Mercury Rise In Pisces: ಮೀನ ರಾಶಿಯಲ್ಲಿ ಬುಧ ಉದಯ: ಈ 3 ರಾಶಿಯವರ ವ್ಯವಹಾರದಲ್ಲಿ ಹಿಂದೆಂದೂ ಕಾಣದ ಯಶಸ್ಸು
ಸೌರವ್ಯೂಹದಲ್ಲಿ ಕಾಲ ಕಾಲಕ್ಕೆ ಗ್ರಹಗಳು ಸಂಚಾರದ ವೇಳೆ ರಾಶಿಗಳನ್ನು ಬದಲಾಯಿಸುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ಬುಧನನ್ನು ನವಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಬುಧನು ಮಾತು, ಬುದ್ಧಿವಂತಿಕೆ, ಅಧ್ಯಯನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ.
ಪ್ರಸ್ತುತ ಬುಧನು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮೀನರಾಶಿಯನ್ನು ಪ್ರವೇಶಿಸಿದಾಗ ಬುಧನು ಅಷ್ಟಮಾನದಲ್ಲಿದ್ದನು. ಈ ಸಂದರ್ಭದಲ್ಲಿ ಇತ್ತೀಚೆಗೆ ಅಂದರೆ ಮಾರ್ಚ್ 19 ರಂದು ಬುಧವು ಮೀನ ರಾಶಿಯಲ್ಲಿ ಉದಯಿಸಿತು. ಬುಧನು ಮೀನರಾಶಿಯಲ್ಲಿ ಉದಯಿಸುವುದರಿಂದ ಕೆಲ ರಾಶಿಗಳ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಕೆಲವು ಸ್ಥಳೀಯರಿಗೆ ಅದೃಷ್ಟ ಹೊಳೆಯುತ್ತದೆ. ಅವರು ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಲಾಭವನ್ನು ಪಡೆಯುತ್ತಾರೆ. ಈಗ ಮೀನರಾಶಿಯಲ್ಲಿ ಬುಧ ಉದಯಿಸುವುದರಿಂದ ವ್ಯಾಪಾರದಲ್ಲಿ ಯಾರಿಗೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ನೋಡೋಣ.

ವೃಷಭ ರಾಶಿ
ಮೀನ ರಾಶಿಯಲ್ಲಿ ಬುಧ ಉದಯ ವೃಷಭ ರಾಶಿಯವರಿಗೆ ಮಂಗಳಕರವಾಗಿದೆ. ಬುಧನು ವೃಷಭ ರಾಶಿಯ 11 ನೇ ಮನೆಯಲ್ಲಿ ಉದಯಿಸಿದ್ದಾನೆ. ಆದ್ದರಿಂದ ಈ ವೃಷಭ ರಾಶಿಯವರಿಗೆ ತಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ.
ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಿಂದ ಲಾಭ ಸಿಗಲಿದೆ. ಉದ್ಯೋಗಿಗಳು ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ಕಚೇರಿಯಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ ಮೆಚ್ಚುಗೆಯನ್ನು ಪಡೆಯುತ್ತಾರೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮೀನ ರಾಶಿಯಲ್ಲಿ ಬುಧ ಉದಯ ಅದೃಷ್ಟವನ್ನು ಹೆಚ್ಚಿಸಲಿದೆ. ಮಿಥುನ ರಾಶಿಯ 10ನೇ ಮನೆಯಲ್ಲಿ ಬುಧ ಉದಯಿಸಿದ್ದಾನೆ. ಇದರಿಂದ ಈ ರಾಶಿಗಳ ಆರೋಗ್ಯ ಸುಧಾರಿಸುತ್ತದೆ. ತಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಹಠಾತ್ ಆರ್ಥಿಕ ಲಾಭ ಸಿಗಲಿದೆ. ಬಹುಕಾಲದ ಆಸೆಗಳು ಈಡೇರುತ್ತವೆ.
ಆಸ್ತಿ ಅಥವಾ ವಾಹನ ಖರೀದಿಸಲು ಅವಕಾಶ ಸಿಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಉದ್ಯೋಗ ದೊರೆಯಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಸಮಯ ನಿಮಗೆ ಸಿಗಲಿದೆ. ವ್ಯಾಪಾರಿಗಳು ಹೊಸ ವ್ಯವಹಾರಗಳನ್ನು ಆರಂಭಿಸುತ್ತಾರೆ. ಇದು ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಸಂಪತ್ತು ದ್ವಿಗುಣಗೊಳ್ಳಲಿದೆ.

ಸಿಂಹ ರಾಶಿ
ಸಿಂಹ ರಾಶಿಯವರು ಸಿಂಹದಂತೆ ಘರ್ಜಿಸಲಿದ್ದಾರೆ. ರಾಶಿಯ 8ನೇ ಮನೆಯಲ್ಲಿ ಬುಧ ಉದಯಿಸಿದ್ದಾನೆ. ಇದು ಈ ರಾಶಿಚಕ್ರದ ಜನರಿಗೆ ಅನಿರೀಕ್ಷಿತ ಆರ್ಥಿಕ ಲಾಭವನ್ನು ನೀಡುತ್ತದೆ. ಸಂಶೋಧನಾ ಕ್ಷೇತ್ರದಲ್ಲಿರುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಲಿದೆ. ಕೆಲವರು ಹೊಸ ಆದಾಯದ ಮೂಲಗಳನ್ನು ಪಡೆಯುತ್ತಾರೆ. ಷೇರುಪೇಟೆ, ಲಾಟರಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications