Budh Margi 2023: ಧನು ರಾಶಿಯಲ್ಲಿ ಬುಧ ನೇರ ಸಂಚಾರ: ಇನ್ನೆರಡು ದಿನದಲ್ಲಿ ಈ ರಾಶಿಯವರಿಗೆ ಶುಭ ದಿನಗಳು ಆರಂಭ!

ಧನು ರಾಶಿಯಲ್ಲಿ ಬುಧ ನೇರ ಸಂಚಾರ ಜನವರಿ 18ರಂದು ಸಂಭವಿಸಲಿದೆ. ಈ ಸಂಚಾರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ರಾಶಿಯವರ ಜಾತಕದಲ್ಲಿ ಬುಧ ಬಲವಿದ್ದರೆ ಈ ಸಂಚಾರ ಸಮಯದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಒಂದು ವೇಳೆ ಜಾತಕದಲ್ಲಿ ಬುಧ ಬಲವಿಲ್ಲದೇ ಇದ್ದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಹಾಗಾದರೆ ಧನು ರಾಶಿಯಲ್ಲಿ ಬುಧ ನೇರ ಸಂಚಾರದ ವೇಳೆ ಯಾವ ರಾಶಿಯವರಿಗೆ ಶುಭ ದಿನಗಳು ಆರಂಭವಾಗಲಿವೆ. ಆ ರಾಶಿಗಳು ಯಾವವು ಎಂದು ತಿಳಿಯೋಣ.

ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಬುಧ ಬಲವಿದ್ದರೆ ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ಉತ್ತಮ ಸಂವಹನ ಕೌಶಲ್ಯ ಹೊಂದಬಹುದು. ಬುಧ ನಮ್ಮ ಬುದ್ಧಿವಂತಿಕೆ, ಸ್ಮರಣೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ಪ್ರತಿನಿಧಿಸುವ ಗ್ರಹವಾಗಿದೆ. ಇದು ನಮ್ಮ ನರಮಂಡಲ, ಮಾತು, ಭಾಷಾ ಸಂವಹನ (ಲಿಖಿತ ಅಥವಾ ಮೌಖಿಕ)ವನ್ನು ನಿಯಂತ್ರಿಸುತ್ತದೆ.

18 ಜನವರಿ 2023 ರಂದು ಸಂಜೆ 6:18ಕ್ಕೆ ಧನು ರಾಶಿಯಲ್ಲಿ ಬುಧ ನೇರವಾಗಲಿದೆ. ಇದು ತತ್ವಜ್ಞಾನಿಗಳು, ಸಲಹೆಗಾರರು, ಮಾರ್ಗದರ್ಶಕರು, ಶಿಕ್ಷಕರಿಗೆ ಇದು ಸಾಕಷ್ಟು ಅದೃಷ್ಟದ ಸಮಯವಾಗಿದೆ. ಈ ಸಮಯದಲ್ಲಿ ಅವರು ಸುಲಭವಾಗಿ ಅಭಿವೃದ್ಧಿಯತ್ತ ಸಾಗಬಹುದು.

ಮೇಷ: ದೂರ ಪ್ರಯಾಣ, ತೀರ್ಥಯಾತ್ರೆ

ಮೇಷ: ದೂರ ಪ್ರಯಾಣ, ತೀರ್ಥಯಾತ್ರೆ

ಧನು ರಾಶಿಯಲ್ಲಿ ಬುಧ ನೇರ ಸಂಚಾರ ಮೇಷ ರಾಶಿಯವರಿಗೆ ರಾಜಕೀಯ, ದೂರ ಪ್ರಯಾಣ, ತೀರ್ಥಯಾತ್ರೆಯನ್ನು ಸುಲಭಗೊಳಿಸಲಿದೆ. ಆರೋಗ್ಯದ ವಿಚಾರವಾಗಿ ಬುಧ ಗ್ರಹವು ಮೇಷ ರಾಶಿಯವರನ್ನು ಆಶೀರ್ವದಿಸಲಿದೆ. ಈ ಸಮಯದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ದೂರವಾಗಲಿದೆ. ಜೊತೆಗೆ ವೃತ್ತಿಪರ ಜೀವನದಲ್ಲಿ ಸಮಸ್ಯೆಗಳು ಅಂತ್ಯಗೊಳ್ಳಲಿವೆ. ಉದ್ಯೋಗ ಅಥವಾ ಕಂಪನಿಗಳನ್ನು ಬದಲಾಯಿಸಲು ಯೋಜಿಸುತ್ತಿದ್ದರೆ ಇದು ಉತ್ತಮ ಸಮಯವಾಗಿದೆ. ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ದೇಶೀಯವಾಗಿ ಪ್ರಯಾಣಿಸಲು ಅವಕಾಶಗಳನ್ನು ಒದಗಿಬರಲಿವೆ. ಹೀಗಾಗಿ ಈ ಸಮಯ ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ವೃಷಭ: ಹಣ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ

ವೃಷಭ: ಹಣ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ

ಧನು ರಾಶಿಯಲ್ಲಿ ಬುಧ ನೇರ ಸಂಚಾರ ವೃಷಭ ರಾಶಿಯವರಿಗೆ ಅನುಕೂಲಕರ ಸಮಯವಾಗಿದೆ. ವೃಷಭ ರಾಶಿಯವರು ಎದುರಿಸುತ್ತಿರುವ ವೃತ್ತಿಪರ ಸಮಸ್ಯೆಗಳಿಂದ ಸಂಪೂರ್ಣ ಪರಿಹಾರವನ್ನು ಪಡೆಯುತ್ತಾರೆ. ಆದರೆ ವೃಷಭ ರಾಶಿಯವರು ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು. ನೀವು ವಾಸಿಸುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಲರ್ಜಿಯಂತಹ ಸಮಸ್ಯೆಗಳನ್ನು ನೀವು ಎದುರಿಸುವ ಸಾಧ್ಯತೆಗಳು ಇವೆ. ಇದು ನಿಮ್ಮ ಹಣ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸಲು ಉತ್ತಮ ಸಮಯವಾಗಿದೆ. ಇಷ್ಟರಲ್ಲೇ ನಿಮಗಾಗಿ ನೀವು ನಿರೀಕ್ಷಣೆ ಮಾಡದ ಶುಭ ಸುದ್ದಿಯೊಂದು ಬರಲಿದೆ. ಇದರಿಂದ ನೀವು ಸಂತೋಷದಿಂದ ಇರುತ್ತೀರಿ. ಮನೆಯಲ್ಲಿ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಹಣದ ವಿಚಾರದಲ್ಲಿ ನಿಮ್ಮ ಆಲೋಚನೆಗಳನ್ನು ಕುಟುಂಬಸ್ಥರು ಮೆಚ್ಚಿಕೊಳ್ಳುತ್ತಾರೆ.

ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ

ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ

ಮಿಥುನ ರಾಶಿಯವರಿಗೆ ಧನು ರಾಶಿಯಲ್ಲಿ ಬುಧನ ನೇರ ಸಂಚಾರ ಮಿಶ್ರ ಫಲವನ್ನು ನೀಡುತ್ತದೆ. ನಿಮ್ಮ ಮಾತುಗಾರಿಕೆಯಲ್ಲಿ ಬದಲಾಗಲಿದೆ. ನಿಮ್ಮ ಮಾತು, ಸಂವಹನವನ್ನು ನೆರೆಯವರು ಮೆಚ್ಚುತ್ತಾರೆ. ಮಿಥುನ ರಾಶಿಯವರು ಹಾಗೂ ವ್ಯಾಪಾರ ಪಾಲುದಾರಿಕೆಯರ ನಡುವಿನ ಸಂವಹನ ಉತ್ತಮವಾಗಿರುತ್ತದೆ. ಈ ಚಲನೆಯು ಮಿಥುನ ರಾಶಿಯವರಿಗೆ ದೊಡ್ಡ ಪರಿಹಾರವನ್ನು ತರುತ್ತದೆ. ಮುಖ್ಯವಾಗಿ ಯಾವುದೇ ಆರೋಗ್ಯ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ ಅದು ಅಂತ್ಯಗೊಳ್ಳುತ್ತದೆ. ಈ ಸಮಯದಲ್ಲಿ ಉತ್ತಮ ಆರೋಗ್ಯವನ್ನು ಅನುಭವಿಸುವಿರಿ.

ಮಿಥುನ ರಾಶಿಯ ಅವಿವಾಹಿತರಿಗೆ ಇದು ಉತ್ತಮ ಸಮಯವಾಗಿದೆ. ಸೂಕ್ತವಾದ ಜೀವನ ಸಂಗಾತಿ ನಿಮಗೆ ಸಿಗಬಹುದು. ಈ ಸಮಯದಲ್ಲಿ ನಿಮ್ಮ ಮದುವೆ ದಿನಾಂಕ ಅಂತಿಮಗೊಳ್ಳಬಹುದು. ವಿವಾಹಿತರು ಜೀವನ ಸಂಗಾತಿಯ ಮೇಲೆ ತಪ್ಪು ತಿಳುವಳಿಕೆಯನ್ನು ತಪ್ಪಿಸಬೇಕು. ನಿಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳು ಮತ್ತು ತಪ್ಪು ತಿಳುವಳಿಕೆಯನ್ನು ಎದುರಿಸುತ್ತಿದ್ದರೆ ಎಲ್ಲವೂ ದೂರವಾಗುತ್ತದೆ.

ಕಟಕ: ಕೆಲಸದಲ್ಲಿ ಬೆಳವಣಿಗೆ

ಕಟಕ: ಕೆಲಸದಲ್ಲಿ ಬೆಳವಣಿಗೆ

ಕರ್ಕ ರಾಶಿಯವರ ಶತ್ರುಗಳು ದೂರವಾಗುತ್ತಾರೆ. ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಸ್ಪರ್ಧಾತ್ಮಕ ಗುಣ ನಿಮ್ಮನ್ನು ಕಾಪಾಡುತ್ತದೆ. ಬುಧವು ನಿಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುತ್ತದೆ. ನಾವು ಕೆಲಸ ಮಾಡುವ ವೃತ್ತಿಪರರ ಬಗ್ಗೆ ಮಾತನಾಡಿದರೆ, ಅವರ ಕೆಲಸದಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸಲು ಇದು ಉತ್ತಮ ಸಮಯ. ಕರ್ಕಾಟಕ ರಾಶಿಯವರಿಗೆ ಆರನೇ ಮನೆಯಲ್ಲಿ ಬುಧ ಸ್ಥಾನವು ಒಳ್ಳೆಯದಲ್ಲ ಮತ್ತು ಮಧುಮೇಹ, ಪಿತ್ತಜನಕಾಂಗದ ಅಸ್ವಸ್ಥತೆ ಅಥವಾ ಜೀರ್ಣಕಾರಿ ಸಮಸ್ಯೆಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹೆಚ್ಚಾಗಿ ವೈದ್ಯಕೀಯ ವೆಚ್ಚಗಳು ಅಥವಾ ಕೆಲವು ಪ್ರಯಾಣದ ಕಾರಣದಿಂದಾಗಿ ವೆಚ್ಚ ಹೆಚ್ಚಾಗಬಹುದು.

ಸಿಂಹ: ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ

ಸಿಂಹ: ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ

ಸಿಂಹ ರಾಶಿಯವರಿಗೆ ಬುಧ ಆರ್ಥಿಕ ಮನೆಯನ್ನು ಆಳುತ್ತದೆ. ಧನು ರಾಶಿಯಲ್ಲಿ ಬುಧ ನೇರ ಸಿಂಹ ರಾಶಿಯವರ ಶಿಕ್ಷಣ, ಪ್ರೀತಿ ಸಂಬಂಧಗಳು, ಮಕ್ಕಳು, ಊಹಾಪೋಹಗಳನ್ನು ಪ್ರತಿನಿಧಿಸುತ್ತದೆ. ಈ ಸಂಚಾರ ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ಸಿಂಹ ರಾಶಿಯವರು ದೊಡ್ಡ ವ್ಯಕ್ತಿಗಳ ಸಂಪರ್ಕ ಹೊಂದುತ್ತಾರೆ. ಇದು ಮುಂಬರುವ ದಿನಗಳಲ್ಲಿ ಉಪಯೋಗವಾಗಲಿದೆ. ಸಂವಹನದ ಕೊರತೆಯಿಂದಾಗಿ ತಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರೇಮ ಪಕ್ಷಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷಾ ಕೋರ್ಸ್‌ಗಳಂತಹ ಕೋರ್ಸ್‌ಗಳನ್ನು ಅನುಸರಿಸುತ್ತಿರುವ ಸಿಂಹ ರಾಶಿಯ ವಿದ್ಯಾರ್ಥಿಗಳು ಈ ಗ್ರಹಗಳ ಚಲನೆಯಿಂದ ಪ್ರಯೋಜನ ಪಡೆಯುತ್ತಾರೆ.

ಕನ್ಯಾ: ಭವಿಷ್ಯದಲ್ಲಿ ಬೆಳವಣಿಗೆ

ಕನ್ಯಾ: ಭವಿಷ್ಯದಲ್ಲಿ ಬೆಳವಣಿಗೆ

ಬುಧ ಗ್ರಹ ನಿಮ್ಮ ಜೀವನದ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಿಮ್ಮ ಆರೋಗ್ಯ ಮತ್ತು ನಡವಳಿಕೆಯು ಉತ್ತಮಗೊಳ್ಳುತ್ತದೆ. ನೀವು ಶಕ್ತಿಯುತವಾಗಿರುತ್ತೀರಿ. ನಿಮ್ಮಲ್ಲಿ ತಾಳ್ಮೆ ಶಕ್ತಿ ಅಧಿಕವಾಗಿರುತ್ತದೆ. ಇತರರಿಂದ ಕಿರಿಕಿರಿ ದೂರವಾಗುತ್ತದೆ. ನಿಮ್ಮ ವಾಹನಗಳು ಅಥವಾ ಗೃಹೋಪಯೋಗಿ ವಸ್ತುಗಳು ಅಥವಾ ವೈಯಕ್ತಿಕ ಗ್ಯಾಜೆಟ್‌ಗಳೊಂದಿಗೆ ನೀವು ಹಿಂತಿರುಗಿ ಎದುರಿಸುತ್ತಿರುವ ಯಾವುದೇ ತಾಂತ್ರಿಕ ಸಮಸ್ಯೆಯು ಅಂತ್ಯಗೊಳ್ಳುತ್ತದೆ. ನಿಮ್ಮ ವೃತ್ತಿಪರ ಸಮಸ್ಯೆಯನ್ನು ಸಹ ಪರಿಹರಿಸಲಾಗುವುದು ಮತ್ತು ನಿಮ್ಮ ಭವಿಷ್ಯದಲ್ಲಿ ನೀವು ಅತ್ಯುತ್ತಮ ಬೆಳವಣಿಗೆಗಳು ಮತ್ತು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಕನ್ಯಾ ರಾಶಿಯವರಿಗೆ ಇದು ಶುಭ ಫಲಿತಾಂಶಗಳನ್ನು ತರುತ್ತದೆ.

ತುಲಾ: ನಿಮಗಿರಲಿದೆ ಒತ್ತಡ ಸಹಿಸಿಕೊಳ್ಳುವ ಶಕ್ತಿ

ತುಲಾ: ನಿಮಗಿರಲಿದೆ ಒತ್ತಡ ಸಹಿಸಿಕೊಳ್ಳುವ ಶಕ್ತಿ

ತುಲಾ ರಾಶಿಯವರಿಗೆ ಈ ಸಮಯ ಅತ್ಯುತ್ತಮವಾಗಿದೆ. ಲಾಭದಾಯಕ ಹುದ್ದೆಗಳ ಬಗ್ಗೆ ನೀವು ಯೋಜನೆ ಮಾಡುವಿರಿ. ನಿತ್ಯದ ಕೆಲಸ ನಿಮಗೆ ಹೊರೆಯಾಗಬಹುದು. ಆದರೆ ಚಿಂತಿಸಬೇಡಿ. ನಿಮ್ಮ ವಯಸ್ಸಿಗುಸಾರ ಕೆಲಸದಲ್ಲಿ ತೊಡಗಿಕೊಳ್ಳುವುದು ಉತ್ತಮ ಅಭ್ಯಾಸ. ಕೆಲಸದ ಒತ್ತಡವನ್ನು ತೆಗೆದುಕೊಳ್ಳುವ ಶಕ್ತಿ ನಿಮಗಿರುತ್ತದೆ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ವಹಿಸಿ. ನಿಮ್ಮ ವ್ಯಾಪಾರದಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಈ ಸಮಯದಲ್ಲಿ ನಡೆಯಬಹುದು. ಅದೃಷ್ಟ ನಿಮ್ಮನ್ನು ಹಿಂಬಾಲಿಸಲಿದೆ. ಹೀಗಾಗಿ ಯಾವುದೇ ಹಣಕಾಸಿನ ಸಮಸ್ಯೆಗಳಿದ್ದರೂ ಕ್ರಮೇಣ ದೂರವಾಗುತ್ತವೆ. ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತಂದೆ ಮತ್ತು ನಿಮ್ಮ ಗುರುವಿನ ಬೆಂಬಲ ಸಿಗಲಿದೆ.

ವೃಶ್ಚಿಕ: ಕುಟುಂಬ ಸಂಘರ್ಷ ಅಂತ್ಯ

ವೃಶ್ಚಿಕ: ಕುಟುಂಬ ಸಂಘರ್ಷ ಅಂತ್ಯ

ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಹೆಚ್ಚು ಉಳಿತಾಯ ಮಾಡುತ್ತಾರೆ. ವೃಶ್ಚಿಕ ರಾಶಿಯವರ ಮಾತು ಎಲ್ಲರ ಮೆಚ್ಚುಗೆ ಪಡೆದುಕೊಳ್ಳಲಿದೆ. ರಾಜಕೀಯ ವ್ಯಕ್ತಿಗಳು ಸಾರ್ವಜನಿಕರ ವಿಶ್ವಾಸ ಗಳಿಸುತ್ತಾರೆ. ಮಾತಿನ ಸಮಸ್ಯೆ, ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬ ಸದಸ್ಯರೊಂದಿಗಿನ ಸಂಘರ್ಷ ಅಂತ್ಯಗೊಳ್ಳಲಿದೆ. ಶತ್ರುಗಳು ಮಿತ್ರರಾಗುವ ಸಮಯವಿದು. ವೃಶ್ಚಿಕ ರಾಶಿಯವರು ಉತ್ತಮ ಆರ್ಥಿಕ ಸಮಯವನ್ನು ನಿರೀಕ್ಷಿಸಬಹುದು. ಉದ್ಯಮಿಗಳಿಗೆ ಇದು ಲಾಭದಾಯಕ ದಿನವಾಗಿದೆ. ವ್ಯಾಪಾರಿಗಳಿಗೆ, ಚಿಲ್ಲರೆ ಅಂಗಡಿಯವರಿಗೆ ಈ ಸಮಯ ಉತ್ತಮವಾಗಿದ್ದು ಹಣ ಗಳಿಸಲು ನೀವು ಮಾಡುವ ಪ್ರತೀ ಕಾರ್ಯವೂ ನಿಮ್ಮ ಕೈಹಿಡಿಯಲಿದೆ. ಗಂಟಲು ನೋವು ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳ ಬಗ್ಗೆ ಸ್ವಲ್ಪ ಜಾಗೃತರಾಗಿರಬೇಕು.

ಧನು: ವೈವಾಹಿಕ ಸೀವನದಲ್ಲಿ ಸಂತೋಷ

ಧನು: ವೈವಾಹಿಕ ಸೀವನದಲ್ಲಿ ಸಂತೋಷ

ಧನು ರಾಶಿಯವರ ಆಕರ್ಷಕ ನೋಟ ಎಲ್ಲರನ್ನು ಸೆಳೆಯುತ್ತದೆ. ನಿಮ್ಮ ಸಂವಹನಾ ಕೌಶಲ್ಯ ಮೆಚ್ಚುಗೆ ಪಡೆಯಲಿದೆ. ವೃತ್ತಿಯಲ್ಲಿನ ಕೆಲವು ಗೊಂದಲಗಳು ದೂರವಾಗುತ್ತವೆ. ಆತ್ಮವಿಶ್ವಾಸದ ಕೊರತೆಯಿಂದ ಕೊಂಚ ಗೊಂದಲಗೊಳ್ಳಬಹುದು. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅಡೆತಡೆಗಳು ದೂರವಾಗುತ್ತವೆ. ಕೆಲಸದಲ್ಲಿನ ಬೆಳವಣಿಗಾಗಿ ಸಾಕಷ್ಟು ಪ್ರಯತ್ನಗಳನ್ನು ನೀವು ಮಾಡುವಿರಿ. ನಿಮ್ಮ ಪ್ರಯತ್ನದ ಫಲ ನಿಮಗೆ ಸಿಗಲಿದೆ. ಸಮಾಜ ಸೇವೆಯಲ್ಲಿರುವವರಿಗೆ ಈ ಸಮಯದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ವಿಜ್ಞಾನಿಗಳು, ರಫ್ತು-ಆಮದು, ಸಮಾಲೋಚಕರು, ಬ್ಯಾಂಕಿಂಗ್, ಮಾಧ್ಯಮ ಮತ್ತು ಸಂವಹನ ಕ್ಷೇತ್ರ ಮತ್ತು ವ್ಯಾಪಾರ ಸ್ಥಳೀಯರಿಗೆ ಇದು ಉತ್ತಮ ಸಮಯ. ಈ ಕ್ಷೇತ್ರದಲ್ಲಿರುವವರು ಲಾಭವನ್ನು ಪಡೆಯುತ್ತೀರಿ. ಜೊತೆಗೆ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ವಿವಾಹಿತ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಶಾಂತಿಯುತ ಮತ್ತು ಪ್ರೀತಿಯ ಸಂಬಂಧವನ್ನು ಆನಂದಿಸುತ್ತಾರೆ.

ಮಕರ: ಮನೆಯಲ್ಲಿ ಹಬ್ಬದ ವಾತಾವರಣ

ಮಕರ: ಮನೆಯಲ್ಲಿ ಹಬ್ಬದ ವಾತಾವರಣ

ಮಕರ ರಾಶಿಯವರಿಗೆ ಈ ಸಮಯ ಅತ್ಯುತ್ತಮವಾಗಿದೆ. ವಿದೇಶಿದಲ್ಲಿ ಮನೆ ಮಾಡುವ ಸಾಧ್ಯತೆ ಇದೆ. ಆಸ್ಪತ್ರೆಗಳ ವೆಚ್ಚಗಳು ಕಡಿಮೆಯಾಗಲಿವೆ. MNC ಗಳಂತಹ ವಿದೇಶಿ ಕಂಪನಿಗಳಲ್ಲಿ ಉದ್ಯೋಗ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರಬಹುದು. ವೃತ್ತಿಪರ ಜೀವನದಲ್ಲಿ ಸ್ಥಳ ಬದಲಾಯಿಸುವ ಪ್ರಕ್ರಿಯೆ ಇರುತ್ತದೆ. ಇದಕ್ಕಾಗಿ ನೀವು ಹೆಚ್ಚು ಪ್ರಯಾಣಿಸಬೇಕಾಗಬಹುದು. ಮನೆಯಲ್ಲಿ ಹಬ್ಬದ ವಾತಾವರಣವಿರಲಿದ್ದು, ಶುಭ ಕಾರ್ಯಗಳು ನಡೆಯಲಿವೆ. ಮನೆಗೆ ಅತಿಥಿಗಳು ಆಗಮಿಸುತ್ತಾರೆ. ಕೆಲಸದ ನಡುವೆ ಕುಟುಂಬಸ್ಥರಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗದೇ ಇರಬಹುದು. ಇದರಿಂದ ಕುಟುಂಬದಲ್ಲಿ ಕೊಂಚ ಬೇಸರವಿರಬಹುದು. ಆದರೆ ಕಾಲ ಕ್ರಮೇಣ ಎಲ್ಲವೂ ಸರಿ ಹೋಗುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಣಜಿ ವಹಿಸುವುದು ಉತ್ತಮ. ವೈದ್ಯಕೀಯ ವೆಚ್ಚಗಳು ನಿಮ್ಮನ್ನು ಕೊಂಚ ಚಿಂತೆಗೀಡುಮಾಡಬಹುದು.

ಕುಂಭ: ಆರ್ಥಿಕ ಲಾಭ

ಕುಂಭ: ಆರ್ಥಿಕ ಲಾಭ

ಕುಂಭ ರಾಶಿಯವರಿಗೆ ಈ ಸಮಯದಲ್ಲಿ ಆರ್ಥಿಕ ಲಾಭಗಳು ಸಿಗಲಿವೆ. ನಿಮ್ಮ ಆಸೆಗಳಿಗೆ ತಕ್ಕಂತೆ ನೀವು ಪ್ರಯತ್ನಗಳನ್ನು ಮಾಡಬೇಕು. ನೀವು ಕೆಲವು ಆರ್ಥಿಕ ಲಾಭಗಳನ್ನು ನಿರೀಕ್ಷಿಸಬಹುದು. ಹೊಸ ಪ್ರೇಮ ಪಕ್ಷಿಗಳು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಆನಂದಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷಾ ಕೋರ್ಸ್‌ನಲ್ಲಿ ಉತ್ತಮ ಸಮಯವಾಗಿರುತ್ತದೆ. ವಿವಾಹಿತ ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಇದೆ. ತರಕಾರಿ, ಇನ್ನಿತರ ಮಾರಾಟಗಾರರು ಈ ಸಮಯದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ.

ಮೀನ: ಖ್ಯಾತಿ ಮತ್ತು ಸ್ಥಾನಮಾನ ಹೆಚ್ಚಳ

ಮೀನ: ಖ್ಯಾತಿ ಮತ್ತು ಸ್ಥಾನಮಾನ ಹೆಚ್ಚಳ

ಮೀನ ರಾಶಿಯವರು ವೃತ್ತಿಪರ ಜೀವನದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ. ಧನು ರಾಶಿಯಲ್ಲಿ ಬುಧದ ನೇರ ವೃತ್ತಿಪರ ಬೆಳವಣಿಗೆಯಾಗಲಿದೆ. ಇದು ಅವರಿಗೆ ಖ್ಯಾತಿ ಮತ್ತು ಸ್ಥಾನಮಾನವನ್ನು ನೀಡುತ್ತದೆ. ನೀವು ವ್ಯಾಪಾರದಲ್ಲಿ ಏಳಿಗೆಯನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ಮಾರಾಟದ ವಸ್ತುಗಳ ಮೌಲ್ಯ ಹೆಚ್ಚಾಗುತ್ತದೆ. ಬುಧ ನಿಮ್ಮ ಮನೆಯ ಜೀವನ ಮತ್ತು ಸಂತೋಷದ ನಾಲ್ಕನೇ ಮನೆಯನ್ನು ನೋಡುತ್ತಿದ್ದಾನೆ. ಆದ್ದರಿಂದ ಈ ಸಮಯದಲ್ಲಿ ನೀವು ಮನೆಯಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಯಾರೊಂದಿಗಾದರೂ ಪ್ರೇಮ ಹುಟ್ಟಿದ್ದರೆ ಅದರ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಬಹುದು. ನೀವು ಈಗಾಗಲೇ ಮದುವೆಯಾಗಿದ್ದರೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಂವಹನದ ಕೊರತೆ ಮತ್ತು ತಪ್ಪು ತಿಳುವಳಿಕೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+