸಣ್ಣ ಆಘಾತಕ್ಕೆ ವಿಚಲಿತರಾಗಬೇಡಿ

ಮಕರ - ಸಣ್ಣ ಆಘಾತಕ್ಕೆ ವಿಚಲಿತರಾಗಬೇಡಿ

ಹೊಸ್ತಿಲು ದಾಟುವಾಗ ಯಾವ ಕಾಲು ಇಟ್ಟು ಮುಂದೆ ಹೋದಿರಿ ಎಂಬುದು ಮುಖ್ಯವಲ್ಲ, ಯಾವ ಚಿಂತನೆಯಿಂದ ಕೆಲಸಕ್ಕೆ ಹೊರಟಿರಿ ಎಂಬುದು ಮುಖ್ಯವಾದದ್ದು. ಧನಾತ್ಮಕ ಚಿಂತನೆಯಿರಲಿ, ಋಣಾತ್ಮಕ ಚಿಂತನೆಯನ್ನು ಮನೆಯಲ್ಲೇ ಬಿಟ್ಟು ಹೊರಡಿ. ತಿಂಗಳ ದ್ವಿತೀಯಾರ್ಧದಲ್ಲಿ ನೀವಂದುಕೊಂಡ ಬಹುತೇಕ ಕೆಲಸಗಳು ನೆರವೇರುತ್ತವೆ. ಇದಕ್ಕೆ ದೈವಬಲ ಮಾತ್ರವಲ್ಲ ನೀವು ಸುರಿಸುವ ಬೆವರು ಕೂಡ ಅಷ್ಟೇ ಮುಖ್ಯ. ಸಣ್ಣಪುಟ್ಟ ಆಘಾತಗಳಿಂದ ವಿಚಲಿತರಾಗಬೇಡಿ.

ಕುಂಭ - ಚಿಂತನೆಗೂ ಚಿಂತೆಗೂ ವ್ಯತ್ಯಾಸ ತಿಳಿದಿರಲಿ

ಕುಂಭ - ಚಿಂತನೆಗೂ ಚಿಂತೆಗೂ ವ್ಯತ್ಯಾಸ ತಿಳಿದಿರಲಿ

ಟಾಸ್ ಹಾಕಿದಾಗ ಹೆಡ್ ಬೀಳತ್ತಾ, ಟೇಲ್ ಬೀಳತ್ತಾ? ಗೊತ್ತಿಲ್ಲ ತಾನೆ. ಹಿಂದೆ ಆಗಿದ್ದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಾಳೆ ಏನಾಗುತ್ತದೆಂದು ಚಿಂತಿಸಬೇಡಿ. ವಾಸ್ತವವನ್ನು ಸಮರ್ಥವಾಗಿ ಬಳಸಿಕೊಳ್ಳಿ. ಈಗಿರುವುದು ಮಾತ್ರ ಸತ್ಯ. ಆದರೆ, ನಾಳೆ ಆಗುವುದನ್ನು ಎದುರಿಸಲು ಸಿದ್ಧರಾಗಿರಬೇಕು. ಕಷ್ಟವೂ ಬರಬಹುದು, ಸುಖವೂ ಬರಬಹುದು. ಚಿಂತನೆಗೂ ಚಿಂತೆಗೂ ವ್ಯತ್ಯಾಸ ತಿಳಿದಿರಲಿ. ಯಾವುದೇ ಕಾರಣಕ್ಕೂ ಲೆಕ್ಕಾಚಾರವಿಲ್ಲದೆ ಯಾವ ಕೆಲಸಕ್ಕೂ ಕೈಹಾಕಬೇಡಿ.

ಮೀನ - ಮನಸ್ಸನ್ನು ಯಾವಾಗಲೂ ತೆರೆದಿಟ್ಟುಕೊಳ್ಳಿ

ಮೀನ - ಮನಸ್ಸನ್ನು ಯಾವಾಗಲೂ ತೆರೆದಿಟ್ಟುಕೊಳ್ಳಿ

ಮೀನ ರಾಶಿಯವರಿಗೆ ಈ ತಿಂಗಳು ಭಲೆ ಅದೃಷ್ಟದ ತಿಂಗಳೆಂದರೆ ಆಶ್ಚರ್ಯವಿಲ್ಲ. ಬಹುಪಯೋಗಿ ವಸ್ತು ಕೊಳ್ಳಲು ಬಹುದಿನಗಳಿಂದ ಚಿಂತನೆ ನಡೆಸಿದ್ದರೆ, ಜಾಸ್ತಿ ಹಿಂದೆಮುಂದೆ ನೋಡದೆ ಕೊಂಡುಬಿಡಿ. ನೆಂಟರು ಬಂದರೆ ಗಂಟು ಖರ್ಚಾದೀತೆಂದು ಚಿಂತಿಸಬೇಡಿ. ಅವರಿಂದಲೂ ಸಂತಸದ ಸುದ್ದಿಗಳು ಕೇಳಿಬರಬಹುದು. ಕಣ್ಣು, ಕಿವಿ, ಮನಸ್ಸನ್ನು ಯಾವಾಗಲೂ ತೆರೆದಿಟ್ಟುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+