ಲಕ್ಷ್ಮೀ ನಾರಾಯಣ ಯೋಗ: ಈ ರಾಶಿಯವರ ಅದೃಷ್ಟ, ಸುಖ-ಸಮೃದ್ದಿ ಹೆಚ್ಚಳ, ಇಷ್ಟಾರ್ಥ ಸಿದ್ದಿ ಕಾಲ
Lakshmi Narayana Yoga: ಸೆಪ್ಟೆಂಬರ್ ಕೊನೆಯಲ್ಲಿ ಗ್ರಹಗಳ ಸ್ಥಾನಗಳಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಸೆಪ್ಟೆಂಬರ್ 26ಕ್ಕೆ ಬುಧ ಮತ್ತು ಶುಕ್ರ ಒಂದೇ ರಾಶಿಯಲ್ಲಿ ಬಂದು ಸೇರುತ್ತಾರೆ. ಈ ಎರಡು ಗ್ರಹಗಳ ಸಂಯೋಗ ಬಹಳ ಮಹತ್ವದ್ದಾಗಿದೆ. ಬುಧನನ್ನು ಬುದ್ಧಿವಂತಿಕೆ, ಮಾತು, ತರ್ಕ, ವ್ಯವಹಾರದ ಒಡೆಯ ಎಂದು ಹೇಳಲಾಗುತ್ತದೆ. ಅದೇ ಶುಕ್ರನನ್ನು ಸಂಪತ್ತು, ಸೌಕರ್ಯ, ಸೌಂದರ್ಯ ಮತ್ತು ಐಷಾರಾಮಿ ಜೀವನಕ್ಕೆ ಕಾರಣನಾದ ಗ್ರಹ ಅಂತ ಕರೆಯಲಾಗುವುದು. ಕೆಲವು ಜ್ಯೋತಿಷ್ಯ ವ್ಯವಸ್ಥೆಗಳ ಪ್ರಕಾರ ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ, ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳುತ್ತದೆ. ಈ ಯೋಗದ ಪ್ರಭಾವವು ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ಸ್ಥಿತಿಗಳ ಮೇಲೆ ಕಾಣಿಸುವುದು. ಇದು ಅನೇಕ ರೀತಿಯಲ್ಲಿ ಅನುಕೂಲಕರ ಸ್ಥಿತಿಗಳನ್ನು ನಿರ್ಮಿಸುತ್ತದೆ.
ಜ್ಯೋತಿಷ್ಯದಲ್ಲಿ ಲಕ್ಷ್ಮೀ ನಾರಾಯಣ ಯೋಗವನ್ನು (Lakshmi Narayana Yoga) ನಿರ್ದಿಷ್ಟವಾಗಿ ಮತ್ತು ಸ್ಪಷ್ಟವಾಗಿ ಹೇಳಲಾಗಿದೆ. ಬುಧ ಮತ್ತು ಶುಕ್ರ ಎರಡೂ ಶುಭ ಗ್ರಹಗಳೇ. ಹಾಗಾಗಿ ಎರಡು ಶುಭ ಗ್ರಹಗಳ ಸಂಯೋಜನೆ ನಮ್ಮ ಜಾತಕದ ಮೇಲೆ ಕೂಡಾ ಶುಭ ಫಲವನ್ನು ಕೊಡುತ್ತದೆ. ಈ ಸಮಯದಲ್ಲಿ, ವ್ಯಕ್ತಿಯ ಆಲೋಚನಾ ವಿಧಾನ ಸಕಾರಾತ್ಮಕವಾಗಿ ಬದಲಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೆಚ್ಚುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಗತಿಯಾಗುವುದು. ಆರ್ಥಿಕ ಸ್ಥಿತಿ ಸರಿ ಹೋಗಲಿ ಎಂದು ತುಂಬಾ ಸಮಯದಿಂದ ಕಾಯುತ್ತಿರುವವರಿಗೆ ಹೊಸ ಅವಕಾಶಗಳು ಒಲಿದು ಬರುವುದು. ಬಾಕಿ ಇರುವ ಕೆಲಸಗಳು ಚುರುಕು ಪಡೆಯುವುದು.

ಮೇಷ ರಾಶಿ (Aries)
ಮೇಷ ರಾಶಿಯವರಿಗೆ ಹೊಸ ಆಲೋಚನೆಗಳು ಮತ್ತು ಹೊಸ ಅವಕಾಶಗಳು ಸಿಗುವುದು. ಆದಾಯದಲ್ಲಿ ಹೆಚ್ಚಳವಾಗುವುದು. ಸಮಾಜದಲ್ಲಿ ವಿಶೇಷ ಮನ್ನಣೆ ಸಿಗುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಒಲಿಯುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಹೊಸ ಕೆಲಸ ಆರಂಭಿಸಬಹುದು. ಲಕ್ಷ್ಮೀ ಕೃಪೆಯಿಂದ ಎಲ್ಲವೂ ಸಾಂಗವಾಗಿ ನೆರವೇರುವುದು.
