ಮುಂದಿನ ಐದು ತಿಂಗಳು ಈ ರಾಶಿಯವರಿಗೆ ಬಂಪರ್‌ : ಅನಿರೀಕ್ಷಿತ ಧನ ಲಾಭ, ಖ್ಯಾತಿ; ಒಲಿಯುವುದು ಉನ್ನತ ಸ್ಥಾನಮಾನ

ಜ್ಯೋತಿಷ್ಯದಲ್ಲಿ, ರಾಹು ಮತ್ತು ಕೇತುವನ್ನು ಛಾಯಾ ಗ್ರಹ ಎಂದು ಕರೀತಾರೆ. ಎಲ್ಲಾ ಗ್ರಹಗಳು ನೇರ ನಡೆ ಮೂಲಕ ಸಂಚಾರ ಮಾಡಿದರೆ ಈ ಎರಡು ಗ್ರಹಗಳು ಹಿಮ್ಮುಖವಾಗಿಯೇ ಚಲಿಸುವುದು. ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹಗಳೆಂದರೆ ಅದು ರಾಹು ಮತ್ತು ಕೇತು. ಇದು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡೋದಕ್ಕೆ ೧೮ ತಿಂಗಳ ಸಮಯವನ್ನು ತೆಗೆದುಕೊಳ್ಳುತ್ತದೆ.ಅಂದರೆ ಒಂದೂವರೆ ವರ್ಷ. ಶನಿ ಎರಡೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ರಾಹು ಕೇತು ಎರಡೂ ಗ್ರಹಗಳು ಕೆಟ್ಟದ್ದನ್ನೇ ಮಾಡುತ್ತವೆ ಎನ್ನುವುದು ನಮ್ಮಲ್ಲಿ ಮನೆಮಾಡಿರುವ ನಂಬಿಕೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲಿಯೂ ನಿಜ ಅಲ್ಲ. ರಾಹು ಮತ್ತು ಕೇತು ನಮ್ಮ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ರಾತ್ರಿ ಬೆಳಗಾಗುವುದರ ಒಳಗೆ ಖ್ಯಾತಿ ಬಂದು ಬಿಡುತ್ತದೆ. ಹಣ ಹರಿಯುತ್ತದೆ.

Ketu Transit

ಈ ಎರಡೂ ಗ್ರಹಗಳಿಗೂ ದೈಹಿಕ ಅಸ್ತಿತ್ವ ಇಲ್ಲ. ಆದರೂ ಇದರ ಸಂಚಾರದಲ್ಲಿನ ಬದಲಾವಣೆ ಹನ್ನೆರಡೂ ರಾಶಿಯವರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಜೀವನದಲ್ಲಿ ಎದುರಾಗುವ ಹಠಾತ್ ತಿರುವುಗಳು, ಅನಿರೀಕ್ಷಿತ ಲಾಭಗಳು ಅಥವಾ ಅನಿರೀಕ್ಷಿತ ಬದಲಾವಣೆಗಳಿಗೆಲ್ಲಾ ರಾಹು ಮತ್ತು ಕೇತುವೇ ಕಾರಣ. ಕೆಲವೊಮ್ಮೆ ಕೆಲವರು ಇದ್ದಕ್ಕಿದ್ದಂತೆ ಖ್ಯಾತಿ ಪಡೀತಾರೆ. ಯಾರು ಎಂದು ಯಾರಿಗೂ ಗೊತ್ತಿಲ್ಲದವರು ಒಮ್ಮೆಲೆ ಸ್ಟಾರ್‌ ಆಗಿ ಬಿಡುತ್ತಾರೆ. ಇದಕ್ಕೆಲ್ಲಾ ಈ ಗ್ರಹಗತಿಗಳೇ ಕಾರಣವಂತೆ. ಇದೀಗ ಕೇತು ಸಿಂಹ ರಾಶಿ ಮತ್ತು ಮಘಾ ನಕ್ಷತ್ರದಲ್ಲಿ ಸಂಚಾರ ಮಾಡ್ತಾ ಇದ್ದಾನೆ. ಮುಂದಿನ ಡಿಸೆಂಬರ್ ವರೆಗೆ ಅಂದರೆ ಮುಂದಿನ ಐದು ತಿಂಗಳು ಅಲ್ಲೇ ಅವನ ಸಂಚಾರ. ಕೇತುವನ್ನು ಆಧ್ಯಾತ್ಮ, ಮೋಕ್ಷ ಮತ್ತು ವೈರಾಗ್ಯದ ಸಂಕೇತ ಅಂತ ಹೇಳ್ತಾರೆ.

ರಾಶಿಗಳ ಮೇಲೆ ಕೇತು ಸಂಚಾರದ ಪರಿಣಾಮ :

ಸಿಂಹ ಮತ್ತು ಮಘಾ ನಕ್ಷತ್ರದಲ್ಲಿ ಕೇತುವಿನ ಸಂಚಾರ ಅನೇಕ ರಾಶಿಯವರ ಅದೃಷ್ಟದ ಬಾಗಿಲು ತೆರೆಯಬಹುದು.

ಮೇಷ ರಾಶಿ (Aries):

ಈ ಸಮಯ ನಿಮಗೆ ಹೆಚ್ಚು ಅನುಕೂಲಕರವಾಗಿರಬಹುದು. ದುಡ್ಡು ಜಾಸ್ತಿಯಾಗುತ್ತದೆ. ಹಣದ ಸಮಸ್ಯೆಯಿದ್ದರೆ ಪರಿಹಾರವಾಗುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಯಾವುದೇ ವಿಚಾರದಲ್ಲಿ ಎದುರಾಗಿರುವ ಕಾನೂನು ಸಮಸ್ಯೆ, ವಿವಾದಗಳು ಬಗೆಹರಿಯುವುದು. ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ನಿಮ್ಮ ಆತ್ಮವಿಶ್ವಾಸ ದಿನೇ ದಿನೇ ಹೆಚ್ಚುವುದು.

ಕರ್ಕಾಟಕ ರಾಶಿ (Cancer):

ಈ ಸಮಯವು ವೃತ್ತಿ ಮತ್ತು ವ್ಯವಹಾರಕ್ಕೆ ಎರಡರಲ್ಲಿಯೂ ಲಾಭವನ್ನು ತಂದು ಕೊಡುವುದು. ಹೊಸ ಜವಾಬ್ದಾರಿಗಳು ಸಿಗಬಹುದು. ಈ ಜವಾಬ್ದಾರಿಗಳು ನಿಮ್ಮ ಭವಿಷ್ಯದ ಪ್ರಗತಿಗೆ ದಾರಿ ಮಾಡಿಕೊಡುವುದು. ಉದ್ಯಮಿಗಳಿಗೆ ದೊಡ್ಡ ಮಟ್ಟದ ಲಾಭವಾಗುವುದು. ಸಾಲ ಕೊಟ್ಟ ಹಣ ವಾಪಸ್‌ ಬರುವುದು. ಯಾವುದೇ ಕೆಲಸ ಆರಂಭಿಸಿದರೂ ಜಯ ಸಿಗುವುದು.

ಸಿಂಹ ರಾಶಿ (Leo):

ವೃತ್ತಿಪರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯಾಗುವುದು. ಕಠಿಣ ಪರಿಶ್ರಮಕ್ಕೆ ಮನ್ನಣೆ ಸಿಗುವುದು. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಏರಿಳಿತಗಳು ಸಂಭವಿಸಬಹುದು. ಆದ್ದರಿಂದ ಕುಟುಂಬದೊಂದಿಗೆ ಸಮನ್ವಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಇಲ್ಲವಾದರೆ ನಷ್ಟ ಎದುರಿಸಬೇಕಾಗುವುದು, ಮಾನಸಿಕ ಒತ್ತಡ ಜಾಸ್ತಿಯಾಗುವುದು.

ವೃಶ್ಚಿಕ ರಾಶಿ (Scorpio) :

ಈ ಸಂಚಾರವು ನಿಮಗೆ ಆರ್ಥಿಕವಾಗಿ ಶುಭ ಸೂಚನೆಯಾಗಿದೆ. ಬಹಳ ಸಮಯದಿಂದ ನಿಮ್ಮ ಕೈ ಸೇರದೆ ಇದ್ದ ಹಣ ವಾಪಸ್‌ ಬರುವುದು. ಹೂಡಿಕೆಗಳು ಕೂಡಾ ಲಾಭ ತರುವುದು. ಹಣದ ವಿಚಾರದಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಸೂಕ್ತ. ಎಚ್ಚರ ತಪ್ಪಿದರೆ ಆಪತ್ತು. ವೃತ್ತಿಜೀವನದ ಸಮಸ್ಯೆಗಳು ಬಗೆಹರಿಯುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+