• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

580 ವರ್ಷಗಳ ನಂತರ ಅತಿದೊಡ್ಡ ಚಂದ್ರ ಗ್ರಹಣ: ಯಾವಯಾವ ರಾಶಿಗೆ ಕಂಟಕ

By ಕೆ. ಸೂರ್ಯನಾರಾಯಣ ರಾವ್
|
Google Oneindia Kannada News

ಇದೇ ಬರುವ ನವೆಂಬರ್ ಹತ್ತೊಂಬತ್ತರ ಅತ್ಯಂತ ದೀರ್ಘಾವಧಿಯ ಭಾಗಶಃ ಚಂದ್ರ ಗ್ರಹಣಕ್ಕೆ ವಿಶ್ವದ ಹಲವು ಭಾಗಗಳು ಸಾಕ್ಷಿಯಾಗಲಿವೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಮಾತ್ರ ಅಲ್ಪಸ್ವಲ್ಪ ಗ್ರಹಣ ಗೋಚರಿಸಲಿದೆ.

ಜ್ಯೋತಿಷ್ಯ ವಲಯದ ಪ್ರಕಾರ, ಎಲ್ಲಿ ಗ್ರಹಣ ಗೋಚರಿಸುವುದಿಲ್ಲವೋ ಅಲ್ಲೆಲ್ಲಾ ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸಬೇಕಾಗಿಲ್ಲ. ಇಸವಿ 1440ರಲ್ಲಿ ಇದೇ ಮಾದರಿಯ ಸುದೀರ್ಘ ಚಂದ್ರಗ್ರಹಣ ಸಂಭವಿಸಿತ್ತು. ಉತ್ತರ ಮತ್ತು ದಕ್ಷಿಣ ಅಮೆರಿಕಾ, ಏಷ್ಯಾದ ಪೂರ್ವ, ಪೆಸಿಫಿಕ್ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದೆ.

 ದೇಶ ಮತ್ತು ರಾಜ್ಯದ ಆಗುಹೋಗುಗಳ 'ದೀಪಾವಳಿ ಭವಿಷ್ಯ' - 2021 ದೇಶ ಮತ್ತು ರಾಜ್ಯದ ಆಗುಹೋಗುಗಳ 'ದೀಪಾವಳಿ ಭವಿಷ್ಯ' - 2021

ಕೃತಿಕಾ ನಕ್ಷತ್ರ, ವೃಷಭ ರಾಶಿಯಲ್ಲಿ ಗ್ರಹಣ ಸಂಭವಿಸಲಿದ್ದು, ನವೆಂಬರ್ 19ರ ಮಧ್ಯಾಹ್ನ 12.48ಕ್ಕೆ ಸ್ಪರ್ಷ, ಸಂಜೆ 4.17ಕ್ಕೆ ಮೋಕ್ಷ ಕಾಲವಿರಲಿದೆ. ಮುಂದಿನ ವರ್ಷ ಅಂದರೆ, 16.05.2022ರಂದೂ ಚಂದ್ರ ಗ್ರಹಣ ಸಂಭವಿಸಿದರೂ, ಅದು ಭಾರತದಲ್ಲಿ ಗೋಚರಿಸುವುದಿಲ್ಲ.

ಈ ಚಂದ್ರ ಗ್ರಹಣದಿಂದ ದ್ವಾದಶ ರಾಶಿಗಳ ಮೇಲಿನ ಪ್ರಭಾವ ಏನು ಎನ್ನುವುದನ್ನು ಖ್ಯಾತ ಉತ್ತರ ಭಾರತದ ಜ್ಯೋತಿಷಿಯಾಗಿರುವ ಮುಕೇಶ್ ವತ್ಸ ಅವರು ವತ್ಸ ವರ್ಷ ಎನ್ನುವ ತಮ್ಮ ವಿಡಿಯೋ ವಾಹಿನಿಯ ಮೂಲಕ ಭವಿಷ್ಯವನ್ನು ನುಡಿದಿದ್ದಾರೆ. ಯಾವಯಾವ ರಾಶಿಗೆ ಕಂಟಕ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ನವೆಂಬರ್ 14 ರಿಂದ 20ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯನವೆಂಬರ್ 14 ರಿಂದ 20ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮೇಷ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮೇಷ

ಮೇಷ: ಹದಿನಾಲ್ಕನೇ ಮನೆಯಲ್ಲಿ ಚಂದ್ರನಿರುವುದರಿಂದ, ರಾಶಿಯ ಅಧಿಪತಿ ಮಂಗಳ ಆಗಿರುವುದರಿಂದ ಗ್ರಹಣದಿಂದ ಮಂಗಳ ಮತ್ತು ಸೂರ್ಯನ ದೃಷ್ಟಿಯಾಗಲಿದೆ. ಅಂಗಾರಕ ಯೋಗ ಎರಡನೇ ಮನೆಯಲ್ಲಿರುವುದರಿಂದ, ಅತ್ಯಂತ ಜಾಗರೂಕತೆಯಿಂದ ಹಣಕಾಸು ಸಂಬಂಧ ಹೆಜ್ಜೆಯಿಡುವುದು ಉತ್ತಮ. ಯಾವುದಾದರೂ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ, ಮುಂದಿನ ಸೂರ್ಯ ಗ್ರಹಣದ ತನಕ ಕಾಯುವುದು ಉತ್ತಮ. ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಹೆಚ್ಚು.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ವೃಷಭ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ವೃಷಭ

ವೃಷಭ: ಹದಿನಾಲ್ಕು ತಿಂಗಳಿನಿಂದ ರಾಹುವು ಈ ರಾಶಿಯಲ್ಲಿದೆ ಮತ್ತು ರಾಹು ರಾಶಿ ಬದಲಿಸುವ ಕೊನೆಯ ಹಂತದಲ್ಲಿದ್ದಾನೆ. ಈ ಗ್ರಹಣದ ನಂತರ, ಹತ್ತೊಂಬತ್ತು ವರ್ಷದ ನಂತರವಷ್ಟೇ ಈ ರಾಶಿಯ ಮೇಲೆ ಗ್ರಹಣ ಸಂಭವಿಸಲಿದೆ. ಈ ರಾಶಿಯ ಅಧಿಪತಿ ಶುಕ್ರನು ಎಂಟನೇ ಮನೆಯಲ್ಲಿ ಇರುವುದರಿಂದ, ಕೌಟುಂಬಿಕ ಮತ್ತು ಆರ್ಥಿಕ ವಿಚಾರದಲ್ಲಿ ಹಲವು ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚು. ಗೃಹಯೋಪಯೋಗಿ ವಸ್ತುಗಳಿಂದ ತೊಂದರೆ ಆಗಲಿದೆ, ಆಹಾರ ಪದ್ದತಿಯನ್ನು ಸರಿಯಾಗಿ ಪಾಲಿಸುವುದು ಸೂಕ್ತ.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮಿಥುನ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮಿಥುನ

ಮಿಥುನ: ಸೂರ್ಯ ಮತ್ತು ಕೇತು ಈ ರಾಶಿಯ ಆರನೇ ಮನೆಯಲ್ಲಿದ್ದಾನೆ. ಹಾಗಾಗಿ, ಅನಾವಶ್ಯಕ ಹಣ ಪೋಲಾಗುವುದು, ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಜಾಗರೂಕತೆಯಿಂದ ಇರುವುದು ಸೂಕ್ತ. ಕೋರ್ಟ್, ಕಚೇರಿ ವಿಚಾರದಲ್ಲಿ ಹಣ ಖರ್ಚಾಗಬಹುದು. ಪ್ರವಾಸ ಹೋಗುವ ಯೋಜನೆಯಿದ್ದರೆ, ಅದನ್ನು ಮುಂದೂಡುವುದು ಒಳ್ಳೆಯದು. ಧ್ಯಾನ, ಆಧ್ಯಾತ್ಮಿಕತೆಯಿಂದ ಉಸಿರಾಟದ ಮುಂತಾದ ಸಮಸ್ಯೆಯಿಂದ ದೂರವಾಗಬಹುದು.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಕಟಕ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಕಟಕ

ಕಟಕ: ಈ ರಾಶಿಯ ಅಧಿಪತಿಯ ಮೇಲೆಯೇ ಗ್ರಹಣ ಸಂಭವಿಸಲಿದೆ. ಹನ್ನೊಂದನೇ ಮನೆಯಲ್ಲಿ ವೃಷಭ ಇರುವುದರಿಂದ ಇದರ ಪ್ರಭಾವ ಅಷ್ಟಾಗಿ ಇರುವುದಿಲ್ಲ. ಕೌಟುಂಬಿಕವಾಗಿ ಮತ್ತು ಆರ್ಥಿಕವಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಸೂಕ್ತ ಸಮಯವಾಗಿದ್ದರು ಕೂಡಾ, ಸೂರ್ಯ ಗ್ರಹಣದ ನಂತರ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಉದ್ಯೋಗದ ಜಾಗದಲ್ಲಿ ಮಾತನಾಡುವಾಗ ಜಾಗೃತೆಯಿಂದ ಇರುವುದು, ಗೆಳೆಯರ ಜೊತೆಗೆ ವ್ಯವಹರಿಸುವುದಕ್ಕೂ ಮುಂದಾಲೋಚನೆ ಮಾಡುವುದು ಉತ್ತಮ.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಸಿಂಹ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಸಿಂಹ

ಸಿಂಹ: ಹತ್ತನೇ ಸ್ಥಾನದಲ್ಲಿ ಮಂಗಳನಿದ್ದಾನೆ, ಹನ್ನೆರಡನೇ ಸ್ಥಾನದಲ್ಲಿ ಚಂದ್ರನಿದ್ದಾನೆ. ಕೆಲಸದ ಜಾಗದಲ್ಲಿ ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಲುವುದು ಬೇಡ. ಉದ್ಯೋಗದಲ್ಲಿನ ಒತ್ತಡವನ್ನು ಮನೆಗೆ ತಂದರೆ, ಅಲ್ಲೂ ಶಾಂತಿ ಭಂಗವಾಗಲಿದೆ. ಸಾರ್ವಜನಿಕವಾಗಿ ವ್ಯವಹರಿಸುವುದಕ್ಕೆ ಇದು ಸೂಕ್ತ ಸಮಯವಾಗಲಿದೆ ಮತ್ತು ಗ್ರಹಣದಿಂದ ಶುಭ ಲಾಭವಾಗಲಿದೆ.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಕನ್ಯಾ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಕನ್ಯಾ

ಕನ್ಯಾ: ಒಂಬತ್ತನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಮಂಗಳನ ದೃಷ್ಟಿ ಒಂಬತ್ತನೇ ಮನೆಯಲ್ಲಿ ಇರುವುದರಿಂದ, ಅತ್ಯಂತ ಜಾಗರೂಕತೆಯಿಂದ ಇರಬೇಕಾಗಿರುವ ಸಮಯವಿದು. ಪ್ರವಾಸಕ್ಕೆ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದರೆ ಮುಂದಕ್ಕೆ ಹಾಕುವುದು ಸೂಕ್ತ. ಯಾವುದೇ ಪ್ರಮುಖ ನಿರ್ಧಾರಗಳನ್ನು ಮುಂದಿನ ಹದಿನೈದು ದಿನಗಳವರೆಗೆ ತೆಗೆದುಕೊಳ್ಳಬೇಡಿ. ಹೆಚ್ಚು ಆಧ್ಯಾತ್ಮಿಕದ ಕಡೆಗೆ ಗಮನ ಕೊಟ್ಟರೆ, ಎದುರಾಗುವ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿನ ಪರಿಹಾರ ಸಿಗಬಹುದು.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ತುಲಾ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ತುಲಾ

ತುಲಾ: ಎಂಟನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಯಾವ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವಿರೋ ಅದು ಈ ಸಮಯದಲ್ಲಿ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಯಿದೆ. ಕಾರ್ಯಸ್ಥಳದಲ್ಲಿ ಒತ್ತಡ ಹೆಚ್ಚು ಇರಲಿದೆ, ತಂದೆಯ ಆರೋಗ್ಯದಲ್ಲಿ ಏರುಪೇರು ಆಗಬಹುದು. ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಎಚ್ಚರದಿಂದಿರಿ. ವಾಹನ ಚಲಾಯಿಸುವಾಗ ಜಾಗರೂಕತೆ. ಸಣ್ಣಪುಟ್ಟ ಶಸ್ತ್ರಚಿಕಿತ್ಸೆಯೂ ನಡೆಯಬಹುದು.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ವೃಶ್ಚಿಕ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ವೃಶ್ಚಿಕ

ವೃಶ್ಚಿಕ: ಏಳನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ರಾಶಿಯ ಅಧಿಪತಿ ಎಂಟನೇ ಮನೆಯಲ್ಲಿದ್ದಾನೆ. ಹೀಗಾಗಿ, ಕೌಟುಂಬಿಕ, ವ್ಯಾವಹಾರಿಕವಾಗಿ ಸಂಬಂಧಗಳು ಉತ್ತಮವಾಗಿರಲಿದೆ. ಆದರೆ, ಆಡುವ ಮಾತಿನ ಮೇಲೆ ನಿಗಾ ಇರಬೇಕಾಗಿದೆ. ವ್ಯಾವಹಾರಿಕ ಕೆಲಸಕ್ಕೆ/ಅಗ್ರೀಮೆಂಟ್ ಮುಂತಾದುವುಗಳನ್ನು ಸೂರ್ಯ ಗ್ರಹಣದ ನಂತರ ಮಾಡುವುದು ಒಳ್ಲೆಯದು. ಪತ್ನಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಧನು

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಧನು

ಧನು: ಆರನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ರಾಶಿಯ ಅಧಿಪತಿ ಎಂಟನೇ ಮನೆಯಲ್ಲಿದ್ದಾನೆ. ಯಾವುದೇ ಕಾಯಿಲೆಯನ್ನು ಬಹಳ ದಿನಗಳಿಂದ ಅನುಭವಿಸುತ್ತಿದ್ದೀರೋ, ಅದಕ್ಕೆ ಪರಿಹಾರ ಸಿಗಬಹುದು. ಹಳೆಯ ಸಾಲಗಳು ಮುಗಿಯುವ ಸಾಧ್ಯತೆಯಿದೆ, ಹೊಟ್ಟೆಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಆಪರೇಶನ್ ನಡೆಯಬಹುದು. ಕೆಲಸದ ಒತ್ತಡ ಹೆಚ್ಚಿರಲಿದೆ, ಉಸಿರಾಟದ ತೊಂದರೆಯಿಂದ ತಪ್ಪಿಸಿಕೊಳ್ಳಲು ಅದಕ್ಕೆ ಸೂಕ್ತ ವ್ಯಾಯಾಮವನ್ನು ಮಾಡುವುದು ಸೂಕ್ತ.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮಕರ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮಕರ

ಮಕರ: ಐದನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಅತ್ಯುತ್ತಮ ಪರಿಸ್ಥಿತಿ ಎನ್ನುವುದು ಈ ರಾಶಿಯವರಿಗೆ ಇಲ್ಲ. ಪತ್ನಿಯ ಆರೋಗ್ಯದ ಬಗ್ಗೆ ಗಮನ ಹರಿಸಿ, ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಕುಟುಂಬದವರ ಜೊತೆಗೆ ವ್ಯವಹರಿಸುವಾಗ ಎಚ್ಚರ ತಪ್ಪಿ ಮಾತನಾಡಬೇಡಿ, ಇಲ್ಲದಿದ್ದರೆ ಸಂಬಂಧವು ಹಾಳಾಗಬಹುದು. ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಪರೀಕ್ಷೆ ಎದುರಾದರೆ, ವಿಶೇಷ ಏಕಾಗ್ರತೆ ಅಗತ್ಯ.

 ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಕುಂಭ

ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಕುಂಭ

ಕುಂಭ: ಇಷ್ಟು ದಿನ ರಾಹು ನಾಲ್ಕನೇ ಮನೆಯಲ್ಲಿದ್ದ, ತಾಯಿಯ ಆರೋಗ್ಯ ಮತ್ತು ಕುಟುಂಬದ ನೆಮ್ಮದಿಯ ವಿಚಾರದಲ್ಲಿ ಗ್ರಹಣ ಪರಿಣಾಮಕಾರಿಯಾಗಲಿದೆ. ವಾದವಿವಾದದಲ್ಲಿ ಮುಳುಗಬೇಡಿ, ಕುಟುಂಬದಲ್ಲಿ ಗಂಭೀರ ಸಮಸ್ಯೆ ಎದುರಾಗಬಹುದು. ಯಾವುದೇ ಖರೀದಿಯನ್ನು ಸ್ವಲ್ಪದಿನದ ಮಟ್ಟಿಗೆ ಮುಂದೂಡಿ, ಶಾಟ್ ಸರ್ಕ್ಯೂಟ್, ಇಲೆಕ್ಟ್ರಾನಿಕ್ ಸಂಬಂಧಿಸಿದ ವಸ್ತುಗಳಿಂದ ಸಮಸ್ಯೆ ಬರಬಹುದಾಗಿರುವುದರಿಂದ, ಜಾಗೃತೆಯಿಂದ ಇರುವುದು ಸೂಕ್ತ.

  ರೇಡಿಯೋದಿಂದ ರಾಜಕೀಯದ ವರೆಗೂ ಲಾವಣ್ಯ ನಡೆದು ಬಂದ ಹಾದಿ | Oneindia Kannada
   ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮೀನ

  ದ್ವಾದಶ ರಾಶಿಗಳ ಮೇಲಿನ ಪ್ರಭಾವ - ಮೀನ

  ಮೀನ: ಮೂರನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ರಾಶಿಯ ಅಧಿಪತಿಯು ಗುರುವು ನೀಚ ಸ್ಥಾನದಲ್ಲಿದ್ದಾನೆ. ಮನಸ್ಸು ದುರ್ಬಲಗೊಳ್ಳುವುದು, ಏಕಾಗ್ರತೆ ಕಳೆದುಕೊಳ್ಳುವುದು, ಹೊಸ ಗೆಳೆಯರಿಂದ ನಿರಾಶೆಯಾಗುವುದು, ಅಕ್ಕಪಕ್ಕದವರ ಜೊತೆಗಿನ ಮಾತುಕತೆಯಿಂದ ಸಾಧ್ಯವಾದಷ್ಟು ಗ್ರಹಣ ಮುಗಿಯುವ ತನಕ ದೂರವಿರುವುದು ಸೂಕ್ತ. ಹೊಸ ಕೆಲಸ ಮಾಡುವವರು ಮಾತಿನ ಮೇಲೆ ನಿಗಾ ಇಡಬೇಕು. ತಾಳ್ಮೆಯನ್ನು ಪರೀಕ್ಷಿಸುವ ಸಮಯ ಇದಾಗಿರಲಿದ್ದು, ಎಚ್ಚರದಿಂದ ಇರುವುದು ಉತ್ತಮ.

  English summary
  Longest Lunar Eclipse 2021: Astrology Prediction Of 12 Zodaic Sign. Know More,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X