Dhan Sakthi Yoga 2023: ಮಂಗಳ-ಶುಕ್ರ ಸಂಯೋಗದಿಂದ ರೂಪುಗೊಂಡ ಧನಶಕ್ತಿ ಯೋಗ: ಬೆಳಗಲಿದೆ ಈ 3 ರಾಶಿಯವರ ಭವಿಷ್ಯ

ಕಾಲ ಕಾಲಕ್ಕೆ ಗ್ರಹಗಳು ಸಂಚಾರ ಮಾಡುತ್ತಲಿರುತ್ತವೆ. ಸಂಚಾರದ ವೇಳೆ ರಾಶಿಗಳನ್ನು ಬದಲಾಯಿಸುತ್ತವೆ. ಕೆಲ ಬಾರಿ ಒಂದೇ ರಾಶಿಯಲ್ಲಿ ಹಲವಾರು ಗ್ರಹಗಳು ಸಂಕ್ರಮಿಸುತ್ತವೆ. ಹೀಗೆ ಸಂಚರಿಸುವಾಗ ಶುಭ ಹಾಗೂ ಅಶುಭ ಯೋಗಗಳು ಹುಟ್ಟಿಕೊಳ್ಳುತ್ತವೆ.

ವೈದಿಕ ಜ್ಯೋತಿಷ್ಯದ ಪ್ರಕಾರ ಹಾಗೆ ರೂಪುಗೊಂಡ ಯೋಗಗಳು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ. ಹಾಗೆ ವೃಶ್ಚಿಕ ರಾಶಿಯಲ್ಲಿ ಸಂಭವಿಸುವ ಎರಡು ಗ್ರಹಗಳ ಸಂಯೋಜನೆಯಿಂದ ಧನ ಶಕ್ತಿ ಯೋಗ ರೂಪುಗೊಳ್ಳುತ್ತದೆ. ಮಂಗಳ ಗ್ರಹ ಈಗಾಗಲೇ ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಿದೆ. ವೃಶ್ಚಿಕ ರಾಶಿಯಲ್ಲಿ ಮಂಗಳದ ಸಾಗಣೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ವೇಳೆ ಡಿಸೆಂಬರ್ 25 ರಂದು ಶುಕ್ರ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದೆ.

ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ, ವೃಶ್ಚಿಕ ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವಾಗಲಿದೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ಧನಶಕ್ತಿ ಯೋಗ ರೂಪುಗೊಳ್ಳುತ್ತದೆ. ಈ ಯೋಗ ಮಂಗಳಕರ ಯೋಗವಾಗಿದೆ. ಈ ಯೋಗದ ಪ್ರಭಾವವು ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, 3 ರಾಶಿಯವರಿಗೆ ನಾನಾ ಲಾಭಗಳು ಸಿಗುತ್ತವೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

mars venus conjunction 2023 make dhan sakthi yoga these zodiac signs will be lucky in kannada

ಮಿಥುನ ರಾಶಿ

ಮಿಥುನ ರಾಶಿಯ 6ನೇ ಮನೆಯಲ್ಲಿ ಮಂಗಳ ಶುಕ್ರನ ಸಂಯೋಗದಿಂದ ಧನ ಶಕ್ತಿ ಯೋಗ ರೂಪುಗೊಳ್ಳಲಿದೆ. ಹೀಗಾಗಿ ಮಿಥುನ ರಾಶಿಯವರು ತಮ್ಮ ಕುಟುಂಬದಲ್ಲಿ ಇದುವರೆಗೆ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಯೋಗದ ಅವಧಿಯಲ್ಲಿ ಆ ಸಮಸ್ಯೆಯು ದೂರವಾಗುತ್ತದೆ.

ಅದೃಷ್ಟದ ಸಂಪೂರ್ಣ ಬೆಂಬಲವನ್ನು ಮಿಥುನ ರಾಶಿಯವರು ಪಡೆಯಲಿದ್ದಾರೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಶುಕ್ರನ ಅನುಗ್ರಹದಿಂದ ಆದಾಯದಲ್ಲಿ ಹೆಚ್ಚಳವಾಗಲಿದೆ. ಆದಾಯದ ಹೊಸ ಮೂಲಗಳು ಹೊರಹೊಮ್ಮುತ್ತವೆ. ಸಮಾಜದಲ್ಲಿ ಗೌರವ, ಸ್ಥಾನಮಾನ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿರುತ್ತದೆ. ಮುಖ್ಯವಾಗಿ ವಿದೇಶಕ್ಕೆ ಹೋಗುವ ಅವಕಾಶ ದೊರೆಯಲಿದೆ. ನೀವು ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೆ ಆರ್ಥಿಕ ಲಾಭಗಳು ದೊರೆಯುತ್ತವೆ. ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

mars venus conjunction 2023 make dhan sakthi yoga these zodiac signs will be lucky in kannada

ಸಿಂಹ ರಾಶಿ

ಸಿಂಹ ರಾಶಿಯ 4ನೇ ಮನೆಯಲ್ಲಿ ಮಂಗಳ ಮತ್ತು ಶುಕ್ರರ ಸಂಯೋಜನೆಯಿಂದ ಧನಶಕ್ತಿ ಯೋಗವು ರೂಪುಗೊಳ್ಳುತ್ತದೆ. ಇದು ಸಿಂಹ ರಾಶಿಯವರ ಕುಟುಂಬ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳನ್ನು ಯಶಸ್ವಿಯಾಗಿ ಪ್ರಾರಂಭಿಸಬಹುದು ಮತ್ತು ಪೂರ್ಣಗೊಳಿಸಬಹುದು.

ನಿಮ್ಮ ಸ್ನೇಹಿತರೊಂದಿಗೆ ಸಂತೋಷದ ಸಮಯವನ್ನು ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ. ಕೆಲಸ ಮಾಡುವವರು ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಾರೆ. ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳು ನಿಮಗೆ ಬಡ್ತಿ, ಹೆಚ್ಚು ಸಂಬಳ ಇತ್ಯಾದಿಗಳನ್ನು ನೀಡಬಹುದು. ಹೊಸ ವಾಹನ, ಮನೆ ಖರೀದಿಸುವ ಆಸೆ ಈಡೇರಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ.

mars venus conjunction 2023 make dhan sakthi yoga these zodiac signs will be lucky in kannada

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಮೊದಲ ಮನೆಯಲ್ಲಿ ಮಂಗಳ ಮತ್ತು ಶುಕ್ರರ ಸಂಯೋಗದಿಂದ ದಾನ ಶಕ್ತಿ ಯೋಗ ರೂಪುಗೊಳ್ಳುತ್ತದೆ. ಇದರಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಕಾಣುತ್ತಾರೆ.

ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಪೋಷಕರಿಂದ ಸಂಪೂರ್ಣ ಬೆಂಬಲ ಪಡೆಯುವಿರಿ. ಹಣಕಾಸಿನ ಸ್ಥಿತಿಯು ಸಾಮಾನ್ಯಕ್ಕಿಂತ ಬಲವಾಗಿರುತ್ತದೆ. ಆದರೆ ಅದೇ ಸಮಯದಲ್ಲಿ ವೆಚ್ಚಗಳು ಹೆಚ್ಚಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಜಂಟಿ ಉದ್ಯಮಗಳನ್ನು ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+