ನಾಳೆಯಿಂದ ಈ ರಾಶಿಯವರ ಅದೃಷ್ಟದ ದಿನಗಳು ಆರಂಭ, ಎಲ್ಲಿವರೆಗೆ?
ರಕ್ಷಾಬಂಧನ ಸಹೋದರ ಸಹೋದರಿಯರಿಗೆ ಬಹಳ ಪ್ರಾಮುಖ್ಯವಾದ ಹಬ್ಬ. ಬಾಂಧವ್ಯ, ಪ್ರೀತಿ ವಿಶ್ವಾಸ ಮತ್ತು ರಕ್ಷಣೆಯ ಸಂಕೇತ. ಈ ಬಾರಿಯ ರಾಖಿ ಹುಣ್ಣಿಮೆ ಕೆಲವು ರಾಶಿಯವರಿಗೆ ದೇವರ ಅನುಗ್ರಹವನ್ನು ಹೊತ್ತು ತರಲಿದೆ. ಆರು ರಾಶಿಯವರ ಜಾತಕದಲ್ಲಿ ನಾಳೆಯಿಂದ ದೇವರ ದಯೆ ಹೆಚ್ಚಾಗಲಿದೆ. ಹಾಗಾಗಿ ಅವರು ಇಟ್ಟ ಹೆಜ್ಜೆ ಯಶಸ್ಸಿನತ್ತಲೇ ಸಾಗುವುದು ಎನ್ನಬಹುದು. ದೇವರ ಕೃಪೆಯಿಂದ ಕುಟುಂಬದಲ್ಲಿ ನೆಮ್ಮದಿ ಮನೆ ಮಾಡುವುದು. ಆರ್ಥಿಕ ಅಭಿವೃದ್ಧಿಯಾಗುವುದು.
ರಾಖಿ ಹುಣ್ಣೆಮೆಯ ಅದೃಷ್ಟ ರಾಶಿಗಳು
ಈ ವರ್ಷದ ರಕ್ಷಾಬಂಧನ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದಿಂದಾಗಿ ವಿಶೇಷವಾಗಿ ಮಹತ್ವ ಪಡೆಯಲಿದೆ. ಸೂರ್ಯ ಮತ್ತು ಗುರುವಿನ ಬಲವಾದ ಸ್ಥಾನದಿಂದಾಗಿ, ಹಲವಾರು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ರಾಖಿ ಹುಣ್ಣಿಮೆಯ ದಿನದಿಂದ ಆರು ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುವುದು. ಜ್ಯೋತಿಷ್ಯದ ಪ್ರಕಾರ, ಸೂರ್ಯ ಮತ್ತು ಗುರುವಿನ ಪ್ರಭಾವವು ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಪ್ರಗತಿ, ವ್ಯವಹಾರದಲ್ಲಿ ಯಶಸ್ಸು ಮತ್ತು ಹೊಸ ಅವಕಾಶಗಳನ್ನು ತರುವುದು.

ವೃಷಭ ರಾಶಿ
ವೃಷಭ ರಾಶಿಯವರ ಸುಖ-ಸಂತೋಷ ಹೆಚ್ಚಾಗುವುದು. ಹಣಕಾಸಿನ ಸ್ಥಿತಿ ಸುಧಾರಣೆಯಾಗುವುದು. ಸುಮಾರು ಸಮಯದಿಂದ ಆಸ್ತಿ, ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಕಿರಿ ಕಿರಿ ಅನುಭವಿಸುತ್ತಿದ್ದರೆ ಅದು ಬಗೆಹರಿಯುವುದು. ಹೊಸ ಜವಾಬ್ದಾರಿ ಸಿಗುವುದು. ಎಲ್ಲಾ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುವುದು. ರಾಖಿಗೆ ಒಳ್ಳೆಯ ಉಡುಗೊರೆ ಸಿಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುವುದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರು. ಇವರಿಗೆ ಈ ಹಬ್ಬವು ಭಾವನಾತ್ಮಕವಾಗಿ ನೆಮ್ಮದಿಯನ್ನು ತರುವುದು. ತಾಯಿಯ ಆಶೀರ್ವಾದ, ಒಡಹುಟ್ಟಿದವರ ಪ್ರೀತಿಯಿಂದ ಕುಟುಂಬದಲ್ಲಿ ಸೌಹಾರ್ದತೆ ಹೆಚ್ಚುವುದು. ಹಳೆಯ ಮನಸ್ತಾಪಗಳು ಕಡಿಮೆಯಾಗುವುದು. ದೂರವಾದ ಬಂಧುಗಳು ಮತ್ತೆ ಹತ್ತಿರವಾಗುವರು. ಜೀವನದಲ್ಲಿ ಸಂತೋಷ ಮತ್ತು ಸಕಾರಾತ್ಮಕ ಬದಲಾವಣೆಗಳಾಗುವುದು. ಸಮಯವು ಆರ್ಥಿಕವಾಗಿ ಸಾಕಷ್ಟು ಅನುಕೂಲಕರವಾಗಿರುವುದು. ಆದಾಯ ಹೆಚ್ಚಾಗಬಹುದು. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುವುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನದಿಂದ ವಿಶೇಷವಾಗಿ ಫಲಪ್ರದವಾಗಬಹುದು. ಗೌರವ, ಮನ್ನಣೆ ಸಿಗುವುದು. ಕುಟುಂಬ ಸದಸ್ಯರ ಪ್ರೀತಿ ಹೆಚ್ಚಾಗುವುದು. ಅದೃಷ್ಟ ಹೆಗಲೇರುವುದು. ಒಡಹುಟ್ಟಿದವರು ಅಥವಾ ಹಿರಿಯರಿಂದ ವಿಶೇಷ ಪ್ರೀತಿ ಹಾಗೂ ಗೌರವ ಸಿಗುವುದು. ಅಹಂಕಾರದಿಂದಾಗಿ ದೂರವಾಗಿದ್ದ ಸಂಬಂಧಗಳು ಮತ್ತೆ ಹತ್ತಿರವಾಗುವುದು. ಉದ್ಯೋಗಿಗಳಿಗೆ, ಹೊಸ ಜವಾಬ್ದಾರಿಗಳು ಮತ್ತು ಬಡ್ತಿ ಸಿಗುವ ಸಾಧ್ಯತೆ ಇದೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಹಣಕಾಸಿನ ವಿಷಯದಲ್ಲಿಯೂ ಸಮಯ ಶುಭವಾಗಿರುವುದು.
ತುಲಾ ರಾಶಿ
ತುಲಾ ರಾಶಿಯವರ ಸಂಬಂಧಗಳಲ್ಲಿ ಸೌಹಾರ್ದತೆ ಹೆಚ್ಚಾಗುವುದು. ಕಡಿದು ಹೋಗಿದ್ದ ಸಂಬಂಧಗಳು ಮತ್ತೆ ಬೆಸೆದುಕೊಳ್ಳುವುದು. ಕುಟುಂಬದಲ್ಲಿ ಐಕ್ಯತೆ ಮೂಡಲಿದೆ. ತುಂಬಾ ದಿನಗಳಿಂದ ಹೊರಗೆ ಉಳಿದಿರುವ ಹಣ ವಾಪಸ್ ಬರುವುದು. ಉದ್ಯಮಿಗಳಿಗೆ ಈ ಸಮಯ ಹೆಚ್ಚು ಅನುಕೂಲಕರವಾಗಿರುವುದು. ವ್ಯಾಪಾರ ವಿಸ್ತರಣೆಯ ಮೂಲಕ ಹೆಚ್ಚು ಲಾಭ ಗಳಿಸುವಿರಿ. ಹಬ್ಬದ ಸಂತೋಷದ ಜೊತೆಗೆ, ಪ್ರೀತಿಪಾತ್ರರೊಂದಿಗಿನ ಸಂಬಂಧಗಳು ಗಾಢವಾಗಬಹುದು.
ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಆದ್ದರಿಂದ ರಾಖಿ ಸಮಯದಲ್ಲಿ ಗುರುವಿನ ಸ್ಥಾನವು ಈ ರಾಶಿಯವರಿಗೆ ವಿಶೇಷವಾಗಿ ಮುಖ್ಯವಾಗಿರುವುದು. ಜ್ಯೋತಿಷ್ಯದ ಪ್ರಕಾರ, ರಾಖಿ ಹಬ್ಬದ ನಂತರ, ಧನು ರಾಶಿಯವರ ಜೀವನದ ದಿಕ್ಕೇ ಬದಲಾಗುವುದು. ಬಹಳ ದಿನಗಳಿಂದ ಕಾಯುತ್ತಿದ್ದ ಅವಕಾಶ ಸೃಷ್ಟಿಯಾಗುವುದು. ಸಮಾಜ ಮತ್ತು ಕುಟುಂಬದಲ್ಲಿ ಖ್ಯಾತಿ ಮತ್ತು ಗೌರವ ಹೆಚ್ಚುವುದು. ಕೆಲವು ಪ್ರಮುಖ ಕೆಲಸಗಳಲ್ಲಿ ಕುಟುಂಬ ಸದಸ್ಯರಿಂದ ಬೆಂಬಲ ಸಿಗುವುದು. ಒಡಹುಟ್ಟಿದವರೊಂದಿಗಿನ ಸಂಬಂಧವು ಬಲಗೊಳ್ಳುವ ಸಾಧ್ಯತೆಯಿದೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಯಶಸ್ಸು ಸಿಗುವುದು. ವ್ಯವಹಾರದಲ್ಲಿಯೂ ಹೊಸ ಅವಕಾಶಗಳು ಬರಬಹುದು.
ಮೀನ ರಾಶಿ
ಮೀನ ರಾಶಿಯವರ ಮೇಲೆ ದೇವರ ಕೃಪೆ ತುಸು ಹೆಚ್ಚೇ ಇರುವುದು. ಇವರ ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ. ಹಳೆಯ ಸಮಸ್ಯೆಗಳು ಬಗೆಹರಿಯುವುದು. ಭಾವನಾತ್ಮಕ ಒತ್ತಡದಿಂದ ಮುಕ್ತಿ ಸಿಗಲಿದೆ. ಅನಿರೀಕ್ಷಿತ ಮೂಲಗಳಿಂದ ಹಣ ಸಿಗುವುದು. ಆದಾಯದ ಮೂಲಗಳು ಹೆಚ್ಚಾಗುವುದು. ಹೊಸ ಕೆಲಸಕ್ಕೆ ಸೇರುವ ಅವಕಾಶ ಸಿಗುವುದು. ವ್ಯವಹಾರವನ್ನು ವಿಸ್ತರಿಸಲು ಇದು ಸಕಾಲ.


Click it and Unblock the Notifications
