ಬುಧ ಸಂಕ್ರಮಣ 2023: ಈ 3 ರಾಶಿಯವರಿಗೆ ಯಶಸ್ಸು ಮತ್ತು ಪ್ರಗತಿ
ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಬುಧನು ಉತ್ತಮವಾಗಿ ಸ್ಥಿತವಾದರೆ ಅಂತಹವರ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ತರುತ್ತದೆ.
ಇದಲ್ಲದೆ ಅಂತವರು ಅಧ್ಯಯನದಲ್ಲಿ ಉತ್ತಮರಾಗುತ್ತಾರೆ. ಏಕೆಂದರೆ ಬುಧವನ್ನು ಮಾತು, ವ್ಯವಹಾರ, ಬುದ್ಧಿವಂತಿಕೆ ಮತ್ತು ಶಿಕ್ಷಣದ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಬುಧ ಗ್ರಹ ಕಡಿಮೆ ದಿನಗಳಲ್ಲಿ ರಾಶಿಯನ್ನು ಬದಲಾಯಿಸಬಹುದು.
ಈ ಬುಧ ಸದ್ಯ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದೆ. ಜುಲೈ 08, 2023 ರಂದು ಚಂದ್ರನು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ದಿನ ಬುಧ ಕರ್ಕಾಟಕಕ್ಕೆ ಪ್ರವೇಶಿಸುತ್ತದೆ. ಅದರ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಆದರೆ 3 ರಾಶಿಯ ಜನರು ಬುಧದ ಈ ಸಂಕ್ರಮಣದಿಂದಾಗಿ ಬಹಳಷ್ಟು ಯಶಸ್ಸು ಮತ್ತು ಪ್ರಗತಿಯನ್ನು ಕಾಣಲಿದ್ದಾರೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಸಿಂಹ ರಾಶಿ
ಬುಧ ಸಿಂಹ ರಾಶಿಯ 12ನೇ ಮನೆಗೆ ಸಾಗುತ್ತದೆ. ಈ ಅವಧಿ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಸಿಕ್ಕಿಬಿದ್ದ ಹಣ ಕೈಗೆ ಸಿಗುತ್ತದೆ. ಉದ್ಯೋಗಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯಬಹುದು. ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಈ ಅವಧಿಯು ಅದ್ಭುತವಾಗಿರುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ನಿಮ್ಮ ಮಾತು ಇತರರಿಗೆ ಆಕರ್ಷಕವಾಗಿರುತ್ತದೆ.

ಕನ್ಯಾ ರಾಶಿ
ಕನ್ಯಾರಾಶಿಯ 11ನೇ ಮನೆಗೆ ಬುಧ ಸಂಕ್ರಮಿಸುತ್ತದೆ. ಈ ಸಮಯ ಕನ್ಯಾ ರಾಶಿಗೆ ವೃತ್ತಿಪರವಾಗಿ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಕಾಣುತ್ತಾರೆ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅವಕಾಶಗಳನ್ನು ಪಡೆಯಬಹುದು. ನೀವು ಕೆಲಸವನ್ನು ಹುಡುಕುತ್ತಿದ್ದರೆ, ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ಸಹೋದ್ಯೋಗಿಗಳ ಬೆಂಬಲವೂ ಸಿಗುತ್ತದೆ.

ವೃಶ್ಚಿಕ ರಾಶಿ
ಬುಧ ಗ್ರಹ ವೃಶ್ಚಿಕ ರಾಶಿಯ 9ನೇ ಮನೆಗೆ ಚಲಿಸುತ್ತದೆ. ಈ ಅವಧಿಯಲ್ಲಿ ಅದೃಷ್ಟ ವೃಶ್ಚಿಕ ರಾಶಿಯವರ ಕೈ ಹಿಡಿಯಲಿದೆ. ಈ ರಾಶಿಯ ಸಂಗಾತಿಗಳು ಸುಧಾರಣೆಯನ್ನು ಕಾಣಬಹುದು. ಉದ್ಯೋಗಿಗಳು ಕಚೇರಿಯಲ್ಲಿ ಉತ್ತಮ ಸ್ಥಿತಿಯಲ್ಲಿರುತ್ತಾರೆ. ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ಅವಧಿ ಲಾಭದಾಯಕವಾಗಿರುತ್ತದೆ. ಜೀವನ ಸಂಗಾತಿಯಿಂದ ಎಲ್ಲಾ ಸಮಸ್ಯೆಗಳು ದೂರವಾಗಿ ಇಬ್ಬರ ನಡುವೆ ಬಾಂಧವ್ಯ ಹೆಚ್ಚುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications