ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರ ಗ್ರಹಣದ ವೇಳೆ ಕೈಗೊಳ್ಳಬೇಕಾದ ಶಾಂತಿ-ಪರಿಹಾರದ ಪೂರ್ಣ ವಿವರ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

Recommended Video

ಜುಲೈ 27 ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ : ಗ್ರಹಣಕ್ಕೆ ಮಾಡಿಕೊಳ್ಳಬೇಕಾದಂತಹ ಪರಿಹಾರಗಳೇನು?

ಇನ್ನೇನು ನಾಳೆಯೇ ಕೇತುಗ್ರಸ್ತ ಚಂದ್ರಗ್ರಹಣ. ಮಕರ ರಾಶಿಯಲ್ಲಿ ನಡೆಯಲಿರುವ ಈ ಗ್ರಹಣದ ಮುಖ್ಯ ವಿಚಾರಗಳನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತಂದು, ಆ ನಂತರ ಚಂದ್ರ ಗ್ರಹಣದ ಶಾಂತಿ ಹಾಗೂ ದಾನದ ವಿಚಾರವಾಗಿ ತಿಳಿಸಿಕೊಟ್ಟು ಬಿಡ್ತೀನಿ.

ಗ್ರಹಣದ ಸ್ಪರ್ಶ ಕಾಲ : ರಾತ್ರಿ 11.54

ಗ್ರಹಣ ಮಧ್ಯ ಕಾಲ : ಮಧ್ಯರಾತ್ರಿ 1.52

ಗ್ರಹಣ ಮೋಕ್ಷ ಕಾಲ : ರಾತ್ರಿ 3.49

ಚಂದ್ರಗ್ರಹಣ ವಿಶೇಷ: ಯಾವುದೇ ಗ್ರಹಣದ ಶುಭಾಶುಭ ಫಲಗಳ ಅವಧಿ ಎಷ್ಟು?ಚಂದ್ರಗ್ರಹಣ ವಿಶೇಷ: ಯಾವುದೇ ಗ್ರಹಣದ ಶುಭಾಶುಭ ಫಲಗಳ ಅವಧಿ ಎಷ್ಟು?

ಚಂದ್ರ ಗ್ರಹಣವನ್ನು ಶುಭ, ಅಶುಭ ಹಾಗೂ ಮಿಶ್ರ ಫಲ ಅಂತ ವಿಂಗಡಿಸಬಹುದು. ಅದು ಹೀಗಿದೆ:

ಅಶುಭ ಫಲ : ಮಕರ, ಕುಂಭ, ಧನು, ಮಿಥುನ

ಶುಭ ಫಲ: ಮೇಷ, ಸಿಂಹ, ವೃಶ್ಚಿಕ ಹಾಗೂ ಮೀನ

ಮಿಶ್ರ ಫಲ : ವೃಷಭ, ಕರ್ಕಾಟಕ, ಕನ್ಯಾ, ತುಲಾ

ಇಷ್ಟು ತಿಳಿಸಿಕೊಟ್ಟ ಮೇಲೆ ಆ ದಿನದಂದು ಮಾಡಬೇಕಾದ ದಾನದ ವಿಚಾರ ಅಥವಾ ಯಾರಿಗೆ ಅಶುಭ ಅಥವಾ ಮಿಶ್ರ ಫಲ ಇದೆ ಅಥವಾ ಜಾತಕದಲ್ಲೇ ಚಂದ್ರ ನೀಚನಾಗಿದ್ದರೆ ಅಥವಾ ದುರ್ಬಲನಾಗಿದ್ದರೆ ಏನು ಮಾಡಬೇಕು ಎಂಬ ವಿಚಾರವನ್ನು ಇಲ್ಲಿಂದ ಮುಂದೆ ತಿಳಿಸಿಕೊಡಲಾಗುತ್ತದೆ.

ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿ

ಮುಖ್ಯವಾಗಿ ಧನುಸ್ಸು, ಮಕರ ಹಾಗೂ ಕುಂಭ ರಾಶಿಯವರು, ಇವರ ಜತೆಗೆ ಮಿಥುನ ರಾಶಿಯವರು, ಉತ್ತರಾಷಾಢ, ಶ್ರವಣ, ಧನಿಷ್ಠ, ಪೂರ್ವಾಷಾಢ, ರೋಹಿಣಿ, ಹಸ್ತ, ಕೃತ್ತಿಕಾ, ಉತ್ತರಾ ನಕ್ಷತ್ರದವರು ಬಹಳ ಎಚ್ಚರಿಕೆಯಿಂದ ಗಮನಿಸಬೇಕಾದ ವಿಚಾರ ಇದು. ಇದೀಗ ದಾನದ ವಿಚಾರದ ಬಗ್ಗೆ ಓದಿಕೊಳ್ಳಿ.

ನವಗ್ರಹ ಧಾನ್ಯಗಳ ದಾನ ಮಾಡಬೇಕು

ನವಗ್ರಹ ಧಾನ್ಯಗಳ ದಾನ ಮಾಡಬೇಕು

ಇದು ಕೇತುಗ್ರಸ್ತ ಚಂದ್ರ ಗ್ರಹಣ. ನಡೆಯುತ್ತಿರುವುದು ಮಕರ ರಾಶಿಯಲ್ಲಿ. ಅಲ್ಲೇ ಈಗ ಕುಜ ಗ್ರಹ ಕೂಡ ಇದೆ. ಆದ್ದರಿಂದ ಚಂದ್ರನಿಗೆ ಅಕ್ಕಿ, ಕೇತುವಿಗೆ ಹುರುಳಿ, ಶನಿ ಗ್ರಹಕ್ಕೆ ಎಳ್ಳು, ಕುಜನಿಗೆ ತೊಗರಿ ಬೇಳೆಯನ್ನು ದಾನ ಮಾಡಬೇಕಾಗುತ್ತದೆ. ಈ ಎಲ್ಲ ಧಾನ್ಯವನ್ನು ತಲಾ ಕನಿಷ್ಠ ಒಂದು ಕೇಜಿಯಂತೆ, ಒಂದು ಪಾತ್ರೆಯಲ್ಲಿ ಹಾಕಿ, ಅವುಗಳನ್ನು ಮನೆಯ ಎಲ್ಲ ಸದಸ್ಯರಿಂದ ಮುಟ್ಟಿಸಿ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿಕೊಳ್ಳಿ. ಇಷ್ಟನ್ನೂ ಗ್ರಹಣದ ಆರಂಭದ ಕಾಲದಿಂದ ಅಂತ್ಯದ ಕಾಲದ ಮಧ್ಯದಲ್ಲೇ ಮಾಡಿ.

ಯಥಾಶಕ್ತಿ ದಕ್ಷಿಣೆ ಸಹಿತ ದಾನ ನೀಡಬೇಕು

ಯಥಾಶಕ್ತಿ ದಕ್ಷಿಣೆ ಸಹಿತ ದಾನ ನೀಡಬೇಕು

ಚಂದ್ರ ಬಿಂಬ ಎಂಬುದು ಸಿಗುತ್ತದೆ. ಗ್ರಂಥಿಗೆ ಅಂಗಡಿಗಳಲ್ಲಿ ವಿಚಾರಿಸಿದರೆ ಕೊಡುತ್ತಾರೆ. ದೇವರ ಮುಂದೆ ಇಟ್ಟು ಪೂಜೆ ಮಾಡಿದ ಧಾನ್ಯಗಳ ಜತೆಗೆ ಈ ಚಂದ್ರ ಬಿಂಬ ಕೂಡ ದಾನ ಮಾಡಬೇಕು. ಇವೆರಡನ್ನೂ ಒಟ್ಟು ಮಾಡಿ, ಯಥಾ ಶಕ್ತಿ ದಕ್ಷಿಣೆ, ವೀಳ್ಯದೆಲೆ- ಅಡಿಕೆ, ಹಣ್ಣುಗಳನ್ನು ಇಟ್ಟು, ಗ್ರಹಣ ಮುಗಿದ ಮರುದಿನ ಬೆಳಗ್ಗೆ ಅಂದರೆ ಜುಲೈ ಇಪ್ಪತ್ತೆಂಟರಂದು ಬ್ರಾಹ್ಮಣ ಪುರೋಹಿತರಿಗೆ ಅಂದರೆ ಪೌರೋಹಿತ್ಯವನ್ನೇ ವೃತ್ತಿ ಮಾಡಿಕೊಂಡಿರುವ, ಅನುಷ್ಠಾನ ಮಾಡುವವರಿಗೆ ದಾನ ಮಾಡಬೇಕು.

ಮೋದಿ, ರಾಹುಲ್, ಎಚ್ಡಿಕೆ, ಗ್ರಹಣ ಭವಿಷ್ಯ: ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಸಂದರ್ಶನಮೋದಿ, ರಾಹುಲ್, ಎಚ್ಡಿಕೆ, ಗ್ರಹಣ ಭವಿಷ್ಯ: ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಸಂದರ್ಶನ

ಅಶುಭ ಫಲ ಇರುವವರು ಹೋಮ ಮಾಡಿಸಿಕೊಳ್ಳುವುದು ಉತ್ತಮ

ಅಶುಭ ಫಲ ಇರುವವರು ಹೋಮ ಮಾಡಿಸಿಕೊಳ್ಳುವುದು ಉತ್ತಮ

ಇನ್ನು ಯಾರಿಗೆ ಅಂದರೆ ಯಾವ ರಾಶಿಯವರಿಗೆ ಅಶುಭ ಫಲಗಳನ್ನು ಹೇಳಲಾಗಿದೆಯೋ ಅಂಥ ರಾಶಿಯವರು ಕುಜ, ಶನಿ, ಕೇತು, ಚಂದ್ರ ಶಾಂತಿ ಹೋಮ ಮಾಡಿಸಿಕೊಂಡರೆ ಉತ್ತಮ. ಅನುಕೂಲ ಇದ್ದಲ್ಲಿ ಪ್ರತ್ಯೇಕವಾಗಿ ಮನೆಯಲ್ಲೇ ಮಾಡಿಸಿಕೊಳ್ಳಿ. ಆರ್ಥಿಕ ಅನುಕೂಲ ಇಲ್ಲದಿದ್ದಲ್ಲಿ ಸಾಮೂಹಿಕವಾಗಿಯಾದರೂ ಸರಿ, ಆಯಾ ಗ್ರಹದ ಶಾಂತಿ ಮಾಡಿಸಿಕೊಳ್ಳುವುದು ಕ್ಷೇಮ. ಪ್ರತ್ಯೇಕವಾಗಿ ಮನೆಯಲ್ಲೇ ಹೋಮ ಮಾಡಿಸಿಕೊಳ್ಳುವ ಆರ್ಥಿಕ ಚೈತನ್ಯ ಇದ್ದ ಪಕ್ಷದಲ್ಲಿ ಜಾತಕದಲ್ಲಿ ಅಥವಾ ಸದ್ಯಕ್ಕೆ ಇರುವ ಇತರ ದೋಷಗಳಿಗೂ ಶಾಂತಿ ಮಾಡಿಸಿಕೊಳ್ಳಬಹುದು.

ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ

ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ

ದಾನ ಮಾಡುವ ಧಾನ್ಯಗಳ ಗುಣಮಟ್ಟ ಚೆನ್ನಾಗಿರಲಿ. ನೀವು ಕೊಟ್ಟಿದ್ದನ್ನು ದಾನ ತೆಗೆದುಕೊಂಡವರು ಬಳಸುವಂತಿರಬೇಕು. ಇನ್ನು ಪ್ರಮಾಣ ಕೂಡ ಒಂದು ಪುಟ್ಟ ಕುಟುಂಬದ ದಿನದ ಆಹಾರದ ಪ್ರಮಾಣದಷ್ಟಾದರೂ ಇರಬೇಕು. ದಕ್ಷಿಣೆ ವಿಚಾರವಾಗಿ ಯಥಾಶಕ್ತಿ ಎಂಬ ಮಾತಿದೆ. ಅದನ್ನು ಯಥಾ ಮತಿ ಎಂದು ಬದಲಿಸಿ, ನಿಮಗೆ ತೋಚಿದಷ್ಟು ಉತ್ತಮ ಮೊತ್ತದ ದಕ್ಷಿಣೆ ಕೊಡಿ. ಧರ್ಮ ಶಾಸ್ತ್ರದ ಪ್ರಕಾರ ಯಥಾ ಶಕ್ತಿ ಸುವರ್ಣ ದಾನ ಎಂದಿದೆ. ಅಂದರೆ, ಆರ್ಥಿಕವಾಗಿ ಅನುಕೂಲ ಇರುವವರು ಒಂದೋ ಎರಡೋ ಗ್ರಾಮ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ದಾನ ಮಾಡಬಹುದು. ಅದು ಆಯಾ ವ್ಯಕ್ತಿಗಳಿಗೆ ಬಿಟ್ಟ ವಿಚಾರ. ಆದರೆ ಧಾನ್ಯ, ಚಂದ್ರಬಿಂಬವನ್ನು ಮಾತ್ರ ಮರೆಯದೇ ದಾನ ಮಾಡಿ. ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 98456 82380

English summary
Here is the remedies for zodiac signs which have adverse effect of lunar eclipse. Astrologer Pandit Vittala Bhat explains remedies in detail. Lunar eclipse on July 27, 2018. It is also called blood moon, blood lunar eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X