Badra Rajyoga 2023: ಜೂನ್ 24 ರಿಂದ ಈ ರಾಶಿಯವರಿಗೆ ಅದ್ಭುತ ದಿನಗಳು ಆರಂಭ...
ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧ ಗ್ರಹ ಮಾತು, ಬುದ್ಧಿವಂತಿಕೆ, ವ್ಯವಹಾರ ಮತ್ತು ಅಧ್ಯಯನದ ಅಂಶವೆಂದು ಪರಿಗಣಿಸಲಾಗಿದೆ. ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ.
ಈ ಬುಧನು ಪ್ರಸ್ತುತ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಜೂನ್ 24, 2023 ರಂದು ಬುಧ ಗ್ರಹ ತನ್ನದೇ ಆದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಬುಧನು ಮಿಥುನ ರಾಶಿಯಲ್ಲಿ ಚಲಿಸುವುದರಿಂದ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಭದ್ರ ರಾಜಯೋಗ ಉಂಟಾಗುತ್ತದೆ.

ಭದ್ರ ರಾಜಯೋಗವು ಅತ್ಯಂತ ಮಂಗಳಕರವಾದ ರಾಜಯೋಗವಾಗಿದೆ. ಈ ಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, 3 ರಾಶಿಯವರಿಗೆ ಈ ರಾಜಯೋಗದಿಂದ ಅದೃಷ್ಟದ ಒಲಿಯಲಿದೆ. ಬುಧನು ಮಿಥುನ ರಾಶಿಗೆ ಚಲಿಸುವುದರಿಂದ ಉಂಟಾಗುವ ಭದ್ರ ರಾಜಯೋಗದಿಂದ ಯಾವ ರಾಶಿಯವರಿಗೆ ಹೆಚ್ಚಿನ ಲಾಭಗಳು ಸಿಗುತ್ತವೆ ಎಂಬುದನ್ನು ನೋಡೋಣ.
ಮಿಥುನ ರಾಶಿ: ಈ ರಾಜಯೋಗ ಮಿಥುನ ರಾಶಿಯ ಮೊದಲ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಈ ಅವಧಿಯಲ್ಲಿ ಈ ಮಿಥುನ ರಾಶಿಯವರ ಮಾತು ಸುಧಾರಿಸುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ಬರವಣಿಗೆ ಮತ್ತು ಭಾಷಣ ಕ್ಷೇತ್ರದಲ್ಲಿ ಇರುವವರಿಗೆ ಈ ಅವಧಿ ಬಹಳ ಯಶಸ್ವಿದಾಯಕವಾಗಿದೆ. ನೀವು ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಯೋಗದ ಅವಧಿಯಲ್ಲಿ ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸಲು ಅವಕಾಶಗಳನ್ನು ಪಡೆಯುತ್ತೀರಿ.

ತುಲಾ ರಾಶಿ: ಈ ರಾಜಯೋಗ ತುಲಾ ರಾಶಿಯ 9 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಹೀಗಾಗಿ ಈ ರಾಶಿಚಕ್ರದವರು ಬುಧ ಗ್ರಹದ ಅನುಗ್ರಹದಿಂದ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರಿಗೆ ಅಂದುಕೊಂಡ ಉದ್ಯೋಗ ದೊರೆಯಲಿದೆ. ತಂದೆ ಮತ್ತು ಗುರುಗಳ ಸಂಪೂರ್ಣ ಆಶೀರ್ವಾದ ಪಡೆಯುವಿರಿ. ನೀವು ವಿದೇಶ ಪ್ರವಾಸಕ್ಕೆ ಯೋಜಿಸುತ್ತಿದ್ದರೆ, ಈ ಸಮಯ ಅದಕ್ಕೆ ಸೂಕ್ತವಾಗಿರುತ್ತದೆ. ಈ ಅವಧಿಯು ವ್ಯಾಪಾರಿಗಳಿಗೆ ಉತ್ತಮ ಲಾಭದ ಅವಧಿಯಾಗಿದೆ.
ಮಕರ ರಾಶಿ: ಈ ರಾಜಯೋಗ ಮಕರ ರಾಶಿಯ 6 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಹೀಗಾಗಿ ಈ ಅವಧಿ ತುಂಬಾ ಅದೃಷ್ಟದಾಯಕವಾಗಿದೆ. ವಿದೇಶ ಪ್ರಯಾಣ ಉತ್ತಮ ಲಾಭ ತಂದುಕೊಡಲಿದೆ. ಕೆಲಸ ಮಾಡುವವರು ಉತ್ತಮ ಯಶಸ್ಸನ್ನು ಕಾಣುತ್ತಾರೆ. ಈ ಸಮಯದಲ್ಲಿ ನೀವು ಕಚೇರಿಯಲ್ಲಿ ನಿಮ್ಮ ಶತ್ರುಗಳನ್ನು ಸೋಲಿಸುತ್ತೀರಿ ಮತ್ತು ಹೊಸ ಜವಾಬ್ದಾರಿಗಳನ್ನು ಪಡೆಯುತ್ತೀರಿ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಅದನ್ನು ಪ್ರಯತ್ನಿಸಿದರೆ, ಬಯಸಿದ ಕೆಲಸವನ್ನು ಪಡೆಯುವ ಸಾಧ್ಯತೆಯಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications