Lakshmi Narayana Yoga 2024: ಶುಕ್ರ-ಬುಧ ಸಂಯೋಗದಿಂದ ಶುಭ ಯೋಗ: ಈ ರಾಶಿಗೆ ಹಬ್ಬಕ್ಕೆ ಅಪಾರ ಸಂಪತ್ತು
ಕಾಲ ಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಈ ವೇಳೆ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಚಾರ ಮಾಡುತ್ತವೆ. ಈ ಗ್ರಹಗಳ ಸಂಯೋಗದ ಸಮಯದಲ್ಲಿ ಅನೇಕ ಯೋಗಗಳು ರೂಪುಗೊಳ್ಳುತ್ತವೆ. ಈ ವೇಳೆ ಕೆಲ ಯೋಗಗಳು ರೂಪಗೊಳ್ಳುತ್ತವೆ. ಈ ಯೋಗಗಳ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ.
ಶುಕ್ರ ಗ್ರಹ ತುಲಾ ರಾಶಿಯಲ್ಲಿ ಅಕ್ಟೋಬರ್ 13 ರವರೆಗೆ ಸಾಗಲಿದೆ. ಅಕ್ಟೋಬರ್ 10 ರಂದು ಬುಧ ಕೂಡ ಈ ರಾಶಿಗೆ ಪ್ರವೇಶಿಸುತ್ತಾನೆ. ತುಲಾ ರಾಶಿಯಲ್ಲಿ ಬುಧ-ಶುಕ್ರ ಸಂಯೋಗ ಉಂಟಾಗಿ ಲಕ್ಷ್ಮೀ ನಾರಾಯಣ ಯೋಗ ರೂಪಗೊಳ್ಳುತ್ತದೆ. ನವಗ್ರಹಗಳಲ್ಲಿ ಶುಕ್ರ ಗ್ರಹ ಸಂಪತ್ತು, ಸೌಂದರ್ಯ, ಐಷಾರಾಮಿ ಮತ್ತು ಪ್ರೀತಿಯ ಅಧಿಪತಿಯಾಗಿದೆ. ಬುಧ ಗ್ರಹ ಬುದ್ಧಿವಂತಿಕೆ, ಸಂವಹನ ಮತ್ತು ಹಾಸ್ಯ ಪ್ರಜ್ಞೆಯ ಅಧಿಪತಿಯಾಗಿದೆ. ಲಕ್ಷ್ಮೀ ನಾರಾಯಣ ಯೋಗದ ಸಮಯದಲ್ಲಿ ಬುಧವು ವಿಷ್ಣುಸ್ಥಾನದಲ್ಲಿ ಮತ್ತು ಶುಕ್ರ ಲಗ್ನ ಸ್ಥಾನದಲ್ಲಿ ಇರಲಿದೆ.
ಜ್ಯೋತಿಷ್ಯದಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಸಂಯೋಗವನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಲಕ್ಷ್ಮೀ ನಾರಾಯಣ ಯೋಗದಿಂದಾಗಿ ಯಾವ ರಾಶೀಯವರು ಅದೃಷ್ಟವನ್ನು ಪಡೆಯುತ್ತಾರೆ ಎಂದು ತಿಳಿಯೋಣ.

ಮೇಷ ರಾಶಿ
ಲಕ್ಷ್ಮೀ ನಾರಾಯಣ ಯೋಗ ಮೇಷ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸಲಿದೆ. ಆರ್ಥಿಕ ಸ್ಥಿತಿ ನಿಧಾನವಾಗಿ ಸುಧಾರಿಸಲಿದೆ. ಕೆಲಸದಲ್ಲಿ ಆದಾಯ ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯಗಳು ಕೈ ಹಿಡಿಯಲಿವೆ. ಸಂಪತ್ತು, ಧನಲಾಭದಿಂದಾಗಿ ಆರ್ಥಿಕ ಜೀವ ಅಭಿವೃದ್ಧಿ ಹೊಂದುವುದನ್ನು ಕಾಣುವಿರಿ.
ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗವಕಾಶಗಳು ಹುಡುಕಿಕೊಂಡು ಬರಲಿವೆ. ಅನಿರೀಕ್ಷಿತ ಆರ್ಥಿಕ ಲಾಭದಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ನವರಾತ್ರಿ ಹಬ್ಬಕ್ಕಾಗಿ ಸಂಬಂಧಿಕರು ಮನೆಗೆ ಆಗಮಿಸುವರು. ವಿದೇಶದಲ್ಲಿ ಕೆಲಸ ಮಾಡುವ ಆಸೆ ಈಡೇರಲಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗ ಸಂಪತ್ತನ್ನು ಹೆಚ್ಚಿಸಲಿದೆ. ಶುಕ್ರ ಮತ್ತು ಬುಧ ಈ ಎರಡೂ ಗ್ರಹಗಳಿಂದ ಸಿಂಹ ರಾಶಿಯವರು ಆಶೀರ್ವಾದವನ್ನು ಪಡೆಯುತ್ತಾರೆ. ಜೀವನದಲ್ಲಿ ತೃಪ್ತಿ ಮತ್ತು ಸಂತೋಷ ಹೆಚ್ಚಾಗಲಿದೆ. ಬಹಳ ದಿನಗಳಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳನ್ನು ಪುನರಾರಂಭಿಸುವಿರಿ.
ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಜೀವನದಲ್ಲಿ ತೃಪ್ತಿ ಮತ್ತು ಸಂತೋಷ ಹೆಚ್ಚಾಗಿರುತ್ತದೆ. ಬಹಳ ದಿನಗಳಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳು ಪುನರಾರಂಭಗೊಳಿಸುವಿರಿ. ವ್ಯಾಪಾರಸ್ಥರಿಗೆ ಧನಲಾಭ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಆರ್ಥಿಕ ಸ್ಥಿತಿಯು ಬಹಳ ಸುಧಾರಿಸಲಿದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಮಂಗಳಕರವಾಗಿದೆ. ವೃಶ್ಚಿಕ ರಾಶಿಯವರ ಜೀವನದಲ್ಲಿ ಸುಖ, ಶಾಂತಿ ನೆಲೆಸಲಿದೆ. ಅಂದುಕೊಂಡ ಕಾರ್ಯಗಳು ಬೇಗ ಪೂರ್ಣಗೊಳ್ಳುತ್ತವೆ. ಮನೆ, ವಾಹನ ಖರೀದಿಸುವಿರಿ. ಇದಕ್ಕಾಗಿ ಇದು ಉತ್ತಮ ಸಮಯ, ಚಿನ್ನಾಭರಣಗಳ ಖರೀದಿಗೆ ಹಿಂಜರಿಯಬೇಡಿ. ಈ ಸಮಯದಲ್ಲಿ ಖರೀದಿಸಿದ ಯಾವುದೇ ವಸ್ತು ದುಪ್ಪಟ್ಟು ಫಲ ನೀಡಲಿದೆ.
ವೃಶ್ಚಿಕ ರಾಶಿಯ 6ನೇ ಮನೆಯಲ್ಲಿ ಶುಕ್ರ-ಬುಧ ಸಂಯೋಗ ನಡೆಯುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವನ್ನು ಪಡೆಯಲು ಇದು ಮಂಗಳಕರ ಸಮಯ. ಆರ್ಥಿಕ ಜೀವನ ಸುಧಾರಣೆ ಕಾಣಲಿದೆ. ಆರೋಗ್ಯದಲ್ಲಿ ದೃಷ್ಟಿಯಿಂದ ಸ್ವಲ್ಪ ಜಾಗರೂಕರಾಗಿರಿ. ಇದರಿಂದ ನೀವು ಕೆಲ ಸಮಸ್ಯೆಗಳನ್ನು ಎದರಿಸುವ ಸಾಧ್ಯತೆ ಇದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications