Get Updates
Get notified of breaking news, exclusive insights, and must-see stories!

2021 Love, Marriage Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ

2021ನೇ ಇಸವಿಯ ವರ್ಷ ಭವಿಷ್ಯದ ಬಗ್ಗೆ ಎಲ್ಲ ಅಂಶಗಳನ್ನು ಒಳಗೊಂಡಂತೆ ಲೇಖನ ಈಗಾಗಲೇ ಪ್ರಕಟಿಸಲಾಗಿದೆ. ಆದರೆ ಹಲವರು ಕರೆ ಮಾಡಿ, ನಿರ್ದಿಷ್ಟ ವಿಚಾರಗಳ ಬಗ್ಗೆ ಬರೆಯುವಂತೆ ಕೇಳುತ್ತಿದ್ದಾರೆ. ಉದಾಹರಣೆಗೆ: ಪ್ರೀತಿ- ಪ್ರೇಮ, ಮದುವೆ, ಉದ್ಯೋಗ- ವೃತ್ತಿ, ಹಣಕಾಸು ಸ್ಥಿತಿ ಹೀಗೆ.

ಆ ಹಿನ್ನೆಲೆಯಲ್ಲಿ ಈ ವರ್ಷ ಮೇಷದಿಂದ ಕನ್ಯಾ ರಾಶಿ ತನಕ ಪ್ರೀತಿ- ಪ್ರೇಮ ಹಾಗೂ ಮದುವೆಗೆ ಸಂಬಂಧಿಸಿದಂತೆ ಭವಿಷ್ಯ ಹೇಗಿರುತ್ತದೆ ಎಂಬ ಬಗೆಗಿನ ಲೇಖನ ಇದು. ಒಂದು ವರ್ಷ ಮೇಷದಿಂದ ಮೀನ ರಾಶಿಯ ತನಕ ಈ ವಿಚಾರಗಳಲ್ಲಿ ಹೇಗಿದೆ ಎಂದು ತಿಳಿಯುವುದಕ್ಕೆ ಈ ಲೇಖನ ಸಹಾಯ ಮಾಡಲಿದೆ.

ಜನವರಿಯಿಂದ ಏಪ್ರಿಲ್ ಆರಂಭದ ತನಕ ಗುರು ಮಕರ ರಾಶಿಯಲ್ಲಿದ್ದು, ಆ ನಂತರ ಕುಂಭ ರಾಶಿಗೆ ಪ್ರವೇಶ ಆಗುತ್ತದೆ. ಸೆಪ್ಟೆಂಬರ್ ತನಕ ಅಲ್ಲೇ ಇರುತ್ತದೆ. ಆ ನಂತರ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಮಕರ ರಾಶಿಯಲ್ಲಿದ್ದು, ಮತ್ತೆ ಕುಂಭಕ್ಕೆ ಪ್ರವೇಶ ಆಗುತ್ತದೆ. ವರ್ಷದ ಕೊನೆಯ ತನಕ ಗುರು ಕುಂಭ ರಾಶಿಯಲ್ಲಿ ಇದ್ದರೆ, ಶನಿ ಮಕರ ರಾಶಿಯಲ್ಲಿ, ರಾಹು ವೃಷಭ ಹಾಗೂ ಕೇತು ವೃಶ್ಚಿಕದಲ್ಲಿ ವರ್ಷ ಪೂರ್ತಿ ಇರುತ್ತವೆ.

ಆದ್ದರಿಂದ ಪ್ರಮುಖ ಗ್ರಹಗಳು ಎನಿಸಿದ ಗುರು, ಶನಿ, ರಾಹು- ಕೇತು ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ರಾಶಿ ಭವಿಷ್ಯದ ಬಗ್ಗೆ ತಿಳಿಸಲಾಗುತ್ತಿದೆ. ಇನ್ನು ಆಯಾ ವ್ಯಕ್ತಿಯ ಜನ್ಮ ಜಾತಕದಲ್ಲಿನ ಗ್ರಹಗಳ ಸ್ಥಿತಿಗತಿ ಹಾಗೂ ದಶಾ ಕಾಲ ಮುಖ್ಯವಾಗುತ್ತದೆ. ಆದ್ದರಿಂದ ವೈಯಕ್ತಿಕ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಬಾಧೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ.

ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ಮನೆ ವಿಳಾಸ- #37/17 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ್, ಬೆಂಗಳೂರು. ಮೊ. 9986623344.

ಮೇಷ

ಮೇಷ

ಈ ವರ್ಷ ಏಪ್ರಿಲ್ ನಂತರ ಸೆಪ್ಟೆಂಬರ್ ವರಗೆ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಮದುವೆ ನಿಶ್ಚಯ ಆಗುವ ಅಥವಾ ಮದುವೆಯೇ ಆಗುವ ಯೋಗ ಇದೆ. ಅದರಲ್ಲೂ ವಿವಾಹದ ನಂತರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಒಂದು ವೇಳೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದಿದ್ದಲ್ಲಿ ಈ ಮೇಲೆ ತಿಳಿಸಿದ ಅವಧಿಯಲ್ಲಿ ಮಾಡಬಹುದು. ಈ ಸಮಯದಲ್ಲಿ ನಿರ್ಧಾರಗಳನ್ನು ಮುಂದಕ್ಕೆ ಹಾಕಬಾರದು. ಇನ್ನು ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳಿಬರುವ ಯೋಗ ಕೂಡ ಇದೆ. ಹಣಕಾಸಿನ ಸಮಸ್ಯೆಗಳು ಇದ್ದಲ್ಲಿ ಸಂಗಾತಿಯ ಬೆಂಬಲದಿಂದಲೋ ಅಥವಾ ಮದುವೆ ಆದ ಯೋಗದಿಂದಲೋ ನಿವಾರಣೆ ಆಗುವ ಅವಕಾಶ ಅಂತೂ ಇದ್ದೇ ಇದೆ. ಒಂದು ವೇಳೆ ನೀವು ಉದ್ಯೋಗ ಅಥವಾ ವ್ಯವಹಾರ ಮಾಡುವ ಸ್ಥಳದಲ್ಲೇ ಯಾರನ್ನಾದರೂ ಪ್ರೀತಿಸುತ್ತಿದ್ದಲ್ಲಿ ಅಥವಾ ನಿಮಗೆ ಗೊತ್ತಿಲ್ಲದಂತೆ ಅವರು ಇಷ್ಟ ಪಡುತ್ತಿದ್ದಲ್ಲಿ, ವರ್ಷದ ಮೊದಲ ಮೂರು ತಿಂಗಳು ಗಾಸಿಪ್ ಗಳು ಹರಿದಾಡಲಿವೆ. ಅಪವಾದ ಹೊರಬೇಕಾದ ಸಂದರ್ಭ ಎದುರಾಗಬಹುದು. ವರ್ಷದ ಮೊದಲ ಮೂರು ತಿಂಗಳು ಹಾಗೂ ಕೊನೆಯ ಎರಡು ತಿಂಗಳು, ನವೆಂಬರ್- ಡಿಸೆಂಬರ್ ನಲ್ಲಿ ಬಹಳ ಎಚ್ಚರವಾಗಿರಬೇಕು. ಹುಂಬತನ ಬೇಡ. ನೀವು ಹೇಳಿದ್ದೇ ನಡೆಯಬೇಕು ಎಂದು ಪ್ರೇಯಸಿ ಅಥವಾ ಪ್ರಿಯಕರನ ಜತೆ ಹಠ ಮಾಡಿದರೆ, ದೂರ ಇರಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.

ವೃಷಭ

ವೃಷಭ

ನಿಮಗಿಂತ ವಯಸ್ಸಿನಲ್ಲಿ ತುಂಬ ಹಿರಿಯರು ಅಥವಾ ಬೇರೆ ಧಾರ್ಮಿಕ ನಂಬಿಕೆಗಳನ್ನು ಉಳ್ಳವರ ಬಗ್ಗೆ ಬಗ್ಗೆ ಮೋಹ ಬೆಳೆಯಲಿದೆ. ವರ್ಷದ ಮೊದಲ ಮೊದಲ ಮೂರು ತಿಂಗಳು, ಸೆಪ್ಟೆಂಬರ್ ನಿಂದ ನವೆಂಬರ್ ತನಕ ತಂದೆಯ ಕಡೆ ಸಂಬಂಧಿಕರು ನಿಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಯೋಗ ಇದೆ. ಈ ಅವಧಿಯಲ್ಲಿ ನಿಮ್ಮ ಅದೃಷ್ಟ ಬಹಳ ಕೆಟ್ಟದಾಗಿರುತ್ತದೆ. ಕೋಲು ಕೊಟ್ಟು ಹೊಡೆಸಿಕೊಂಡರು ಎಂಬ ಸ್ಥಿತಿ ತಂದುಕೊಳ್ಳಬೇಡಿ. ಇನ್ನು ಮದುವೆ ಪ್ರಯತ್ನಗಳನ್ನು ಮಾಡುತ್ತಿದ್ದಲ್ಲಿ ಇತರರ ಚಾಡಿ ಮಾತುಗಳಿಂದ ಅಡೆತಡೆಗಳಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಮದುವೆ ನಿಶ್ಚಯ ಆಗಿದ್ದಲ್ಲಿ ಮಾತುಕತೆ ಆಡುವಾಗ ಎಚ್ಚರಿಕೆಯಿಂದ ಇರಬೇಕು. ಅನಗತ್ಯ ಮಾತುಗಳಿಂದ ಮದುವೆ ಮುರಿದು ಬೀಳುವಂತೆ ಆಗಬಹುದು ಎಚ್ಚರ. ಇನ್ನು ಕುಂಭ ರಾಶಿಯಲ್ಲಿ ಗುರು ಸಂಚಾರ ಮಾಡುವಾಗ ಶುಭ ಫಲಗಳನ್ನು ನಿರೀಕ್ಷೆ ಮಾಡಬಹುದು. ಹಿರಿಯರ ಮೂಲಕ ಮದುವೆಗೆ ಸೂಕ್ತ ಸಂಬಂಧಗಳು ಬರಲಿವೆ. ಸಮಾರಂಭಗಳಿಗೆ ತೆರಳಿದಾಗ ಅಲ್ಲಿ ಸೂಕ್ತ ವಧು/ವರ ಕಂಡು ಬರುವ ಸಾಧ್ಯತೆ ಇದೆ. ಆದರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ: ಪ್ರೀತಿ ವಿಚಾರವೇ ಇರಬಹುದು ಅಥವಾ ಮದುವೆಯೇ ಆಗಿರಬಹುದು, ಸೂಕ್ತವಾದ ಪರಿಶೀಲನೆ ನಂತರ ಮುಂದಕ್ಕೆ ಹೆಜ್ಜೆ ಇಡಿ.

ಮಿಥುನ

ಮಿಥುನ

ನಿಮ್ಮ ಸಪ್ತಮಾಧಿಪತಿಯಾದ ಗುರು ಎಂಟನೇ ಮನೆಯಲ್ಲಿ ನೀಚನಾಗಿ ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಸಂಚರಿಸಲಿದ್ದಾನೆ. ಇದರಿಂದ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ವಿವಾಹಿತರಾಗಿದ್ದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಉಲ್ಬಣಿಸಬಹುದು. ಈ ಸಮಯದಲ್ಲಿ ನಿಮ್ಮ ಇಮೇಜನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನೀವಿಡುವ ಒಂದು ತಪ್ಪು ಹೆಜ್ಜೆ ಕೂಡ ದೊಡ್ಡ ಮಟ್ಟದಲ್ಲಿ ಸಮಸ್ಯೆಗೆ ಸಿಲುಕಿಸುವ ಸಾಧ್ಯತೆ ಇದೆ. ಆದ್ದರಿಂದ ಕಡ್ಡಾಯವಾಗಿ ನಿಮ್ಮ ಮಾತುಕತೆಯಲ್ಲಿ ಹುಷಾರಾಗಿರಿ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಹಾಗೂ ನವೆಂಬರ್- ಡಿಸೆಂಬರ್ ನಲ್ಲಿ ಕುಂಭದಲ್ಲಿ ಗುರು ಸಂಚಾರ ಮಾಡುವಾಗ ತಂದೆ ಕಡೆಯ ಸಂಬಂಧಿಕರ ಮೂಲಕ ವಿವಾಹ ಸಂಬಂಧಗಳು ಬರುವ ಸಾಧ್ಯತೆಗಳಿವೆ. ಮನೆಯಲ್ಲಿ ಹಿರಿಯರ ಅನಾರೋಗ್ಯದ ಕಾರಣಕ್ಕೆ ಮದುವೆ ಒತ್ತಡ ಹೆಚ್ಚಾಗಲಿದೆ. ಮದುವೆ ನಿಶ್ಚಯ ಆಗಿ, ಶೀಘ್ರದಲ್ಲೇ ವಿವಾಹ ಆಗಿಹೋಗಲಿದೆ. ಆದರೆ ನಿಮ್ಮ ಆರೋಗ್ಯ, ಉದ್ಯೋಗ, ವ್ಯಾಪಾರ ಎಲ್ಲವೂ ಸವಾಲಿನ ಸ್ಥಿತಿ ಎದುರಿಸುವುದರಿಂದ ಚಿಂತೆ ಮಾಡುವಂತಾಗುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಬಹಳ ಒತ್ತಡದ ಸನ್ನಿವೇಶಗಳು ಎದುರಾಗುತ್ತವೆ. ಕಡ್ಡಾಯವಾಗಿ ಗುರು- ಶನೈಶ್ಚರ ಆರಾಧನೆ ಮಾಡಿ.

ಕರ್ಕಾಟಕ

ಕರ್ಕಾಟಕ

ಸಪ್ತಮದಲ್ಲಿ ಮಕರ ರಾಶಿಯ ನೀಚ ಗುರು ಸಂಚಾರ ಇರುವಾಗ ಇನ್ನೇನು ಮದುವೆ ಆಗಿಯೇ ಹೋಯಿತು ಅಂದುಕೊಳ್ಳುವ ತನಕ ಮುಂದುವರಿದು, ನಿಂತುಹೋಗಬಹುದು. ಇನ್ನು ನಿಶ್ಚಿತಾರ್ಥ ಆಗಿದ್ದಲ್ಲಿ ಮೂರನೇ ವ್ಯಕ್ತಿಗಳ ಚಾಡಿ ಮಾತುಗಳಿಂದ ಸಮಸ್ಯೆ ಆಗಲಿದೆ. ಇನ್ನು ನಿಮ್ಮದೇ ಮಾನಸಿಕ ಸಮಸ್ಯೆಯಿಂದಾಗಿ ಮದುವೆ ರದ್ದು ಮಾಡಿಕೊಳ್ಳುವಂತಾಗುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವವರ ಮಧ್ಯೆ ಪರಸ್ಪರರಲ್ಲಿ ಅನುಮಾನ ಮೂಡಲಿದೆ. ಅದರಲ್ಲೂ ಮಕರ ರಾಶಿ ಹಾಗೂ ಕರ್ಕಾಟಕ ಲಗ್ನದವರಾಗಿದ್ದಲ್ಲಿ ಸಂಗಾತಿಯಿಂದ ದೂರ ಇರಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇನ್ನು ಕುಂಭದಲ್ಲಿ ಗುರು ಸಂಚಾರ ಕೂಡ ತೀರಾ ಉತ್ತಮ ಫಲ ಎಂದೇನೂ ಇರುವುದಿಲ್ಲ. ಮದುವೆ ವಿಚಾರದಲ್ಲಿ ಲಾಭ- ನಷ್ಟದ ಬಗ್ಗೆ ವ್ಯಾಪಾರಿಗಳ ರೀತಿಯಲ್ಲಿ ಯೋಚನೆ ಮಾಡದಿರಿ. ಭಾವನಾತ್ಮಕ ಸಂಗತಿಯನ್ನು ವ್ಯಾಪಾರದ ರೀತಿಯಲ್ಲಿ ಆಲೋಚಿಸಿದಲ್ಲಿ ಭವಿಷ್ಯದಲ್ಲಿ ಸಂಕಷ್ಟ ಅನುಭವಿಸಲಿದ್ದೀರಿ. ಇನ್ನು ಸಂಗಾತಿಗೆ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಸೂಕ್ತ ಔಷಧೋಪಚಾರ ಮತ್ತು ವೈದ್ಯರು ದೊರೆಯಲಿದ್ದಾರೆ. ಪ್ರಯಾಣದ ವೇಳೆ ಪರಿಚಯವಾಗುವ ವ್ಯಕ್ತಿ ಜತೆಗೆ ಪ್ರೇಮಾಂಕುರ ಆಗುವ ಯೋಗ ಇದೆ. ನಿಮ್ಮ ಮಾತಿನ ಮೂಲಕ ಯಾವುದನ್ನೂ ಹಾಳು ಮಾಡಿಕೊಳ್ಳಬೇಡಿ. ಅಗತ್ಯ ಬಂದಲ್ಲಿ ಸೋದರ- ಸೋದರಿಯರಿಂದ ನೆರವನ್ನು ಪಡೆಯಿರಿ.

ಸಿಂಹ

ಸಿಂಹ

ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ವಿವಾಹ ನಿಶ್ಚಯ ಆಗುವ, ಸೂಕ್ತ ಸಂಬಂಧ ದೊರೆಯುವ ಅವಕಾಶಗಳು ಹೆಚ್ಚಿವೆ. ಸ್ತ್ರೀಯರಿಗೆ ವಿದೇಶದಲ್ಲಿ ಕಾರ್ಯ ನಿರ್ವಹಿಸುವ ವರನೊಂದಿಗೆ ವಿವಾಹ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಥವಾ ವಿವಾಹ ನಂತರದಲ್ಲಿ ಪತಿಗೆ ವಿದೇಶದಲ್ಲಿ ಉದ್ಯೋಗ ಸಿಕ್ಕು, ಅಲ್ಲಿಗೆ ತೆರಳುವ ಅವಕಾಶಗಳು ದೊರೆಯಲಿವೆ. ತಾಯಿಯ ಕಡೆ ಸಂಬಂಧಿಕರಿಂದ ವಿವಾಹ ನಿಶ್ಚಯ ಆಗುವ ಅವಕಾಶ ಜಾಸ್ತಿ ಇದೆ. ಸೋದರ ಮಾವ/ಅತ್ತೆಯ ಮಗ ಅಥವಾ ಮಗಳ ಜತೆಗೆ ಪ್ರೀತಿ- ಪ್ರೇಮ ಎಂದು ಇದ್ದಲ್ಲಿ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡುವುದಕ್ಕೆ ಇದು ಸೂಕ್ತ ಸಮಯ ಆಗಲಿದೆ. ಆದರೆ ಸಿಂಹ ರಾಶಿಯವರು ತಮ್ಮ ಅಹಂಕಾರವನ್ನು ಅಥವಾ ಬಿಗುಮಾನವನ್ನು ಬಿಟ್ಟು, ಪ್ರಯತ್ನ ಮಾಡಬೇಕು. ಈಗಿರುವ ಕೆಲಸಕ್ಕಿಂತ ಇನ್ನೂ ಉತ್ತಮವಾದದ್ದು ಸಿಗಲು ಅಥವಾ ಇನ್ನೂ ಹೆಚ್ಚು ಸಂಬಳ ಸಿಗಲಿ ಆ ನಂತರ ಮದುವೆ ಆಗುತ್ತೀನಿ ಎಂಬ ಧೋರಣೆ ಬೇಡ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವೇಳೆ ನಿಮ್ಮ ಮನಸ್ಸಿಗೆ ಒಪ್ಪುವ ಸಂಗಾತಿಯ ಪರಿಚಯ ಆಗುವ ಯೋಗ ಇದೆ. ಅಥವಾ ಅಂಥಲ್ಲಿಗೆ ನಿಮ್ಮನ್ನು ಬರುವುದಕ್ಕೆ ಹೇಳಿ, ಪರಿಚಯ ಮಾಡಿಸಿಕೊಡುವ ಅವಕಾಶ ಇದೆ.

ಕನ್ಯಾ

ಕನ್ಯಾ

ನಿಮ್ಮ ಆಲಸ್ಯದಿಂದಾಗಿ ವಿವಾಹ ಸಂಬಂಧಗಳು ಕೈ ತಪ್ಪುವಂತಾಗುತ್ತದೆ. ಅವರಾಗಿಯೇ ವಿಚಾರಿಸಿಕೊಂಡು ಬರಲಿ, ಮೊದಲು ಅವರೇ ತಿಳಿಸಲಿ ಎಂಬ ಧೋರಣೆ ಕೂಡದು. ಪ್ರೀತಿ- ಪ್ರೇಮದ ವಿಚಾರದಲ್ಲೂ ಅಷ್ಟೇ; ನಿಮಗೆ ಇಷ್ಟವಿದ್ದಲ್ಲಿ ನೀವಾಗಿಯೇ ಪ್ರೇಮ ನಿವೇದನೆ ಮಾಡಿಕೊಳ್ಳಿ. ಅವರಾಗಿಯೇ ಹೇಳಿಕೊಳ್ಳಲಿ ಎಂದು ಆಲೋಚಿಸಬೇಡಿ. ವಿವಾಹ ನಿಶ್ಚಯ ಆಗಿದ್ದಲ್ಲಿ ಖರ್ಚಿನ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಅನಗತ್ಯ ಖರ್ಚು ಎಲ್ಲೆಲ್ಲಿ ತಡೆಯಬಹುದು ಎಂಬ ಕಡೆಗೆ ಗಮನ ನೀಡಿ. ಕೋರ್ಟ್- ಕಚೇರಿ, ಪೊಲೀಸ್ ಠಾಣೆ ಇತ್ಯಾದಿ ಸರ್ಕಾರಿ ಕಚೇರಿಗಳಿಗೆ ನಾನಾ ಕೆಲಸಗಳಿಗೆ ಓಡಾಡುವ ವೇಳೆ ಪರಿಚಯ ಆಗುವ ವ್ಯಕ್ತಿ ಜತೆಗೆ ಪ್ರೀತಿ- ಪ್ರೇಮ ಬೆಳೆಯಲಿದೆ. ನಿಮ್ಮಲ್ಲಿ ಕೆಲವರನ್ನು ಕಣ್ಣು ಕಟ್ಟಿ, ಕತ್ತಲಲ್ಲಿ ಕಾಡಿಗೆ ಬಿಟ್ಟಂತಾಗುತ್ತದೆ. ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಿಳಿಯುವುದು ಕಷ್ಟವಾಗಿ, ಈಗಾಗಲೇ ನಿಶ್ಚಯ ಆಗಿರುವ ಮದುವೆ ಮುರಿದು ಬೀಳುವಂಥ ಸಾಧ್ಯತೆ ಇದೆ. ನಿಮ್ಮ ಸಾಲ ಹಾಗೂ ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಸಂಗಾತಿ ಜತೆ ಪದೇಪದೇ ಚರ್ಚಿಸುವುದಕ್ಕೆ ಹೋಗಬೇಡಿ. ನಿಮ್ಮ ಮದುವೆಯಲ್ಲಿ ದುಡ್ಡಿನ ವಿಚಾರ ಪ್ರಾಮುಖ್ಯ ಪಡೆಯಲಿದೆ.

(ತುಲಾದಿಂದ ಮೀನದ ತನಕ ಮುಂದಿನ ಭಾಗದಲ್ಲಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+