ವೃಷಭ ರಾಶಿ (Taurus)
ವೃಷಭ ರಾಶಿಯವರ ಆರ್ಥಿಕ ವಿಷಯಗಳಲ್ಲಿ ಸ್ಥಿರತೆ ಇರುವುದು. ಇಲ್ಲಿಯವರೆಗಿನ ಕಷ್ಟಗಳಿಗೆ ಮುಕ್ತಿ ಸಿಗುವುದು. ಹಣದ ಸಮಸ್ಯೆ ನೀಗುವುದು. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಪ್ರಯತ್ನಿಸಿದರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು.
ತುಲಾ ರಾಶಿ (Libra)
ಜ್ಯೋತಿಷ್ಯ ಭವಿಷ್ಯವಾಣಿಗಳ ಪ್ರಕಾರ ಈ ಗ್ರಹಗಳ ಸಂಯೋಗವು ತುಲಾ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರವಾಗಿರುವುದು. ಹೊಸ ಜವಾಬ್ದಾರಿ ಸಿಗುವುದು. ಬಡ್ತಿ ಅಥವಾ ಕೆಲಸದಲ್ಲಿ ಉತ್ತಮ ಮನ್ನಣೆ ಪಡೆಯಲು ಅವಕಾಶಗಳು ಒಲಿದು ಬರುವುದು. ವ್ಯಾಪಾರ ಮಾಡುವವರಿಗೆ ಹೊಸ ಗ್ರಾಹಕರು ಸಿಗುವರು. ಹೊಸ ಒಪ್ಪಂದಗಳು ಮಾತುಕತೆಗಳು ಹೆಚ್ಚಿನ ಲಾಭ ಗಳಿಸುವ ಅವಕಾಶ ನೀಡುವುದು. ಹಲವು ದಿನಗಳಿಂದ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಶಾಂತಿ ಹೆಚ್ಚಾಗುವುದು. ಮನೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳು ಸಕಾರಾತ್ಮಕವಾಗಿ ಪರಿಣಮಿಸಬಹುದು.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಉದ್ಯೋಗ ಅಥವಾ ವ್ಯವಹಾರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳು ಸಿಗುವ ನಿರೀಕ್ಷೆಯಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಹಣ ಉಳಿಸುವುದು ಸಾಧ್ಯವಾಗುವುದು.
ಸಿಂಹ ರಾಶಿ (Leo)
ಸಿಂಹ ರಾಶಿಯವರ ಆರ್ಥಿಕ ಲಾಭಕ್ಕೆ ಕಾರಣವಾಗುವ ಹೊಸ ಸಂಪರ್ಕಗಳು ಮತ್ತು ಅವಕಾಶಗಳು ಸಿಗುವ ನಿರೀಕ್ಷೆಯಿದೆ. ಅಂದುಕೊಂಡ ಕೆಲಸವನ್ನು ಅಂದುಕೊಂಡ ಹಾಗೆಯೇ ಮುಗಿಸುವಿರಿ. ಆದಾಯ ಎರಡು ಪಟ್ಟು ಹೆಚ್ಚಾಗುವುದು. ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇರುವುದು.
ಕುಂಭ ರಾಶಿ (Aquarius)
ವೃತ್ತಿಜೀವನದಲ್ಲಿ ಹೊಸ ಬದಲಾವಣೆಯಾಗುವುದು. ಹೊಸ ಹೊಸ ಅವಕಾಶಗಳು ಒಲಿದು ಬರುವುದು. ಆದಾಯ ಗಳಿಸಲು ಹೊಸ ಮೂಲಗಳು ಹುಟ್ಟಿಕೊಳ್ಳುವುದು. ದಂಪತಿಗಳ ನಡುವಿನ ತಿಳುವಳಿಕೆಯಲ್ಲಿ ಸುಧಾರಣೆಯಾಗುವುದು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುವುದು.
ಆದರೂ ಗ್ರಹಗಳ ಸಂಯೋಗವು ಎಲ್ಲರಿಗೂ ಹಣವನ್ನು ಕೊಡುತ್ತದೆ. ಉದ್ಯೋಗ ನೀಡುತ್ತದೆ ಪ್ರತಿಯೊಂದು ಕೆಲಸವನ್ನು ಯಶಸ್ವಿಗೊಳಿಸುತ್ತದೆ ಎಂದು ಹೇಳುವುದು ಸರಿಯಲ್ಲ. ಜಾತಕದಲ್ಲಿ ಗ್ರಹಗಳ ಸ್ಥಾನಕ್ಕೆ ಅನುಗುಣವಾಗಿಯೇ ಫಲ ಸಿಗುವುದು.


Click it and Unblock the Notifications
