ವಾಸ್ತು ಪ್ರಕಾರ ಮುಖ್ಯ ರಸ್ತೆಯ ಪಕ್ಕದ ಮನೆ ಶುಭವೇ ಅಥವಾ ಅಶುಭವೇ ?
ಇಂದು ಹಳ್ಳಿಗಳಿಂದ ನಗರಗಳ ವರೆಗೆ ಅನೇಕ ಮನೆಗಳು ಮುಖ್ಯ ರಸ್ತೆಯ ಪಕ್ಕದಲ್ಲೆ ನಿರ್ಮಾಣವಾಗುತ್ತಿವೆ. ಸ್ವಂತ ಮನೆ ಎಂಬ ಹೆಮ್ಮೆ ಒಂದಡೆ ಇದ್ದರೆ, ನಿರಂತರ ವಾಹನ ಸಂಚಾರ, ಶಬ್ದ ಮಾಲಿನ್ಯ, ಮತ್ತು ದೂಳುನಿಂದ ನಮಗೆಲ್ಲ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಮುಖ್ಯ ರಸ್ತೆಯ ಪಕ್ಕದಲ್ಲಿ ಮನೆ ಕಟ್ಟಿಕೊಂಡು ವಾಸಿಸುವುದು ವಾಸ್ತು ಪ್ರಕಾಂರ ಒಳ್ಳೆಯದೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ.
ವಾಸ್ತು ಶಾಸ್ತ್ರದಲ್ಲಿ ಮನೆಯ ದಿಕ್ಕುಗಳಿಗೆ ವಿಷೇಶವಾದ ಮಹತ್ವ ನೀಡಲಾಗುತ್ತದೆ.
ಮನೆಯು ದಕ್ಷಿಣ ಭಾಗದಲ್ಲಿ ಇದ್ದು ರಸ್ತೆ ಉತ್ತರಕ್ಕೆ ಇದ್ದರೆ ಅದು ಶುಭಕರ ಎಂದು ಪರಿಗಣಿಸಲಾಗುತ್ತದೆ.
ಮನೆಯು ಪಶ್ಚಿಮ ಭಾಗದಲ್ಲಿ ಇದ್ದು ರಸ್ತೆ ಪೂರ್ವಕ್ಕೆ ಇದ್ದರೂ ಉತ್ತಮ ಎಂದು ಹೇಳಲಾಗುತ್ತದೆ.
ಈ ರೀತಿಯಲ್ಲಿದ್ದರೆ ಹೆಸರು, ಖ್ಯಾತಿ ಹಾಗೂ ಸಂಪತ್ತಿನಲ್ಲಿ ವೃದ್ದಿ ಆಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ಮನೆಯ ಮುಂದೆ ದಕ್ಷಿಣ ಅಥವಾ ಪಶ್ಚಿಮ ರಸ್ತೆ ಇದ್ದರೆ
ಮನೆಯ ಮುಂದೆ ದಕ್ಷಿಣ ಅಥವಾ ಪಶ್ಛಿಮ ದಿಕ್ಕಿನಲ್ಲಿ ರಸ್ತೆ ಇದ್ದರೆ ಕಾಂಪೌಂಡ್ ಗಟ್ಟಿಯಾಗಿ ಮತ್ತು ಎತ್ತರದಲ್ಲಿರಬೇಕು. ಇದು ಶಬ್ದಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ವಾಸ್ತು ದೃಷ್ಟಿಯಿಂದ ಕೊಡ ಮನೆಯ ರಕ್ಷಣೆ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ ಇದರಿಂದಾಗಿ ಮನೆಯಲ್ಲಿ ಅಶಾಂತಿ ಮತ್ತು ನೆಮ್ಮದಿ ಇರುವುದಿಲ್ಲ.
'ವೀಧಿ ಪೋಟು' ಪರಿಶೀಲನೆ ಅಗತ್ಯ
ರಸ್ತೆ ನೇರವಾಗಿ ಬಂದು ಮನೆಯ ಬಾಗಿಲಿಗೆ ತಾಕುವಂತೆ ಇರಬಾರದು. ಇದನ್ನು 'ವೀಧಿ ಪೋಟು' ಎಂದು ಕರೆಯಲಾಗುತ್ತದೆ.
ಈಶಾನ್ಯ ದಿಕ್ಕಿನಿಂದ ಬರುವ ವೀಧಿ ಪೋಟು ಉತ್ತಮ ಫಲಿತಾಂಶ ನೀಡುತ್ತದೆ ಎಂದು ನಂಬಲಾಗಿದೆ. ಆದರೆ ನೈರುತ್ಯ, ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಿಂದ ಬರುವ ವೀಧಿ ಪೋಟು ಆರ್ಥಿಕ ನಷ್ಟ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಪರಿಸರದ ಪ್ರಭಾವ
ವಾಸ್ತು ಕೇವಲ ದಿಕ್ಕುಗಳಿಗೆ ಮಾತ್ರ ಸೀಮಿತವಲ್ಲ; ಸುತ್ತಲಿನ ಪರಿಸರವೂ ಮುಖ್ಯ. ಮುಖ್ಯ ರಸ್ತೆಯ ಶಬ್ದ ಮತ್ತು ಮಾಲಿನ್ಯದಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕಡಿಮೆಯಾಗಬಹುದು ಎಂಬ ನಂಬಿಕೆ ಇದೆ. ಮನೆ ರಸ್ತೆ ಮಟ್ಟಕ್ಕಿಂತ ಕನಿಷ್ಠ 2 ರಿಂದ 3 ಅಡಿ ಎತ್ತರದಲ್ಲಿರವುದು ಒಳ್ಳೆಯದು ಎಂದು ಸಲಹೆ ನೀಡಲಾಗುತ್ತದೆ.
ವ್ಯಾಪಾರಕ್ಕೆ ಲಾಭ
ಮುಖ್ಯ ರಸ್ತೆ ಪಕ್ಕದ ಮನೆಗಳು ವ್ಯಾಪಾರಿಕ ಚಟುವಟಿಕೆಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ವಾಸ್ತು ನಿಯಮಗಳು ಸರಿಯಾಗಿ ಪಾಲಿಸಲ್ಪಟ್ಟರೆ ಧನಲಾಭ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಮನೆಯಲ್ಲಿ ಶಾಂತಿಗೆ ಪರಿಹಾರಗಳು
ಮುಖ್ಯ ರಸ್ತೆ ಪಕ್ಕದಲ್ಲಿದ್ದರೂ ಕೆಲವು ಕ್ರಮಗಳನ್ನು ಈ ರೀತಿಯಾಗಿ ಕೈಗೊಳ್ಳಬಹುದು
ಮನೆಯ ಮುಂಭಾಗದಲ್ಲಿ ದಟ್ಟವಾದ ಮರಗಳನ್ನು ನೆಡುವುದು.
ಗಟ್ಟಿಯಾದ ಹಾಗೂ ಎತ್ತರದ ಕಾಂಪಾಂಡ್ ನಿರ್ಮಿಸುವುದು.
ಸೌಂಡ್ ಪ್ರೂಫ್ ಕಿಟಕಿಗಳನ್ನು ಅಳವಡಿಸುವುದು.
ಪ್ರಧಾನ ದ್ವಾರದಲ್ಲಿ ದೃಷ್ಟಿ ಚಿತ್ರಗಳು ಅಥವಾ ವಾಸ್ತು ಪಿರಮಿಡ್‌ಗಳನ್ನು ಇರಿಸುವುದು.
ಇದರಿಂದ ಶಬ್ದ, ದೂಳು ಹಾಗೂ ನಕಾರಾತ್ಮಕ ಶಕ್ತಿಯ ಪ್ರವೇಶವನ್ನು ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.












Click it and Unblock the Notifications