ಕೇರಳ ಜಲಪ್ರಳಯದ ಬಗ್ಗೆ ಪಂಚಾಂಗದ ಯುಗಾದಿ ಭವಿಷ್ಯದಲ್ಲೇ ಇತ್ತು ಮಾಹಿತಿ!
Recommended Video

ಕೇರಳದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆಯನ್ನು ಈ ಬಾರಿ ಯುಗಾದಿ (ಏಪ್ರಿಲ್)ಯಲ್ಲೇ ಪಂಚಾಂಗಗಳಲ್ಲಿ ನೀಡಲಾಗಿತ್ತು ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಅದಕ್ಕೆ ಪೂರಕವಾಗಿ ಭಾರತ ಹಾಗೂ ಇಡೀ ವಿಶ್ವದ ಬಗ್ಗೆ ವರ್ಷ ಭವಿಷ್ಯ ಒಳಗೊಂಡ ಕಾಗದದ ಫೋಟೋ ತೆಗೆದು ಹಾಕಿದ್ದು, ಆ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ.
ಅಸಲಿಗೆ ಪಂಚಾಂಗದಲ್ಲಿ ಹಾಕಿದ್ದ ಮಾಹಿತಿ ಏನು ಎಂಬುದರ ವಿವರ ಹೀಗಿದೆ:
* ಭಾರತವು ವೃಷಭ ಲಗ್ನವಾಗಿದ್ದು, ಕರ್ಕಾಟಕ ರಾಶಿಯಲ್ಲಿದೆ. ಗುರು-ಚಂದ್ರರ ದೃಷ್ಟಿ ಶುಭಕರವಾಗಿದ್ದು, ಕೆಲವು ವಿಭಾಗಗಳಲ್ಲಿ ಉತ್ತಮ ಫಲ ಕಂಡುಬರುವುದು. ಶನಿ-ಮಂಗಳ ದೃಷ್ಟಿ ಹಾನಿಕರವಿದ್ದು, ಅಸ್ಸಾಮ್- ನೇಪಾಳಗಳಲ್ಲಿ ಭೂಕಂಪಾದಿ ವಿಪರೀತ ಪರಿಣಾಮವನ್ನು ಉಂಟು ಮಾಡುವವು.
* ಚೀನಾ- ಪಾಕಿಸ್ತಾನಾದಿ ಕೆಲವು ನೆರೆ ರಾಷ್ಟ್ರಗಳಿಂದ ನಿರಂತರ ಯುದ್ಧ ವಾತಾವರಣ ಸಾಧ್ಯ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತದೆ ಎಂಬ ಬಗ್ಗೆ ಕೂಡ ಇದೆ.
ಈ ಸಂಗತಿಗಳ ಜತೆಗೆ ಇರುವ ಮಾಹಿತಿಯೇ ವಿಪರೀತ ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗುತ್ತದೆ. ಏಕೆಂದರೆ ವಿಳಂಬಿ ನಾಮ ಸಂವತ್ಸರದಲ್ಲಿ ಆಂಧ್ರ, ತಮಿಳುನಾಡು, ಕೇರಳಾದಿಗಳಲ್ಲಿ ಜಲಪ್ರಳಯ ಸಂಭವ ಎಂದು ನಿರ್ದಿಷ್ಟವಾಗಿ ಹಾಕಲಾಗಿದೆ. ಇಲ್ಲಿ ಅತಿಯಾದ ಮಳೆ ಎಂಬ ಪದವನ್ನೇ ಬಳಸಬಹುದಿತ್ತು. ಆದರೆ ಜಲಪ್ರಳಯ ಎಂದು ಹಾಕಿರುವುದು, ಪರಿಣಾಮದ ತೀವ್ರತೆಯನ್ನು ಸೂಚಿಸುವಂತಿದೆ.

ಲೇವಡಿ ಮಾಡುವವರು ಇದನ್ನು ಗಮನಿಸಲಿ
ಈ ಬಗ್ಗೆ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿದಾಗ, ಈ ವಿಚಾರವನ್ನು ಬಹುತೇಕ ಪಂಚಾಂಗಗಳಲ್ಲಿ ಹಾಕಲಾಗಿದೆ. ಹೀಗೆ ಅನಾಹುತ ಆಗುತ್ತದೆ ಅಂತ ಮುಂಚೆಯೇ ಏಕೆ ಹೇಳಲಿಲ್ಲ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಮಾಡುವವರು, ಜ್ಯೋತಿಷ್ಯ-ಪಂಚಾಂಗ ಹಾಗೂ ಜ್ಯೋತಿಷಿಗಳನ್ನು ಲೇವಡಿ ಮಾಡುವಂಥವರು ಇದನ್ನು ಗಮನಿಸಬೇಕು ಎನ್ನುತ್ತಾರೆ.

ಡಿಸೆಂಬರ್ ನಲ್ಲಿ ಮತ್ತೊಮ್ಮೆ ಪ್ರವಾಹ ಸೃಷ್ಟಿಯಾದೀತು
ಹಾಗೇ ಮುಂದುವರಿದು, ನಿತ್ಯ ಕುಂಡಲಿಯಲ್ಲಿ ರವಿಯು ಅಧಿಕ ಅಂಶ (ಡಿಗ್ರಿ) ಪಡೆದು, ಅಂದರೆ ಒಂದು ರಾಶಿಯು ಮೂವತ್ತು ಡಿಗ್ರಿ. ಆ ರಾಶಿಯಲ್ಲಿ ಕೊನೆಯ ಭಾಗಕ್ಕೆ ರವಿಯು ಸಂಚರಿಸಿದಾಗ ಆತ್ಮಕಾರಕ ಎನ್ನುತ್ತೇವೆ. ರವಿ ಅಂಥ ಸ್ಥಿತಿಯಲ್ಲಿರಬೇಕು. ಮಳೆಯನ್ನು, ಅದರ ರಭಸವನ್ನು ನಿರ್ಧಾರ ಮಾಡುವವನು ರವಿಯು ಆಗುತ್ತಾನೆ. ಕರ್ಕಾಟಕ ರಾಶಿಯಲ್ಲಿ ಅಧಿಕ ಅಂಶವನ್ನು ಪಡೆದ ರವಿ ಮೀನರಾಶಿಗೆ ಅಂಶ (ಆ ರಾಶಿಯಲ್ಲಿ ಯಾವುದೇ ಗ್ರಹಗಳು ಇರಬಾರದು) ಕೊಟ್ಟಾಗ ಕೇರಳ, ಮಡಿಕೇರಿಯಲ್ಲಿ ಪ್ರವಾಹ ಉಂಟು ಮಾಡಿದ. ಆ ಸಮಯದಲ್ಲಿ ಇತರ ಗ್ರಹರು ರವಿಗಿಂತ ಅಂಶ ಬಲಿಷ್ಠತೆಯಲ್ಲಿ ದುರ್ಬಲರಾಗಿದ್ದರು. ಮುಂದೆ ಡಿಸೆಂಬರ್ ತಿಂಗಳ 13, 14, 15ನೇ ತಾರೀಕಿಗೆ ಇದೇ ಸ್ಥಿತಿಗೆ ವೃಶ್ಚಿಕ ರಾಶಿಗೆ ಬರುತ್ತಾನೆ. ಆಗ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾದೀತು ಎಂದು ಅವರು ಹೇಳುತ್ತಾರೆ.

ಮಳೆ ಜೋರಾಗಿದ್ದರೂ ವಿಕೋಪಕ್ಕೆ ಹೋಗದು
ಕರ್ಕಾಟಕ, ವೃಶ್ಚಿಕ, ಮೀನ ತ್ರಿಕೋಣ ರಾಶಿಗಳಲ್ಲಿ ರವಿಯು ಎಲ್ಲಾ ಗ್ರಹರಿಗಿಂತ ಅಧಿಕ ಅಂಶ ಪಡೆದು, ಮೀನಾಂಶದಲ್ಲಿ ಬಂದರೆ ಮಾತ್ರ ಪ್ರವಾಹವನ್ನು ಸೃಷ್ಟಿಸುತ್ತಾನೆ. ಅಲ್ಲದೆ ದೀರ್ಘ ಚಂದ್ರಗ್ರಹಣವೂ ಇದ್ದಲ್ಲಿ ಮಾತ್ರ ಪ್ರಕೃತಿ ಇನ್ನಷ್ಟು ವಿಕೋಪಕ್ಕೆ ಹೋಗುತ್ತದೆ. ಹೀಗೆ ಪ್ರತೀ ವರ್ಷವೂ ರವಿಗೆ ಇಂತಹ ಅಂಶ ಸ್ಥಿತಿ ಬರುತ್ತದೆ ಎಂದು ಹೇಳಲಾಗದು. ಯಾಕೆಂದರೆ ಇತರ ಗ್ರಹರು ರವಿಗಿಂತ ಅಂಶ ಬಲಿಷ್ಠರಿದ್ದರೆ, ಹಾಗೆಂದರೆ 2019 ರಲ್ಲಿ ಇಂತಹ ರವಿಯ ಸ್ಥಿತಿಯಲ್ಲಿ ಶುಕ್ರನೂ, ಶನಿಯೂ ಬಲಿಷ್ಠರಿರುವ ಕಾರಣ ಪ್ರವಾಹ ಅಸಂಭವ. ಮಳೆ ಜೋರಾಗಿದ್ದರೂ ವಿಕೋಪಕ್ಕೆ ಹೋಗದು ಎಂದು ಭವಿಷ್ಯ ನುಡಿಯುತ್ತಾರೆ.

ಭವಿಷ್ಯ ನುಡಿಯುವವರ ಸಾಮರ್ಥ್ಯದ ಮೇಲೆ ನಿಖರತೆ ಅವಲಂಬನೆ
ಈಶಾನ್ಯ ಭಾರತದಲ್ಲಿ ಹೆಚ್ಚಿನ ತೊಂದರೆಗಳು ಏರ್ಪಡುವ ಮುನ್ಸೂಚನೆ ಇದು. ಆದ್ದರಿಂದ ಆ ಭಾಗಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಜ್ಯೋತಿಷ್ಯದ ಆಧಾರದಲ್ಲಿ ಯಾವ ಗ್ರಹ ಸ್ಥಿತಿಗೆ ಏನು ಫಲ ಎಂಬುದನ್ನು ಈಗಾಗಲೇ ಹೇಳಲಾಗಿದೆ. ಆದರೆ ಗ್ರಹಗಳ ಸ್ಥಿತಿಯನ್ನು ವಿಶ್ಲೇಷಿಸಿ, ಆ ಬಗ್ಗೆ ಭವಿಷ್ಯ ನುಡಿಯುವವರ ಸಾಮರ್ಥ್ಯ ಎಷ್ಟಿದೆ ಅನ್ನೋದರ ಮೇಲೆ ನಿಖರತೆ ಅವಲಂಬಿಸಿರುತ್ತದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications